Horoscope: ಈ ರಾಶಿಯವರಿಗೆ ಅನೇಕ ಅವಕಾಶಗಳು ಸಿಕ್ಕರೂ ಅದನ್ನು ಬಿಡುವಿರಿ
ಸೆಪ್ಟೆಂಬರ್ 3, 2024ರ ನಿಮ್ಮ ರಾಶಿಭವಿಷ್ಯ: ಮನೋರಂಜನೆಯ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುವಿರಿ. ಕೆಲಸದಿಂದ ಹೊರಬಂದ ಸ್ನೇಹಿತರಿಗೆ ಸಹಾಯ ಮಾಡುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಹೆಚ್ಚು ಇರಲಿದೆ. ಅನಿರೀಕ್ಷಿತವಾಗಿ ಆರೋಗ್ಯ ಕೆಡಬಹುದು. ಹಾಗಾದರೆ ಸೆಪ್ಟೆಂಬರ್ 3ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್ 3) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಸಿದ್ಧಿ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:41 ಗಂಟೆ, ರಾಹು ಕಾಲ ಮಧ್ಯಾಹ್ನ 03:37 ರಿಂದ ಸಂಜೆ 05:09, ಯಮಘಂಡ ಕಾಲ ಬೆಳಿಗ್ಗೆ 09:27 ರಿಂದ 10:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:32 ರಿಂದ 02:04ರ ವರೆಗೆ.
ಮೇಷ ರಾಶಿ: ಒಮ್ಮನಸ್ಸಿನಿಂದ ಇಂದು ಕಾರ್ಯ ಅಸಾಧ್ಯ. ಕಿರಿಕಿರಿಯನ್ನು ನಿಭಾಯಿಸುವುದೂ ಕಷ್ಡವಾದೀತು. ನಿಮ್ಮ ತೊಂದರೆಯ ಪರಿಹಾರಕ್ಕೆ ಹತ್ತಾರು ಮಾರ್ಗಗಳು ಇವೆ. ಅದನ್ನು ಅನ್ಯರ ಮೂಲಕ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಸುತ್ತಲಿನವರು ನಿಮ್ಮನ್ನು ಅರ್ಥಮಾಡಿಕೊಳ್ಳುವರು. ಆದರೆ ಅವರಿಂದ ಗೌರವ ಸಿಗುತ್ತಿಲ್ಲ ಎಂಬ ಕೊರಗು ಕಾಡಬಹುದು. ಶತ್ರುಗಳನ್ನೇ ಆದರೂ ಅವರನ್ನು ನೋಡಿಕೊಳ್ಳುವ ಕ್ರಮ ಗೊತ್ತಿರಲಿ. ಮನೋರಂಜನೆಯ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುವಿರಿ. ಕೆಲಸದಿಂದ ಹೊರಬಂದ ಸ್ನೇಹಿತರಿಗೆ ಸಹಾಯ ಮಾಡುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಹೆಚ್ಚು ಇರಲಿದೆ. ಅನಿರೀಕ್ಷಿತವಾಗಿ ಆರೋಗ್ಯ ಕೆಡಬಹುದು. ಸಂಗಾತಿಯಿಂದ ಸಹಕಾರವು ನಿಮಗೆ ಸಿಗಲಿದೆ. ಇನ್ನೊಬ್ಬರ ವಿಮರ್ಶೆಯಲ್ಲಿ ಸಮಯ ಹೋಗುವುದು. ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ಸಿಗಲಿದೆ. ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ. ಇನ್ನೊಬ್ಬರ ಕಷ್ಟಕ್ಕೆ ಕಿಂಚಿತ್ತಾದರೂ ಸ್ಪಂದಿಸುವಿರಿ.
ವೃಷಭ ರಾಶಿ: ನಿಮ್ಮ ಮಾತುಗಳನ್ನು ನಂಬುವವರ ಸಂಖ್ಯೆ ಕಡಿಮೆ ಆದೀತು. ಇಂದು ಅಕಾರ್ಯಕ್ಕೆ ಧನವು ವ್ಯಯವಾಗಬಹುದು. ನಿಮಗೆ ಅನೇಕ ಅವಕಾಶಗಳು ಸಿಗಲಿದ್ದು ಅದನ್ನು ಬಿಡುವಿರಿ. ಕೃಷಿ ಚಟುವಟಿಕೆಗಳನ್ನು ತೊಡಗಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಸೌಖ್ಯವನ್ನು ಇಚ್ಛಿಸುವಿರಿ. ಕೆಲವನ್ನು ಮಾತನಾಡಿ ಕೆಡಿಸಿಕೊಳ್ಳುವಿರಿ. ಇದು ನಿಮ್ಮನ್ನು ಚಿಂತೆಗೆ ಚಿಂತೆಗೆ ಒಳಗಾಗುವಿರಿ. ಅಧಿಕಾರಿವರ್ಗವು ನಿಮ್ಮ ಮೇಲೆ ಒತ್ತಡವನ್ನು ತರಬಹುದು. ಮನೆಯ ನಿರ್ಮಾಣದಲ್ಲಿ ನಿಮಗೆ ಗೊಂದಲ ಹೆಚ್ಚಾಗುವುದು. ನಿಮ್ಮನ್ನು ಕಡೆಗಣಿಸಿದ ಜನರ ಮುಂದೇ ನೀವು ಎದ್ದು ನಿಲ್ಲುವಿರಿ. ಇಂದಿನ ಕಾರ್ಯಗಳು ಮುಕ್ತಾಯವಾಗದೇ ಆತಂಕ ಪಡುವಿರಿ. ಸಂಗಾತಿಯನ್ನು ಹೆಚ್ಚು ಇಷ್ಟಪಡುವಿರಿ. ನೀವೇ ನಿಮಗೆ ವೈರಿಯಾಗುವ ಸಾಧ್ಯತೆ ಇದೆ. ಸಾಮರಸ್ಯದ ಕೊರೆತೆಯು ನೀಗಲಿದೆ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸುಮ್ಮನೇ ಸೃಷ್ಟಿಸಿಕೊಳ್ಳುವಿರಿ. ಸಂಗಾತಿಯ ಮೇಲೆ ಬೇಸರವಾಗುವುದು.
ಮಿಥುನ ರಾಶಿ: ವಿದ್ಯಾರ್ಥಿಗಳಿಗೆ ಮಾನಸಿಕವಾದ ಭಯವನ್ನು ತೆಗೆದರೆ ಮುನ್ನಡೆಗೆ ಅವಕಾಶವಿದೆ. ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡುವುದು ನಿಮಗೆ ಇಷ್ಟವಾಗುವುದು. ಮಕ್ಕಳ ಭಾವನೆಗೆ ಸ್ಪಂದಿಸಿ ಅವರನ್ನು ಖುಷಿಪಡಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ನಿಮಗೆ ಭಯವಾಗಬಹುದು. ಹೊಸ ಯಂತ್ರವನ್ನು ನೀವು ಖರೀದಿಸುವ ಅನಿವಾರ್ಯತೆ ಬರಬಹುದು. ಇನ್ನೊಬ್ಬರಿಗೆ ಸಹಾಯ ಮಾಡಿದ ಧನ್ಯತೆ ನಿಮಗೆ ಆಗಲಿದೆ. ಇದು ನಿಮ್ಮನ್ನು ಖುಷಿಯಿಂದ ಇಡುವುದು. ಕಲಹವು ಸಣ್ಣದೇ ಆಗಿದ್ದರೂ ಅದ ಫಲವು ಬಹಳ ದೊಡ್ಡಾದಾಗಿರುವುದು. ಮಾತಿನ ಮೇಲೆ ನಿಮ್ಮ ನಿಯಂತ್ರಣವಯ ಅಗತ್ಯ. ಬಂಧುಗಳು ನಿಮ್ಮನ್ನು ಪ್ರಶಂಸಿಸುವರು. ಮಹಿಳೆಯರು ಸ್ವ ಉದ್ಯೋಗವನ್ನು ಮಾಡಲು ಬಯಸಬಹುದು. ಅನಿವಾರ್ಯ ಕಾರಣದಿಂದ ಮನೆಗೆ ಹೋಗಲು ಆಗದೇ ಇರಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ. ಆಲಸ್ಯದ ಕಾರಣ ಎಲ್ಲರಿಂದ ದೂರುಬರಬಹುದು.
ಕಟಕ ರಾಶಿ: ಬರಬೇಕಾದ ಹಣವು ನಿಮಗೆ ಸಿಗುಬುದು ಕಷ್ಡವಾಗುವುದು. ಓಡಾವೂ ವ್ಯರ್ಥವಾಗಿ, ಬೇಸರ ತರಬಹುದು. ಇಂದು ಹೊಸ ಉತ್ಸಾಹದಿಂದ ವೃತ್ತಿಗೆ ತೆರಳಿದರೂ ನಿಮ್ಮೊಳಗೆ ಆತಂಕವಂತೂ ಇರುವುದು. ಧನನಷ್ಟವಾದರೂ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಉದ್ಯೋಗದಲ್ಲಿ ಬದಲಾವಣೆ ಮಾಡಲು ಇಚ್ಛಿಸುವಿರಿ. ನಿಮ್ಮ ಕೆಲಸಗಳಿಗೆ ಆಪ್ತರ ವಿರೋಧವಿರಲಿದೆ. ಆತುರದ ನಿರ್ಧಾರದಿಂದ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಒಳಿತಿಗಾಗಿ ಸಮಯವನ್ನು ನೀವು ನಿರೀಕ್ಷಿಸಬೇಕಾಗುತ್ತದೆ. ನೀವು ಮಾನಸಿಕವಾಗಿ ಗಟ್ಟಿಯಾಗಬೇಕಾಗಿದೆ. ದುರ್ಬಲ ಮನಸ್ಸಿಗೆ ನಕಾರಾತ್ಮಕ ಅಂಶಗಳು ಬರಬಹುದು. ಅನಾರೋಗ್ಯದಿಂದ ಒಪ್ಪಿಕೊಂಡ ಕಾರ್ಯವನ್ನು ಮಸಡಿಕೊಡಲಾಗದು. ಪಿತ್ರಾರ್ಜಿತ ಆಸ್ತಿಯ ಬಗ್ಗೆ ನಿಮಗೆ ಆಸೆಯಾಗಲಿದೆ. ಸಂಗಾತಿಯ ಮಾತು ನಿಮಗೆ ತಾಳ್ಮೆಯನ್ನು ಕಡಿಮೆ ಮಾಡೀತು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ ಮಾಡಿ.