
ಮೇಷ ರಾಶಿ : ವೈವಾಹಿಕ ಜೀವನಕ್ಕೆ ಯಾರಿಂದಲೂ ಪೂರ್ಣ ಒಪ್ಪಿಗೆ ಸಿಗದು. ಸ್ಥಿರಾಸ್ತಿಯ ಉಳಿಸಿಕೊಳ್ಳಲು ನೀವು ಬಹಳ ಹೋರಾಟವನ್ನು ಮಾಡಬೇಕಾದೀತು. ಬಂಧುಗಳ ಬಳಿ ನೀವು ಸಾಲಕ್ಕೆ ಕೈ ಚಾಚಬೇಕಾಗಬಹುದು. ನಿಮ್ಮ ಕೆಲಸವನ್ನು ಬೇರೆಯವರು ಮಾಡಿ ಮುಗಿಸುವರು. ಭೂಮಿಯ ಉತ್ಪನ್ನದಿಂದ ಕೃಷಿಯ ಉತ್ಪಾದನೆಯಿಂದ ಲಾಭ ಸಿಗಲಿದೆ. ನಿಮ್ಮ ನಿರಂತರ ಕಾರ್ಯಕ್ಕೆ ಸಮ್ಮಾನ ಸಿಗುವುದು.
ವೃಷಭ ರಾಶಿ : ಬಂಧುಗಳಿಗೆ ಆರ್ಥಿಕವಾಗಿ ಸಹಾಯವನ್ನು ಮಾಡುವಿರಿ. ಕಳೆದುಕೊಂಡಿದ್ದನ್ನು ಮರೆಯುವುದು ಉತ್ತಮ. ಅಭಿವೃದ್ಧಿಯ ಕೆಲಸಗಳು ನಿಧಾನವಾಗಿ ಸಾಗುವುದು. ಪ್ರಯಾಣದಲ್ಲಿ ನೀವು ತೊಂದರೆಯನ್ನು ಅನುಭವಿಸುವಿರಿ. ಹುಟ್ಟಿದ ಸಂಭ್ರಮಕ್ಕೆ ಮನೆಯಲ್ಲಿ ಹಬ್ಬದ ವಾತಾವರಣ. ಆಭರಣವನ್ನು ಸುರಕ್ಷಿತ ಸ್ಥಳದಲ್ಲಿ ಇರಿಸುವಿರಿ. ಅನಗತ್ಯ ಖರ್ಚನ್ನು ಕಡಿಮೆ ಮಾಡಲು ಸಂಗಾತಿಗೆ ಸೂಚಿಸುವಿರಿ.
ಮಿಥುನ ರಾಶಿ : ಆರ್ಥಿಕತೆಯು ಅಭಿವೃದ್ಧಿಯ ಕಡೆಗೆ ಸಾಗುವುದು ನಿಮಗೆ ಸಂತೋಷವನ್ನು ಕೊಡಲಿದೆ. ಕುಟುಂಬದಿಂದ ನಿಮಗೆ ಶುಭ ವಾರ್ತೆಯು ಬರಬಹುದು. ಜಾಣತನವೂ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಸಹೋದರನ ವಿವಾಹದ ಚಿಂತೆ ಮತ್ತೆ ಮತ್ತೆ ಬರುವುದು. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳಲು ಸಹಾಯವಾಗುವುದು. ದೈವವನ್ನು ನಂಬಿ ನಿಮ್ಮ ಕಾರ್ಯವನ್ನು ಮುನ್ನಡಸುವಿರಿ. ಚಿತ್ರಕಾರರಿಗೆ ಉತ್ತಮ ಅವಕಾಶಗಳು ಸಿಗಬಹುದು.
ಕರ್ಕಾಟಕ ರಾಶಿ : ನಿಮ್ಮ ಉದ್ಯಮಕ್ಕೆ ಯಾರಾದರೂ ಬೆನ್ನೆಲುಬಾಗಿ ಬರಬಹುದು. ವಿಳಂಬವಾಗಿಯಾದರೂ ವಿವಾಹವು ನಡೆಯಲಿದ್ದು, ನಿಮಗೆ ಸಂತೋಷವಾಗಲಿದೆ. ಮಕ್ಕಳ ವಿವಾಹಕ್ಕಾಗಿ ಓಡಾಟ ಮಾಡುವಿರಿ. ಯಾವುದು ಎಷ್ಟು ಪ್ರಾಮುಖ್ಯ ಎಂಬ ತಿಳಿವಳಿಕೆಯ ಕೊರತೆ ಕಾಣಿಸುವುದು. ಸಂಗಾತಿಯ ಇಂಗಿತವನ್ನು ಅರಿಯಲು ಅಸಮರ್ಥರಾಗಬಹುದು. ಬ್ಯಾಂಕ್ ನಲ್ಲಿ ಹಣಕಾಸಿಗೆ ಜಗಳವಾಡಬೇಕಾಗಬಹುದು. ಹಳೆಯ ಪ್ರೇಮವು ನಿಮಗೆ ತೊಂದರೆಯನ್ನು ಕೊಡಲಿದೆ.
ಸಿಂಹ ರಾಶಿ : ಇಂದು ನೀವು ಯಾರ ಮಾತನ್ನೂ ಕೇಳದೇ ನಿಮ್ಮಷ್ಟಕ್ಕೆ ನಿರ್ಧಾರಕ್ಕೆ ಬರುವಿರಿ. ನಿಮ್ಮ ಅಸಹಜ ವರ್ತನೆಯು ನಿಮ್ಮರಿಗೆ ಸಿಟ್ಟನ್ನು ತರಿಸಬಹುದು. ಎಲ್ಲರನ್ನೂ ನೀವು ಸಮಾನಭಾವದಿಂದ ಕಾಣಬೇಕಾಗುವುದು. ಮಹಿಳೆಯರನ್ನು ಸಿಕ್ಕ ಗೌರವವನ್ನು ಅತಿಯಾಗಿ ಭಾವಿಸುವುದು ಬೇಡ. ಬೇರೆಯವರ ಜೊತೆ ನಿಮ್ಮ ವರ್ತನೆಯು ಸರಿಯಾಗಿರಲಿ. ಯಾರ ಮೇಲೂ ಅತಿಯಾಗಿ ಸಿಟ್ಟಾಗುವುದು ಬೇಡ. ಶುದ್ಧ ವಸ್ತ್ರಕ್ಕೆ ಸಣ್ಣ ಚುಕ್ಕೆಯೂ ದೊಡ್ಡದೇ.
ಕನ್ಯಾ ರಾಶಿ : ವಿನ್ಯಾಸಕಾರರಿಗೆ ಪೂರಕವಾದ ಕಾರ್ಯವು ಸಿಗುವುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಪ್ರಶ್ನಿಸಲಾರರು. ಹಣದ ವ್ಯವಹಾರವನ್ನು ಒಬ್ಬರೇ ಮಾಡುವುದು ಬೇಡ. ನಂಬಿಕಸ್ಥರನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ. ಇನ್ನೊಬ್ಬರನ್ನು ಹಗುರಾಗಿ ಕಾಣುವುದು ನಿಮಗೆ ಅಭ್ಯಾಸವಾಗಿದ್ದು, ಅದನ್ನು ಬಿಡುವುದು ಒಳ್ಳೆಯದು. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ಯಾವುದಾದರೂ ಕಲೆಯು ನಿಮ್ಮನ್ನು ಸೆಳೆಯಬಹುದು.
ತುಲಾ ರಾಶಿ : ನೀವು ನಿರೀಕ್ಷಿಸುತ್ತಿರುವ ಸಮಯವು ಇನ್ನೂ ಬಾರದೆಂದು ನಿಮಗೆ ಸಂಕಟವಾಗಬಹುದು. ಸತ್ಯವನ್ನು ನೀವು ಬಿಡುವ ಸಾಧ್ಯತೆ ಇದೆ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ನೆಮ್ಮದಿಯ ಕೊರತೆ ಅಧಿಕವಾಗಿ ಇರಿಲಿದೆ. ನೀವು ಕೃತಜ್ಞತೆಯನ್ನು ಮರೆತುವಿರಿ. ಉಡುಗೊರೆಯನ್ನು ನೀವು ಆಪ್ತರಿಂದ ದಾಕ್ಷಿಣ್ಯದಿಂದ ಪಡೆಯುವಿರಿ. ನಿಮ್ಮ ಬಗ್ಗೆ ಸರಿಯಾದ ಪರಿಚಯವನ್ನು ಇತರರಿಗೆ ಕೊಡಿ. ನಿಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡಬಹುದು.
ವೃಶ್ಚಿಕ ರಾಶಿ : ದುಸ್ಸಾಹಸಗಳು ನಿಮ್ಮ ಧೈರ್ಯವನ್ನು ಕೆಡಿಸಬಹುದು. ಎಷ್ಟೇ ಪ್ರಯತ್ನಪಟ್ಟರೂ ನೀವು ಮಕ್ಕಳನ್ನು ಸರಿಮಾಡಲು ಆಗಲು ಎಂಬ ಹಂತಕ್ಕೆ ಬರುವಿರಿ. ಆರ್ಥಿಕ ವ್ಯವಹಾರದವರಿಗೆ ಅಲ್ಪ ಬಿಡುವು ಸಿಗಬಹುದು. ಉದ್ಯೋಗದ ಕಾರಣಕ್ಕೆ ನೀವು ಯಾರಿಗೋ ಕಾದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಅಂದಾಜಿನ ವ್ಯವಹಾರದಲ್ಲಿ ಸೋಲಾಗುವುದು. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ.
ಧನು ರಾಶಿ : ದುರಭ್ಯಾಸವಿಲ್ಲದೇ ಇರುವುದೇ ದೊಡ್ಡ ಯೋಗ್ಯತೆ. ಅವರನ್ನು ಕಳೆದುಕೊಳ್ಳುವುದು ಬೇಡ. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎನಿಸಬಹುದು. ಕೆಲಸದಲ್ಲಿ ನಿಮಗೆ ಬೆಂಬಲವು ಕಡಿಮೆ ಸಿಗಬಹುದು. ನಿಮ್ಮ ದುರಾಲೋಚನೆಗೆ ನೀವೇ ಪೂರ್ಣ ವಿರಾಮವನ್ನು ಹಾಕಿಕೊಳ್ಳಬಹುದು. ನಿಮ್ಮನ್ನು ಹೊಗಳಿಕೊಳ್ಳುವುದು ಸರಿ ಕಾಣಿಸದು. ಮೇಲ್ನೋಟಕ್ಕೇ ನಿಮ್ಮ ಸ್ವಭಾವದ ಅರಿವಾಗಬಹುದು. ತಾಳ್ಮೆಯನ್ನು ನೀವು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕಾದೀತು.
ಮಕರ ರಾಶಿ : ನಿಮ್ಮ ಕೆಲಸಕ್ಕೆ ಎಲ್ಲರಿಂದ ಪ್ರಶಂಸೆ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಅಸ್ತಿತ್ವವನ್ನು ತೋರಿಸುವರು. ಸಾಮಾಜಿಕ ಕಾರ್ಯಗಳನ್ನು ಮಾಡಲು ನೀವು ಬಹಳ ಉತ್ಸಾಹದಿಂದ ಇರುವಿರಿ. ಮನಸ್ಸಿನಲ್ಲಿ ಒಂದಿಲ್ಲೊಂದು ಭೀತಿಯು ಕಾಡಬಹುದು. ಅತಿಯಾದೆ ಆಸೆಯಿಂದ ನಿಮಗೆ ದುಃಖವು ಬರಬಹುದು. ವ್ಯಕ್ತಿಗತವಾದ ಭಾವವನ್ನು ಇಟ್ಟುಕೊಳ್ಳುವುದು ಬೇಡ. ಯಾರೋ ಮಾಡಿದ ತಪ್ಪಿಗೆ ನೀವು ಕಷ್ಟವನ್ನು ಅನುಭವಿಸಬೇಕಾದೀತು. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು.
ಕುಂಭ ರಾಶಿ : ಇಂದು ಉದ್ಯೋಗದಲ್ಲಿ ಒತ್ತಡವು ಅಧಿಕವಾಗುವುದು. ಅಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗಬಹುದು. ಸಂಗಾತಿಯ ಜೊತೆ ವಾದಕ್ಕೆ ಇಳಿಯುವಿರಿ. ಕಛೇರಿಯಲ್ಲಿ ಆದ ಜಗಳವು ಉದ್ಯೋಗವನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗಬಹುದು. ಮ ಇಷ್ಟವಿಲ್ಲದ ಕಾರ್ಯವನ್ನು ಮಾಡಲು ನೀವು ಹಿಂಜರಿಯುವಿರಿ. ತಾಯಿಯ ಜೊತೆ ಎಲ್ಲವನ್ನೂ ಹೇಳಬೇಕು ಎನಿಸಬಹುದು. ವ್ಯವಹಾರಕ್ಕೆ ಬೇಕಾದ ಬಂಡವಾಳವನ್ನು ಇಟ್ಟುಕೊಂಡೇ ಹೊರಡಿ.
ಮೀನ ರಾಶಿ : ಇಂದು ನಿಮ್ಮ ಜ್ಞಾನದ ಜೊತೆ ನಿಮ್ಮ ಪ್ರಯತ್ನವೂ ಇದ್ದರೆ ಬಯಸಿದ ಯಶಸ್ಸನ್ನು ಪಡೆಯಬಹುದು. ಏಕಾಂಗಿಯಾಗಿ ಇರಲು ನೀವು ಬಯಸಬಹುದು. ವಿದ್ಯಾಭ್ಯಾಸದಿಂದ ಸ್ವಲ್ಪ ಬಿಡುಗಡೆಯನ್ನು ಬಯಸುವಿರಿ. ಬಯಸಿದ್ದನ್ನು ಪಡೆಯಲು ಹೆಚ್ಚು ಪ್ರಯತ್ನ ಪಡಬೇಕಾದೀತು. ಮಕ್ಕಳಿಂದ ನಿಮಗೆ ಸಂತೋಷವು ಸಿಗುವುದು. ಸಿಕ್ಕ ಸಂಪತ್ತನ್ನು ಜೋಪಾನ ಮಾಡಿಕೊಳ್ಳಿ. ತಾಯಿಯು ನಿಮ್ಮನ್ನು ಬೆಂಬಲಿಸುವಳು.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಪರಿಘ , ಕರಣ : ಕೌಲವ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 06 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 016:37 – 18:06, ಯಮಗಂಡ ಕಾಲ 12:08 – 13:38, ಗುಳಿಕ ಕಾಲ 15:07 – 16:37
– ಲೋಹಿತ್ ಹೆಬ್ಬಾರ್ – 8762924271 (what’s app only)
ಇನ್ನಷ್ಟು ಜ್ಯೋತಿಷ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:25 am, Sun, 4 October 26