Daily Horoscope: ಈ ರಾಶಿಯವರಿಗೆ ತಾವಂದುಕೊಂಡ ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾಗಬಹುದು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 15, 2025 | 12:10 AM

15 ಮಾರ್ಚ್​​​ 2025: ಶನಿವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಅಧಿಕ ಸಾಲವು ನಿಮ್ಮ‌ ಮಾನಸಿಕ‌ಸ್ಥಿತಿಯನ್ನೇ ಬದಲಿಸೀತು. ಸಹೋದರರು ಮರೆತ ವಿಚಾರವನ್ನು ಮತ್ತೆ ನೆನಪಿಸಿಕೊಳ್ಳುವರು. ಮಾರ್ಚ್​​​ 15ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರಿಗೆ ತಾವಂದುಕೊಂಡ ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾಗಬಹುದು
ಈ ರಾಶಿಯವರಿಗೆ ತಾವಂದುಕೊಂಡ ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾಗಬಹುದು
Follow us on

ಬೆಂಗಳೂರು, ಮಾರ್ಚ್​ 15,  ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರಾ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಶನಿ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಹಸ್ತಾ, ಯೋಗ : ಗಂಡ, ಕರಣ : ಬಾಲವ, ಸೂರ್ಯೋದಯ – 06 – 41 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:42 – 11:12, ಯಮಘಂಡ ಕಾಲ 14:12 – 15:42, ಗುಳಿಕ ಕಾಲ 06:41 – 08:11.

ಮೇಷ ರಾಶಿ: ಸಾಮಾಜಿಕ ಕ್ಷೇತ್ರದಲ್ಲಿ ಇರುವವರಿಗೆ ತಮ್ಮ ಕೆಲಸಗಳು ಜವಾಬ್ದಾರಿಗಳು ಬಂದು ಸೇರಬಹುದು. ನಿರೋದ್ಯೋಗಿಗಳಿಗೆ ಮುಜುಗರದ ಸಂದರ್ಭವು ಬರಬಹುದು. ಆಯ್ದುಕೊಂಡಕ್ಷೇತ್ರಕ್ಕೆ ನ್ಯಾಯ ಒದಗಿಸುವುದು ಅನಿವಾರ್ಯ. ಧನಾರ್ಜನೆಗೆ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು ಉತ್ತಮ ಆದಾಯದ್ದನ್ನು ಆಯ್ಕೆ ಮಾಡಿಕೊಳ್ಳುವಿರಿ. ಆದರೆ ಇದರಿಂದ ಕೆಲವು ರಿಸ್ಕ್ ಗಳನ್ನೂ ಎದುರಿಸಬೇಕಾಗುವುದು. ಆಪ್ತರ ಮೇಲಿನ ನಂಬಿಕೆ ಹುಸಿಯಾಗುವುದು. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ದೊಡ್ಡ ಉದ್ಯಮದಲ್ಲಿ ಪಾಲುದಾರಿಕೆಗೆ ಅವಕಾಶ ಪಡೆಯಬಹುದು. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ. ಆಲಸ್ಯದಿಂದ ಉತ್ತಮ ವಿಚಾರಗಳನ್ನು ಕಳೆದುಕೊಳ್ಳಬೇಕಾದೀತು. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಬಂಧುಗಳು ಅನಿರೀಕ್ಷಿತ ಭೇಟಿಯಾಗಿ ಸಂತೋಷ ಕೊಡುವರು. ಕಲಾವಿದರು ಖ್ಯಾತ ಕಲಾವಿದರನ್ನು ಅನಿರೀಕ್ಷಿತವಾಗಿ ಭೇಟಿ ಮಾಡುವರು. ಹಲವು ದಿನದ ಮನಸ್ತಾಪವು ದೂರವಾಗಬಹುದು.

ವೃಷಭ ರಾಶಿ: ಆರ್ಥಿಕ‌ ಸಬಲತೆಯನ್ನು ನೀವು ತೋರಿಸಬೇಕಾಗಬಹುದು. ಒಡಕನ್ನು ಸರಿಮಾಡಿಕೊಳ್ಳುವ ಆಸೆ ಇರುವುದು. ಕಳೆದ ಕಾಲವು ನಿಮಗೆ ಸಿಗದು. ಚಿಂತಿಸಿ ಪ್ರಯೋಜನವೂ ಇರದು. ಭವಿಷ್ಯದ ಚಿಂತೆಯೂ ಇರಲಿದೆ. ನಿಮ್ಮ ನಕಾರಾತ್ಮಕ ಜನಪ್ರಿಯತೆಯು ನಿಮಗೆ ಬೇಸರ ಕೊಡುವುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಆದರೆ ಅವರಿಂದ ಅದು ಸಿಗದು. ನಿಮ್ಮ ವ್ಯವಹಾರವನ್ನು ಅಳೆಯುವುದು ಸುಲಭವಲ್ಲ. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ಸ್ವಾಭಿಮಾನದಿಂದ ನಿಮಗೆ ಅವಶ್ಯಕವಿರುವುದನ್ನು ಕಳೆದುಕೊಳ್ಳುವಿರಿ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ಅಜ್ಞಾನದಿಂದ ತಪ್ಪುಗಳು ನಡೆಯಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ಒಂಟಿಯಾದಂತೆ ನಿಮಗೆ ಅನ್ನಿಸಬಹುದು. ಅತಿಯಾದ ಕೋಪವನ್ನು ಮಾಡಿಕೊಳ್ಳುವುದು ಬೇಡ. ಅದು ನಿಮ್ಮ ನಿಯಂತ್ರಣದಲ್ಲಿ ಇರಲಿ.

ಮಿಥುನ ರಾಶಿ: ನಿಮ್ಮ ಇಷ್ಟದ ಕಾರ್ಯವನ್ನು ಇಷ್ಟವಿಲ್ಲದವರ ಜೊತೆ ಮಾಡಬೇಕಾಗುವುದು. ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ನೀವೇ ಅವಕಾಶವನ್ನು ತಂದುಕೊಳ್ಳುವಿರಿ. ಸಂತೋಷದ ವಾತಾವರಣವು ಮನೆಯಲ್ಲಿ ಇರಲಿದೆ. ರಾಜಕೀಯದ ಮುಖಂಡರು ಮಾತನ್ನು ಹಿಡಿತದಲ್ಲಿಡುವುದು ಉತ್ತಮ. ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ನಿಮ್ಮ ವ್ಯಕ್ತಿತ್ವದ ಬಗ್ಗೆ ಇತರರು ಹೆಮ್ಮೆಪಡುವರು. ಪ್ರೇಮವು ಸುಲಭದಲ್ಲಿ ಬೆಳೆಯದು. ಹೂಡಿಕೆಯಿಂದ ನಿಮಗೆ ಲಾಭವು ಸಿಗಬಹುದು. ಉದ್ಯಮವನ್ನು ಬೇರೆ ರೀತಿಯಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಸಂಗಾತಿಗೆ ನಿಮ್ಮಿಂದ ಪ್ರೀತಿ ಕಡಿಮೆಯಾಗುವುದು. ಪ್ರಶಂಸೆಯಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಕುಟುಂಬಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ. ಸಣ್ಣ ವಸ್ತುವನ್ನು ದಾನ ಮಾಡಿ ಸಂತೋಷಪಡುವಿರಿ.

ಕರ್ಕಾಟಕ ರಾಶಿ: ಆಸ್ತಿಯ ವಿಷಯದಲ್ಲಿ ನಿಮ್ಮ ನಿಲುವು ಸ್ಪಷ್ಟವಾಗಿ ಇರಲಿ. ಇಂದು ಹಣಕಾಸಿನ ಬಗ್ಗೆ, ಸಾಲವನ್ನು ತೀರಿಸುವ ಬಗ್ಗೆ ಯೋಚನೆ ಇರಲಿದೆ. ಪಕ್ಷಪಾತ ನೀತಿಯನ್ನು ಬಿಟ್ಟು ಎಲ್ಲರನ್ನೂ ಉದ್ಯಮದಲ್ಲಿ ಸಮಾನವಾಗಿ ನೋಡಿ. ಎಲ್ಲದಕ್ಕೂ ಯಂತ್ರದ ಮೊರೆ ಹೋಗುವುದರಿಂದ ನಿಮಗೆ ಕಷ್ಟ. ಸಹೋದ್ಯೋಗಿಗಳು ಅಹಂಕಾರವನ್ನು ತೋರಿಸುವರು. ನಿಮ್ಮ ನಿಲುವಲ್ಲಿ ನೀವಿರುವುದು ಉತ್ತಮ. ಬೇಕೆಂದುಕೊಂಡಿದ್ದನ್ನು ಪಡೆಯುವುದು ಕಷ್ಟವಾಗುವುದು. ಗೊತ್ತಿಲ್ಲದ ಕಾರ್ಯವನ್ನು ಮಾಡಲು ನಿಮಗೆ ಉತ್ಸಾಹ ಇರಲಿದೆ. ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ನಿಮ್ಮ ಅಂತಸ್ತು ಕಡಿಮೆ ಎಂಬ ಭಾವನೆಯು ನಿಮ್ಮ ತಲೆಯಲ್ಲಿ ಇರುವುರು. ದೇವತೋಪಾಸನೆಯಿಂದ ಸಕಾರಾತ್ಮಕ ಮಾರ್ಗದಲ್ಲಿ ನೀವು ಇರುವಿರಿ. ಅಧಿಕ ಚಿತ್ತಚಾಂಚ್ಯಲ್ಯವು ನಿಮ್ಮ ಜೊತೆಗಾರರಿಗೆ ಕಷ್ಟವಾದೀತು. ವಿರುದ್ಧಾಹರ ಸೇವನೆಯು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ಇನ್ನೊಬ್ಬರ ವಸ್ತುವಿನ ಬಗ್ಗೆ ಮೋಹವು ಇರುವುದು‌. ಆತ್ಮಪ್ರಶಂಸೆಯು ಅಧಿಕಾವಾಗಿ ತೋರುವುದು. ಮಾಧ್ಯಮ‌ ಕ್ಷೇತ್ರದಲ್ಲಿ ಇರುವವರಿಗೆ ಮೇಲುಗೈ ಸಾಧಿಸುವ ಅವಕಾಶವಿರಲಿದೆ.

ಸಿಂಹ ರಾಶಿ: ನಿಮ್ಮ ನಿರ್ಧಾರಗಳು ಕಠಿಣವಗಬಹುದು.‌ ಇಂದು ಪವಿತ್ರ ಸ್ಥಳಕ್ಕೆ ಭೇಟಿ ಕೊಡಲಿದ್ದೀರಿ. ವಿವಾಹಕ್ಕೆ ಸಂಬಂಧಿಸಿದ ಚಿಂತೆಯು ನಿಮ್ಮನ್ನು ಕಾಡಬಹುದು. ಆಲಂಕಾರಿಕ ವಸ್ತುಗಳ ಬಗ್ಗೆ ಆಸಕ್ತಿಯು ಹೆಚ್ಚುವುದು. ಸಹನೆಯನ್ನು ಮೀರಿ ನೀವು ಇಂದು ವರ್ತಿಸುವಿರಿ. ತಂತ್ರಜ್ಞಾನದಿಂದ ಅನ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ. ನೂತನ ವಾಹನದ ಖರೀದಿಗೆ ಪರ ಊರಿಗೆ ಹೋಗುವಿರಿ. ಮೊದಲೇ ನಿಶ್ಚಯಪಡಿಸಿದ ಕಾರ್ಯವನ್ನು ಬಿಟ್ಟು ಬೇರೆ ಯೋಚನೆ ಮಾಡುವುದು ಬೇಡ. ಅಪರಿಚಿತರ ಜೊತೆ ಮಾತನಾಡಲು ನೀವು ಹಿಂಜರಿಯಬಹುದು. ಸ್ಮರಣಶಕ್ತಿಯ ದೋಷವು ಸ್ವಲ್ಪವೇ ಬರಲಿದೆ. ಅವಕಾಶಗಳು ತಪ್ಪಿಹೋಗಿ, ನಿಮ್ಮನ್ನೇ ನೀವು ನಿಂದಿಸಿಕೊಳ್ಳುವಿರಿ. ಎಲ್ಲರನ್ನೂ ದೂರುವುದು ನಿಮಗೆ ಇಷ್ಟವಾಗದು. ನಿಮಗೆ ವಹಿಸಿದ ಕೆಲಸವನ್ನು ಅದ್ಭುತವಾಗಿ ಮಾಡಲು ಪ್ರಯತ್ನಿಸುವಿರಿ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಮಾತಿನಲ್ಲಿ ಮಾರ್ದವ ಇರಲಿ. ನಿಮ್ಮ ಭೇಟಿಯಾಗಲಿರುವವರಿಗೆ ಅಚಾನಕ್ಕಾಗಿ ಸಿಕ್ಕುವಿರಿ.

ಕನ್ಯಾ ರಾಶಿ: ಉನ್ನತ ಸ್ಥಾನಕ್ಕಾಗಿ ಕೆಲವನ್ನು ಕೆಲವು ಕಾಲ ತಿಳಿದುಕೊಳ್ಳಬೇಕಾಗಲಿದೆ. ವೃತ್ತಿಯಲ್ಲಿ ನಿಮಗೆ ನೆಮ್ಮದಿಯನ್ನು ಪಡೆಯಲು ಕಷ್ಟವಾಗುವುದು.‌ ಒಂದಿಲ್ಲೊಂದು ಕಿರಿಕಿರಿಗಳು ನಿಮಗೆ ನೆಮ್ಮದಿಯಿಂದ ಇರಲು ಬಿಡದು. ಗೊಂದಲವೂ ನಿಮ್ಮನ್ನು ಜೋಕಾಲಿಯ‌ ಮೇಲೆ ಕುಳಿತಂತೆ ಅನ್ನಿಸಬಹುದು. ಮಕ್ಕಳ ವಿಚಾರವಾಗಿ ನಿಮಗೆ ದೂರು ಬರಬಹುದು. ವಿವಾಹದ ಬಗ್ಗೆ ಯೋಚನೆ ಇದ್ದರೂ ಪ್ರಸ್ತಾಪಿಸುವವರು ಯಾರು ಇಲ್ಲ. ಅನೇಕ ದಿನಗಳಿಂದ ಅನಾರೋಗ್ಯದ ಕಾರಣ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದು. ಉದ್ಯೋಗದಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡುವಿರಿ. ಅಧಿಕ ಸಾಲವು ನಿಮ್ಮ‌ ಮಾನಸಿಕ‌ಸ್ಥಿತಿಯನ್ನೇ ಬದಲಿಸೀತು. ಸಹೋದರರು ಮರೆತ ವಿಚಾರವನ್ನು ಮತ್ತೆ ನೆನಪಿಸಿಕೊಳ್ಳುವರು. ಯಾವುದನ್ನಾದರೂ ಮನಸಿಗೆ ತಂದುಕೊಳ್ಳದೇ ಪ್ರಯೋಜನವಾಗದು. ಬಂಧುಗಳು ನಿಮ್ಮನ್ನು ಬಹಳವಾಗಿ‌ ದೂರುವರು. ಅಪಮಾನದಿಂದ ಮನಸ್ಸು ಉಗ್ರರೂಪಕ್ಮೆ ಬದಲಾಗಬಹುದು. ಯಾರ ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ.