AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಕಾಡಲಿದೆ

ಸೆಪ್ಟೆಂಬರ್​ 15,​ 2024ರ​​ ನಿಮ್ಮ ರಾಶಿಭವಿಷ್ಯ: ನಿಮ್ಮನ್ನು ನೀವೇ ಏನೋ ಅಂದುಕೊಂಡು ಬೀಗುವಿರಿ. ರಾಜಕೀಯ ಜೀವನವು ನಿಮಗೆ ಹಿಡಿದುಕೊಳ್ಳಲಾಗದ, ಬಿಡಲಾಗದ ಸ್ಥಿತಿಯನ್ನು ತಂದುಕೊಡುವುದು. ಹಣಕಾಸಿನ ಕೊರತೆಯನ್ನು ನೀವು ಮನೆಯವರಿಗೆ ಗೊತ್ತಾಗದಂತೆ ನಿಭಾಯಿಸುವಿರಿ. ಹಾಗಾದರೆ ಸೆಪ್ಟೆಂಬರ್​ 15ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಕಾಡಲಿದೆ
ಈ ರಾಶಿಯವರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಕಾಡಲಿದೆ
TV9 Web
| Edited By: |

Updated on: Sep 15, 2024 | 12:05 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಅತಿಗಂಡ, ಕರಣ: ಭವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:32 ಗಂಟೆ, ರಾಹು ಕಾಲ ಸಂಜೆ 05:02 ರಿಂದ 06:33, ಯಮಘಂಡ ಕಾಲ ಮಧ್ಯಾಹ್ನ 12:28 ರಿಂದ 01:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:30 ರಿಂದ ಸಂಜೆ 05:02ರ ವರೆಗೆ.

ಮೇಷ ರಾಶಿ: ನಿಮ್ಮನ್ನು ಯಾರೊಂದಿಗೆ ಹೋಲಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ಸಂತೋಷವು ಇರುವುದು‌ ಇಂದು ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿಗೆ ಆರ್ಥಿಕ ವೃದ್ಧಿಯು ಕಾಣಿಸಿ ಸಮಾಧಾನವಾಗುವುದು. ಬಂಧುಗಳ ಕಾರಣದಿಂದ ನಿಮ್ಮ ಹಣವು ಖರ್ಚಾಗಬಹುದು. ನಿಮ್ಮ ಸ್ಥಿರಾಸ್ತಿಯ ದಾಖಲೆಗಳನ್ನು ಸರಿ ಮಾಡಿಕೊಳ್ಳಿ. ಶತ್ರುಗಳನ್ನು ಸೋಲಿಸುವ ಸಂಚು ಸಫಲವಾಗಬಹುದು. ಕಾರ್ಯವನ್ನು ಸಂಕೀರ್ಣಗೊಳಿಸದೇ ಸರಿಯಾದ ವಿಭಾಗವನ್ನು ಮಾಡಿಕೊಳ್ಳುವುದು ಉತ್ತಮ. ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯದ ಚಿಂತೆ ಮಾಡುವಿರಿ. ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಕಷ್ಟಪಡುವಿರಿ. ವೈಯಕ್ತಿಕ ಕೆಲಸವು ಹಾಗೇ ಇರಲಿದ್ದು ನಿಮಗೆ ಆತಂಕವಾದೀತು. ನಿಮ್ಮ ಇಂದಿನ ಒತ್ತಡವನ್ನು ನೋಡಿ ಮಾತುಕೊಡಿ. ಅಪವಾದದ ಮೂಲವನ್ನು ಹುಡುಕುವ ಪ್ರಯತ್ನ ಮಾಡುವಿರಿ. ನಿಮಗೆ ಆಗದೇ ಇರುವುದನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾರಿರಿ.

ವೃಷಭ ರಾಶಿ: ನಿಮ್ಮ ಮನಸ್ಸಿಗೆ ಬಂದಿದ್ದನ್ನು ಯಾರು ಏನೇ ಅಂದರೂ ಬದಲಿಸಲಾರಿರಿ. ಇಂದು ನಿಮ್ಮ ಹಣವು ಬಾರದೇ ಸಾಲ ಮಾಡುವ ಪರಿಸ್ಥಿತಿ ಬರಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದೆ. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ಆಲೋಚನೆಯನ್ನು ಮಾಡುವಿರಿ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಅಸಫಲರಾಗುವಿರಿ. ಏಕಪಕ್ಷೀಯ ನಿರ್ಧಾರವು ನಿಮ್ಮ ವಿರೋಧಿಗಳನ್ನು ಸೃಷ್ಟಿಸಿಕೊಳ್ಳಲು ಸಹಾಯವಾಗಲಿದೆ. ಆದಾಯದ ಹೆಚ್ಚಳಕ್ಕೆ ಸುಲಭೋಪಾಯವನ್ನು ಮಾಡುವಿರಿ. ವಿದೇಶಪ್ರಯಾಣದ ನಿರೀಕ್ಷೆಯಲ್ಲಿ ಇರುವಿರಿ‌. ಕುಟುಂಬದಲ್ಲಿ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವಿರಿ. ಆಲಸ್ಯದಿಂದ ಮನೆಯಲ್ಲಿ ಬೈಯಿಸಿಕೊಳ್ಳುವಿರಿ. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ವಿಶ್ರಾಂತಿಯು ಹೆಚ್ಚು ಬೇಕೆನಿಸಬಹುದು.

ಮಿಥುನ ರಾಶಿ: ಸುಮ್ಮನಿದ್ದಾಗ ಕಳೆದ ಘಟನೆಗಳನ್ನೇ ಮತ್ತೆ ಮತ್ತೆ ನೆನಪುಮಾಡಿಕೊಳ್ಳುವಿರಿ. ನೀವು ಆರ್ಥಿಕವಾಗಿ ಸಬಲರಾಗುವತ್ತ ಗಮನವು ಇರುವುದು. ಉದ್ಯೋಗದಲ್ಲಿ ಉಂಟಾದ ಒತ್ತಡದಿಂದ ಕೆಲಸವನ್ನು ಬದಲಿಸಲು ಇಚ್ಛಿಸುವಿರಿ. ಸ್ವಂತ ಕಾರ್ಯದಲ್ಲಿ ಸಫಲತೆ ಸಂತೋಷಗಳನ್ನು ಕಾಣುವಿರಿ. ಸಿಕ್ಕ ಮೊದಲ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಶ್ರದ್ಧೆಯಿಂದ ಕೆಲಸವನ್ನು ಮಾಡುವಿರಿ. ಇಂದು ಪ್ರಶಾಂತವಾಗಿ ಇರಬೇಕು ಎಂದುಕೊಂಡರೂ ಅಸಾಧ್ಯವಾದೀತು. ಉನ್ನತ ಹುದ್ದೆಯನ್ನು ನೀವು ಅಪೇಕ್ಷಿಸುವಿರಿ. ಹಣಕಾಸಿನ‌ ವಿಚಾರದಲ್ಲಿ ನೀವು ಯಾವ ಮುಲಾಜನ್ನು ಇಟ್ಟುಕೊಳ್ಳುವುದು ಬೇಡ. ಇಂದು ಬಹಳ ಆತುರದಲ್ಲಿ ಇರಲಿರುವಿರಿ. ಹಳೆಯ ವಸ್ತುವನ್ನೇ ದುರಸ್ತಿ ಮಾಡುತ್ತ ಬಳಸುವಿರಿ. ಉದ್ಯಮವನ್ನು ಬೇರೆ ರೀತಿಯಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಸಂಗಾತಿಯ ಮೇಲಿನ ಕೋಪವನ್ನು ಕಡಿಮೆ ಮಾಡಿಕೊಂಡರೆ ನಿರಾಳವಾಗಬಹುದು.

ಕರ್ಕಾಟಕ ರಾಶಿ: ಇನ್ಮೊಬ್ಬರ ವಾಹನವನ್ನು ಚಲಾಯಿಸುವಾಗ ಭಯವಾಗುವುದು. ನಿಮ್ಮ ಸಾಮರ್ಥ್ಯದಿಂದ ಶತ್ರುಗಳ ಪೀಡಿಯು ಇಲ್ಲವಾಗುವುದು. ನಿರೋದ್ಯೋಗದಿಂದ ಬೇಸರಗೊಂಡ ನಿಮಗೆ ದೂರದ ಊರಿನಲ್ಲಿ ಕೆಲಸವು ಸಿಗಲಿದೆ. ಸಂದರ್ಭವನ್ನು ನೋಡಿಕೊಂಡು ಮಾತನಾಡುವುದು ಉಚಿತ. ಇಂದು ನಿಮ್ಮ ಕೆಲಸವನ್ನು ಬದಲಾಯಿಸಿಕೊಳ್ಳುವಿರಿ. ನಿಮ್ಮನ್ನು ನೀವೇ ಏನೋ ಅಂದುಕೊಂಡು ಬೀಗುವಿರಿ. ರಾಜಕೀಯ ಜೀವನವು ನಿಮಗೆ ಹಿಡಿದುಕೊಳ್ಳಲಾಗದ, ಬಿಡಲಾಗದ ಸ್ಥಿತಿಯನ್ನು ತಂದುಕೊಡುವುದು. ಹಣಕಾಸಿನ ಕೊರತೆಯನ್ನು ನೀವು ಮನೆಯವರಿಗೆ ಗೊತ್ತಾಗದಂತೆ ನಿಭಾಯಿಸುವಿರಿ. ವಿರುದ್ಧಾಹರ ಸೇವಯು ನಿಮ್ಮ ಆರೋಗ್ಯವನ್ನು ಕೆಡಿಸಬಹುಸು. ವಿವಾಹಕ್ಕೆ ಸಂಬಂಧಿಸಿದಂತೆ ಓಡಾಟವನ್ನು ಮಾಡಬೇಕಾಗುವುದು. ಕೆಲವನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಸೇಡನ್ನು ಮುಂದುವರಿಸದೇ ಯಥಾಸ್ಥಿತಿಯಲ್ಲಿ ಇರಿ.

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು