
ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಶನಿ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಪ್ರೀತಿ, ಕರಣ: ಭದ್ರ, ಸೂರ್ಯೋದಯ – 06 : 18 am, ಸೂರ್ಯಾಸ್ತ – 06 : 57 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:29 – 11:03 ಗುಳಿಕ ಕಾಲ 06:19 – 07:54 ಯಮಗಂಡ ಕಾಲ 14:13 – 15:48
ಇಂದು ರಕ್ಷಾಬಂಧನ. ಪ್ರಾಚೀನ ಕಾಲದಿಂದ ಸ್ತ್ರೀಯರಿಗೆ ರಕ್ಷೆಯನ್ನು ಕೊಡುವುದು ವಿಶೇಷ ಪದ್ಧತಿ. ಸಹೋದರರಿಲ್ಲದವರು ರಕ್ಷೆಯನ್ನು ಕಟ್ಟುವ ಮೂಲಕ ಸಹೋದರ ಭಾವವನ್ನು ತಂದುಕೊಳ್ಳಬಹುದು. ಬಲಿ ಚಕ್ರವರ್ತಿಯಿಂದ ಈ ಪದ್ಧತಿ ಆರಂಭವಾಯಿತು ಎಂಬ ಪ್ರತೀತಿ ಇದೆ.
ಮೇಷ ರಾಶಿ: ಕಟ್ಟಿದ ಮನೆಯಲ್ಲಿಯೇ ವಾಸ ಮಾಡುವುದು ಯೋಗ್ಯವೆನಿಸುವುದು. ಇಂದು ನೀವು ಮಾಡಿದ ಹೂಡಿಕೆಯಿಂದ ಲಾಭವಿದೆ. ದುರಭ್ಯಾಸದಿಂದ ಹಣವನ್ನು ಕಳೆದುಕೊಳ್ಳುವಿರಿ. ವ್ಯಾಪರದಲ್ಲಿ ಲಾಭವಾಗಲಿದೆ. ಅಪರಿಚಿತರ ಜೊತೆ ಮಾತನಾಡಲು ನಿಮಗೆ ಮುಜಗರವಾದೀತು. ಒಬ್ಬರೇ ಯಾವ ರಿಸ್ಕ್ ನ್ನೂ ತೆಗೆದುಕೊಳ್ಳಲಾರಿರಿ. ಹಣಕಾಸಿನಲ್ಲಿ ಸುಧಾರಣೆಯ ಸೂಚನೆಗಳು ಇದ್ದರೂ ಖರ್ಚಿನ ತೀವ್ರತೆಯನ್ನು ನಿಯಂತ್ರಿಸಿ. ಉದ್ಯೋಗದಲ್ಲಿ ಒತ್ತಡದ ನಡುವೆಯೂ ಶಾಂತಿಯುತ ನಿರ್ವಹಣೆಗೆ ಶಕ್ತಿ ಸಿಗುವುದು. ಯುವಕರು ಬಲವಂತರಾಗಿದ್ದರೂ ಸರಿಯಾದ ಮಾರ್ಗವು ಸಿಗದೇ ಒದ್ದಾಡಬೇಕಾದೀತು. ಕೃತಜ್ಞತೆಯು ನಿಮ್ಮ ಗೌರವಾನ್ವಿತ ಅಧಿಕಗೊಳಿಸುವುದು. ಸಹೋದರರ ಸಂಬಂಧವು ಇಂದು ಸ್ವಲ್ಪ ಸುಧಾರಿಸಬಹುದು. ನೂತನ ಅನ್ವೇಷಣೆಯ ಕಡೆ ನಿಮ್ಮ ಮನಸ್ಸು ಹೋಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ನಕಾರಾತ್ಮಕ ಆಲೋಚನೆಗಳನ್ನು ತಲೆಯಿಂದ ತೆಗೆಯಿರಿ.
ವೃಷಭ ರಾಶಿ: ದ್ವೇಷ ಸಾಧಿಸಲು ಆರಂಭಿಸಿದರೆ ಯಾರ ಮಾತನ್ನೂ ಕೇಳಲಾರಿರಿ. ನಿಮಗೆ ಬೇಕಾದಷ್ಟು ಸೌಲಭ್ಯಗಳಿದ್ದರೂ ಕೊರತೆ ಎನಿಸಬಹುದು. ಇಂದು ನೀವು ಒತ್ತಡಗಳಿಗೆ ಸಿಲುಕದೇ ಎಚ್ಚರಿಕೆಯಿಂದ ಕಾರ್ಯವನ್ನು ನಿಭಾಯಿಸಲು ಕಲಿಯಬೇಕಾಗಬಹುದು. ಸಮಯವನ್ನು ವ್ಯರ್ಥವಾಗಿ ಮಾಡಿಕೊಳ್ಳಲು ಅನೇಕ ಮಾರ್ಗಗಳು ತೆರೆದುಕೊಳ್ಳಬಹುದು. ಚಟುವಟಿಕೆಗಳಲ್ಲಿ ಬದಲಾವಣೆ ತರಬೇಕೆಂಬ ಆಲೋಚನೆ ಬಲವಾಗಿರುತ್ತದೆ. ಹಣಕಾಸಿನಲ್ಲಿ ಹೊಸ ಯೋಜನೆಗಳು ಸುಲಭವಾಗಿ ಜಾರಿಯಾಗದಿರಬಹುದು, ತಾಳ್ಮೆ ಬೇಕು. ಸಕಾರಾತ್ಮಕವಾಗಿ ಇದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇರಲಿ. ದಾಂಪತ್ಯದಲ್ಲಿ ಮಕ್ಕಳ ವಿಚಾರಕ್ಕೆ ಕಲಹವಾಗಬಹುದು. ನ್ಯಾಯಾಲಯದಲ್ಲಿ ನಿಮಗೆ ಸೋಲಾಗಬಹುದು. ಅಪವಾದವನ್ನು ದೂರಮಾಡಿಕೊಳ್ಳಲು ಹಣವನ್ನು ಕಳೆದುಕೊಳ್ಳುವಿರಿ. ಯಾರಾದರೂ ನಿಮ್ಮನ್ನು ಕಂಡು ಅವಮಾನಿಸುವರು. ಉತ್ತರಿಸಿ ಇನ್ನಷ್ಟು ಹತಾಶರಾಗಬೇಡಿ. ಪ್ರಭಾವಿಗಳ ಭೇಟಿಯಿಂದ ಸಂತೋಷವಾಗಲಿದೆ.
ಮಿಥುನ ರಾಶಿ: ಒಂದೇ ಕಾರಣಕ್ಕೆ ಎರಡು ಬಾರಿ ಅಪಮಾನವಾಗಬಹುದು. ಇಂದು ನಿಮ್ಮ ವಾಹನದಲ್ಲಿ ದೀರ್ಘಪ್ರಯಾಣವು ಮಾಡುವುದು ಬೇಡ. ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ನಿಮಗೆ ಹೇಳಬೇಕಾದ ವಿಷಯವನ್ನು ನೇರವಾಗಿ ಹೇಳಲು ಕಷ್ಟವಾದೀತು. ಉದ್ಯೋಗದಲ್ಲಿ ಉನ್ನತ ಸ್ಥಾನದ ಲಕ್ಷಣ ಗೋಚರಿಸುವುದು. ಕುಟುಂಬದಲ್ಲಿ ನಿಮ್ಮ ಸಲಹೆ ಮತ್ತು ಮಾರ್ಗದರ್ಶನಕ್ಕೆ ಎಲ್ಲರೂ ಬೆಂಬಲಿಸುತ್ತಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗಬಹುದು. ನಿಮ್ಮ ಉದ್ಯೋಗವು ಅಭಿವೃದ್ಧಿಯ ಕಡೆಗೆ ಸಾಗಲಿದೆ. ಅಪರಿಚಿತ ಕರೆಗೆ ನೀವು ಮಾರುಹೋಗಬಹುದು, ಎಚ್ಚರವಾಗಿರಿ. ನಿಮಗೆ ಏಕಾಂತ ಬೇಕೆನಿಸಿ ಏಕಾಂಗಿಯಾಗಿ ಹೋಗಬಹುದು. ಸಜ್ಜನರ ಸಹವಾಸವು ನಿಮ್ಮ ಅಹಂಕಾರದಿಂದ ಸಿಗದೇಹೋಗಬಹುದು. ಅಲಂಕಾರಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ. ಸಾಮೂಹಿಕ ಕಾರ್ಯದಲ್ಲಿ ನಿಮಗೆ ಯಶಸ್ಸು ಸಿಗಬಹುದು.
ಕರ್ಕಾಟಕ ರಾಶಿ: ಯೋಜನೆಯು ನಿಮ್ಮ ಕೈಗೆ ಬರುವತನಕ ಉದ್ವೇಗ ಬೇಡ. ಅಹಂಕಾರದಿಂದ ಕೆಲವರನ್ನು ಕಳೆದುಕೊಳ್ಳುವಿರಿ. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಸ್ವತಂತ್ರವಾಗಿರುವ ನಿಮಗೆ ಏನನ್ನೋ ಕಳೆದುಕೊಂಡಿದ್ದೀರಿ ಎಂದು ಅನ್ನಿಸಬಹುದು. ನಿಮ್ಮ ಪ್ರಯತ್ನಗಳ ಫಲ ಇಂದೇ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಯಾವುದಕ್ಕೂ ಕೊನೆಯ ಕ್ಷಣದವರೆಗೆ ಕಾಯುವುದು ಬೇಡ. ವಿದ್ಯಾರ್ಥಿಗಳಿಗೆ ಶ್ರಮದ ಫಲ ಇಂದು ಸಿಗಬಹುದು. ನಿಮಗೆ ಬೇಕಾಗಿರುವ ಪರಿಹಾರ ಸ್ನೇಹಿತರಿಂದ ಸಿಗುತ್ತದೆ. ಕಛೇರಿಯಲ್ಲಿ ನಿಮ್ಮ ಕೆಳಗಿನವರು ನಿಮಗೆ ಆದೇಶ ಮಾಡಿಯಾರು. ಆರಂಭಿಸಿದ ಕೆಲಸಗಳು ಮಂದಗತಿಯಲ್ಲಿ ಸಾಗಬಹುದು. ಅಕ್ರಮ ಆಸ್ತಿಯಿಂದ ನಿಮಗೆ ಇಂದು ತೊಂದರೆಯಾಗಬಹುದು. ರಾಜಕಾರಣಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಚ್ಚು ಓಡಾಡುವರು. ತೋರಿಕೆಗೆ ಮಾಡುವ ಕೆಲಸದಲ್ಲಿ ನಿಮಗೆ ಸಂತೋಷ ಸಿಗದು. ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು. ಉತ್ಸಾಹಕ್ಕೆ ತೊಂದರೆ ಬರುವ ಕಡೆ ನೀವು ಇರಲಾರಿರಿ.
ಸಿಂಹ ರಾಶಿ: ಸಂದರ್ಶನದಿಂದ ನಿಮ್ಮ ಭಾಷೆ, ಹಾವಭಾವಗಳೂ ಎದ್ದು ತೋರುವುದು. ಬಹು ದಿನಗಳ ವಿವಾಹದ ಚಿಂತೆಯು ನಿಮ್ಮಿಂದ ದೂರಾಗುವುದು. ಇಂದು ಕುಟುಂಬದ ಸದಸ್ಯ ನಿಮ್ಮ ಜೊತೆ ಸಮಯವನ್ನು ಕಳೆಯಲು ಒತ್ತಾಯಿಸಬಹುದು. ನಿಮ್ಮ ಯೋಜನೆಯನ್ನು ಮುಂದುವರಿಸಲು ನಿಮಗೆ ಆತಂಕವು ಬರಬಹುದು. ಮುಖ್ಯ ವಿಚಾರವನ್ನು ನೀವು ಮರೆಯುವ ಸಂಭವವಿದೆ. ವ್ಯವಹಾರದಲ್ಲಿ ನಿಷ್ಠೆಯಿಂದ ನಡೆದುಕೊಂಡರೆ ಉತ್ತಮ ಫಲ ಸಿಗುವುದು ಖಚಿತ. ಉದ್ಯೋಗದಲ್ಲಿ ಮೇಲುಗೈ ಸಾಧನೆ ಸಾಧ್ಯತೆ. ನೀವು ತೆಗೆದುಕೊಳ್ಳುವ ನಿರ್ಧಾರ ಇತರರ ಜೀವನವನ್ನೂ ಪ್ರಭಾವಿತಗೊಳಿಸಬಹುದು. ಲೆಕ್ಕಪರಿಶೋಧಕರು ಒತ್ತಡದಿಂದ ಹೊರಬಂದಿರುವರು. ನಿಮ್ಮ ಕಾರ್ಯವನ್ನು ನೀವೇ ಹೇಳಿಕೊಳ್ಳಬೇಕಾದೀತು. ನಿಮ್ಮನ್ನು ಇಷ್ಟಪಡುವವರು ನಿಮಗೆ ಉಡುಗೊರೆಯನ್ನು ಕೊಟ್ಟಾರು. ನಿಮ್ಮ ಆಲೋಚನೆಗಳಿಂದ ನಕಾರಾತ್ಮಕತೆಯು ಉಂಟಾಗಬಹುದು. ಸಮಯವನ್ನು ನೋಡಿಕೊಂಡು ನೀವು ಮುಂದುವರಿಯುವುದು ಯೋಗ್ಯವಿದೆ. ನೀವು ಇಂದು ಆರಂಭಿಸುವ ಕೆಲಸವು ಹೆಚ್ಚು ಸಮಯವನ್ನು ಪಡೆಯಬಹುದು.
ಕನ್ಯಾ ರಾಶಿ: ವಿಮರ್ಶಾತ್ಮಕ ಬುದ್ಧಿಯಿಂದ ಅಳೆಯುತ್ತ ಸಮಯವನ್ನು ಹಾಳುಮಾಡುವಿರಿ. ಇಂದು ನಿಮ್ಮ ನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಇಂದು ನೀವು ಕೋಪವು ಹತೋಟಯಲ್ಲಿ ಇರಲಿ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಸ್ನೇಹಿತನ ಸಹಾಯದಿಂದ ಸಮಸ್ಯೆಗೆ ಪರಿಹಾರ ಕಂಡುಬರುವುದು. ನಿಮ್ಮ ಬುದ್ಧಿವಂತಿಕೆ ಹಾಗೂ ಶಾಂತ ಸ್ವಭಾವ ಇತರರಿಗೆ ಆಕರ್ಷಣೆಯಾಗಲಿದೆ. ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳಲ್ಲೂ ಪ್ರಗತಿ. ಉದ್ಯೋಗದಲ್ಲಿ ಸಿಗುವ ಬಡ್ತಿಗೆ ನೀವು ಕಾಯುತ್ತಿರುವಿರಿ. ಲಾಭ ಹಾಗೂ ನಷ್ಟವನ್ನು ಸರಿಗೂಡಿಸಿಕೊಂಡು ನೋಡುವುದು ಉತ್ತಮ. ಕ್ರೀಡೆಯಲ್ಲಿ ಇಂದು ಹೆಚ್ಚು ಆಸಕ್ತಿ ಬರಬಹುದು. ಮನೋರಂಜನೆಗೆ ಇಂದು ಸಮಯವನ್ನು ಕೊಡುವಿರಿ. ನ್ಯಾಯ ಸಮ್ಮತವಾದ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಯಾರದೋ ಸಿಟ್ಟನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳುವಿರಿ. ನಿಮ್ಮ ನಿಜಸ್ವರೂಪ ಗೊತ್ತಾಗಬಹುದು.
ತುಲಾ ರಾಶಿ: ಭಾವನೆಗಳನ್ನು ಅರ್ಥಮಾಡಿಕೊಳ್ಳುವವರ ಜೊತೆ ನಂಟು ಹೆಚ್ಚಾಗಲಿದೆ. ತುರ್ತಾಗಿ ಸ್ಥಳ ಬದಲಾವಣೆ ಮಾಡಬೇಕಾಗಬಹುದು. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿರುವ ನಿಮಗೆ ಪ್ರೇಮ ಜೀವನವು ಒಳ್ಳೆಯ ತಿರುವು ಕೊಡಬಹುದು. ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ನಿಮ್ಮ ಸ್ವಭಾವಕ್ಕೆ ಹೊಂದಿಕೆಯಾಗುವ ಸಂಗಾತಿಯು ಸಿಗುವರು. ಹಳೆಯ ಸಾಲ ತೀರುವವರೆಗೆ ಹೊಸದಕ್ಕೆ ಅವಕಾಶ ಬೇಡ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ತೋರಿಸುವ ದಿನ. ವಿದ್ಯಾರ್ಥಿಗಳಿಗೆ ಇದು ನಿರ್ಧಾರ ತೆಗೆದುಕೊಳ್ಳುವ ದಿನವಾಗಿರಬಹುದು. ಸ್ತ್ರೀಯರಿಗೆ ಅನಾರೋಗ್ಯದಿಂದ ಸಂಕಟವಾಗಲಿದೆ. ಸುಮ್ಮನೇ ಕುಳಿತು ನಕಾರಾತ್ಮಕ ಚಿಂತನೆಗಳನ್ನು ಮಾಡಿಕೊಳ್ಳುವವರಿದ್ದೀರಿ. ಸಮೀಪದ ದೇವಾಲಯ ದರ್ಶನವು ಮನಸ್ಸಿಗೆ ಯಾವುದೇ ಕಾರಗಣಕ್ಕಾಗಿ ಧನಾತ್ಮಕ ಚಿಂತನೆಯನ್ನು ಮಾಡಿಕೊಳ್ಳಿ. ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿಮಾಡಿ. ಸ್ನೇಹಿತರ ಅಸಹಕಾರವು ನಿಮಗೆ ಬೇಸರ ಕೊಡಬಹುದು. ಇದು ಜಾಣತನವೂ ಹೌದು. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು.
ವೃಶ್ಚಿಕ ರಾಶಿ: ಒತ್ತಡದಿಂದ ನಿಗದಿಪಡಿಸಿದ ಸಮಯಕ್ಕೆ ಸೇರಿಕೊಳ್ಳಲಾಗದು. ಇಂದು ನೀವು ಮಾಡುವ ಕಾರ್ಯದಲ್ಲಿ ವಿಳಂಬವು ಕಾಣಿಸುವುದು. ಒತ್ತಡದಿಂದ ವೇಗವನ್ನು ಹೆಚ್ಚಿಸುವಿರಿ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ನಿಮಗೆ ನಿಮ್ಮ ಸಾಮರ್ಥ್ಯ ಗೊತ್ತಿದ್ದರೂ ಹಿಂದೆಟು ಹಾಕಬಹುದು. ನಾಯಕತ್ವದ ಗುಣ ನಿಮ್ಮ ಕೆಲಸದಲ್ಲಿ ಸ್ಪಷ್ಟವಾಗುತ್ತದೆ. ಹೇಗಾದರೂ ಅದನ್ನು ಹೆಚ್ಚಿಸಿಕೊಳ್ಳುವ ದಾರಿ ಹುಡುಕುವಿರಿ. ವಿಧೇಯಯತೆಯು ನಿಮ್ಮ ಗೌರವವನ್ನು ಹೆಚ್ಚಿಸುವುದು. ಹಣವೂ ನಿಮ್ಮ ಸ್ಥಾನಮಾನಕ್ಕೆ ಯೋಗ್ಯವಾಗಿ ವ್ಯವಸ್ಥೆಯನ್ನು ಮಡುವುದು. ನೂತನ ಆಭರಣವನ್ನು ಖರೀದಿಸುವಿರಿ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದನ್ನು ಮರಳಿ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ಯಾರದೋ ಮಾತಿನಿಂದ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಯಾರದೋ ಮಾತಿಗೆ ವಶವಾಗುವ ಸಾಧ್ಯತೆ ಇದೆ. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು. ತಪ್ಪಾದ ಆಚರಣೆಯನ್ನು ಮಾಡುವುದು ಬೇಡ.
ಧನು ರಾಶಿ: ಆರಂಭದ ಉತ್ಸಾಹಕ್ಕೆ ತಣ್ಣೀರೆರೆರಚುವವರು ಇದ್ದಾರು. ದಾಂಪತ್ಯದಲ್ಲಿ ನಂಬಿಕೆ ದೂರಾಗಬಹುದು. ಇಂದು ನೀವು ಉದ್ಯಮದ ಕಾರಣಕ್ಕೆ ಕೈಗೊಂಡ ಪ್ರಯಾಣವು ಪ್ರಯೋಜನಕಾರಿಯಾಗಲಿದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಅಧಿಕೃತ ಕೆಲಸವನ್ನು ಬಿಟ್ಟು ಅನ್ಯ ಕೆಲಸವನ್ನು ಮಾಡಬೇಕಾಗಬಹುದು. ನಿಮ್ಮ ಕನಸುಗಳು ಒಂದೊಂದೆ ಹೆಜ್ಜೆ ಇಡಲು ಆರಂಭಿಸುವುವು. ದಿನದ ಆರಂಭ ಗೊಂದಲದಿಂದ ಶುರುವಾಯಿತಾದರೂ ಅಂತ್ಯದ ಹೊತ್ತಿನಲ್ಲಿ ಶಾಂತಿ ಸಿಗುತ್ತದೆ. ಸಣ್ಣ ಖರ್ಚಿಗೆ ತಯಾರಿರಲಿ, ವೃತ್ತಿಯ ಬಗ್ಗೆ ನಿಮಗೆ ಕೀಳರಿಮೆ ಬರುವ ಸಾಧ್ಯತೆ ಇದೆ. ಪ್ರಾಮಾಣಿಕತೆಯಿಂದ ನಿಮಗೆ ಲಾಭವಾಗಬಹುದು. ಕುಟುಂಬದ ಜೊತೆ ಬದುಕುವ ಆನಂದವನ್ನು ಅನುಭವಿಸುವಿರಿ. ಸಂಗಾತಿಯ ಮಾತುಗಳನ್ನು ನೀವು ತಳ್ಳಿಹಾಕುವಿರಿ. ನಿಮಗೆ ವಹಿಸಿದ ಕೆಲಸವು ವಿಳಂಬವಾಗಬಹುದು. ಸ್ನೇಹಿತರ ಬೆಂಬಲದಿಂದ ವಾಹನ ಖರೀದಿಯನ್ನು ಮಾಡುವಿರಿ. ನಂಬಿಕೆಯಿಂದ ಕೆಲಸವನ್ನು ಮಾಡುವಿರಿ. ಪ್ರಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ ಫಲಿತಾಂಶವು ಕೊಡುವುದು.
ಮಕರ ರಾಶಿ: ಕೃಷಿಯನ್ನು ರಕ್ಷಿಸಿಕೊಳ್ಳಲು ಶ್ರಮವಹಿಸಬೇಕಾಗುವುದು. ಮಂಗಳ ಕಾರ್ಯದಲ್ಲಿ ನಿಮಗೆ ಆಸಕ್ತಿ ಬರುವುದು. ಇಂದು ನೀವು ಜಾಗರೂಕತೆಯಿಂದ ಆಯೋಜಿಸಿ ಕಾರ್ಯವನ್ನು ಸಾಧಿಸಿ. ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ. ಕಛೇರಿಯಲ್ಲಿ ಅಧಿಕಾರಿಯ ಜೊತೆ ವಾದಕ್ಕೆ ಇಳಿಯಬಹುದು. ನಿಮ್ಮ ಬದ್ಧತೆ ಇತರರನ್ನು ಪ್ರೇರೇಪಿಸಬಹುದು. ಧೈರ್ಯದಿಂದ ದಿನ ಮುಗಿಯುತ್ತದೆ. ಕುಟುಂಬದಲ್ಲಿ ನಿರೀಕ್ಷಿತ ಪ್ರಗತಿ ಕಾಣಬಹುದು. ಒತ್ತಡದ ನಡುವೆಯೂ ನಿಮ್ಮ ಸೃಜನಾತ್ಮಕತೆ ಮೆರೆದೀತು. ಒಡಹುಟ್ಟಿದವರಿಗೆ ಮಾರ್ಗದರ್ಶನ ನೀಡಿ ಮತ್ತು ಅವರ ಅಗತ್ಯಕ್ಕೆ ಅನುಗುಣವಾಗಿ ಅವರನ್ನು ಬೆಂಬಲಿಸಿ ಸಂತೋಷಪಡಿಸಿ. ಯಂತ್ರೋಪಕರಣದಲ್ಲಿ ನಿಮಗೆ ಲಾಭವಿದೆ. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವುದು ನಿಮಗೆ ಖುಷಿ ಕೊಡುವ ಸಂಗತಿಯಾಗಿದೆ. ಇಂದು ನೆರೆ ಹೊರೆಯವರ ಭಿನ್ನಾಭಿಪ್ರಾಯವು ಬೆಳಕಿಗೆ ಬರಬಹುದು. ನಿಮ್ಮ ಇಚ್ಛೆಗೆ ವಿರುದ್ಧವಾಗಿದ್ದರೆ ಕೋಪಗೊಳ್ಳುವುದು ಬೇಡ. ಆಸ್ತಿಯ ಭಾಗವನ್ನು ಮಾರಾಟ ಮಾಡಬೇಕಾದೀತು. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು.
ಕುಂಭ ರಾಶಿ: ನಿಮ್ಮ ಗೌಪ್ಯ ವಿಚಾರವನ್ನು ಅನ್ಯರು ಹೇಳಿದ್ದನ್ನು ಕೇಳಿ ಅಚ್ಚರಿಯಾಗುವುದು. ನಿಮಗೆ ಇಂದು ದೇಹಾರೋಗ್ಯವು ಕ್ಷೀಣಿಸಿದಂತೆ ಭಾಸವಾಗುವುದು. ನೀವು ಸಂಗಾತಿಯ ಜೊತೆ ಸಂತೋಷವನ್ನು ಹಂಚಿಕೊಳ್ಳುವಿರಿ. ತಾವು ಉಳಿದುಕೊಳ್ಳಲು ಯಾರ ಮೇಲೂ ಅನಗತ್ಯ ಆರೋಪ ಮಡಿಯಾರು. ಮಕ್ಕಳಿಗಸ ಸಂಬಂಧಿತ ವಿಚಾರದಲ್ಲಿ ಚಿಂತೆ ಬಗೆಹರಿಯುವ ಸಾಧ್ಯತೆ. ದಿನದ ಕೊನೆಗೆ ಮನಸ್ಸು ತೃಪ್ತಿ ಪಡಬಹುದು. ತಪ್ಪಾದ ವ್ಯಯದಿಂದ ಅನಂತರ ಬೇಸರವಾಗಲಿದೆ. ಕುಟುಂಬದಲ್ಲಿ ಕೆಲ ಮನಸ್ತಾಪಗಳಿದ್ದರೂ ನೀವು ಸಮತೋಲನ ಸಾಧಿಸುತ್ತೀರಿ. ಇಂದು ನಿಮ್ಮ ಕಠಿಣ ಪರಿಶ್ರಮವು ವ್ಯರ್ಥವಾಗಬಹುದು. ಹಿತಶತ್ರುಗಳಿಗೆ ನಿಮ್ಮ ಯಶಸ್ಸು ಸಹಿಸಲಾರರು. ಅರ್ಥವಿಲ್ಲದ ಚರ್ಚೆಗಳಲ್ಲಿ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಮನಸ್ಸನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ. ಇಂದು ನಿಮಗೆ ಯಾವುದೇ ತೊಂದರೆಯನ್ನು ತೆಗೆದುಕೊಳ್ಳಲು ಮನಸ್ಸು ಇರದು. ತೊಂದರೆಯಾಗುವುದು ಗೊತ್ತಿದ್ದರೂ ಬೇಕೆಂದೇ ಸಿಕ್ಕಿಹಾಕಿಕೊಳ್ಳುವಿರಿ. ವಿಷಯದಲ್ಲಿ ನೀವು ಗೊಂದಲವಿರಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡುವಿರಿ.
ಮೀನ ರಾಶಿ: ಪರಿಚಿತರು ಎದುರು ಸಿಕ್ಕರೂ ಅಪರಿಚಿತರಂತೆ ಇರಬಹುದು. ರಾಜಕೀಯ ಕ್ಷೇತ್ರದಲ್ಲಿ ಕಾದಾಟ, ವಾಗ್ವಾದಗಳು ಅಧಿಕವಾಗಿ ಇರಲಿವೆ. ನಿಮ್ಮ ಒರಟುತನದಿಂದ ದಾಂಪತ್ಯದಲ್ಲಿ ಕಲಹವಾಗುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ವಿದ್ಯಾಭ್ಯಾಸದಲ್ಲಿ ನೂರಕ್ಕೆ ನೂರು ಇದ್ದರೂ ಫಲಿತಾಂಶವು ಕೈಕೊಡಬಹುದು. ಹಿರಿಯರ ಸಲಹೆ ಕೇಳಿ ಮುಂದೆ ನಡೆಯುವುದು ಒಳಿತು. ಹಣಕಾಸು ವಿಚಾರದಲ್ಲಿ ಖರ್ಚಿನ ಮೇಲೆ ನಿಯಂತ್ರಣ ಇರಲಿ. ಮನೆಯವರಿಂದ ಹೆಚ್ಚಿನ ಆಶೀರ್ವಾದ ಹಾಗೂ ಬೆಂಬಲ ಸಿಗಲಿದೆ. ಪಾಲುದಾರಿಕೆಯಲ್ಲಿ ಬಂಡವಾಳವು ಕಡಿಮೆ ಇರುವುದು. ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಈ ದಿನ ನಿಮ್ಮ ಆರ್ಥಿಕ ಸ್ಥಿತಿಯನ್ನು ನೋಡಿಕೊಳ್ಳಿ ಮತ್ತು ಅಪರಿಚಿತರ ಜೊತೆ ಹಣದ ವ್ಯವಹಾರ ಮಾಡಬೇಡಿ. ಮೋಸಹೋಗುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿದ್ದು, ಹೂಡಿಕೆಯ ಕಡೆ ಗಮನವಿರುವುದು. ನಿಮ್ಮ ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ.
-ಲೋಹಿತ ಹೆಬ್ಬಾರ್-8762924271 (what’s app only)