ನಿಮ್ಮ ಪ್ರೀತಿಗೆ ಸ್ನೇಹಿತರೇ ಅಡ್ಡಗೋಡೆಯಾಗಬಹುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಶುಕ್ಲ ಪಕ್ಷದ ಅಷ್ಟಮೀ ತಿಥಿ, ಮಂಗಳವಾರ ಅಲೌಕಿಕ ಅನುಭವಕ್ಕೆ ಆಸೆ, ಅಸಂಗತ ವಿಚಾರದ‌ ಕಡೆ ಗಮನ, ನೇರ ಮಾತಿನಿಂದ ದ್ವೇಷ ಇವೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿಮ್ಮ ಪ್ರೀತಿಗೆ ಸ್ನೇಹಿತರೇ ಅಡ್ಡಗೋಡೆಯಾಗಬಹುದು
ದಿನ ಭವಿಷ್ಯ
Edited By:

Updated on: Jun 03, 2025 | 1:50 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ವ್ಯಾಘಾತ, ಕರಣ: ಗರಜ, ಸೂರ್ಯೋದಯ – 06 : 03 am, ಸೂರ್ಯಾಸ್ತ – 06 – 57 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:44 – 17:21, ಯಮಘಂಡ ಕಾಲ 09:17 – 10:54, ಗುಳಿಕ ಕಾಲ 12:31 – 14:08

ತುಲಾ ರಾಶಿ: ನಿಮ್ಮ ಮಾತೇ ನಿಮ್ಮನ್ನು ಉನ್ನತ ಸ್ತರಕ್ಕೆ ಏರಿಸುವುದು. ಗೌರವನ್ನೂ ತಂದುಕೊಡುವುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಅತಿಯಾದಂತೆ ಯಾರಿಗಾದರೂ ಅನ್ನಿಸಬಹುದು. ನಿಮ್ಮ ನಿರ್ಧಾರಗಳು ಇಂದು ಹೆಚ್ಚುವರಿ ಹಣಕಾಸಿನ ಲಾಭವನ್ನು ತರಬಹುದು. ನಿಮ್ಮ ಸಂಗಾತಿಯ ಜೊತೆ ಗುಣಮಟ್ಟದ ಸಮಯವನ್ನು ಕಳೆಯಲು ಹಾಗೂ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ದೊರೆಯಲಿದೆ. ಕೆಲಸದಲ್ಲಿ ನಿಮಗೆ ಮುಖ್ಯ ಪಾತ್ರ ಲಭ್ಯವಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ನಿಯಂತ್ರಣ ಕಾಪಾಡಿ. ಮನೆಯವರಿಂದ ಸಣ್ಣ ನಿರಾಸೆ ಆಗಬಹುದು, ಆದರೆ ಮಾತುಕತೆ ಎಲ್ಲವನ್ನೂ ಸರಿಮಾಡಬಹುದು. ಸರಕಾರದಿಂದ ಸಹಕಾರ ದೊರೆಯಲಿದೆ. ಶಿಕ್ಷಣವನ್ನು ನೀಡುವ ವ್ಯವಸ್ಥೆಯಲ್ಲಿ ಇದ್ದರೆ ಹೆಚ್ಚು ಉಪಯುಕ್ತವಾಗುವುದು. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು.

ವೃಶ್ಚಿಕ ರಾಶಿ: ಇಂದಿನ ನಿಮ್ಮ ಪ್ರಯಾಣದ ಯೋಜನೆಯು ಸರಿಯಾಗಿದ್ದರೆ ಎಲ್ಲವೂ ಸಾಧ್ಯವಾಗುವುದು. ಇಂದು ನಿಮಗೆ ಅತ್ಯಾಕರ್ಷಕ ಅವಕಾಶಗಳು ಅನಿರೀಕ್ಷಿತವಾಗಿ ಸಿಗಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಸಂತೋಷವು ಬೇಕೆನಿಸುವುದು. ಇಂದು ಎದುರಾಗುವ ಸವಾಲುಗಳು ನಿಮಗೆ  ಉದ್ಯೋಗದಲ್ಲಿ ಸ್ಥಿರತೆಯನ್ನು ತೋರಿಸುತ್ತದೆ. ನಿರೀಕ್ಷೆಗಿಂತ ಹೆಚ್ಚಾಗಿ ಇತರರು ಸಹಾಯ ಮಾಡುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯುವುದು ನಿಮ್ಮ ಮನಸ್ಸಿಗೆ ನೆಮ್ಮದಿ ತರಲಿದೆ. ದಿನವು ಚೆನ್ನಾಗಿ ಆರಂಭವಾಗುತ್ತದೆ. ಆದಾಯ ಉತ್ತಮವಾಗಿರುತ್ತದೆ ಮತ್ತು ಬೆಂಬಲವೂ ಸಿಗುತ್ತದೆ. ಪರಸ್ಪರ ಸಂಬಂಧಗಳು ಮಧುರವಾಗಿರುತ್ತದೆ. ಭೂಮಿಯ ವ್ಯವಹಾರವು ನಿಮಗೆ ಶಕ್ತಿಯನ್ನು ತಂದೀತು. ಅವಶ್ಯಕವಿರುವದನ್ನು ಇಟ್ಟುಕೊಂಡು ಇನ್ನೊಬ್ಬರಿಗೂ ಕೊಡಿ. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು.

ಧನು ರಾಶಿ: ಆದಾಯದ ಅಮಲು ನಿಮ್ಮ ನಡವಳಿಕೆಯನ್ನು ಬದಲಿಸುವುದು. ಇಂದು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ಒತ್ತಡ ಹೆಚ್ಚಿರುವುದು. ನಿಮ್ಮ ಪೋಷಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ವೆಚ್ಚಗಳು ಹೆಚ್ಚಾಗಬಹುದು. ಇದು ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮವನ್ನು ಬೀರಬಹುದು. ಸಮಯವು ಹಣದ ಕೊರತೆಯನ್ನು ನಿವಾರಿಸುತ್ತದೆ. ಹಣಕ್ಕೆ ಸಂಬಂಧಿಸಿದ ಚಿಂತೆಗಳು ಕೊನೆಗೊಳ್ಳುತ್ತವೆ. ಅನಗತ್ಯ ವಿವಾದಗಳಿಂದ ದೂರವಿರಿ ಮತ್ತು ಯಾರನ್ನೂ ಹೆಚ್ಚು ನಂಬಬೇಡಿ. ಸರಿಯಾದ ಸಮಯಕ್ಕಾಗಿ ಕಾಯಿರಿ. ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ವಾಹನ ಚಾಲನೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುವುದು. ಉದ್ವೇಗದಿಂದ ಏನನ್ನಾದರೂ ಮಾಡಲು ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಕೋಪದಿಂದ ಕೆಲವು ಸುಂದರ ಕ್ಷಣವನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು.

ಮಕರ ರಾಶಿ: ನಿಮ್ಮ ಪ್ರೀತಿಗೆ ಸ್ನೇಹಿತರೇ ಅಡ್ಡಗೋಡೆಯಾಗಬಹುದು. ನಿಮಗೆ ಬೇಕಾದ ಹಣವನ್ನು ಹೊಂದಿಸಲು ಸೂಕ್ತ ವ್ಯಕ್ತಿಗಳ ಅನ್ವೇಷಣೆ ಮಾಡವಿರಿ. ಕೆಲಸ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವುದನ್ನು ಖಚಿತಪಡಿಸಿಕೊಳ್ಳಿ. ವ್ಯಾಪಾರದ ಆದ ಸ್ವಲ್ಪ ಅಜಾಗರೂಕತೆಯೂ ಭಾರೀ ನಷ್ಟವನ್ನು ಉಂಟುಮಾಡಬಹುದು. ಕೆಲವರ ಮಾತುಗಳಿಂದ ಮನಸ್ಸಿಗೆ ದುಃಖಿತವಾಗಬಹುದು, ಆದರೆ ಉತ್ತರ ಸೌಮ್ಯವಾಗಿರಲಿ. ಹಣಕಾಸಿನಲ್ಲಿ ಅನಿರೀಕ್ಷಿತ ತಡ ಸಂಭವಿಸಬಹುದು. ಹೊಸ ಕೆಲಸದ ಅವಕಾಶಗಳನ್ನು ತಪ್ಪಿಸಬೇಡಿ. ಪ್ರಯಾಣದ ಯೋಜನೆ ಮುಂದೂಡುವುದು ಉತ್ತಮ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಅನಗತ್ಯ ಸಮಸ್ಯೆಗಳು ಮತ್ತು ತೊಡಕುಗಳು ಉಂಟಾಗುತ್ತವೆ. ಎಂತಹ ಒತ್ತಡವಿದ್ದರೂ ತಾಳ್ಮೆಯಿಂದ ಕೆಲಸ ಮಾಡಿ. ಕಾರ್ಯಕ್ರಮದಲ್ಲಿ ದುಂದುವೆಚ್ಚದಂತೆ ಕೆಲವು ತೋರೀತು. ವಿವಾದಗಳನ್ನು ಮಾಡುವ ಸಂದರ್ಭವು ಬಂದರೂ ಅದರಿಂದ ದೂರವಿರಿ. ಸಹೋದರರ ಬಗೆಗಿನ ನಿಮ್ಮ ನಿಲುವು ಸರಿ ಇರದು.

ಕುಂಭ ರಾಶಿ: ಅನಿವಾರ್ಯ ಕಾರಣದಿಂದ ನಿಮ್ಮ ಯೋಜನೆಯನ್ನು ಮುಂದೆ ಹಾಕುವಿರಿ. ನಿಮ್ಮ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರುವುದು ಸಹಜವೇ. ಆದರೆ ಅದನ್ನು ಎದುರಿಸಬೇಕೋ ಶಾಂತಗೊಳಿಸಬೇಕೋ ಎನ್ನುವುದು ನಿಮಗೆ ಸೇರಿದ್ದು. ನಿಮ್ಮ ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಬಹುದು. ತೀರ್ಮಾನಗಳ ಹಿಂದೆ ತಾಳ್ಮೆ ಇರಲಿ. ಹಣದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಜವಾಬ್ದಾರಿಯುತರಾಗಿರಿ. ಕುಟುಂಬದಲ್ಲಿ ಹಿರಿಯರ ಸಲಹೆ ನಿಮ್ಮ ಸಮಸ್ಯೆಗೆ ಪರಿಹಾರವಾಗಬಹುದು. ಯಶಸ್ಸಿನ ಹಾದಿಯನ್ನು ತೆರೆಯುವ ಹೊಸ ಅವಕಾಶಗಳು ನಿಮಗೆ ಸಿಗುತ್ತವೆ. ನೀವು ಸೃಜನಶೀಲ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ವ್ಯಾಪಾರದಲ್ಲಿ ಖ್ಯಾತಿಯನ್ನು ಬಯಸುವಿರಿ. ಹೊಸ ಸಂಬಂಧಗಳು ವ್ಯವಹಾರದಿಂದ ಇಂದು ಆಗಲಿದೆ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ಸಹೋದರರ ಶೀತಲ ಸಮರವು ತಿಳಿಯಾಗಬಹುದು.

ಮೀನ ರಾಶಿ: ಪಾಲುದಾರಿಕೆಯಲ್ಲಿ ಮಾನಸಿಕ ತಿಕ್ಕಾಟವನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಬಹಳ ದಿನಗಳ ಚಿಂತೆಗೆ ಇಂದು ಮುಕ್ತಿ ಸಿಗುವುದು. ನೀವು ಜನರ ಆಸೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದು, ವ್ಯವಹಾರದಲ್ಲಿ ಅದನ್ನು ಪ್ರಯೋಗಿಸುವಿರಿ. ಇಂದು ಅತಿಯಾಗಿ ಖರ್ಚು ಮಾಡದಿರುವುದು ಒಳ್ಳೆಯದು. ಹೊಸ ಅವಕಾಶಗಳು ಕಾಣಿಸುತ್ತವೆ. ಆದರೆ ಎಲ್ಲವನ್ನೂ ತಕ್ಷಣ ಸ್ವೀಕರಿಸದಿರಿ. ಕೆಲಸದ ಕಡೆ ಕೆಲ ಒತ್ತಡಗಳು ಬರಬಹುದು. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಹಣಕಾಸಿನ ವಿಚಾರದಲ್ಲಿ ಅನವಶ್ಯಕ ಖರ್ಚುಗಳು ಬರಬಹುದು. ಸ್ನೇಹಿತರ ಜತೆ ಮಾತು ತಪ್ಪಿದ್ರೆ ತಕ್ಷಣ ಸರಿಪಡಿಸಿ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ಉದಾಸೀನ ಮಾಡಬೇಡಿ. ಸರಕಾರದಿಂದ ಅರ್ಥಿಕ ಬೆಂಬಲ ದೊರೆಯಬಹುದು. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು.