Horoscope: ಈ ರಾಶಿಯವರ ಗುಣಗಳು ಅವರನ್ನೇ ಕಟ್ಟಿಹಾಕಬಹುದು

ಶಾಲಿವಾಹನ ಶಕವರ್ಷ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಗ್ರೀಷ್ಮ ಋತು, ವೃಷಭ ಸೌರ ಮಾಸ, ರೋಹಿಣಿ ಮಹಾನಕ್ಷತ್ರ, ಗುರುವಾರ ನಿಮ್ಮ ಮಾತು ಸತ್ಯವಾಗಿದ್ದು ಕುಟುಂಬದವರು ಅಚ್ಚರಿಪಡುವರು. ಗೊಂದಲವನ್ನು ಪರಿಹರಿಸಲು ನಿಮಗೆ ನೂರಾರು ಮಾರ್ಗಗಳಿವೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope: ಈ ರಾಶಿಯವರ ಗುಣಗಳು ಅವರನ್ನೇ ಕಟ್ಟಿಹಾಕಬಹುದು
ದಿನ ಭವಿಷ್ಯ

Updated on: May 29, 2025 | 12:10 AM

ಬೆಂಗಳೂರು, ಮೇ 29, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ತೃತೀಯಾ ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಧೃತಿ, ಕರಣ : ಬಾಲವ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 55 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:30 – 14:07, ಯಮಘಂಡ ಕಾಲ 07:41 – 09:17, ಗುಳಿಕ ಕಾಲ 10:54 – 12:30.

ಮೇಷ ರಾಶಿ: ನಿಮ್ಮಿಂದ ಅಪರಿಚಿತರಿಗೆ ಆರ್ಥಿಕ ಲಾಭವಾಗಬಹುದು. ಇಂದಿನ‌ ನಿಮ್ಮ ಮಾತು ಅಲ್ಪವಿದ್ದರೂ ಖಾರವಾಗಿರುವುದು. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಅಲ್ಪ ಲಾಭದ ನಿರೀಕ್ಷೆಯನ್ನು ಮಾಡಬಹುದು. ನಿಮ್ಮ ಮಾತು ಸತ್ಯವಾಗಿದ್ದು ಕುಟುಂಬದವರು ಅಚ್ಚರಿಪಡುವರು. ಗೊಂದಲವನ್ನು ಪರಿಹರಿಸಲು ನಿಮಗೆ ನೂರಾರು ಮಾರ್ಗಗಳಿವೆ. ಶಾಂತಚಿತ್ತರಾಗಿ ಯೋಚಿಸಿ. ನಿಮ್ಮ ಆಯ್ಕೆಗಳು ಸರಿಯಾಗಿರಲಿ. ಗೊಂದಲವನ್ನು ಇಟ್ಟುಕೊಳ್ಳುವುದು ಬೇಡ. ಎಲ್ಲ ಕಾರ್ಯಕ್ಕೂ ನಿಮ್ಮದೇ ಆದ ದಾರಿ ಇರುವುದು. ಯಾರ ಜೊತೆ ದ್ವೇಷವನ್ನು ಬೆಳೆಸಿಕೊಳ್ಳಬೇಡಿ. ಯಾರ ಬಗ್ಗೆಯೂ ಪೂರ್ವಾಗ್ರಹಬುದ್ಧಿಯನ್ನು ಬಿಡುವುದು ಒಳ್ಳೆಯದು. ವ್ಯಾಪಾರಸ್ಥರು ಯಾವುದಾರೂ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಬಹುದು. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಯಾರ ಮಾತನ್ನೂ ಆಲಿಸುವ ವ್ಯವಧಾನ ಇಂದು ಇರದು. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಆಗಿದಹೋದ ವಿಚಾರವನ್ನು ಸಂಗಾತಿಯ ಜೊತೆ ಚರ್ಚಿಸುವಿರಿ.

ವೃಷಭ ರಾಶಿ: ವಾಸಸ್ಥಳದ ನವೀಕರಣಕ್ಕೆ ಯೋಜನೆ ಸಿದ್ಧವಾಗಲಿದೆ. ನಿಮ್ಮ ಮಾರ್ಗವು ಯೋಗ್ಯವಲ್ಲದೇ ಇರಬಹುದು. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಮಾತಿಗೆ ಬೆಲೆಯು ಕಡಿಮೆಯಾದೀತು. ಮಾರ್ಗಾಯಾಸದಿಂದ ವಿಶ್ರಾಂತಿ ಪಡೆಯುವಿರಿ. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿದೆ. ತಪ್ಪುಗಳಿದ್ದರೆ ಅದನ್ನು ಒಪ್ಪಿಕೊಂಡು ಮುನ್ನಡೆಯಿರಿ. ಸಾಮಾಜಿಕ ಬದ್ಧತೆಯನ್ನು ಪೂರೈಸುವಿರಿ. ನಿಮ್ಮ ಕೆಲವು ಅಭ್ಯಾಸವನ್ನು ನೀವು ಬಿಡಬೇಕಾಗಿಬರಬಹುದು. ಸರಳತೆಯನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳುವಿರಿ. ಬಂಧುಗಳ ಆಗಮನದಿಂದ ಹೆಚ್ಚು ಸಂತೋಷವು ಇರುವುದು. ಉತ್ತಮ ವಿದ್ಯೆಯ ಕಾರಣ ಉತ್ತಮ ಆದಾಯದ ಕೆಲಸವೂ ಸಿಗಲಿದೆ. ಹೊಸತನ ಅನ್ವೇಷಣೆಯಲ್ಲಿ ನೀವು ಇರುವಿರಿ. ದೈವವನ್ನು ದೂರುತ್ತ ಕೂರುವುದು ಬೇಡ.‌ ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು. ಯಾವುದನ್ನೂ ಉಳಿಸಿಕೊಂಡು ಹೋಗುವುದನ್ನು ಕಲಿಯಬೇಕು.

ಮಿಥುನ ರಾಶಿ: ವಿವಾಹ ಒಂದಕ್ಕಿಂತ ಒಂದು ಉತ್ತಮ‌ವೆನಿಸಬಹುದು. ಇಂದು ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮನಸ್ಸಾಗುವುದು. ಒತ್ತಡವನ್ನು ನಿಭಾಯಿಸುವ ಕಲೆ ನಿಮಗೆ ಸಿದ್ಧಿಸಿದ್ದು ಅದನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ. ನಿಮ್ಮ ಗುಣಗಳು ನಿಮ್ಮನ್ನು ಕಟ್ಟಿಹಾಕಬಹುದು. ನಿಮ್ಮ ಸಮಯೋಚಿತ ಪೂರ್ವಾಲೋಚನೆಯಿಂದ ನೀವಿಂದು ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ. ಸಮಸ್ಯೆಗೆ ಬೇಕಾದ ಪರಿಹಾರವನ್ನು ತಿಳಿದೂ ಅದನ್ನು ಮಾಡಲಾರಿರಿ. ಎಂದೋ‌ ಮಾಡಿದ ಇಂದು ನಿಮ್ಮ ಆಪತ್ತಿಗೆ ಬರಲಿದೆ. ಎಲ್ಲರ ಜೊತೆ ಬೆರೆತು ಬದುಕುವ ನಿಮ್ಮ ಗುಣವು ಮೆಚ್ಚುಗೆಯಾಗಲಿದೆ. ಆರ್ಥಿಕತೆಯನ್ನು ನಿಭಾಯಿಸುವುದನ್ನು ಕಲಿಯಿರಿ. ಪಿತ್ತಸಂಬಂಧಿಯಾದ ರೋಗವು ಬರಬಹುದು. ವ್ಯಾಪಾರದಲ್ಲಿ ಇಂದಿನ ನಿಮ್ಮ ಬೆಳವಣಿಗೆಯು ನಿಮಗೆ ಅಚ್ಚರಿಯನ್ನು ತರಬಹುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ನೀವು ಕೇಳಲು ಸಂಕೋಚಪಡುವಿರಿ. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ.

ಕರ್ಕಾಟಕ ರಾಶಿ: ಒಮ್ಮೊ ಮಾಡಿದ್ದು ಒಂದುಬಾರಿಗೆ ಮಾತ್ರ ಚೆಂದ. ನಿಮ್ಮ ಜಾಣತನವೇ ಮುಳುವಾಗಬಹುದು. ವಿವೇಚನೆಯಿಲ್ಲದೇ ಯಾವ ಕೆಲಸವನ್ನೂ ಮಾಡಬೇಡಿ. ಯಾವ ಮಾತನ್ನೂ ನೋವಾಗುವಂತೆ ಆಡಬೇಡಿ. ಮೇಲಿನಿಂದ ಬಿದ್ದು ಪೆಟ್ಟು‌‌ಮಾಡಿಕೊಳ್ಳುವಿರಿ. ನೀವಿಂದು ಪ್ರೀತಿಸಲು ಆರಂಭಿಸುವಿರಿ. ಆಧಿಕಾರದ ದುರುಪಯೋಗವನ್ನು ಮಾಡಿಕೊಳ್ಳುವಿರಿ. ನಿಮ್ಮ ಅಸ್ತಿತ್ವ ಮರೆಯಾಗದಂತೆ ನೋಡಿಕೊಳ್ಳಿ. ಅವಸರದಲ್ಲಿ ಅನಾಹುತವಾದೀತು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನಿಮ್ಮ ಸಂತೋಷವನ್ನು ಯಾರೂ ಸಹಿಸಲಾರರು. ಯಾವುದೇ ಪ್ರತ್ಯುತ್ತರಗಳನ್ನು ಕೊಡಲು ಹೋಗಬೇಡಿ. ಸ್ತ್ರೀಯರಿಂದ ನಿಮಗೆ ಲಾಭವಾಗಲಿದೆ. ಸ್ತ್ರೀಯರು ನಿಮಗೆ ಬೆಂಬಲವನ್ನು ನೀಡುವರು. ನಿಮ್ಮ ಇಂದಿನ ಎಲ್ಲ ಕೆಲಸಗಳೂ ಬಹಳ ವಿಳಂಬವಾಗಿ ಆಗುವುದು. ನಿಮ್ಮನ್ನು ನಂಬಿದವರಿಗೆ ನೀವು ಮೋಸ ಮಾಡುವುದು ಬೇಡ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ಕೆಲವನ್ನು ಬಿಟ್ಟುಕೊಡುವುದು ಅನಿವಾರ್ಯವಗಬಹುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು.

ಸಿಂಹ ರಾಶಿ: ನಿರ್ಮಾಣ ಕಾರ್ಯವನ್ನು ವಹಿಸಿಕೊಂಡು, ಪೂರ್ಣ ಮಾಡಲಾಗದು. ಇಂದು ನಿಮ್ಮ ಮಾತಿನಿಂದ ಕುಟುಂಬದಲ್ಲಿ ಆತಂಕವು ಸೃಷ್ಟಿಯಾಗಬಹುದು. ಬೇಸರದ ಮನಸ್ಸನ್ನು ಮನೆಯವರಿಗೆ ತೋರಿಸಲು ಇಷ್ಟಪಡುವುದಿಲ್ಲ. ಅನೇಕ ಒತ್ತಡಗಳು ನಿಮ್ಮ ಬಲವನ್ನು ಕುಗ್ಗಿಸುವುದು. ಮನೆಯ ವ್ಯವಹಾರದಲ್ಲಿ ಭಾಗವಹಿಸಲು ಇಷ್ಟವಾಗದು. ಇದರಿಂದ ಕುಟುಂಬವು ಬೇಸರಗೊಳ್ಳುವುದು. ಆದಾಯದ ಮಟ್ಟವು ಇಂದು ಅಧಿಕವಾಗಲಿದೆ. ಯಾರ ಒತ್ತಾಯವನ್ನೂ ಮನಸಿಗೆ ಹಾಕದೇ ನಿಮಗೆ ಅನ್ನಿಸಿದಂತೆ ಮಾಡುವಿರಿ. ಮನೆಯನ್ನು ಇಂದು ಬದಲಾಯಿಸುವಿರಿ. ಹೊಂದಾಣಿಕೆಯನ್ನು ಬಹಳ ಸೂಕ್ಷ್ಮವಾಗಿ ಮಾಡಿಕೊಳ್ಳಬೇಕಾಗಬಹುದು. ಗೌರವವನ್ನು ಪಡೆಯುತ್ತೀರಿ. ನೀವು ತಾಳ್ಮೆಯಿಂದ ಮಾಡುವ ಯಾವುದೇ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಮಾಡುವಿರಿ. ಧಾರ್ಮಿಕ ಕಾರ್ಯಗಳಿಗೆ ದೂರಪ್ರಯಾಣವನ್ನು ಮಾಡುವಿರಿ. ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ. ಕಛೇರಿಯಲ್ಲಿ ಕಾರ್ಯಗಳು ಒತ್ತಡದಿಂದ ಇದ್ದು ಕೆಲವು ತಪ್ಪು ಆಗಬಹುದು.

ಕನ್ಯಾ ರಾಶಿ: ತಾತ್ಕಾಲಿಕ ಉದ್ಯೋಗಕ್ಕೆ ನಿಮ್ಮ ಗಮನವಿರಲಿದೆ. ಇಂದು ನಿಮ್ಮ ಕಛೇರಿಯ ಕೆಲಸದಲ್ಲಿ ಅವಸರದ ನಿರ್ಧಾರವನ್ನು ತೆಗದುಕೊಳ್ಬೇಡಿ. ಹಿರಿಯರ ಪಾಲನ್ನೂ ನೀವೇ ಪಡೆಯುವ ಆಸೆ ಇದೆ. ಅವರ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಿ. ನಿಮ್ಮ ಆಲೋಚನೆ ಹಾಗೂ ಸಾಮರ್ಥ್ಯದಿಂದ ಉನ್ನತ ಹುದ್ದೆಗೆ ಹೋಗುವ ಅವಕಾಶವಿರಬಹುದು. ವ್ಯಕ್ತಿಗಳನ್ನು ದೂರುವ ಸ್ವಭಾವವನ್ನು ಬಿಡುವುದು ಒಳ್ಳೆಯದಲ್ಲ. ಅನೇಕ ಗೊಂದಲಗಳು ನಿಮ್ಮ ಜೀವನದಲ್ಲಿ ಬರುವುದು. ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಮನೆಯನ್ನು ಬದಲಿಸುವ ಯೋಚನೆ ಮಾಡಬಹುದು ಇಂದು. ಅಲ್ಪ‌ ಆದಾಯದಲ್ಲಿಯೇ ಉಳಿತಾಯದ ಯೋಚನೆ ಮುಖ್ಯ. ಇಂದು, ನೀವು ಹೊಸ ಕೆಲಸದಲ್ಲಿ ಹೂಡಿಕೆ ಮಾಡಬೇಕಾದರೆ, ನೀವು ಲಾಭವನ್ನು ಪಡೆಯುತ್ತೀರಿ ಮತ್ತು ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಯಾರನ್ನೂ ಅಪ್ರಯೋಜಕರಂತೆ ನೋಡುವುದು ಬೇಡ. ಆಪ್ತರು ನಿಮಗೆ ದುಷ್ಕೃತ್ಯಕ್ಕೆ ಪ್ರೇರಣೆ ಕೊಡಬಹುದು. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು.