Daily Horoscope: ಗೃಹ ನಿರ್ಮಾಣದಲ್ಲಿ ವಿಘ್ನ, ಹಿರಿಯರ ಉಪದೇಶ ನಿಮಗೆ ಕಿರಿಕಿರಿ ಎನಿಸಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್​ 3: ಸುಖಕ್ಕಾಗಿ ಕಷ್ಟಪಡಬೇಕಿಲ್ಲ. ಜಾಣ್ಮೆಯಿಂದ ಕಾರ್ಯವನ್ನು ಸಾಧಿಸಬಹುದು. ಉದ್ಯೋಗದಲ್ಲಿ ಅಸಹಾಯಕರಾಗಿ ಕೆಲಸವನ್ನು ಪೂರ್ಣಮಾಡುವಿರಿ‌. ಅವಕಾಶಗಳು ಪಡೆಯಲು ತಂತ್ರವನ್ನು ಹೂಡುವಿರಿ. ಮಾತಿನಲ್ಲಿ ಸತ್ಯತೆ ಇದ್ದರೂ ಸ್ಪಷ್ಟತೆ ಇರಲಿ. ಹಾಗಾದರೆ ಸೆಪ್ಟೆಂಬರ್​ 3ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಗೃಹ ನಿರ್ಮಾಣದಲ್ಲಿ ವಿಘ್ನ, ಹಿರಿಯರ ಉಪದೇಶ ನಿಮಗೆ ಕಿರಿಕಿರಿ ಎನಿಸಬಹುದು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 03, 2024 | 12:10 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 3) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಸಿದ್ಧಿ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:41 ಗಂಟೆ, ರಾಹು ಕಾಲ ಮಧ್ಯಾಹ್ನ 03:37 ರಿಂದ ಸಂಜೆ 05:09, ಯಮಘಂಡ ಕಾಲ ಬೆಳಿಗ್ಗೆ 09:27 ರಿಂದ 10:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:32 ರಿಂದ 02:04ರ ವರೆಗೆ.

ಸಿಂಹ ರಾಶಿ: ಆಕಸ್ಮಿಕ ಅಪಘಾತಗಳಿಂದ ನೋವು ಹೆಚ್ಚಾಗುವುದು. ಆತುರದಲ್ಲಿ ಇಂದು ಅಸಂಬದ್ಧವಾಗುವ ಸಾಧ್ಯತೆ ಇದೆ. ವಿವಾಹದ ಪ್ರಸ್ತಾಪಗಳು ಬಂದು ಮತ್ತೆ ಹೋಗುತ್ತವೆ ಅಷ್ಟೇ. ಪ್ರಯತ್ನಪೂರ್ವಕವಾಗಿ ನಿಮ್ಮ ಕೆಲಸವನ್ನು ಪೂರೈಸುವಿರಿ. ಉದ್ಯೋಗದಲ್ಲಿ ಭಡ್ತಿಗಾಗಿ ಪ್ರಯತ್ನಿಸುವಿರಿ. ಆಲಸ್ಯವು ಇಂದಿನ ಕಾರ್ಯವನ್ನು ನಿಧಾನ ಮಾಡಬಹುದು. ನೀವು ಇಟ್ಟ ನಂಬಿಕೆ ಹುಸಿಯಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕಲಹವಾಗುವ ಸಾಧ್ಯತೆ ಇದೆ. ವಾಹನವನ್ನು ಬಹಳ ಜಾಗರೂಕತೆಯಿಂದ ಚಲಾಯಿಸಿ. ವಿದ್ಯಾರ್ಥಿಗಳಿಗೆ ಸಮಯದ ಅಭಾವವು ಆಗಬಹುದು. ಕೆಲವು ದಿನಗಳ ವಿರಾಮವನ್ನು ಪಡೆದು ಪ್ರವಾಸ ಹೋಗುವಿರಿ. ನಿಮ್ಮ ವಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಿ. ಮೇಲಧಿಕರಿಗಳು ನಿಮ್ಮ‌ ಕಾರ್ಯವನ್ನು ಪರಿಶೀಲಿಸಬಹುದು. ಎಲ್ಲರೆದುರೂ ನಿಮ್ಮ ಸಾಹಸಪ್ರದರ್ಶನ ಬೇಡ. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು. ನಿಮ್ಮ ಗುರಿಯನ್ನು ಯಾರಾದರೂ ತಪ್ಪಿಸಬಹುದು. ನಿಮ್ಮ ಇಂದಿನ ದುಃಖಕ್ಕೆ ಕಾರಣವು ತಡವಾಗಿ ಗೊತ್ತಾದೀತು.

ಕನ್ಯಾ ರಾಶಿ: ನೌಕರರಿಂದ ನಿರೀಕ್ಷಿಸಿದ್ದು ಸುಳ್ಳಾಗಬಹುದು. ಇಂದು ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಆಸಕ್ತಿ ಹೆಚಾಗುವುದು. ಔದ್ಯೋಗಿಕ ವಿಚಾರದಲ್ಲಿ ನೀವು ಹೆಚ್ಚಿನ ಗಮನ ಅವಶ್ಯಕ. ಹಿರಿಯರ ಉಪದೇಶವು ನಿಮಗೆ ಕಿರಿಕಿರಿ ಎನಿಸಬಹುದು. ಗೃಹನಿರ್ಮಾಣದಲ್ಲಿ ವಿಘ್ನಗಳು ಬರಲಿದೆ. ನಿಮ್ಮ ಆದಾಯದ ಮೂಲವಾದ ವ್ಯಾಪಾರವು ಲಾಭವನ್ನು ಕೊಡಬಹುದು. ಹಳೆಯ ರೋಗಕ್ಕೆ ಔಷಧದಿಂದ ಪರಿಹಾರ ಸಿಗಲಿದೆ. ಕಛೇರಿಯ ಬಗೆಗಿನ ಮೋಹ ದೂರಾಗುವುದು. ನಿಮ್ಮ ಪ್ರೀತಿಪಾತ್ರರನ್ನು ನೀವು ಭೇಟಿಯಾಗಲು ಬಯಸುವಿರಿ. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಸರ್ಕಾರದ ಅಧಿಕಾರಿಹಳಿಂದ ಒತ್ತಡವು ಬರಬಹುದು. ಆಪ್ತರ ಜೊತೆ ಪ್ರಯಾಣ ಮಾಡುವಿರಿ. ಪ್ರೇಮವು ಅತಂತ್ರ ಸ್ಥಿತಿಗೆ ಹೋಗಬಹುದು. ನೀರಿನ ಪ್ರದೇಶದಲ್ಲಿ ಜಾಗರೂಕತೆ ಅವಶ್ಯಕ. ಆಪ್ತರ ಜೊತೆ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಬಗ್ಗೆ ಪ್ರೀತಿ ಹೆಚ್ಚಾಗುವುದು. ನಿಮ್ಮ ಇಂದಿನ ಅಸಹಾಯಕತೆಯನ್ನು ಯಾರ ಎದುರೂ ಹೇಳುವುದು ಬೇಡ. ನಿಮ್ಮ ಎಲ್ಲ‌ ಕಾರ್ಯಕ್ಕೂ ಯಶಸ್ಸು ಬೇಕು ಎಂಬ ಹಂಬಲ ಬೇಡ.

ತುಲಾ ರಾಶಿ: ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ವಂಚಿಸುವ ಸಾಧ್ಯತೆ ಇದೆ.‌ ನೀವು ಆಯ್ಕೆ ಮಾಡಿಕೊಳ್ಳುವ ಕೆಲಸವೇ ನಿಮ್ಮ ಭವಿಷ್ಯಕ್ಕೆ ಮಾರ್ಗವನ್ನು ತೋರಿಸುವುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಅವಕಾಶಗಳು ಲಭ್ಯವಾಗುವುವು. ಆಪ್ತರ ಸಹಾಯದಿಂದ ನಿಮಗೆ ಉದ್ಯೋಗವು ಸಿಗಬಹುದು. ಮಾತನ್ನು ಉಳಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ನಿಮ್ಮ ಇಂದಿನ ಕಾರ್ಯಕ್ಕೆ ಹಿರಿಯರ ಒಪ್ಪಿಗೆ ಪಡೆದು ಮುಂದುವರಿಯುವುದು ಅವಶ್ಯಕ. ಭವಿಷ್ಯದ ಕಲ್ಪನೆಯನ್ನು ಕುಟುಂಬದವರ ಜೊತೆ ಹಂಚಿಕೊಳ್ಳುವಿರಿ. ನಿಮ್ಮವರ ಮೇಲೆ ಅನುಮಾನವು ದೂರವಾಗಲು ಕಾರಣವಾಗಬಹುದು. ನಿಮ್ಮ ಹೇಳಿಕೆಗಳು ಸ್ಪಷ್ಟವಾಗಿರಲಿ. ಮಾಡಿದ್ದು ತಪ್ಪು ಎಂದು ಗೊತ್ತಿದ್ದರೂ ಪಶ್ಚಾತ್ತಾಪ ಪಡುವುದು ಬೇಡ. ನಿಮ್ಮದಲ್ಲದ ತಪ್ಪನ್ನೂ ನೀವು ಒಪ್ಪಿಕೊಂಡು ಕಲಹವಾಗುವುದನ್ನು ನಿಲ್ಲಿಸುವಿರಿ. ಮಕ್ಕಳ ವಿವಾಹಕ್ಕಾಗಿ ಓಡಾಡುವಿರಿ. ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಳನ್ನು ಸಲ್ಲಿಸಿರಿ. ಮನೋವಿಕಾರವನ್ನು ಕಡಿಮೆ‌ ಮಾಡಿಕೊಳ್ಳಿ.

ವೃಶ್ಚಿಕ ರಾಶಿ: ಮಕ್ಕಳಿಗಾಗಿ ಪಟ್ಟಶ್ರಮವು ಇಂದು ಸಾರ್ಥಕ ಎನಿಸಬಹುದು. ಮನೆಯ ಸಂತೋಷದ ವಾತಾವರಣವು ಪುಟ್ಟ ಕಾರಣಕ್ಕೆ ಹಾಳಾಗಬಹುದು. ತನಗೆ ಬೇಕಾದುದನ್ನು ಪಡೆಯುವ ಆತುರತೆ ಇರಲಿದೆ. ಸ್ನೇಹಿತರಿಂದ ನಿಮಗೆ ಉಡುಗೊರೆ ಸಿಗಬಹುದು. ಸುಖಕ್ಕಾಗಿ ಕಷ್ಟಪಡಬೇಕಿಲ್ಲ. ಜಾಣ್ಮೆಯಿಂದ ಕಾರ್ಯವನ್ನು ಸಾಧಿಸಬಹುದು. ಉದ್ಯೋಗದಲ್ಲಿ ಅಸಹಾಯಕರಾಗಿ ಕೆಲಸವನ್ನು ಪೂರ್ಣಮಾಡುವಿರಿ‌. ಅವಕಾಶಗಳು ಪಡೆಯಲು ತಂತ್ರವನ್ನು ಹೂಡುವಿರಿ. ಮಾತಿನಲ್ಲಿ ಸತ್ಯತೆ ಇದ್ದರೂ ಸ್ಪಷ್ಟತೆ ಇರಲಿ. ಉದ್ಯೋಗದ ನಿಮಿತ್ತ ದೂರ ಹೋದವರಿಗೆ ತೊಂದರೆ ಆಗಬಹುದು. ನಿಮಗೆ ಬೇಕಾದ ವಸ್ತುವು ಯಾರಿಂದಲಾದರೂ ಸಿಗಬಹುದು. ಇಂದು ನಿಮಗೆ ಸಿಕ್ಕಿದ್ದರಲ್ಲಿ ಸಂತೋಷಿಸಿ. ಅಧಿಕಾರಿಗಳ ಕರುಣೆಯ ಕಾರಣ ಆಪತ್ತಿನಿಂದ ಹೊರಬರುವಿರಿ. ಅಪರಿಚರಿಂದ ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಮೆಚ್ಚುಗೆಯಿಂದ ಅಪರಿಚಿತರಿಗೆ ಖುಷಿಯಾಗಬಹುದು. ಹೊಸ ವಸ್ತುಗಳ ಬಗ್ಗೆ ಅಸೆ ಬರುವುದು. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ