ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಜನವರಿ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 07-00 ಗಂಟೆಗೆ, ಸೂರ್ಯಾಸ್ತ ಸಂಜೆ 06-17 ಕ್ಕೆ, ರಾಹು ಕಾಲ ಬೆಳಗ್ಗೆ 08:26 ರಿಂದ 09:50ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:15 ರಿಂದ ಮಧ್ಯಾಹ್ನ 12:39ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:04 ರಿಂದ 03:28ರ ವರೆಗೆ.
ಮೇಷ ರಾಶಿ: ಆರೋಗ್ಯದಲ್ಲಿ ಸುಧಾರಣೆ ಕಂಡರೂ ಮಿತಿಯಲ್ಲಿ ಎಲ್ಲವೂ ಇರಲಿ. ದೇಹಾಯಾಸದ ಕಡೆಗೆ ಅಧಿಕ ಗಮನ ಅಗತ್ಯ. ಹೋರಾಟದ ಮನೋಭಾವವು ಇಂದು ಎದ್ದು ತೋರುವುದು. ಕಛೇರಿಯ ಕೆಲಸವು ನಿಮಗೆ ಸಮಾಧಾನ ಕೊಡದು. ನಿದ್ರೆಯು ಸರಿಯಾಗಿ ಆಗದೇ ಕಷ್ಟವಾದೀತು. ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವ ವಿಧಾನವನ್ನು ಕಂಡುಕೊಳ್ಳುವುದು ಅವಶ್ಯಕ. ಶಾರೀರಿಕ ಅಸೌಖ್ಯದ ಕೊರತೆ ಕಾಡಲಿದ್ದು ಔಷಧೋಪಚಾರವನ್ನು ಮಾಡುವಿರಿ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವಿರಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು. ನಿಮ್ಮ ಪಾಲಿಗೆ ಬಂದಿದ್ದನ್ನು ಜೋಪಾನವಾಗಿ ರಕ್ಷಿಸಿಕೊಳ್ಳಿ. ಬಂಧುಗಳ ಅನಿರೀಕ್ಷಿತ ಭೇಟಿಯಾಗಬಹುದು.
ವೃಷಭ ರಾಶಿ: ಇಂದು ಅನಿವಾರ್ಯತೆಯನ್ನು ಅವಶ್ಯಕತೆಯನ್ನಾಗಿಸಿಕೊಳ್ಳುವಿರಿ. ನಿಮ್ಮವರ ಮೇಲೆ ಕಾಳಜಿಯು ಅಧಿಕಾದೀತು. ಸಾಮರಸ್ಯದ ಅಭಾವದಿಂದ ಮಾನಸಿಕ ಸ್ಥಿತಿಯು ಅಸಮತೋಲನವಾಗಲಿದೆ. ನಿರೀಕ್ಷಿತ ಲಾಭವು ಆಗದಿದ್ದರೂ ನೆಮ್ಮದಿಗೆ ಕೊರತೆ ಕಾಣದು. ಯಾರನ್ನೋ ಹಿಂದಿಕ್ಕಿ ಮುಂಬರುವ ಯೋಚನೆ ಸಾಧುವಾಗದು. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಚಂಚಲವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು. ನಿಮ್ಮ ಆತ್ಮವಿಶ್ವಾಸವು ಇತರರಿಗೆ ಮಾದರಿಯಾದೀತು. ಅನಪೇಕ್ಷಿತ ವಿಚಾರದಲ್ಲಿ ಮೂಗುತೂರಿಸುವುದು ಬೇಡ. ನಿಮ್ಮ ಮಾತನಿಂದ ಇನ್ನೊಬ್ಬರನ್ನು ಘಾಸಿ ಮಾಡುವಿರಿ. ಕಿವಿಯ ನೋವಿನಿಂದ ಸಂಕಟವಾಗುವುದು. ಇಂದು ಫಲವನ್ನು ಅತಿಯಾಗಿ ನಿರೀಕ್ಷಿಸಿ ಸಿಗದೇ ಬೇಸರಗೊಳ್ಳುವಿರಿ.
ಮಿಥುನ ರಾಶಿ: ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಏಕಾಂಗಿಯಾಗಬಹುದು. ಕ್ರೀಡೆಯ ವಿಚಾರದಲ್ಲಿ ಸಹೋದರರ ನಡುವೆ ಮನಸ್ತಾಪವು ಉಂಟಾಗಬಹುದು. ಸಹಿಸಲಾಗದ ದೇಹಪೀಡೆಯಿಂದ ಒದ್ದಾಡುವಿರಿ. ಕೆಲವರು ಅಕಾರಣವಾಗಿ ಬಿಟ್ಟುಹೋಗಬಹುದು. ಅಲ್ಪ ಪ್ರಗತಿಯೂ ನಿಮಗೆ ಸಂತೋಷವನ್ನು ಕೊಡುವುದು. ವೃತ್ತಿಯನ್ನು ಬಿಟ್ಟು ಹೆಚ್ಚಿನ ಆದಾಯದ ಕಡೆಗೆ ಗಮನಹರಿಸುವಿರಿ. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು. ಆರೋಗ್ಯವು ಕೊಂಚ ವ್ಯತ್ಯಾಸವಾಗಬಹುದು. ಮರಣಭೀತಿಯು ಕಾಡಬಹುದು. ಎಲ್ಲರಿಂದ ದೂರವಾಗಲು ಬಯಸುವಿರಿ. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನೀವು ಮನೆಯನ್ನು ಖರೀದಿಸುವ ಅಲೋಚನೆಯಲ್ಲಿ ಇರುವಿರಿ.
ಕಟಕ ರಾಶಿ: ನಿಮ್ಮ ಮೇಲೆ ನಿಮಗೆ ನಂಬಿಕೆಯು ಕಡಿಮೆ ಆದಂತೆ ತೋರುವುದು. ನಿಮ್ಮ ತಾಯಿ ಆರೋಗ್ಯಕ್ಕಾಗಿ ನೀವು ಹಣವನ್ನು ಖರ್ಚು ಮಾಡಬೇಕಾಗಬಹುದು. ದುಂದುವೆಚ್ಚದ ಕಡೆ ಗಮನವಿರಲಿ. ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು. ಆಸ್ತಿಯ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ. ಭೌತಿಕ ವಸ್ತುಗಳು ನಿಮಗೆ ಅಲ್ಪಸಂತೋಷವನ್ನು ಕೊಟ್ಟೀತು. ಭವಿಷ್ಯದ ಬಗ್ಗೆ ಮನಸ್ಸಿನಲ್ಲಿ ನಾನಾ ಚಿಂತೆಗಳು ಹುಟ್ಟಬಹುದು. ಕೆಲವು ಸನ್ನಿವೇಶವನ್ನು ನೀವು ನಗಣ್ಯ ಮಾಡುವುದು ಉತ್ತಮ. ಸಂಗಾತಿಯ ಸಲಹೆಯನ್ನೂ ಪಡೆದು ಉತ್ತಮ ನಿರ್ಧಾರಕ್ಕೆ ಬನ್ನಿ. ಇಂದು ಸ್ತ್ರೀಯರಿಗೆ ಸೌಂದರ್ಯಪ್ರಜ್ಞೆಯು ಅಧಿಕವಾಗಿ ಇರುವುದು. ಬೇಡವೆಂದು ಯಾವುದನ್ನಾದರೂ ಕೊಡುವ ಮೊದಲು ಯೋಚಿಸಿ.
ಸಿಂಹ ರಾಶಿ: ನಿಮ್ಮ ಮೃದುಸ್ವಭಾವವು ಕೆಲವು ಕಡೆಗಳಲ್ಲಿ ಪ್ರಯೋಜನಕ್ಕೆ ಬಾರದು. ಪ್ರತ್ಯಕ್ಷವಾದ ವಿಚಾರವಾದರೂ ಪೂರ್ಣವಾಗಿ ನಂಬಬೇಕಿಲ್ಲ. ಉದ್ಯೋಗದಲ್ಲಿ ಪ್ರಗತಿ ಇಲ್ಲ ಎಂದು ಬೇಸರಗೊಂಡಿದ್ದರೆ ನಿಮಗೆ ಅಲ್ಪ ನೆಮ್ಮದಿಯ ಸಂಗತಿಯು ಇರಲಿದೆ. ನೌಕರರ ಕಾರ್ಯವು ನಿಮಗೆ ಸಂತೋಷವನ್ನು ತರದು. ಪಾಲುದಾರಿಕೆಯಲ್ಲಿ ಅಸಹಜ ಮಾತುಕತೆಗಳು ಬರಬಹುದು. ಸಂಪೂರ್ಣವಾದ ಮನಸ್ಸಿನಿಂದ ಕಾರ್ಯವನ್ನು ಮಾಡಲಾಗದು. ಪ್ರತಿಷ್ಠಿತ ಸಂಸ್ಥೆಯ ಉನ್ನತ ಅಧಿಕಾರದ ಪ್ರಾಪ್ತಿಯ ಅವಕಾಶವು ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ಕೆಲವು ವಿಚಾರದಲ್ಲಿ ನಿಮ್ಮ ಊಹೆಯು ತಪ್ಪಾದೀತು. ಕಣ್ಣಿನ ತೊಂದರೆಯು ಹೆಚ್ಚಾಗಬಹುದು. ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಅಸಮಾಧಾನಗೊಳ್ಳಬಹುದು.
ಕನ್ಯಾ ರಾಶಿ: ನಿಮ್ಮ ಹದಗೆಟ್ಟ ಆರೋಗ್ಯವು ಉತ್ತಮವಾಗುವ ನಿರೀಕ್ಷೆಯಿದೆ. ಕುಟುಂಬದ ಜೊತೆ ಮಾತುಕತೆಗಳನ್ನು ನಡೆಸುವಿರಿ. ಬಹಳ ದಿನದ ಬೇಸರವು ಕಡಿಮೆಯಾಗುವುದು. ಇಂದಿನ ಲಾಭವನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಸುಮ್ಮನೇ ನಿಮ್ಮಷ್ಟಕ್ಕೆ ಇರಿ. ವಾಹನದ ಕಾರಣ ಕಲಹವಾಗುವುದು. ಆರೋಗ್ಯದಲ್ಲಿ ಸುಧಾರಣೆ ಇರಲಿದ್ದು ಕಾರ್ಯಕ್ಕೆ ತಯಾರಾಗುವಿರಿ. ಬೇಕಾದಷ್ಟು ಅನುಕೂಲತೆಗಳಿದ್ದರೂ ಬೇಕೆಂಬ ಆಸೆಯು ನಿಮ್ಮನ್ನು ಬಿಡದು. ಸಂಗಾರಿಯ ಮೇಲಿನ ಪ್ರೀತಿಯು ಕಡಿಮೆಯಾದಂತೆ ತೋರುವುದು. ಕಛೇರಿಯ ಕಾರ್ಯದ ನಿಮಿತ್ತ ಓಡಾಟವನ್ನು ಮಾಡಬೇಕಾಗಿದ್ದು ನಿಮಗೆ ಕಷ್ಟವಾದೀತು. ವಿತಂಡ ವಾದವನ್ನು ಮಾಡಿ ಎಲ್ಲರಿಂದ ದೂರಾಗುವಿರಿ. ಶತ್ರುಗಳು ಮಾನಸಿಕ ಕಿರುಕುಳವನ್ನು ಯಾವ ರೀತಿಯಿಂದಲೂ ಕೊಡಬಹುದು. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಇಟ್ಟುಕೊಳ್ಳುವುದು ಉತ್ತಮ. ಹಿರಿಯರ ತಿಳಿವಳಿಕೆಯು ಅಪಮಾನದಂತೆ ಕಾಣಬಹುದು.
ತುಲಾ ರಾಶಿ: ಲೆಕ್ಕ ಪರಿಶೋಧನೆಗೆ ಪ್ರಶಂಸೆಯನ್ನು ಪಡೆಯುವಿರಿ. ಯಾರನ್ನೋ ನಂಬಿ ಜವಾಬ್ದಾರಿಯನ್ನು ಕೊಡುವುದು ಬೇಡ. ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ನಿಮಗೆ ಇಷ್ಟವಾಗಬಹುದು. ಮಾನಸಿಕ ಆಘಾತವು ಇಂದು ಅನಿರೀಕ್ಷಿತ ಆಗಬಹುದು. ಬಾಂಧವರ ನಡುವೆ ವ್ಯವಹಾರದ ಕಾರಣ ಭಿನ್ನಾಭಿಪ್ರಾಯ ಬರಬಹುದು. ದಾಯಾದಿಗಳು ನಿಮ್ಮ ಮೇಲೆ ಅಪವಾದವನ್ನು ಮಾಡಬಹುದು. ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ. ಮೇಲಧಿಕಾರಿಗಳ ಜೊತೆ ಕಲಹವಾಡುವಿರಿ. ವಿವಾಹದ ವಿಳಂಬದಿಂದ ನಿಮಗೆ ಬೇಸರವಾದೀತು. ನಿಮ್ಮ ತಪ್ಪಿನಿಂದ ಹಿರಿಯರ ಕೆಂಗಣ್ಣಿಗೆ ಗುರಿಯಾಗುವಿರಿ. ತಂದೆಯ ಜೊತೆ ನಿಮ್ಮ ಭವಿಷ್ಯದ ಚಿಂತನೆಯನ್ನು ಮಾಡಲಿದ್ದೀರಿ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ಸಾಹವನ್ನು ಕೊಡುವುದು. ಇಂದು ಮೌಲ್ಯಯುತವಾದ ವಸ್ತುಗಳನ್ನು ಖರೀದಿಸುವಿರಿ.
ವೃಶ್ಚಿಕ ರಾಶಿ: ಇಂದು ನೀವು ಒತ್ತಡವನ್ನು ಕಡಿಮೆ ಮಾಡಿಕೊಂಡು ಕಾರ್ಯವನ್ನು ಮಾಡಬೇಕೆಂದು ಅಂದುಕೊಳ್ಳುವಾಗಲೇ ಹಲವಾರು ಕಾರ್ಯಗಳು ಬಂದು ಸೇರಬಹುದು. ನಿಮ್ಮನ್ನು ಆಡಿಕೊಳ್ಳುವುದು ಹೊಸದಲ್ಲದಿದ್ದರೂ ಇಂದು ಮಾತ್ರ ನಿಮಗೇ ಬೇರೆ ಭಾವವು ಬರಬಹುದು. ಅನಿರೀಕ್ಷಿತ ಗೆಲುವಿನಿಂದ ಹಿಗ್ಗುವ ಅವಶ್ಯಕತೆ ಇಲ್ಲ. ಇಂದು ನಿಮ್ಮ ಪ್ರೀತಿಪಾತ್ರರ ಭೇಟಿಯಾಗಲಿದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಮಕ್ಕಳ ನಿರೀಕ್ಷೆಯಲ್ಲಿ ಇರುವವರಿಗೆ ಶುಭಸುದ್ದಿಯು ಸಿಗಬಹುದು. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು. ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ಸಿದ್ಧರಿರುವಿರಿ. ತಪ್ಪನ್ನು ನೀವು ಒಪ್ಪಿಕೊಳ್ಳಲಾರಿರಿ. ಸಹೋದರರ ನಡುವೆ ವಾಗ್ವಾದವು ಆಗಬಹುದು. ಇಂದಿನ ವ್ಯವಹಾರವು ಎಚ್ಚರಿಕೆಯಿಂದ ಇರಲಿ. ಕೆಲವೊಮ್ಮೆ ನಿಮ್ಮ ಮಾತುಗಳೇ ನಿಮಗೆ ಮುಳುವಾಗಬಹುದು.
ಧನು ರಾಶಿ: ಇಂದು ನಿಮ್ಮ ಬಲವಾದ ಇಚ್ಛಾಶಕ್ತಿಯಿಂದ ತೊಡಕುಗಳನ್ನು ನಿವಾರಿಸಿಕೊಂಡು ಕಾರ್ಯವನ್ನು ಸಾಧಿಸುವಿರಿ. ಕಛೇರಿಯಲ್ಲಿ ನೀವು ಇಂದು ಕೇಂದ್ರಬಿಂದುವಾಗಿರಬಹುದು. ವಾಹನ ಸಂಚಾರದಲ್ಲಿ ವ್ಯತ್ಯಯವಾಗುವುದು. ಎಲ್ಲ ರೀತಿಯಿಂದಲೂ ಅನುಕೂಲವಾಗಲಿ ಎಂಬ ಮನೋಭಾವವು ಇರಲಿದೆ. ಹಿತಶತ್ರುಗಳ ತೊಂದರೆಯ ನಡುವೆಯೂ ನಿಮ್ಮ ಅಭಿವೃದ್ಧಿಯು ಆಗಲಿದೆ. ಇದರಿಂದ ನಿಮ್ಮ ಅಳಿದುಳಿದ ಶತ್ರುಗಳು ನಾಶವಾಗುವರು. ಕೆಲವರ ಬಗೆಗಿನ ಮನೋಭಾವವನ್ನು ತಿದ್ದಿಕೊಳ್ಳಬೇಕಾಗುವುದು. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ಆಸ್ತಿಯ ಗಳಿಕೆಯಲ್ಲಿ ಎಲ್ಲವೂ ಅನಾಯಾಸವಾಗಿ ನಡೆಯದು. ಬಹಳ ದಿನಗಳ ಅನಂತರ ಮನೆಯಲ್ಲಿ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಬರಬಹುದು. ಸಣ್ಣ ವಿಚಾರಕ್ಕೆ ನೀವು ಕೋಪಗೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ.
ಮಕರ ರಾಶಿ: ದುಶ್ಚಟದ ಬಗ್ಗೆ ಎಲ್ಲರಿಂದ ಹೇಳಿಸಿಕೊಳ್ಳುವಿರಿ. ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ಸಿಗುವ ಸಾಧ್ಯತೆ ಇದೆ. ಕಷ್ಟಪಟ್ಟು ಪ್ರಯತ್ನಿಸಿ, ನಿಮಗೆ ಅದೃಷ್ಟದ ಬೆಂಬಲವೂ ಸಿಗಲಿದೆ. ಎಲ್ಲರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಸ್ನೇಹಿತರಿಗೆ ಸ್ಪಂದಿಸಬೇಕಾಗುವುದು. ಸಹೋದ್ಯೋಗಿಗಳಿಂದ ಕಾರ್ಯಗಳಿಗೆ ವಿಘ್ನವುಮನಡಾಗುವುದು. ಸತ್ಯಸಂಗತಿಯನ್ನು ನಂಬುವ ಸ್ಥಿತಿಯಲ್ಲಿ ನೀವಿರಲಾರಿರಿ. ಸಾಲದಿಂದ ಬಿಡುಗಡೆ ಹೊಂದಲು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಿರಿ. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಕೊಡುಕೊಳ್ಳುವ ವ್ಯವಹಾರದಲ್ಲಿ ದಾಖಲೆಗಳು ಸರಿಯಾಗಿರಲಿ. ಇಂದು ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಸಿಗಲಿ ಎಂಬ ನಿರೀಕ್ಷೆ ಬೇಡ. ಇಂದು ನೀವು ತಂದೆಯವರಿಗೆ ಎದುರು ಮಾತನಾಡಿ ಅವರ ಮನಸ್ಸನ್ನು ನೋಯಿಸುವಿರಿ.
ಕುಂಭ ರಾಶಿ: ಮಾನಸಿಕ ದೃಢತೆಗಾಗಿ ಧ್ಯಾನ ಮತ್ತು ಯೋಗವನ್ನು ದಿನಚರಿಯಲ್ಲಿ ತಂದುಕೊಳ್ಳುವುದು ಉತ್ತಮ. ಅನವಶ್ಯಕವಾಗಿ ಹಣ ಖರ್ಚು ಮಾಡುವವರಿಗೆ ಇಂದು ಹಣದ ಬೆಲೆ ಅರ್ಥವಾಗಬಹುದು. ನೀವು ಪ್ರೀತಿಯ ಮನಃಸ್ಥಿತಿಯಲ್ಲಿರುವಿರಿ. ಯಾವುದಕ್ಕೂ ನಿರಾಸೆ ಇಟ್ಟುಕೊಳ್ಳುವುದು ಬೇಡ. ಸಮಯವು ಬೇಕಾಗಬಹುದು. ಅಧಿಕ ಖರ್ಚಿನಿಂದ ಇಂದಿನ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಮನಸ್ಸಿಗೆ ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು. ತಾಯಿಯಿಂದ ನಿಮಗೆ ಲಾಭವಾಗಬಹುದು. ಇಂದಿನ ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗುವುದು. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ತೊಂದರೆ ಆಗಬಹುದು. ಬಂದ ಅವಕಾಶವನ್ನು ಬಿಟ್ಟು ಅನಂತರ ದುಃಖಿಸುವುದರಲ್ಲಿ ಅರ್ಥವಿರದು. ಆರ್ಥಿಕ ತೊಂದರೆಗೆ ನೀವು ಬಂಧುಗಳ ಸಹಾಯವನ್ನು ಪಡೆಯಬಹುದು.
ಮೀನ ರಾಶಿ: ನಿಮ್ಮ ಸಂತೋಷದ ಜೀವನಕ್ಕಾಗಿ ಮೊಂಡುತನವನ್ನು ಬಿಡಬೇಕಾಗುವುದು. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಂಗಾತಿಯ ಜೊತೆ ವಾದದ ಸಾಧ್ಯತೆಯು ಬರಲಿದೆ. ಸಂಘರ್ಷವನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸಿ. ಸ್ತ್ರೀಯರಿಗೆ ನಾನಾ ರೀತಿಯಿಂದ ಅನುಕೂಲವಾಗಬಹುದು. ಇಂದಿನ ಕಾರ್ಯಗಳಲ್ಲಿ ಪ್ರಗತಿ ಇರಲಿದ್ದು ಸಂತೋಷವಾಗುವುದು. ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ ಇದೆ. ಬೆರೆಯುವುದು ಕಷ್ಟವಾದೀತು. ಸಾದಿಷ್ಟವಾದ ಭೋಜನದಿಂದ ಸಂತೃಪ್ತಿ ಇರಲಿದೆ. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ. ಆತ್ಮೀಯರ ಭೇಟಿಯಿಂದ ನಿಮಗೆ ಸಮಾಧಾನ ಸಿಗಲಿದೆ. ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಶತ್ರುತ್ವ ಬರಬಹುದು. ಸಂತೋಷದ ಸಮಯವನ್ನು ನೆನಪಿಸಿಕೊಳ್ಳುವಿರಿ. ನೀವು ಪ್ರಸಿದ್ಧಿಯನ್ನು ಪಡೆಯಲು ಆಸಕ್ತಿಯು ಹೆಚ್ಚುವುದು.
ಲೋಹಿತ ಹೆಬ್ಬಾರ್ – 8762924271 (what’s app only)