Horoscope 10 April: ರಾಶಿ ಭವಿಷ್ಯ; ನೀವು ಇನ್ನೊಬ್ಬರ ತಪ್ಪಿನಿಂದ ಕಲಿಯುವಿರಿ, ಸಂಸಾರದಲ್ಲಿ ಜಗಳ
Rashi Bhavishya: 2024 ಏಪ್ರಿಲ್ 10 ಬುಧವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಅಶ್ವಿನಿ, ಯೋಗ: ವಿಷ್ಕಂಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:34 ರಿಂದ 02:07ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:56 ರಿಂದ 09:29 ರ ವರೆಗೆ, ಗುಳಿಕ ಕಾಲ 11:01 ರಿಂದ ಮಧ್ಯಾಹ್ನ 12:34ರ ವರೆಗೆ.
ಮೇಷ ರಾಶಿ: ನಿಮ್ಮ ತಪ್ಪುಗಳನ್ನು ನೀವೇ ಅರ್ಥಮಾಡಿಕೊಂಡರೆ ನಿಮಗೇ ಉತ್ತಮ. ಕೃಷಿ ಚಟುವಟಿಕೆಯಲ್ಲಿ ನಿಮ್ಮದೇ ಆದ ಹೆಜ್ಜೆಗಳನ್ನು ಇಡುವಿರಿ. ನೀವು ಆಸ್ತಿಗೆ ಸಂಬಂಧಿಸಿದ ವಿವಾದವು ಇನ್ನೊಂದು ತಿರುವನ್ನು ಪಡೆಯಬಹುದು. ಯಾವುದೋ ಅಗಾಧ ಯೋಚನೆಯಲ್ಲಿ ನೀವು ಇರುವಿರಿ. ವ್ಯಾಪಾರದಲ್ಲಿ ನಷ್ಟ ಸಂಭವಿಸಬಹುದು. ತೆರಿಗೆಯನ್ನು ನೀವು ಸರಿಯಾಗಿ ಕೊಡುವ ಬಗ್ಗೆ ಆಲೋಚನೆ ಇರುವುದು. ನೌಕರರ ಬಗ್ಗೆ ನಿಮಗೆ ಖುಷಿ ಇರುವುದು. ಬಂದಿದ್ದರಲ್ಲಿ ಸುಖವಾಗಿರಲು ಪ್ರಯತ್ನಿಸುವಿರಿ. ಅಧ್ಯಾತ್ಮದಲ್ಲಿ ಮನಸ್ಸು ಇರಲಿದೆ. ಕೆಲವರಿಗೆ ಮಾತ್ರ ನಿಮ್ಮ ಬಗ್ಗೆ ಗೊತ್ತಾಗಲಿದ್ಸು ದ್ವೇಷಿಸುವವರನ್ನು ಇಷ್ಟಪಡುವಿರಿ. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ಉತ್ಸಾಹದಿಂದ ಎಲ್ಲರನ್ನೂ ಜೋಡಿಸಿಕೊಂಡು ಕೆಲಸವನ್ನು ಮುಗಿಸುವಿರಿ. ನಾಲ್ಕಾರು ಕಾರ್ಯಗಳನ್ನು ಒಟ್ಟಿಗೆ ಮಾಡಬೇಕಾದ ದಿನವಾಗುವುದು.
ವೃಷಭ ರಾಶಿ: ಇಂದು ಇನ್ನೊಬ್ಬರ ಬಗ್ಗೆ ನಿಮಗೆ ಸಹಜವಾದ ಕರುಣೆ ಇರುವುದು. ವಿದ್ಯಾಭ್ಯಾಸದಲ್ಲಿ ಶ್ರಮದ ಅಗತ್ಯ ಬಹಳ ಕಾಣಿಸುವುದು. ಎಂತಹ ಸವಾಲನ್ನೂ ನೀವು ಎದುರಿಸುವ ಹುಂಬುತನದಲ್ಲಿ ಏನನ್ನಾದರೂ ಮಾಡಿಕೊಳ್ಳುಬಿರಿ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ನೀವು ಧೈರ್ಯವನ್ನು ಕಾಪಾಡಿಕೊಳ್ಳುವಿರಿ. ನಿಮ್ಮ ಮಕ್ಕಳ ಜೊತೆ ನೀವು ಯಾವುದಕ್ಕಾದರೂ ಕೋಪಗೊಳ್ಳುವಿರಿ. ರಾಜಕೀಯದಲ್ಲಿ ಡೋಲಾಯಮಾನವಾಗಿ ಇರಲಿದ್ದು ಆತಂಕವೂ ಇರಲಿದೆ. ಇಂದು ಎಲ್ಲ ಕಾರ್ಯಗಳಲ್ಲಿ ಸಾವಧಾನತೆ ಇರದು. ಕೆಲಸವೊಂದು ಯೋಚಿಸುವುದು ಮತ್ತೊಂದು ಆಗಬಹುದು. ಯಾರನ್ನಾದರೂ ಮಾದರಿ ವ್ಯಕ್ತಿಯನ್ನಾಗಿ ಮಾಡಿಕೊಳ್ಳುವಿರಿ. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂಬ ತೀರ್ಮಾನ ಬೇಡ. ಇಂದು ನೀವು ಮಾಡಲು ಹೊರಟ ಕಾರ್ಯವು ನಿರ್ವಿಘ್ನವಾಗಿ ಮುಗಿಯುವುದು.
ಮಿಥುನ ರಾಶಿ: ನಿಮಗೆ ಯಾರಾದರೂ ಇಂದು ಆಮಿಷವನ್ನು ತೋರಿಸಿ ಕೆಲಸವನ್ನು ಮಾಡಿಸಿಕೊಳ್ಳಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಉಪಯುಕ್ತ ಮಾಹಿತಿಯನ್ನು ಕೊಟ್ಟಾರು. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನಿಮಗೆ ಉತ್ತಮವಾಗಿರುತ್ತದೆ. ನೂತನ ಮನೆಯ ನಿರೀಕ್ಷೆಯಲ್ಲಿ ನೀವು ಇರುವಿರಿ. ನಿಮ್ಮ ಹವ್ಯಾಸವು ಬದಲಾಗಬಹುದು. ಪ್ರವಾಸಕ್ಕೆ ಹೋಗಲು ಉತ್ಸಾಹವು ಇರಲಿದೆ. ಎಲ್ಲರೂ ನಿಮ್ಮ ಬಗ್ಗೆ ಹೇಳಿ ಸಾಕಾದೀತು. ಅಧಿಕಾರಿಗಳಿಂದ ನಿಮಗೆ ಬೇಕಾದುದನ್ನು ಜಾಣತನದಿಂದ ಮಾಡಿಸಿಕೊಳ್ಳುವಿರಿ. ಮನೆಯ ವಿಚಾರವನ್ನು ಯಾರ ಬಳಿಯೂ ಹಂಚಿಕೊಳ್ಳುವುದು ಬೇಡ. ಇಂದು ನಿಮಗೆ ಅದೃಷ್ಟವಿರುವ ಕಾರಣ ಉತ್ತಮ ಫಲವನ್ನು ಪಡೆಯುವಿರಿ. ನಿಮ್ಮ ಬಗ್ಗೆ ಅತಿಯಾದ ವಿಶ್ವಾಸವು ಕೊನೆಯ ಕ್ಷಣದಲ್ಲಿ ಕಾರ್ಯವನ್ನು ಮಾಡುವಂತೆ ಮಾಡುವುದು.
ಕರ್ಕಾಟಕ ರಾಶಿ: ನಿಮ್ಮ ವರ್ತನೆಯಿಂದ ಅಧಿಕಾರವು ಸಿಗಬಹುದು. ಆಸ್ತಿಯ ಬಗ್ಗೆ ಸರಿಯಾದ ದಾಖಲೆಗಳು ಇರಲಿ. ಕೈ ತಪ್ಪಿ ಹೋಗುವ ಕೆಲಸವನ್ನು ಹೇಗಾದರೂ ಉಳಿಸಿಕೊಳ್ಳುವಿರಿ. ಅನುಮಾನದ ನಿಮ್ಮ ಸ್ವಭಾವವು ಅಧಿಕವಾಗುದು. ಎಲ್ಲವನ್ನೂ ಸಮಾನವಾಗಿ ನೋಡಲು ಕಷ್ಟವಾಗಬಹುದು. ಕಲಹಕ್ಕೆ ಏನಾದರೂ ವಿಷಯವನ್ನು ಹುಡುಕಿಕೊಳ್ಳುವಿರಿ. ಅನಿರೀಕ್ಷಿತ ಧನಾಗಮನವು ಸಂತೋಷವನ್ನು ಕೊಡುವುದು. ಮಕ್ಕಳ ಕಡೆಯಿಂದ ಆರ್ಥಿಕ ಸಹಾಯವನ್ನು ನಿರೀಕ್ಷಿಸಿ ಹತಭಾಗ್ಯರಾಗುವಿರಿ. ವಾಹನ ಸಂಚಾರದಲ್ಲಿ ಮಂದಗತಿ ಇರಲಿ. ನಿಮ್ಮ ಮಾತು ಬಾಲಿಶದಂತೆ ತೋರುವುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಅಶಿಸ್ತು ನಿಮಗೆ ಸಿಟ್ಟನ್ನು ತರಬಹುದು. ಬದ್ಧತೆಯನ್ನು ರೂಢಿಸಿಕೊಳ್ಳುವುದು ನಿಮಗೆ ಸುಲಭವಾಗದು.
ಸಿಂಹ ರಾಶಿ: ಭೂಮಿಯ ಲಾಭವು ಆಗುವುದಾದರೂ ಅದನ್ನು ಪರಿಶೀಲಿಸಿ ಒಪ್ಪಿಕೊಳ್ಳಿ. ಹಿತಶತ್ರುಗಳಿಂದ ನೀವು ಹತಾಶರಾದಂತೆ ತೋರುವುದು. ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು. ವಿದ್ಯಾರ್ಥಿಗಳು ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಸ್ಥಾನವು ಸಿಗಲಿದೆ. ನಿಮ್ಮ ಆರೋಗ್ಯದಲ್ಲಿ ಸಮಸ್ಯೆಗಳನ್ನು ನೀವು ಅಲಕ್ಷ್ಯ ಮಾಡುವುದು ಸರಿಯಾಗದು. ಕೆಟ್ಟ ಕನಸನ್ನು ನೀವು ನೆನಪಿನಲ್ಲಿ ಇಡುವಿರಿ. ಕೆಲವರ ಮೇಲೆ ನಂಬಿಕೆಯನ್ನು ಇಡಲಾರಿರಿ. ಕೆಲವು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗದೇ ಹೋಗಬಹುದು. ನಿಮ್ಮ ಬಹುದಿನದ ವಿದೇಶ ಪ್ರಯಾಣದ ಕನಸು ಇಂದು ನನಸಾಗುವುದು. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ಯಾರನ್ನೂ ಮಾನಸಿಕವಾಗಿ ಹಿಂಸಿಸುವುದು ಬೇಡ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ.
ಕನ್ಯಾ ರಾಶಿ: ನಿಮಗೆ ಯೋಗ್ಯ ಸಂಗಾತಿಯ ಮಾಹಿತಿಗಳು ಸಿಗಲಿದೆ. ಕುರುಡು ತನದಿಂದ ಎಲ್ಲಿಯೋ ಹೂಡಿಕೆ ಮಾಡುವುದನ್ನು ತಪ್ಪಿಸಿ. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಗೆಲುವನ್ನು ಕಾಣಲು ಸೂಕ್ತ ಮಾಹಿತಿಯ ಕೊರತೆ ಕಾಣಿಸುವುದು. ಕುಟುಂಬದ ಇಂದಿನ ಜೀವನವು ಅನೂಹ್ಯ ತಿರುವುಗಳಿಂದ ಇರಬಹುದು. ಏಕಾಂತದಲ್ಲಿ ಇಂದು ನೆಮ್ಮದಿಯನ್ನು ಕಾಣಬಯಸುವಿರಿ. ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುವುದು. ಮಕ್ಕಳ ವಿವಾಹದ ಕುರಿತು ಅತಿಯಾದ ಚಿಂತೆ ಇರುವುದು. ನಿರುದ್ಯೋಗಿಗಳಿಗೆ ಎಲ್ಲರಿಂದ ಮಾನಸಿಕ ಹಿಂಸೆ ಆಗಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದ್ದು ಸಂತೋಷವಾಗುವುದು. ಕಳೆದುಕೊಂಡ ವಸ್ತುವಿನ ಬಗ್ಗೆ ಮೋಹವು ಹೆಚ್ಚಾಗುವುದು. ಹೊಸತನ್ನು ಏನನ್ನಾದರೂ ಮಾಡಬೇಕೆಂಬ ಬಯಕೆ ಬರುವುದು. ಧೈರ್ಯದಿಂದ ಏನನ್ನೂ ಎದುರಿಸುವ ಮನೋಬಲವು ಕಡಿಮೆ ಆದೀತು.
ತುಲಾ ರಾಶಿ: ಇಂದು ನೀವು ಮಾಡುವ ಕಾರ್ಯವನ್ನು ಬಹಳ ಗೊಂದಲದಿಂದ ಅಲಕ್ಷ್ಯದಿಂದ ಮಾಡುವಿರಿ. ಎಲ್ಲದೂ ಗೊತ್ತು ಎಂಬ ಗತ್ತು ಎದ್ದು ತೋರುತ್ತದೆ. ಆರೋಗ್ಯದಲ್ಲಿ ಆಗುವ ವ್ಯತ್ಯಾಸವನ್ನು ನೀವು ಸಹಿಸಲಾರಿರಿ. ಇಂದು ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಕಾರ್ಯವು ಸಿಗಲಿದೆ. ನಿಮ್ಮ ಬಹುಕಾಲ ಬಾಕಿಯಿರುವ ಕೆಲಸಗಳ ಬಗ್ಗೆ ನೆಮ್ಮದಿ ಇರದು. ಸಣ್ಣ ವಿಚಾರಕ್ಕೆ ಯಾರದ್ದಾದರೂ ವಿರೋಧ ಮಾಡುವಿರಿ. ಸ್ವಾಭಿಮಾನಕ್ಕೆ ತೊಂದರೆಯಾಗಬಹುದು. ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಹಣ ಬಂದರೂ ಸಂತೋಷ ಇರುವುದಿಲ್ಲ. ಬಹಳ ಕಾರ್ಯವೂ ಇದರಿಂದ ಅನಾಯಸವೆನಿಸಬಹುದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರದ್ದೂ ಒಂದಾದರೆ ನಿಮ್ಮದೇ ಒಂದು ದಾರಿಯಾಗಲಿದೆ. ಬಿಟ್ಟು ಬಿಟ್ಟು ಬರುವ ಅನಾರೋಗ್ಯದಿಂದ ನಿಮಗೆ ಮಾನಸಿಕ ಹಿಂಸೆ ಆಗುವುದು. ಸಂಶೋಧನೆಗೆ ಮಾರ್ಗದರ್ಶನ ಸಿಗಲಿದೆ. ಯಾವ ಒಪ್ಪಂದಕ್ಕೂ ನಿಮ್ಮ ಸಹಮತ ಇರದು.
ವೃಶ್ಚಿಕ ರಾಶಿ: ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ಆಪ್ತರ ಸಲಹೆಗಳು ಅವಶ್ಯವಾಗಿ ಬೇಕಾಗವುದು. ಹೂಡಿಕೆಯ ಮೇಲೆ ನಿಮಗೆ ಪೂರ್ಣ ವಿಶ್ವಾಸ ಬರಬಹುದು. ಇಂದಿನ ನಿಮ್ಮ ಘಟನೆಯು ಯಾರನ್ನೂ ಇಷ್ಟಪಡಲು ಆಗದು. ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿಯನ್ನು ತಂದೀತು. ಯಾರಾದರೂ ಹಣವನ್ನು ಹೂಡಿಕೆ ಮಾಡುವುದನ್ನು ತಡೆಯುತ್ತೀರಿ. ಸಂಸಾರದಲ್ಲಿ ಯಾವುದೋ ವಿಚಾರಕ್ಕೆ ಜಗಳಕ್ಕೆ ಇಳಿಯಬೇಡಿ. ದೃಢವಾದ ಮನಸ್ಸಿನಿಂದ ಮುಂದುವರಿಯಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳೇ ಹೆಚ್ಚು ಕೇಳಿಬರಬಹುದು. ವಿದ್ಯಾರ್ಥಿಗಳು ಮನೆಯಿಂದ ದೂರ ಇರಬೇಕಾದ ಸ್ಥಿತಿ ಬರಬಹುದು. ಶ್ರಮ ವಹಿಸಿ ಮಾಡಿದ ಕಾರ್ಯಕ್ಕೆ ಉತ್ತಮ ಫಲವು ಸಿಗಲಿದೆ. ನಿಮ್ಮವರನ್ನು ಸಂತೋಷಗೊಳಿಸುವಿರಿ. ಇಂದು ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ಹಿತಶತ್ರುಗಳಿಂದ ಏನಾದರೂ ತೊಂದರೆ ಬರಬಹುದು.
ಧನು ರಾಶಿ: ನೀವು ಇನ್ನೊಬ್ಬರ ತಪ್ಪಿನಿಂದ ಕಲಿಯುವಿರಿ. ಮನೆಯ ಕಾರಣಕ್ಕೆ ಉದ್ಯೋಗದ ಕಿರಿಕಿರಿಯು ನಿಮ್ಮನ್ನು ಬಾಧಿಸದೇ ಇರದು. ಮನಸ್ಸಿನೊಳಗೆ ಹಲವು ಗೊಂದಲಗಳನ್ನು ಇಟ್ಟುಕೊಂಡು ಚಡಪಡಿಸುವಿರಿ. ಇಂದು ನಿಮಗೆ ಏನಾದರೂ ವಿಶೇಷವಾದ ವಸ್ತುವು ಸಿಗಬಹುದು. ಪ್ರೇಮದಿಂದ ವಂಚನೆಯಾಗಬಹುದು. ಹಣವನ್ನು ಸಾಲವಾಗಿ ಯಾರಿಂದಲೂ ಪಡೆಯಲು ಹೋಗುವುದು ಬೇಡ. ನಿಮ್ಮ ಮನೆಯನ್ನು ನವೀಕರಿಸಲು ಬೇಕಾದ ತಯಾರಿಯಲ್ಲಿ ಇರುವಿರಿ. ಚಂಚಲವಾದ ಮನಸ್ಸನ್ನು ನೀವು ಒಂದೇ ಕಡೆ ನಿಲ್ಲಿಸುವುದು ಕಷ್ಡವಾದೀತು. ಇಂದು ಸ್ತ್ರೀಯರ ತಾಳ್ಮೆಗೆ ಪರೀಕ್ಷೆಯಾಗಬಹುದು. ಸಾಮಾಜಿಕ ವಲಯದಲ್ಲಿ ಯಶಸ್ವಿಯಾಗಿ ಮುನ್ನಡೆಯುವಿರಿ. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಪೂರ್ವ ತಯಾರಿ ಇಲ್ಲದೇ ಯಾವ ಕಾರ್ಯವನ್ನೂ ಮಾಡುವುದು ಸರಿಯಾಗದು.
ಮಕರ ರಾಶಿ: ಹಳೆಯ ದಾಯಾದಿ ಕಲಹವು ಪುನಃ ಆರಂಭವಾಗಬಹುದು. ಆಕಸ್ಮಿಕ ಧನಲಾಭ ಹಾಗೂ ಖರ್ಚುಗಳು ಒಟ್ಟಿಗೇ ಆಗಲಿವೆ. ವಿವಾಹ ಯೋಗವು ಕೂಡಿಬರಲಿದ್ದು, ಅಲ್ಲಗಳೆಯುವುದು ಬೇಡ. ಕಳ್ಳರ ಭೀತಿಯಿಂದ ನಿಮಗೆ ಚಿಂತೆಯಾಗಬಹುದು. ಕ್ಷಣಕಾಲದ ಕೋಪವನ್ನು ನೀವು ನಿಯಂತ್ರಣವನ್ನು ಇಟ್ಟುಕೊಳ್ಳುವುದು ಅನಿವಾರ್ಯ. ನೀವು ನಿಮ್ಮದೇ ಕಲ್ಪನಾ ಲೋಕದಲ್ಲಿ ಹೆಚ್ಚು ಇರುವಿರಿ. ವ್ಯಾಪಾರದಲ್ಲಿ ಹೊಸ ಹೂಡಿಕೆ ಮಾಡಲು ಮನಸ್ಸಿರುವುದು. ಸ್ಥಿರಾಸ್ತಿಯನ್ನು ಹೆಚ್ಚು ಮಾಡಿಕೊಳ್ಳುವ ಬಯಕೆ ಅತಿಯಾದೀತು. ಹಿರಿಯರ ಮಾತನ್ನು ಧಿಕ್ಕರಿಸಿ ಏನನ್ನಾದರೂ ಮಾಡಲು ಹೋಗುವುದು ಬೇಡ. ಇಂದು ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ. ಸ್ವಾಭಿಮಾನವನ್ನು ಬಿಟ್ಟು ವಿಚಲಿತರಾಗುವುದು ನಿಮ್ಮ ಸ್ವಭಾವ ಆಗಲಾರದು. ಅನಾರೋಗ್ಯದಿಂದ ಇಂದಿನ ಕಾರ್ಯಕ್ಕೆ ತಡೆಯುಂಟಾದೀತು. ಅತಿಯಾದ ಮಾತಿನಿಂದ ನಿಮ್ಮನ್ನು ಅಳೆಯಬಹುದು.
ಕುಂಭ ರಾಶಿ: ಇಂದು ಅಧಿಕಾರಗಳ ಜೊತೆ ವಾಗ್ವಾದ ಮಾಡುವ ಸ್ಥಿತಿ ಬರಬಹುದು. ಇಂದಿನ ಹಣಕಾಸಿನ ಬಿಕ್ಕಟ್ಟು ಮನಸ್ಸಿನ ವೇಗವನ್ನು ಹೆಚ್ಚಿಸುವುದು. ಸಣ್ಣ ವಿಚಾರಗಳೂ ನಿಮಗೆ ಸಮಸ್ಯೆಯಂತೆ ತೋರುವುದು. ನೀವು ಭಾವೋದ್ವೇಗದಲ್ಲಿ ನಿರ್ಧಾರ ತೆಗೆದುಕೊಂಡು ಅನಂತರ ಪಶ್ಚಾತ್ತಾಪಪಡುವಿರಿ. ನಿಮ್ಮ ಸಂಗಾತಿಯಿಂದ ಇಂದು ಹಲವು ವಿಚಾರಕ್ಕೆ ಬೆಂಬಲವನ್ನು ಪಡೆಯುವಿರಿ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಗತಿಯು ಆಗಬೇಕಾಗಿದೆ. ಸಹೋದ್ಯೋಗಿಗಳ ಜೊತೆ ನಿಮ್ಮ ಅಸಹಜ ಪ್ರವೃತ್ತಿಯನ್ನು ತೋರಿಸುವಿರಿ. ಪ್ರಯೋಜನವಿಲ್ಲದೇ ನೀವು ಯಾರನ್ನೂ ಇಂದು ಮಾತನಾಡಿಸಲಾರಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ತಂದೆಯ ಜೊತೆ ಸಂಬಂಧವು ಚೆನ್ನಾಗಿ ಇರುವವಂತೆ ನೋಡಿಕೊಳ್ಳಿ.
ಮೀನ ರಾಶಿ: ಇಂದು ನೀವೊಬ್ಬರೇ ಯತ್ನಿಸುವ ಕಾರ್ಯಗಳಲ್ಲಿ ಜಯವು ಪೂರ್ಣ ಪ್ರಮಾಣದಲ್ಲಿ ಸಿಗದು. ಹಿತೈಷಿಗಳ ಬೆಂಬಲವೂ ನಿಮಗೆ ಅತ್ಯವಶ್ಯವಾಗಿ ಬೇಕು. ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ನೀವು ಒಪ್ಪಿಕೊಳ್ಳಬೇಕಾಗುವುದು. ಇಂದು ನೀವು ನಿಮ್ಮವರಿಗೆ ಹೆಚ್ಚು ಖರ್ಚನ್ನು ಮಾಡಬೇಕಾದೀತು. ನಿಮ್ಮ ಅನಗತ್ಯ ಖರ್ಚುಗಳನ್ನು ನೀವು ನಿಗ್ರಹಿಸಬೇಕು. ವ್ಯಾಪಾರ ಮಾಡುವವರು ಬಯಸಿದ ಅನುಕೂಲಗಳು ಸಿಗದಿದ್ದರೆ ಸ್ವಲ್ಪ ಕಸಿವಿಸಿಗೊಳ್ಳಬಹುದು. ಕುಟುಂಬದ ಯಾವುದಾದರೂ ಸದಸ್ಯರಿಂದ ನೀವು ಮನ ನೋಯುವ ಸಾಧ್ಯತೆ ಇದೆ. ಯಾರದೋ ಕಾರ್ಯಕ್ಕೆ ನೀವು ಶ್ರಮಿಸಬೇಕಾದೀತು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು. ಬಂಧುಗಳ ಒಡನಾಟದಿಂದ ನೋವನ್ನು ಕಳೆಯುವಿರಿ. ದೇಹದಂಡನೆಯಲ್ಲಿ ಜಾಗರೂಕತೆ ಇರಲಿ.
ಲೋಹಿತ ಹೆಬ್ಬಾರ್-8762924271 (what’s app only)