ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಸಿದ್ಧಿ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:41 ಗಂಟೆ, ರಾಹು ಕಾಲ ಮಧ್ಯಾಹ್ನ 03:37 ರಿಂದ ಸಂಜೆ 05:09, ಯಮಘಂಡ ಕಾಲ ಬೆಳಿಗ್ಗೆ 09:27 ರಿಂದ 10:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:32 ರಿಂದ 02:04ರ ವರೆಗೆ.
ಧನು ರಾಶಿ: ಸಣ್ಣದಾದರೂ ಸ್ವಂತ ಉದ್ಯೋಗವಿರಬೇಕು ಎನ್ನುವ ಧ್ಯೇಯ ನಿಮ್ಮದು. ನೀವು ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಯನ್ನು ನಿಭಾಯಿಸುವ ವಿಧಾನವನ್ನು ಕಲಿಯುವುದು ಯೋಗ್ಯ. ಕೋಪವನ್ನು ಬಹಳ ಶ್ರಮದಿಂದ ನಿಯಂತ್ರಣ ಮಾಡಿಕೊಳ್ಳುವಿರಿ. ನಿಮ್ಮ ವಿದ್ಯಾಭ್ಯಾಸವು ಪ್ರಗತಿಯತ್ತ ಸಾಗುವುದು. ಹಣಕಾಸಿನ ವಿಚಾರದಲ್ಲಿ ವಿಳಂಬವಾದರೂ ತಿಂದರೆ ಇಲ್ಲ. ಸ್ನೇಹಿತನಿಗಾಗಿ ಸಾಲಮಾಡಬೇಕಾದೀತು. ಸರಿಯಾಗಿರಲಿ. ಮೋಸ ಹೋಗಬೇಕಾದೀತು. ನಿಮಗೆ ಇಂದು ನಿಮ್ಮ ಸಹೋದ್ಯೋಗಿಗಳ ವರ್ತನೆಯಲ್ಲಿ ಅನುಮಾನ ಕಾಣಬಹುದು. ಅವರಿಂದ ದೂರವಿರುವುದು ಉತ್ತಮ. ನಿಮ್ಮ ಆದಾಯದ ಮೂಲವು ಹೊರಗಿನಿಂದ ಬರುವುದಾಗಿದೆ. ಹಾಗಾಗಿ ಹಣಕ್ಕಾಗಿ ತಲೆ ಕೆಡಸಿಕೊಳ್ಳುವುದಿಲ್ಲ. ಬೇಕಾಗಿದ್ದನ್ನು ಪಡೆಯುವಿರಿ. ಸೇವಾ ಮನೋಭಾವವನ್ನು ಇಟ್ಟುಕೊಳ್ಳುವಿರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ಆಮದು ವ್ಯವಹಾರದಲ್ಲಿ ತಡೆಯಾಗಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನವು ನಡೆಯುವುದು.
ಮಕರ ರಾಶಿ: ದುರಸ್ತಿ ಕಾರ್ಯವನ್ನು ಮಾಡುವವರಿಗೆ ಈ ದಿನ ಒತ್ತಡವಿರುವುದು. ಇಂದು ನೀವು ಅತಿಯಾದ ಹಿಂಸೆಯನ್ನು ಅನುಭವಿಸಬೇಕಾದ ಸ್ಥಿತಿಯು ಬರಬಹುದು. ಹೊಸ ಗೆಳೆತನ ನಿಮಗೆ ಬಹಳ ಇಷ್ಟವಾಗುವುದು. ವಿವಾದದಲ್ಲಿ ಜಯವಿದೆ ಎಂದು ಎಲ್ಲರ ಬಳಿಯೂ ವಾದಕ್ಕೆ ಹೋಗುವುದು ಬೇಡ. ಆಕಸ್ಮಿಕ ಧನಲಾಭವು ನಿಮಗೆ ಸಂತೋಷವನ್ನು ಕೊಡಲಿದೆ. ಹಿರಿಯರನ್ನು ಗೌರವಿಸುವಿರಿ. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವಿರಿ. ನಿಮ್ಮವರ ಬಳಿ ಸಹಾಯವನ್ನು ಕೇಳುವಿರಿ. ಇಂದು ನಿದ್ರೆಯು ಬಾರದೇ ಮನಸ್ಸು ಸರಿ ಇರದು. ಅನವಶ್ಯಕ ಮಾತುಗಳಿಂದ ವಿವಾದವು ಸೃಷ್ಟಿಯಾಗುವುದು. ಕುಟುಂಬದ ಕಲಹವು ನಿಮಗೆ ಹಲವು ವಿಚಾರಗಳನ್ನು ತಿಳಿಸೀತು. ಸಹೋದರನಿಂದ ಸಹಕಾರವು ನಿಮಗೆ ಸಿಗಬಹುದು. ಸ್ನೇಹಿತರ ವರ್ಗವು ಬೆಳೆಯಬಹುದು. ನಿಮ್ಮ ವಿಷಯವನ್ನು ಯಾರ ಬಳಿಯೂ ಹೇಳುವುದು ಬೇಡ. ಹೆಚ್ಚಿನ ಆದಾಯದಿಂದ ದುರಭ್ಯಾಸವು ಹೆಚ್ಚಾಗಬಹುದು. ಉದ್ಯೋಗದಲ್ಲಿ ಅಧಿಕ ವೇತನದ ನಿರೀಕ್ಷೆ ಇರುವುದು. ಕೆಲವನ್ನು ನೀವು ಅನಗತ್ಯವಾಗಿ ತೆಗೆದುಕೊಳ್ಳುವಿರಿ.
ಕುಂಭ ರಾಶಿ; ಇನ್ನೊಬ್ಬರಿಗೆ ಹೇಳುವಾಗ ನೀವು ಅದನ್ನು ಆಚರಿಸಬೇಕಾಗಬಹುದು. ಇಲ್ಲವಾದರೆ ನಿಮ್ಮ ಮೇಲೆ ಪ್ರಶ್ನೆಗಳು ಬರಬಹುದು. ನಿಮ್ಮ ದುರಭ್ಯಾಸದಿಂದ ಇಂದಿನ ಸಮಯವನ್ನು ನಷ್ಟಮಾಡಿಕೊಳ್ಳುವಿರಿ. ನಿಮ್ಮನ್ನು ಸರಿ ದಾರಿಗೆ ತರುವ ಪ್ರಯತ್ನದಲ್ಲಿ ಮನೆಯವರು ಇರುವರು. ನಿಮ್ಮ ಆಲೋಚನೆಗಳಿಂದ ನಿಮ್ಮ ಸ್ಥಾನವೇ ಬದಲಾಗಬಹುದು. ಬಾಂಧವ್ಯವು ಗಟ್ಟಿಯಾಗಬಹುದು. ಸಂಗಾತಿಯಿಂದ ಉತ್ತಮ ಸಲಹೆಯನ್ನು ಪಡೆಯುವಿರಿ. ನಿಮ್ಮ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು. ಕಾನೂನಿನ ಸಮರದಲ್ಲಿ ನಿಮಗೆ ಜಯವಾಗಬಹುದು. ಒತ್ತಡದಿಂದ ಹೊರಬಂದ ಕಾರಣ ನಿರಾಳವೆನಿಸಬಹುದು. ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ಆರ್ಥಿಕ ತೊಂದರೆಯನ್ನು ನಿಭಾಯಿಸುವ ಕಲೆ ಗೊತ್ತಾಗಲಿದೆ. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಸಾಮಾಜಿಕ ಕಾರ್ಯದಲ್ಲಿ ಉತ್ಸಾಹದಿಂದ ಇರುವಿರಿ. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು.
ಮೀನ ರಾಶಿ: ಧಾರ್ಮಿಕ ನಂಬಿಕೆಗಳು ನಿಮಗೆ ಸತ್ಯವೆನಿಸಿ, ಶ್ರದ್ಧೆಯು ಹೆಚ್ಚಾಗುವುದು. ಇಂದು ನಿಮ್ಮ ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವುದು. ಇತರರು ನಿಮ್ಮ ಕುರಿತು ಬೇಡದ ಮಾತುಗಳನ್ನು ಆಡುವ ಸಾಧ್ಯತೆಯೂ ಹೆಚ್ಚು. ಹಣವು ಬಂದ ಹಾಗೇ ಹೋಗುವುದು. ನೌಕರರಿಂದ ನಿಮಗೆ ತೊಂದರೆಯಾಗಬಹುದು. ವಿದ್ಯಾರ್ಥಿಗಳಿಗೆ ಯೋಗ್ಯವಾದ ಮಾರ್ಗದರ್ಶನ ಬೇಕಾಗುವುದು. ಸಂಗಾತಿಯನ್ನು ಕಡೆಗಣಿಸಿದ್ದಕ್ಕೆ ಬೇಸರ ಪಡಬೇಕಾದೀತು. ತಾಯಿಯ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ತಾಯಿಯ ಕಡೆಯವರು ನಿಮಗೆ ಸಹಾಯ ಮಾಡುವರು. ಸುಖದಲ್ಲಿ ಇಂದು ಮಾಡಬೇಕಾದ ಕೆಲಸವನ್ನು ಮರೆಯುವಿರಿ. ಕಂಟಕದಿಂದ ನೀವು ಮುಕ್ತರಾಗುವಿರಿ. ಯಾವುದನ್ನೇ ಆರಂಭದಿಂದಲೇ ಅದು ಬರಬೇಕು. ನಿಮ್ಮ ಚಿಂತೆಯೂ ದೂರಾಗಬಹುದು. ಭೂಮಿಯನ್ನು ಖರೀದಿಸುವ ಆಲೋಚನೆ ಇರಲಿದೆ. ನಿಮ್ಮನ್ನು ಕೆಲವರು ಅನಾದರ ಮಾಡಿದಂತೆ ಕಾಣಿಸೀತು. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ.