AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಕಾರ್ಯದಲ್ಲಿ ವೇಗ, ಸಮಯ ಸದುಪಯೋಗವಾಗ ಮಾಡಿಕೊಳ್ಳುವಿರಿ

ರಾಶಿ ಭವಿಷ್ಯ ಭಾನುವಾರ(ಸೆ. 15): ಉತ್ತಮವಾದ ವಸ್ತುವನ್ನು ಉತ್ತಮರಿಗೇ ಕೊಡಿ. ಉದ್ಯಮದಲ್ಲಿ ನಿಮ್ಮ ಚಿಂತನಾರಹಿತ ನಿರ್ಧಾರದಿಂದ‌ ನಿಮಗೆ ನಷ್ಡವಾಗಲಿದೆ.‌ ನಿಮ್ಮ ಎಲ್ಲ‌ ಯೋಜನೆಯೂ ಬಿಡಮೇಲಾಗಬಹುದು. ಸಂಗಾತಿಗೆ ಪ್ರೀತಿಯನ್ನು ನೀಡಿ ಖುಷಿಪಡಿಸಿ. ಹಾಗಾದರೆ ಸೆಪ್ಟೆಂಬರ್​ 15ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಕಾರ್ಯದಲ್ಲಿ ವೇಗ, ಸಮಯ ಸದುಪಯೋಗವಾಗ ಮಾಡಿಕೊಳ್ಳುವಿರಿ
ಕಾರ್ಯದಲ್ಲಿ ವೇಗ, ಸಮಯ ಸದುಪಯೋಗವಾಗ ಮಾಡಿಕೊಳ್ಳುವಿರಿ
TV9 Web
| Edited By: |

Updated on: Sep 15, 2024 | 12:15 AM

Share

ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಅತಿಗಂಡ, ಕರಣ: ಭವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:32 ಗಂಟೆ, ರಾಹು ಕಾಲ ಸಂಜೆ 05:02 ರಿಂದ 06:33, ಯಮಘಂಡ ಕಾಲ ಮಧ್ಯಾಹ್ನ 12:28 ರಿಂದ 01:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:30 ರಿಂದ ಸಂಜೆ 05:02ರ ವರೆಗೆ.

ಧನು ರಾಶಿ: ನಿಮ್ಮ ಕಾರ್ಯವನ್ನು ಮಾಡಲು ಒಂದೊಂದೆ ಕಾರಣವನ್ನು ಹೇಳುವಿರಿ. ನಿಮ್ಮ ಇಂದಿನ ಎಲ್ಲ ಕಾರ್ಯಗಳಿಗೂ ಟೀಕೆಗಳು ಇರಲಿದ್ದು, ಅದನ್ನು ಮನಸ್ಸಿಗೆ ತಂದುಕೊಳ್ಳುವಿರಿ. ನಿಮ್ಮ‌ಕಾರ್ಯವನ್ನು ವೀಕ್ಷಿಸಿ ನಿಮಗೆ ಹೆಚ್ಚಿನ‌ ಬಡ್ತಿಯನ್ನು ಖಾಸಗಿ‌ ಸಂಸ್ಥೆ ಕೊಡಲಿದೆ. ಆರ್ಥಿಕ ಹಿನ್ನಡೆಯನ್ನು ನೀವು ಸುಧಾರಿಸಿಕೊಳ್ಳಬೇಕಾಗುವುದು. ನಿಮ್ಮ ವ್ಯಕ್ತಿತ್ವವು ಇತರರಿಗೆ ಉದಾಹರಣೆಯಾಗಲಿದೆ. ಸಮಯಕ್ಕೆ ಕಾದಿದ್ದು‌ ಸಾರ್ಥಕ‌ ಎನಿಸಬಹುದು. ಮಾತಿನಲ್ಲಿ ಮೃದುತ್ವ ಇರಲಿ. ವೈಯಕ್ತಿಕ ಕಾರ್ಯ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು.‌ ಅಪರಿಚಿತ ಕೆಲಸದಲ್ಲಿ ಮುನ್ನುಗ್ಗಿ ಕಾರ್ಯವನ್ನು ಸಾಧಿಸುವಿರಿ. ಕೆಲವು ದೋಷಗಳು ನಿಮಗೆ ನಗಣ್ಯವಾಗಲಿವೆ. ನಕಾರಾತ್ಮಕ ಮಾತುಗಳಿಗೆ ಸ್ಪಂದಿಸುವುದು ಬೇಡ. ಸ್ನೇಹಿತರನ್ನು ಕಳೆದುಕೊಳ್ಳುತ್ತೇನೆ‌ ಎಂಬ ಭಯವು ಕಾಡಬಹುದು. ಮನಸ್ಸಿನ ನೋವನ್ನು ನೀವೇ ಅನುಭವಿಸಿ ಕಡಿಮೆ‌ ಮಾಡಿಕೊಳ್ಳುವಿರಿ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಆಕಸ್ಮಿಕವಾಗಿ ಕೆಲವರನ್ನು ಕಳೆದುಕೊಳ್ಳುವಿರಿ. ಅಪರಿಚಿತರ ಮಾತಿನಿಂದ ನಿಮ್ಮ ವ್ಯಕ್ತಿತ್ವವು ಬದಲಾಗುವುದು.

ಮಕರ ರಾಶಿ: ಸಮಯವು ಸದುಪಯೋಗವಾಗಬೇಕಾದರೆ ಅದರ ಬಗ್ಗೆ ಪೂರ್ಣ ಗಮನಕೊಟ್ಟು ಸರಿಮಾಡಿಕೊಳ್ಳಿ. ಇದರಿಂದ ನಿಮ್ಮ ಕಾರ್ಯದಲ್ಲಿ ವೇಗ ಅಧಿಕವಾಗುವುದು. ನಿಮಗೆ ಇಂದು ದಾನ ಕೊಡಬೇಕೆಂಬ ಮನಸ್ಸು ಬರುವುದು. ಉತ್ತಮವಾದ ವಸ್ತುವನ್ನು ಉತ್ತಮರಿಗೇ ಕೊಡಿ. ಉದ್ಯಮದಲ್ಲಿ ನಿಮ್ಮ ಚಿಂತನಾರಹಿತ ನಿರ್ಧಾರದಿಂದ‌ ನಿಮಗೆ ನಷ್ಡವಾಗಲಿದೆ.‌ ನಿಮ್ಮ ಎಲ್ಲ‌ ಯೋಜನೆಯೂ ಬಿಡಮೇಲಾಗಬಹುದು. ಸಂಗಾತಿಗೆ ಪ್ರೀತಿಯನ್ನು ನೀಡಿ ಖುಷಿಪಡಿಸಿ. ಪೂರ್ವ ಯೋಜನೆಯನ್ನು ಮಾಡದೇ ವಿನಾಕಾರಣ ಹಣವನ್ನು ನಷ್ಟಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲಿದ್ದಾರೆ. ನಿಮ್ಮ ವಸ್ತುಗಳು ಇನ್ನೊಬ್ಬರಿಂದ ಹಾಳಾಗಿದ್ದು ನಿಮಗೆ ಬಹಳ‌ ಬೇಸರವಾದೀತು.‌ ಕಛೇರಿಯಲ್ಲಿ ನಿಮಗೆ ಪ್ರಶಂಸೆ‌ಯು ಸಿಗಲಿದೆ. ಸರಳತೆಯನ್ನು ರೂಢಿಸಿಕೊಳ್ಳುವುದು ನಿಮಗೇ ಒಳ್ಳೆಯದು. ಅಸೂಯೆಪಟ್ಟರೆ ನಿಮ್ಮನ್ನೇ ನೀವು ಸುಟ್ಟಕೊಂಡಂತೆ. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ.

ಕುಂಭ ರಾಶಿ: ನಿಮ್ಮ ದುಃಖವನ್ನೇ ಸರಿಮಾಡಿಕೊಳ್ಳದೇ ಇನ್ನೊಬ್ಬರ ಬಗ್ಗೆ ಕಾಳಜಿ ಅಧಿಕವಾಗುವುದು. ಇಂದು ನೀವು ವಹಿಸಿಕೊಟ್ಟ ಕಾರ್ಯವನ್ನು ಮಾಡಿದ್ದು ನಿಮಗೆ ಸಂತೋಷವಾಗಲಿದೆ. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ‌ ಗುರಿಯನ್ನು ತಲುಪಲು ನಿಮಗೆ ಸದ್ಯಕ್ಕೆ ಅಸಾಧ್ಯ ಎನಿಸಬಹುದು. ಫಲ ಬರುವತನಕ ನಿಮ್ಮ ಪ್ರಯತ್ನವಿರಲಿ. ನೀವು ವಿರೋಧವನ್ನು ಲೆಕ್ಕಿಸದೇ ಮುನ್ನುಗ್ಗಿ ಅಪಾಯವನ್ನು ತಂದುಕೊಳ್ಳುವಿರಿ. ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳು ಕಷ್ಟವಾದೀತು. ಇನ್ನೊಬ್ಬರ ಮಾತಿಗೂ ಬೆಲೆ ಮತ್ತು ಅವಕಾಶವನ್ನು ಮಾಡಿ‌ಕೊಡಿ. ಯಾವುದರ ಮೇಲೂ ಹೆಚ್ಚಿನ ನಿರೀಕ್ಷೆ ಬೇಡ. ಅಪರಿಚಿತರು ನಿಮ್ಮನ್ನು ಟೀಕಿಸಬಹುದು. ಸ್ನೇಹಿತರು ನಿಮ್ಮ ಉದ್ಯೋಗವನ್ನು ಬದಲಿಸಲು ಬಹಳ ಒತ್ತಾಯ ಮಾಡುವರು. ಸಂಗಾತಿಯ ಜೊತೆ ಮನಸ್ತಾಪ ಬರುವ ಕಾರಣ, ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಲ್ಲೊಂದು ಕಿರಿಕಿರಿ ಇರುವುದು. ಭಾವನಾತ್ಮಕವಾಗಿ ನಿಮಗೆ ಸೋಲಾಗುವುದು. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ.

ಮೀನ ರಾಶಿ: ನಿಮ್ಮ ಮನವನ್ನು ಒಲಿಸುವುದು ಕಷ್ಟ. ಯಾವುದೂ ನಿಮಗೆ ಸಮಾಧಾನ ಕೊಡದು. ನಿಮ್ಮ ವ್ಯಾಪಾರದ ವಿಸ್ತಾರದ ಬಗ್ಗೆ ಪಾಲುದಾರರ ಜೊತೆ ಮಾತನಾಡುವಿರಿ. ವಾಹನ ಚಾಲನೆಯಿಂದ ಅಪಘಾತ ಸಂಭವಿಸಬಹುದು. ನಕಾರಾತ್ಮಕತೆಯಿಂದ ಹೊರಬರುವುದು ಸುಲಭವಲ್ಲ. ನಿಮಗೆ ಇಂದು‌ ಮನೆಯಲ್ಲಿಯೇ ಇರಬೇಕಾದ ಸ್ಥಿತಿಯು ಬಂದಿರುವುದರಿಂದ‌ ಬಂಧನದಂತೆ ಅನ್ನಿಸಬಹುದು. ಹಣದ ವ್ಯವಹಾರವು ಸುಲಲಿತವಾಗಿ ಆಗಲಿದೆ. ಪ್ರತಿಭಾನ್ವಿತರಿಗೆ ಪ್ರೋತ್ಸವು ಸಿಗುವುದು. ಸಕಾಲಕ್ಕೆ ಸಿಗದ ಮಾಹಿತಿಯಿಂದ ಸೌಲಭ್ಯದಿಂದ‌ ವಂಚಿತರಾಗುವಿರಿ. ನಿಮ್ಮ ವಿವಾಹದ‌ ಮಾತು‌ಕತೆಗಳು ನಡೆಯಬಹುದು. ಇಂದು ನೀವು ಸವಾಲನ್ನು ಸ್ವೀಕರಿಸುವ ಮನಸ್ಸು ಇರಲಿದೆ. ನಿಮ್ಮ ಕಲಹದಿಂದ ಮತ್ತಾರೋ ಪ್ರಯೋಜನ ಪಡೆದಾರು. ಕೃಷಿ ಕ್ಷೇತ್ರದತ್ತ ನಿಮ್ಮ‌ ಚಿತ್ತವು ಇರಲಿದೆ. ಒತ್ತಾಯ ಪೂರ್ವಕವಾಗಿ ಯಾವುದನ್ನೂ ಮಾಡಿಸುವುದು ಬೇಡ. ಅದು ಆಗುವುದಿಲ್ಲ. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ಮಾಡಿಕೊಳ್ಳುವಿರಿ.

ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ