Astrology: ದಿನಭವಿಷ್ಯ: ಈ ರಾಶಿಯವರು ಇಂದು ಆದಷ್ಟು ಎಚ್ಚರಿಕೆಯಿಂದ ಇರಿ, ಸ್ತ್ರೀಯರಿಂದ ಲಾಭ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 01 ಜೂನ್ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಜೂನ್ 1ರ ರಾಶಿ ಭವಿಷ್ಯದಲ್ಲಿ ಮೇಷ ರಾಶಿಯಿಂದ ಕಟಕ ರಾಶಿಯವರೆಗೆ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ನವಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಪ್ರೀತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:17ರಿಂದ ಬೆಳಗ್ಗೆ 10:54ರ ವರೆಗೆ, ಯಮಘಂಡ ಕಾಲ 14:07 ರಿಂದ 15:44ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:04 ರಿಂದ ಬೆಳಿಗ್ಗೆ 07:41ರ ವರೆಗೆ.
ಮೇಷ ರಾಶಿ: ಇಂದು ನಿಮಗೆ ಗುರುಸಮಾನರ ಭೇಟಿಯಾಗಲಿದೆ. ಅತಿಯಾಗಿ ಉದ್ಯೋಗವನ್ನು ಬದಲಾಯಿಸುವುದು ಸೂಕ್ತವಲ್ಲ. ಅವಮಾನವಾಗು ಸಂದರ್ಭವಿದ್ದರೆ ಅಲ್ಲಿಂದ ದೂರನಡೆಯಿರಿ. ನಿಮ್ಮ ವ್ಯಕ್ತಿತ್ವವನ್ನು ಹುಡುಕಿಕೊಂಡು ಬರುವವರಿದ್ದಾರೆ. ಕೆಲವರ ನಕಾರಾತ್ಮಕ ಮಾತುಗಳನ್ನು ನಗಣ್ಯ ಮಾಡುವಿರಿ. ಒಳ್ಳೆಯ ಕೆಲಸವು ಆಗಿಲ್ಲ ಎಂಬ ನೋವು ಇರಲಿದೆ. ತಾಳ್ಮೆಯನ್ನು ಇಟ್ಟುಕೊಂಡು ವ್ಯವಹರಿಸವುದು ಉತ್ತಮ. ಮನಃಶಾಂತಿಯನ್ನು ಬಯಸಿ ಪ್ರಶಾಂತವಾದ ಪ್ರದೇಶಕ್ಕೆ ಹೋಗಬಹುದು. ನಿಮ್ಮನ್ನು ಯಾರಾದರೂ ಪ್ರಶಂಸಿಸಲಿ ಎನ್ನುವ ಭಾವ ಇರುವುದು. ನೀವು ಕೆಲವು ಪ್ರಮುಖ ವಿಷಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ನೆಚ್ಚಿನ ಜನರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಯಾರ ಮೇಲೂ ನಿಮ್ಮದೇ ಆದ ನಿಲವು ಬೇಡ. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ. ಕತ್ತಲಿನಲ್ಲಿ ಗುದ್ದಾಡಿ ಕೈ ನೋವು ಮಾಡಿಕೊಳ್ಳುವಿರಿ.
ವೃಷಭ ರಾಶಿ: ಇಂದು ಬಹಳ ಸುಖವಾಗಿರುವ ದಿನ. ನೀವೇ ಶ್ರೇಷ್ಠ ಎಂಬ ಭಾವನೆ ನಿಮಗೆ ಬರಲಿದೆ. ನಿಮಗೆ ಪ್ರಶಂಸೆಗಳು ಸಿಗಲಿವೆ. ಯಾವುದನ್ನೂ ಪರಿಶೀಲಿಸದೇ ಸ್ವೀಕರಿಸಬೇಡಿ. ಅನಿರೀಕ್ಷಿತ ಹಣವೂ ಸಿಗಬಹುದು. ಆತ್ಮಗೌರವಕ್ಕೆ ಧಕ್ಕೆ ಬರುವ ಕಾರ್ಯಗಳನ್ನು ಬಿಡುವಿರಿ. ನಿಮ್ಮ ತಲೆಯಲ್ಲಿ ಇರುವ ನೂರಾರು ಯೋಜನೆಯನ್ನು ಹೇಳಲು ಹೋಗಿ ನಿಮ್ಮ ಮೌಲ್ಯವನ್ನು ಕಳೆದುಕೊಳ್ಳುವಿರಿ. ಕಲಾವಿದರಾಗುವ ಮನಸ್ಸು ಹೆಚ್ಚುವುದು. ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನಹರಿಸಬೇಕು. ಆದಷ್ಟು ಎಚ್ಚರಿಕೆಯಿಂದ ಇರಿ. ಸರ್ಕಾರಿ ನಿಯಮಗಳ ಉಲ್ಲಂಘನೆ ಬೇಡ. ಸ್ತ್ರೀಯರಿಂದ ಲಾಭವನ್ನು ಪಡೆಯುವಿರಿ. ಇಂದಿನ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ ಉತ್ಸಾಹವನ್ನು ಜಾಗರೂಕಗೊಳಿಸುವುದು. ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಸಿಲುಕುವಿರಿ. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ ಸಮಯವನ್ನು ವ್ಯರ್ಥ ಮಾಡುವಿರಿ.
ಮಿಥುನ ರಾಶಿ: ನೀವು ಇಂದು ಹೊಸ ಪಾಲುದಾರಿಕೆಯಲ್ಲಿ ಕೆಲಸವನ್ನು ಆರಂಭಿಸಲು ಯೋಚಿಸಿದ್ದೀರಿ. ನಿಮ್ಮವರೇ ನಕಾರಾತ್ಮಕ ಮಾತುಗಳನ್ನು ಹೇಳಿ ದಾರಿಬತಪ್ಪಿಸುವರು ಅಥವಾ ಅವಮಾನ ಮಾಡುವರು. ನೀವು ವೈದ್ಯವೃತ್ತಿಯಲ್ಲಿ ನಿರತರಾಗಿದ್ದರೆ ಇಂದು ಅತಿಯಾದ ಮಾನಸಿಕ ಒತ್ತಡದಲ್ಲಿ ಇರುವಿರಿ. ಅಪಾರ್ಥ ಮಾಡಿಕೊಳ್ಳುವ ಸನ್ನಿವೇಶವೇ ಹೆಚರಚಿರುವುದು. ಸಂಪತ್ತನ್ನು ಅಪರಿಚಿತ ಸ್ಥಳದಲ್ಲಿ ಇಟ್ಟು ಕಳೆದುಕೊಳ್ಳುವಿರಿ. ದ್ವೇಷವನ್ನು ಬಿಟ್ಟು ಮುಂದುವರಿಯುವುದು ಒಳ್ಳೆಯದು. ನಿಮ್ಮ ಕೆಲವು ವಿರೋಧಿಗಳು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ನಿಮ್ಮ ಕೊರತೆಯೇ ನಿಮಗೆ ಶಾಪವಾಗಬಹುದು. ಕೇಳಿದಷ್ಟು ಹಣವನ್ನು ಕೊಟ್ಟು ಹೊಸ ವಸ್ತುವನ್ನು ಖರೀದಿಸುವಿರಿ. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಕಾಡುವುದು. ಉದ್ಯೋಗವು ಸಾಕು ಎನಿಸಬಹುದು.
ಕಟಕ ರಾಶಿ: ನಿಮ್ಮ ಆತುರವು ಕೆಲಸವನ್ನು ಹಾಳುಮಾಡಿಕೊಳ್ಳಲು ಸಾಕು. ರಾಜಕೀಯ ಕುಟಂಬದ ವ್ಯಕ್ತಿಯನ್ನು ನೀವು ಭೇಟಿ ಮಾಡಲಿದ್ದು ಕೆಲವು ಅನುಕೂಲತೆಗಳು ಆಗಲಿವೆ. ಅತಿಯಾದ ಆತ್ಮವಿಶ್ವಾಸದಿಂದ ನಿಮ್ಮ ಕೆಲಸವನ್ನು ಪೂರೈಸುವಿರಿ. ಸ್ನೇಹಿತರ ಆಗಮನವು ಸಂಕಟವನ್ನು ತಂದರೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಇರುವುದಿಲ್ಲ. ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವುದು ನಿಮ್ಮ ದೃಢವಾದ ನಂಬುಗೆಯಾಗಿದೆ. ಉದ್ವೇಗದಲ್ಲಿ ನಿಮ್ಮ ವರ್ತನೆಗಳು ಸಾಮಾನ್ಯರಿಗೆ ಬೇರೆ ಅರ್ಥವನ್ನೇ ಕೊಡುವುದು. ವೈವಾಹಿಕ ಜೀವನವು ನಿಮಗೆ ಬೇಸರವೆನಿಸಬಹುದು. ನೀವು ಅವಕಾಶಗಳತ್ತ ಗಮನ ಹರಿಸಬೇಕು. ಮಕ್ಕಳ ವಿಚಾರದಲ್ಲಿ ನಿಮಗೆ ಸಮಾಧಾನವು ಸಿಗದೇ ಇರಬಹುದು. ಜಲೋದ್ಯಮದಿಂದ ಉತ್ತಮಲಾಭವು ಸಿಗುವುದು. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸವು ನಿಮಗೆ ಗೊತ್ತಿಲ್ಲದೇ ಆಗುವುದು.