ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1948 ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಸಕ್ರಮ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸೌಭಾಗ್ಯ, ಕರಣ : ಬಾಲವ, ಸೂರ್ಯೋದಯ – 06 – 27 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:04 – 12:36, ಯಮಘಂಡ ಕಾಲ 15:40 – 17:12, ಗುಳಿಕ ಕಾಲ 07:59 – 09:32.
ಮೇಷ ರಾಶಿ: ಪರರ ನೋವಿಗೆ ಸ್ಪಂದಿಸುವ ಅನಿರೀಕ್ಷಿತ ಬೆಳವಣಿಗೆ ನಿಮ್ಮಲ್ಲಿ ಉಂಟಾಗುವುದು. ನಿಮ್ಮ ಕುಟುಂಬ ಸದಸ್ಯರ ಸಲಹೆಯನ್ನು ಅನುಸರಿಸುವ ಮೂಲಕ ಅವರಿಗೆ ಸಂತೋಷವನ್ನು ಕೊಡುವಿರಿ. ಸಂಬಂಧಗಳಲ್ಲಿ ನಿಮ್ಮ ನಂಬಿಕೆ ಉಳಿಯುತ್ತದೆ. ನಿಮ್ಮ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯುತ್ತೀರಿ. ಪಕ್ಷಪಾತ ಮಾಡದೇ ನೀವು ಸಮಾನಭಾವದಿಂದ ನೋಡಿ. ದೇಹವನ್ನು ದಂಡಿಸಿ ಹೆಚ್ಚು ಲಾಭವನ್ನು ಗಳಿಸುವಿರಿ. ಕೆಲಸದಲ್ಲಿ ನಿಯಮಗಳಿಗೆ ಸಂಪೂರ್ಣ ಗಮನವನ್ನು ನೀಡುವುದು ಅವಶ್ಯಕ. ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ನೀವು ಒಂದು ಪ್ರಮುಖ ಹೆಜ್ಜೆಯನ್ನು ತೆಗೆದುಕೊಳ್ಳುವಿರಿ. ನಿಮಗೆ ಆಪ್ತರ ಜೊತೆ ಮಾತನಾಡದೇ ನೆಮ್ಮದಿಯು ಸಿಗದೇಹೋದೀತು. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ಅನಿರೀಕ್ಷಿತ ಅಶುಭವಾರ್ತೆಯನ್ನು ನೀವು ಕೇಳಬೇಕಾದೀತು. ತನ್ನವರ ಬಗ್ಗೆ ನಂಬಿಕೆ ಇರದು. ಹಲವು ದಿನಗಳಿಂದ ನೀವು ಬಯಸಿದ್ದು ಸಿಗಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಲಿವೆ.
ವೃಷಭ ರಾಶಿ: ಎಲ್ಲವನ್ನೂ ತಿಳಿದವರಂತೆ ಮಾತನಾಡುವಿರಿ. ಇಂದು ನಿಮಗೆ ಅದೃಷ್ಟವು ಪೂರ್ಣವಾಗಿ ಕೈ ಕೊಟ್ಟಂತೆ ತೋರುವುದು. ನೀವು ಹೊಸ ಕೆಲಸವನ್ನು ಪ್ರಾರಂಭಿಸಿದರೆ ನಿಮ್ಮ ಪ್ರಯತ್ನವೇ ಅಧಿಕವಾಗಿ ಇರಲಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಾದಿ ಸುಗಮವಾಗಬಹುದು. ನಿಮ್ಮ ನಾಯಕತ್ವದ ಸಾಮರ್ಥ್ಯ ಎಲ್ಲರಿಗೂ ಅರಿವಾಗಬಹುದು. ಮಕ್ಕಳನ್ನು ಪಡೆಯಬೇಕು ಎಂಬ ಆಸೆ ಬರುವುದು. ನಿಮಗೆ ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸುವುದು ಸಾಧ್ಯವಾಗದು. ವ್ಯಾಪಾರ ಮಾಡುವ ಜನರ ಸಂತೋಷಕ್ಕೆ ಕೊನೆಯೇ ಇರುವುದಿಲ್ಲ. ನಿಮಗೆ ಅಪಾಯವನ್ನು ತೆಗೆದುಕೊಳ್ಳುವ ಅವಕಾಶ ಸಿಕ್ಕಿದರೆ, ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವಿರಿ. ನಿವೃತ್ತಿಯನ್ನು ಪಡೆದ ಕಾರಣ ಮನಸ್ಸಿನಲ್ಲಿ ನಾನಾ ಪ್ರಕಾರದ ಆಲೋಚನೆಗಳು ಬರುವುದು. ಸಣ್ಣ ವ್ಯಾಪಾರವು ಹೆಚ್ಚುವರಿಯಾಗಿ ಲಾಭವನ್ನು ಕೊಡುವುದು. ಉದ್ಯೋಗದ ಕನಸನ್ನು ಕಾಣುತ್ತಾ ಇರುವಿರಿ. ಉತ್ತಮ ವಸ್ತುಗಳ ಖರೀದಿ ಮಾಡುವಿರಿ.
ಮಿಥುನ ರಾಶಿ: ಅಪ್ರಾಮಾಣಿಕತೆಗೆ ಬೆಲೆ ಸಿಕ್ಕಿದ್ದು ನಿಮಗೆ ಸಹಿದಲಾಗದು. ಇಂದು ಸಹೋದ್ಯೋಗಿಯ ಮಾತನ್ನು ವಿರೋಧಿಸುವಿರಿ. ನೀವು ಅಧಿಕಾರದ ದುರುಪಯೋಗ ಮಾಡಿಕೊಳ್ಳುವಿರಿ. ಪೂರ್ವಿಕರ ಆಸ್ತಿಯ ಬಗ್ಗೆ ನಿಮಗೆ ಆಸಕ್ತಿ ಇರದು. ನಿಮ್ಮ ಕೆಲಸದಲ್ಲಿ ನೀವು ಹೆಚ್ಚು ಜವಾಬ್ದಾರಿಯಿಂದ ವರ್ತಿಸುವಿರಿ. ಕುಟುಂಬಕ್ಕೆ ನಿಮ್ಮಿಂದ ಶುಭ ವಾರ್ತೆಯು ಬರಬಹುದು. ಹಿತಶತ್ರುಗಳನ್ನು ಇಂದು ಅವರಾಡುವ ಮಾತುಗಳಿಂದ ಗುರುತಿಸುವಿರಿ. ಎಲ್ಲ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯವನ್ನು ಮಾಡಬಲ್ಲರು ಎಂಬ ದೃಢತೆಯು ಇರಲಿದೆ. ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಗುರಿಯನ್ನು ಸರಿಯಾಗಿ ನಿರ್ಧರಿಸಿಕೊಳ್ಳಿ. ರಾಜಕೀಯದಲ್ಲಿ ಕೆಲಸ ಮಾಡುವ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು. ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳನ್ನು ಇಟ್ಟುಕೊಳ್ಳುವಿರಿ. ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದಲ್ಲಿ ತಿಳಿಸಿ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಬಹುದು.
ಕರ್ಕಾಟಕ ರಾಶಿ: ವ್ಯರ್ಥವಾದ ಪ್ರಯತ್ನವುಳ್ಳ ನೀವು ಬಹುಬೇಗ ಹತಾಶರಾಗುವಿರಿ. ಇಂದು ವ್ಯವಹಾರದಲ್ಲಿ ನಿಮ್ಮ ಸ್ವಂತ ಕೆಲಸಕ್ಕಿಂತ ಹೆಚ್ಚಾಗಿ ಇತರರ ಕೆಲಸದ ಮೇಲೆ ಕೇಂದ್ರೀಕರಿಸುವಿರಿ. ನೀವು ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ನೀವು ಕೊಟ್ಟ ಸಾಲದ ಹಣವು ನಿಮಗೆ ಹಿಂದಿರುಗಬಹುದು. ನಿಮ್ಮ ಧಾರ್ಮಿಕ ಭಾವನೆಗೆ ತೊಂದರೆಯಾಗಬಹುದು. ನೀವು ಈ ಹಿಂದೆ ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ನೀವು ಅದನ್ನು ಪಡೆಯಬಹುದು. ನಿಮ್ಮ ಉತ್ಸಾಹಕ್ಕೆ ಬೇಕಾದ ಮೆಚ್ಚುಗೆಯೇ ಸಿಗದಾದೀತು. ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ಉತ್ತಮ ಅವಕಾಶ ಸಿಗುವ ಸಾಧ್ಯತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವರು. ಕಿರಿಯರಿಂದ ನೀವು ಸಲ್ಲದ ಮಾತನ್ನು ಕೇಳುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಹೋಗಬಹುದು. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ಹಿರಿಯ ಸ್ಥಾನದಲ್ಲಿ ನಿಂತು ಜವಾಬ್ದಾರಿಯನ್ನು ನಿರ್ವಹಿಸಬೇಕಾಗುವುದು. ಸ್ತ್ರೀಯರಿಗೆ ಮನೆಯ ಕೆಲಸವು ಸಾಕೆನಿಸಿ ಹೊರಗೆ ಸುತ್ತಾಡುವರು.
ಸಿಂಹ ರಾಶಿ: ನೀವು ಪರೋಪಕಾರ್ಯದಲ್ಲಿ ಗೊತ್ತಿಲ್ಲದೇ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ನಿಮ್ಮ ಆದಾಯದ ಸ್ವಲ್ಪ ಭಾಗವನ್ನು ಭವಿಷ್ಯಕ್ಕೆ ಹೂಡಿಕೆ ಮಾಡುವಿರಿ. ಮಾತಿನ ಮೃದುತ್ವವು ನಿಮಗೆ ಗೌರವವನ್ನು ಕೊಡುವುದು. ವ್ಯಾಪಾರಸ್ಥರಿಗೆ ದಿನವು ಅಲ್ಪ ಲಾಭದಾಯಕವಾಗಲಿದೆ. ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುವುದನ್ನು ನೀವು ತಪ್ಪಿಸುವಿರಿ. ಹಳೆಯ ಸಾಲವನ್ನು ಉಳಿಸಿಕೊಂಡೇ ಮತ್ತೆ ಸಾಲವನ್ನು ಮಾಡಬೇಕಾದೀತು. ಒತ್ತಡದಲ್ಲಿ ನಿಮ್ಮ ಕೆಲಸದ ಪ್ರದೇಶದಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಪ್ರಾರಬ್ಧ ಕರ್ಮವನ್ನು ಬದಲಿಸಲಾಗದು. ಸಂಗಾತಿಯೂ ನಿಮಗೆ ಮಾನಸಿಕವಾಗಿ ಘಾಸಿ ಮಾಡಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ನಿಮ್ಮ ಮನಸ್ಸಿನ ತಾದಾತ್ಮ್ಯದಿಂದ ನಿಮಗೆ ಕಷ್ಟದ ಪೂರ್ಣ ಪ್ರಭಾವವು ನಿಮ್ಮ ಮೇಲೆ ಆಗದೇಹೋದೀತು. ಮಕ್ಕಳಿಗೆ ಶಿಸ್ತನ್ನು ಕಲಿಸಲು ನಿಮಗೆ ಆಗದೇ ಹೋದೀತು. ಪ್ರೀತಿಯಲ್ಲಿ ಸಡಿಲಿಕೆ ಬೇಡ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಪತ್ನಿಯಿಂದ ಪ್ರಚೋದಿತರಾಗುವಿರಿ.
ಕನ್ಯಾ ರಾಶಿ: ಅಪರಿಚಿತರು ಕರೆ ಮಾಡಿ ಪೀಡಿಸುವರು. ನಿಮ್ಮನ್ನು ಹೆದರಿಸಲೂಬಹುದು. ಇಂದು ನಿಮ್ಮ ಕಾರ್ಯದಲ್ಲಿ ಸುಧಾರಣೆ ಇರಲಿದೆ. ನಿಮ್ಮ ದೊಡ್ಡ ಗುರಿಯ ಮೇಲೆ ನೀವು ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕ್ರಿಯಾತ್ಮಕ ಕೆಲಸದಲ್ಲಿ ಉತ್ತಮ ಚಿಂತನೆ ಇರಲಿದೆ. ನಿಮ್ಮವರ ಕುರಿತ ವಿಮರ್ಷೆ ಸರಿಯಾಗಿ ಇರಲಿದೆ. ನೀವು ಏನಾದರೂ ದೊಡ್ಡದನ್ನು ಸಾಧಿಸಬೇಕು ಎಂಬ ಹಂಬಲವಿರಲಿದೆ. ಭೂಮಿಯ ವ್ಯವಹಾರವನ್ನು ನೀವು ಮಾಡುವುದು ಕಷ್ಟವೆನಿಸಬಹುದು. ನೀವು ಹೂಡಿಕೆ ವಿಷಯಗಳಲ್ಲಿ ಉತ್ತಮ ಆದಾಯವನ್ನು ಪಡೆಯುವ ಸಾಧ್ಯತೆಯಿದೆ. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗಬಹು. ವೈರತ್ವದಿಂದ ಮಾನಸಿಕ ಒತ್ತಡ. ಕೆಲವು ಮಾತನ್ನು ನೀವು ನಿರ್ಲಕ್ಷಿಸುವುದೇ ಉತ್ತಮ. ನಿಮ್ಮ ನಿರೀಕ್ಷೆಯ ಸಮಯವು ಬಾರದೇ ನಿಮಗೆ ಬೇಸರವಾಗುವುದು. ಅತಿಯಾದ ಚಿಂತೆಯಿಂದ ಆರೋಗ್ಯ ಹಾಳು. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ಸರಿಯಾದ ಸಮಯಕ್ಕೆ ಸಿಗದು.
ತುಲಾ ರಾಶಿ: ಅದೃಷ್ಟದಿಂದ ಪ್ರೀತಿಯು ಸಿಗುವುದು. ನೀವು ಮಾನಸಿಕ ಸುರಕ್ಷತೆಯಿಂದ ಹೊರಬರಬೇಕಾಗುವುದು. ನಿಮ್ಮ ಜೀವನಶೈಲಿ ಕೂಡ ಸುಧಾರಿಸುತ್ತದೆ. ವ್ಯಾಪಾರದಲ್ಲಿ ಹಳೆಯ ತಪ್ಪನ್ನೇ ಮತ್ತೆ ಮಾಡುವಿರಿ. ನಿಮ್ಮ ಮುಖ್ಯ ವಿಷಯಗಳು ಕುಟುಂಬದಲ್ಲಿ ಚರ್ಚೆಯಾಗಬಹುದು. ರಾಜಕೀಯದಲ್ಲಿ ಆಸಕ್ತಿಯಿದ್ದರೂ ಪ್ರವೇಶಕ್ಕೆ ದಾರಿಯ ಕೊರತೆ ಇದೆ ಎನ್ನಿಸಬಹುದು. ಯಾರನ್ನೋ ನಿಮಗೆ ಹೋಲಿಸಿಕೊಂಡು ಸಂಕಟಪಡುವಿರಿ. ಸಮಯದ ದುರುಪಯೋಗವನ್ನು ಮಾಡಿಕೊಳ್ಳುವಿರಿ. ಗೃಹೋಪಕರಣದ ವ್ಯಾಪಾರದಲ್ಲಿ ಲಾಭ. ನಿಮ್ಮ ಸೃಜನ ಶೀಲತೆಗೆ ಹೊಗಳಿಕೆ ಸಿಗಲಿದೆ. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇರುವುದು. ಭೂಮಿಯ ವ್ಯವಹಾರವು ಸಾಕೆನಿಸಬಹುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಕೇಳರು. ಅಲ್ಪ ಸಂತೋಷಕ್ಕೆ ಹಣವನ್ನು ಹಾಕುವಿರಿ. ದುಡಿಮೆ ನ್ಯಾಯದ ಪರವಾಗಿದೆ. ಹಣದ ವ್ಯವಹಾರವನ್ನು ಆಪ್ತರ ಜೊತೆ ಸೇರಿ ಮಾಡುವುದು ಉತ್ತಮ. ನಂಬಿಕಸ್ಥರನ್ನು ಮಾತ್ರ ನಿಮ್ಮ ಹತ್ತಿರ ಸೇರಿಸಿಕೊಳ್ಳುವಿರಿ.
ವೃಶ್ಚಿಕ ರಾಶಿ: ವ್ಯವಹಾರದಲ್ಲಿ ಭಾವನೆಗಳನ್ನು ತರುವುದು ಬೇಡ. ನಷ್ಟಮಾಡಿಕೊಳ್ಳಬೇಕಾಗುವುದು. ವ್ಯವಹಾರದ ರೀತಿಯಲ್ಲಿಯೇ ನಿರ್ವಹಿಸಿ. ಇಂದು ನೀವು ಸಂತೋಷದಿಂದ ಇರುವಿರಿ. ಸಾಮಾಜಿಕ ಪ್ರಯತ್ನಗಳಿಗೆ ಬಲ ಸಿಗಲಿದೆ. ಬಹಳ ದಿನಗಳಿಂದ ಬಾಕಿಯಿದ್ದ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಯಾರನ್ನೋ ನಂಬಿ ವಸ್ತುವನ್ನಾಗಿ ಕೊಟ್ಟುಹೋಗುವುದು ಬೇಡ. ಸಹೋದರಿಯಿಂದ ಹಣಕಾಸಿನ ಬೆಂಬಲವನ್ನು ಪಡೆಯುವಿರಿ. ಅನಗತ್ಯ ಕೆಲಸವನ್ನು ಮೈಮೇಲೆ ತಂದುಕೊಳ್ಳುವಿರಿ. ಸ್ನೇಹಿತರ ಅನಾರೋಗ್ಯಕ್ಕೆ ಸಹಕಾರ ಮಾಡುವಿರಿ. ನಿಮ್ಮ ಜೀವನ ಸಂಗಾತಿಯ ಜೊತೆ ಉಪಯುಕ್ತವಾದ ವಿಚಾರದಲ್ಲಿ ಚರ್ಚೆ ಮಾಡುವಿರಿ. ಹೂಡಿಕೆಯ ಬಗ್ಗೆ ನಿಮ್ಮ ಸ್ನೇಹಿತರು ನಿಮ್ಮ ಜೊತೆ ಮಾತನಾಡಬಹುದು. ಕಲಹದಲ್ಲಿ ಮಧ್ಯಪ್ರವೇಶ ಮಾಡಿ ಶಾಂತಗೊಳಿಸುವಿರಿ. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು.
ಧನು ರಾಶಿ: ವಿವಾಹಿತರಿಗೆ ಆರ್ಥಿಕ ಮುಗ್ಗಟ್ಟಿನ ಸೂಚನೆ ಸಿಗಲಿದೆ. ಇಂದು ಆತುರದಲ್ಲಿ ಕೆಲಸವನ್ನು ಮಾಡುವಿರಿ. ನಿಮ್ಮ ಮನಸ್ಸಿಗೆ ಹಿಡಿಸದ ಯಾವುದೇ ವಿಷಯದ ಬಗ್ಗೆ ವಿವಾದವನ್ನು ಮಾಡಿಕೊಳ್ಳಬೇಡಿ. ಮನೆಯ ವಿಷಯಕ್ಕೆ ಹೊರಗಿನವರನ್ನು ಸಂಪರ್ಕಿಸುವುದು ಬೇಡ. ನೀವೇ ಸರಿಮಾಡಿಕೊಳ್ಳಿ. ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು. ಕಛೇರಿಗೆ ಹೋಗಿ ಕೆಲಸ ಮಾಡುವ ಸನ್ನಿವೇಶ ಬರುವುದು. ನಿಮ್ಮ ಆತ್ಮೀಯರಿಂದ ನಿಮ್ಮ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ಸ್ನೇಹಿತರು ನಿಮಗೆ ಯಾವುದಾದರೂ ಸಲಹೆಯನ್ನು ನೀಡುತ್ತಿದ್ದರೆ ಅದನ್ನು ಗಮನಿಸಿ. ಸೌಕರ್ಯಗಳಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಿಕೊಳ್ಳುವಿರಿ. ಒತ್ತಡದ ನಿವಾರಣೆಯಿಂದ ಅನಾರೋಗ್ಯವೂ ಕಡಿಮೆಯಾಗಲಿದೆ. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದೀತು. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು.
ಮಕರ ರಾಶಿ: ಇಂದು ನಿಮ್ಮ ಉದ್ಯಮವನ್ನು ದೂರದಿಂದಲೇ ನಿರ್ವಹಣೆ ಮಾಡುವಿರಿ. ಇಂದು ನೀವು ಜಾಣ್ಮೆಯಿಂದ ಕಾರ್ಯವನ್ನು ಪ್ರಶಂಸೆಯನ್ನು ಪಡೆಯುವಿರಿ. ಕೆಲವು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಇರಬೇಕಾದೀತು. ಕುಟುಂಬದ ಸದಸ್ಯರ ಜೊತೆ ಸಮಯವನ್ನು ಕಳೆಯುವಾಗ ಹಳೆಯ ವಿಚಾರದಲ್ಲಿ ಬಿಸಿಬಿಸಿ ಚರ್ಚೆಯಾಗಬಹುದು. ಪ್ರಯಾಣ ಇಂದು ಬಹಳ ಬೇಸರ ಕೊಡುವುದು. ನಿಮ್ಮ ಸಂಗಾತಿಗೆ ನೀವು ಉಡುಗೊರೆಯನ್ನು ತಂದುಕೊಡುವಿರಿ. ಖರ್ಚಿನ ಬಗ್ಗೆ ಸ್ಥೂಲ ಚಿತ್ರಣವಿರಲಿ. ಅತಿಯಾದ ಉತ್ಸಾಹ, ನಂಬಿಕೆಯಿಂದ ನೀವು ತೊಂದರೆಗೆ ಸಿಲುಕುವಿರಿ. ನಿಮ್ಮ ಮಾರ್ಗವು ನೇರವಾಗಿರಲಿ. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ವ್ಯಕ್ತಿತ್ವದಲ್ಲಿ ಬದಲಾದಂತೆ ಕಾಣುವಿರಿ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು.
ಕುಂಭ ರಾಶಿ: ಪ್ರೇಮದಲ್ಲಿ ಸಂತೋಷವಿರಲಿದೆ. ಆದರೆ ಅದನ್ನು ಉಳಿಸಿಕೊಳ್ಳುವ ಬಗೆಗೂ ಆಲೋಚಿಸಿ. ಇಂದು ನಿಮಗೆ ಪ್ರಯೋಜನವಾಗುವ ಕೆಲವು ಘಟನೆಗಳು ಆಗಲಿದ್ದು, ಅದು ನಿಮಗೆ ಆ ಸಂದರ್ಭದಲ್ಲಿ ತಿಳಿಯದೇಹೋದೀತು. ವಹಿವಾಟಿನಲ್ಲಿ ದೊಡ್ಡ ಗುರಿಯನ್ನು ಸಾಧಿಸಲು ಸಾಧ್ಯ. ಇಂದಿನ ಕಛೇರಿಯ ಕಾರ್ಯವನ್ನು ಸಂತೋಷದಿಂದ ಮಾಡುವಿರಿ. ನಿಮ್ಮ ಮನಶ್ಚಾಂಚಲ್ಯವನ್ನು ಕಡಮೆ ಮಾಡಿಕೊಳ್ಳುವುದು ಉತ್ತಮ. ಮಕ್ಕಳಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳುವಿರಿ. ವೈಯಕ್ತಿಕ ವಹಿವಾಟಿನ ವಿಷಯದಲ್ಲಿ ನಿಮಗೆ ಸ್ಪಷ್ಟತೆ ಇರಲಿ. ಇಲ್ಲದಿದ್ದರೆ ಸಮಸ್ಯೆಗಳಿರುತ್ತವೆ. ಹಳೆಯ ತಪ್ಪಿನಿಂದ ಪಾಠಗಳನ್ನು ನೀವು ಕಲಿಯಬೇಕು. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಬಹುಮುಖವಾಗಿ ಬೆಳೆಯುವ ಅವಕಾಶ ಸಿಗುವುದು. ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಪಡುವಿರಿ. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ಆತುರದಲ್ಲಿ ಯಾವ ಕೆಲಸವನ್ನೂ ಮಾಡಲು ಹೋಗುವುದು ಬೇಡ.
ಮೀನ ರಾಶಿ: ಶಕ್ತಿ ಮೀರಿ ಮಾಡುವ ಕಾರ್ಯದಿಂದ ತೊಂದರೆ. ಇಂದು ನಿಮಗೆ ಕೆಲವು ಸಂದರ್ಭಗಳು ಕಠಿಣವೆನಿಸಬಹುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವುದು ನಿಮ್ಮ ವ್ಯವಹಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿ. ನಿಮ್ಮ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿ. ಪ್ರತಿಭೆಯ ಪ್ರಕಾಶಕ್ಕೆ ಅವಕಾಶ. ಸಹಕಾರದ ಮನೋಭಾವವು ನಿಮ್ಮ ಮನಸ್ಸಿನಲ್ಲಿ ಇರುವುದು. ಎಲ್ಲರ ಜೊತೆ ಬೆರೆಯಲು ನೀವು ಇಷ್ಟಪಡುವಿರಿ. ಕುಟುಂಬ ವ್ಯವಹಾರದಲ್ಲಿ ಸಂಗಾತಿಯ ಸಲಹೆಯು ಉಪಯುಕ್ತವೆನಿಸಬಹುದು. ನಿಮ್ಮ ಭಾವನೆಗಳಿಗೆ ವಿರುದ್ಧವಾಗಿ ನಡೆಯುವ ಕಾರ್ಯಗಳಿಂದ ಮೌನವಹಿಸುವಿರಿ. ಇಂದು ನೀವು ನಿಮ್ಮ ಕುಟುಂಬದವರ ಜೊತೆ ಅಧಿಕ ಕಾಲವನ್ನು ಕಳೆಯುವಿರಿ. ಆರ್ಥಿಕತೆಯಲ್ಲಿ ಸ್ವಲ್ಪ ಚೇತರಿಕೆ ಇದ್ದು ನಿಮಗೆ ನೆಮ್ಮದಿಯೂ ಸಿಗಲಿದೆ. ತಾಯಿಯಿಂದ ನಿಮಗೆ ಬೆಂಬಲ ಸಿಗುವುದು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ.
-ಲೋಹಿತ ಹೆಬ್ಬಾರ್-8762924271 (what’s app only)