
ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ದಶಮೀ ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಐಂದ್ರ, ಕರಣ : ತೈತಿಲ, ಸೂರ್ಯೋದಯ – 06 – 21 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:37 – 17:10, ಗುಳಿಕ ಕಾಲ 12:32 – 14:05, ಯಮಗಂಡ ಕಾಲ 09:27 – 10:59
ಮೇಷ ರಾಶಿ: :ಉದ್ಯಮದ ಸಹಕಾರಕ್ಕೆ ಸಮಾನ ಮನಸ್ಕರ ಜೊತೆ ಚರ್ಚೆ. ಮಕ್ಕಳ ವರ್ತನೆಗಳು ನಿಮಗೆ ಕಷ್ಟಕೊಡಬಹುದು. ಸಮಯಕ್ಕೆ ಬೆಲೆ ಕೊಟ್ಟು ಇಂದಿನ ಕೆಲಸವನ್ನು ಮಾಡಿ. ಧಾರ್ಮಿಕವಾಗಿ ನೀವು ಹೆಚ್ಚು ಆಸಕ್ತರಾಗಬೇಕಾಗುತ್ತದೆ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಹಾಯ ಸಿಗಲಿದೆ, ಕೇಳಿ ಪಡೆಯಿರಿ. ಮನೆಗೆ ಬಂದವರಿಗೆ ಯೋಗ್ಯ ಆತಿಥ್ಯ ನೀಡುವಿರಿ. ಅಧಿಕ ಖರ್ಚಿಗೆ ಇಂದು ಬಹಳ ಆತಂಕಪಡುವಿರಿ. ನಿಮ್ಮ ಬಳಿ ಸಹಾಯ ಕೇಳಿ ಬಂದರೆ ಇಲ್ಲವೆನ್ನಬೇಡಿ. ಕ್ರೀಡೆಯಲ್ಲಿ ಆರಂಭಿಕ ಆಘಾತವಾಗಲಿದೆ. ವ್ಯವಹಾರದಲ್ಲಿ ನಿಮಗೆ ಗೊತ್ತಿಲ್ಲದೇ ಮೋಸವಾಗಬಹುದು. ಆದಷ್ಟು ವಸ್ತುಸ್ಥಿತಿಯಂತೆ ಆಲೋಚಿಸಿ. ವಾಹನವನ್ನು ಚಲಾಯಿಸುವ ಎಚ್ಚರವಿರಲಿ. ಪ್ರೇಮ ಪ್ರಕರಣದಲ್ಲಿ ಯಾವ ವ್ಯತ್ಯಸವೂ ಆಗದೇ ನಿಮ್ಮ ನಿರೀಕ್ಷೆ ಹುಸಿಯಾಗಬಹುದು. ನಿಯಮ ಬದ್ಧತೆಯನ್ನು ಯಾರೂ ಪ್ರಶ್ನಿಸಲಾರರು. ನಿಮ್ಮ ತೊಂದರೆಗಳು ಇನ್ನೊಬ್ಬರ ಮೇಲೆ ಪರಿಣಾಮ ಬೀರುವುದು. ಮನೋರಂಜನೆಗೆ ನಿಮ್ಮದೇ ಆದ ದಾರಿಯನ್ನು ಹುಡುಕಿಕೊಳ್ಳುವಿರಿ.
ವೃಷಭ ರಾಶಿ: :ಪಕ್ಷದ ಪರಿವರ್ತನೆಯಿಂದ ನಿಮ್ಮವರ ಪಾಲಿಗೆ ನೀವು ಯಃಕಶ್ಚಿತ್ ನಂತೆ ತೋರುವಿರಿ. ಸ್ವಯಂಕೃತ ಅಪರಾಧಕ್ಕೆ ಬೇರೆಯವರನ್ನು ಬೊಟ್ಟುಮಾಡಿ ತೋರಿಸುವುದು ಬೇಡ. ಇಂದು ನೀವು ಎಲ್ಲರ ಮೇಲೂ ಸಿಟ್ಟು ಮಾಡಿಕೊಳ್ಳುವಿರಿ. ಮಾತಿಗೆ ಎದುರುತ್ತರ ಕೊಡುವಿರಿ. ಅಧಿಕಾರವು ಶಾಶ್ವತವಲ್ಲ ಎಂಬ ಮಾತು ನಿಮಗೆ ಕೇಳಿಸುತ್ತಿರಲಿ. ವಿವೇಚನೆಯನ್ನು ಕಳೆದುಕೊಂಡು ಇಂದಿನ ಮಾತುಕತೆಗಳು ತಾರಕಕ್ಕೆ ಹೋಗಬಹುದು. ನಿಮ್ಮ ಪರಾಕ್ರಮವು ಕೆಲಸದಲ್ಲಿ ಇರಲಿ. ಬಂಧುಗಳು ನಿಮ್ಮನ್ನು ದೂರವಿಡಬಹುದು. ವಾಹನ ಚಾಲನೆಯಲ್ಲಿ ಕಷ್ಟವಾಗಬಹುದು. ಸಾರ್ವಜನಿಕ ಕಾರ್ಯದಲ್ಲಿ ಅಪರೋಕ್ಷವಾಗಿ ಭಾಗಿ. ನಿಮ್ಮ ವಸ್ತುವನ್ನು ಇನ್ನೊಬ್ಬರ ಬಳಕೆಗೆ ಕೊಡಲಿದ್ದೀರಿ. ಇಂದು ಆರಾಮಾಗಿ ಇರಬೇಕೆಂದುಕೊಂಡಿದ್ದರೆ ಇರಲಾಗದು. ಕಛೇರಿಯಲ್ಲಿ ಒತ್ತಡದ ವಾತಾವರಣ ಇದ್ದಕಾರಣ ನಿಮ್ಮ ಪೂರ್ವಯೋಜನೆ ಸಫಲವಾಗದು. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು ಉಂಟಾಗಬಹದು.
ಮಿಥುನ ರಾಶಿ: :ದೇಹದ ಮೇಲೆ ವಿಪರೀತ ಪರಿಣಾಮ ಬೀರುವ ಆಹಾರವನ್ನು ನಿರ್ದಾಕ್ಷಿಣ್ಯದಿಂದ ದೂರವಿರಿಸಿ. ನಿಮ್ಮ ಉದ್ಯೋಗದ ಚಿಂತೆಯಿಂದ ಯಾವ ಪ್ರಯೋಜನವೂ ಆಗದು. ನಿಮ್ಮ ವೈಯಕ್ತಿಕ ಕೆಲಸಗಳೇ ಬಹಳ ಇರಲಿದ್ದು ಇನ್ನೊಂದರ ಕುರಿತು ಇಂದು ಯೋಚನೆ ಅಸಾಧ್ಯವಾದೀತು. ಕಾನೂನಾತ್ಮಕ ಹಾದಿಯಲ್ಲಿ ನಿಮಗೆ ಜಯ ಸಿಗುವ ನಿರೀಕ್ಷೆ ಇರುವುದು. ಇಂದು ನಿಮಗೆ ಸಿಕ್ಕ ಗೌರವವನ್ನು ಕಂಡು ಶತ್ರುಗಳು ಹುಟ್ಟಿಕೊಂಡಾರು. ಉದ್ಯೋಗವನ್ನು ಬದಸಲಿಸುವಿರಿ. ಕೇಳಿದಷ್ಟಕ್ಕೆ ಮಾತ್ರ ಉತ್ತರಿಸಿದರೆ ಸಾಕು. ಸರಳ ಜೀವನವನ್ನು ಇಷ್ಟಪಡುವಿರಿ. ಮುಖಕಾಂತಿಯ ಚಿಂತೆಗೆ ಪರಿಹಾರ ಲಭ್ಯ. ಹೊಸ ವಸ್ತ್ರಗಳನ್ನು ಖರೀದಿಮಾಡುವಿರಿ. ಇಂದು ನೀವು ಅನವಶ್ಯಕ ವಸ್ತುಗಳನ್ನು ಇಷ್ಟಪಡುವಿರಿ. ನಿಮ್ಮದೆಂದು ಹೇಳಿಕೊಳ್ಳುವ ವಸ್ತು ನಿಮ್ಮದಲ್ಲದೇ ಹೋಗಬಹುದು. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು.
ಕರ್ಕಾಟಕ ರಾಶಿ: :ಮನೆ ತೊರೆದ ಹೆಣ್ಣುಮಕ್ಕಳ ಮೇಲೆ ಪೋಷಕರಿಗೆ ಆತಂಕ. ಸಂಸಾರದ ಸೂಕ್ಷ್ಮತೆಗಳು ನಿಮಗೆ ಅರ್ಥವಾಗದು. ನಿಮಗೆ ಇಂದು ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ಸ್ಥಾನವು ಪ್ರಾಪ್ತಿಯಾಗಲಿದೆ. ಸಂಗಾತಿಯ ಮನೋಭಾವವನ್ನು ಪೂರ್ತಿಯಾಗಿ ತಿಳಿಯಲು ಸಾಧ್ಯವಾಗದು. ನಿಮ್ಮ ಕೆಳಗೆ ಕೆಲಸ ಮಾಡುವವರು ಸರಿಯಾಗಿ ನಿರ್ವಹಿಸದೇ ನೀವು ಅನಂತರ ಮಾಡಬೇಕಾದೀತು. ನೇರವಾಗಿ ದಾನ ಮಾಡಲಾಗದೇ ಇದ್ದರೂ ದೈವ ನಿಮ್ಮ ಕೈಯಿಂದ ಮಾಡಿಸುತ್ತದೆ. ನಿಮ್ಮ ಯೋಜನೆಯನ್ನು ಸರಿಯಾಗಿ ಪ್ರಸ್ತುತ ಪಡಿಸಿ. ದೇವರ ಮೇಲಿನ ನಂಬಿಕೆ ದೃಢವಾಗಿರಲಿ. ನೀವು ಇಷ್ಟಪಟ್ಟ ವಸ್ತುವನ್ನು ಇಂದು ಪಡೆಯುವಿರಿ. ನಿಮ್ಮ ಕೆಲಸವನ್ನು ತಪ್ಪಾಗುವುದು ಎಂಬ ಭಯದಿಂದ ಒಂಟಿಯಾಗಿ ಮಾಡಲು ಹಿಂಜರಿಯುವಿರಿ. ವ್ಯಕ್ತಿತ್ವವನ್ನು ನೋಡಿ ನಿಮ್ಮ ನಿರ್ಧಾರವು ಇರಲಿ. ಕೈಗೆ ಸಿಗದ ಹಣ್ಣು ಹುಳಿ ಎನ್ನುವುದು ಸಹಜವೇ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ.
ಸಿಂಹ ರಾಶಿ: :ಖಂಡಿಸುವ ಮನೋಭಾವ ಬೇಕಾದರೂ ಯಾರು ಯಾವ ವಿಚಾರವನ್ನು ಖಂಡಿಸಬೇಕು ಎನ್ನುವುದೂ ಮುಖ್ಯವೇ. ಮನೆಯ ತುರ್ತು ಕಾರ್ಯಗಳನ್ನು ಮಾಡಲು ಆಗದು. ಇಂದು ಆರಂಭಿಸಿದ ಕಾರ್ಯವನ್ನು ಮುಗಿಸುವ ಮನೋಭಾವದಲ್ಲಿ ಇರುವಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಸ್ವತಂತ್ರನಿರ್ಧಾರವನ್ನು ತೆಗೆದುಕೊಳ್ಳದೇ ಉದ್ಯೋಗಿಗಳ ಅಭಿಪ್ರಾಯವನ್ನೂ ಕಲೆಹಾಕಿ ಅಂತಿಮನಿರ್ಧಾರಕ್ಕೆ ಬರುವುದು ಉತ್ತಮ. ಸಂಗಾತಿಯ ಬೇಸರವನ್ನು ಸರಿಮಾಡುವಿರಿ. ದಾಂಪತ್ಯದಲ್ಲಿನ ಒಡಕು ಎಲ್ಲರಿಗೂ ಗೊತ್ತಾಗಂತೆ ಸರಿ ಮಾಡಿಕೊಳ್ಳಬೇಕಾಗಬಹುದು. ಆಕಸ್ಮಿಕ ವಾರ್ತೆಯು ನಿಮಗೆ ಆಚ್ಚರಿಯನ್ನು ತಂದೀತು. ನಿಮ್ಮ ಕನಸಿಗೆ ಮನೆಯವರು ದಿಗ್ಭ್ರಾಂತರಾಗಬಹುದು. ಯಾರದೋ ತಪ್ಪಿಗೆ ನೀವು ಉತ್ತರಿಸಬೇಕಾದೀತು. ವಿದೇಶಿ ಕಂಪೆನಿಯಲ್ಲಿ ನೀವು ಕೆಲಸಕ್ಕೆ ಸೇರುವಿರಿ. ಸಮಸ್ಯೆಗಳು ಬರುವ ಮೊದಲೇ ನೀವು ಎಚ್ಚೆತ್ತುಕೊಳ್ಳುವುದು ಉತ್ತಮ. ನಿಮ್ಮ ಪ್ರಯಾಣವು ತೊಂದರೆಯಿಂದ ಕೂಡಿರಲಿದೆ. ನಿಮ್ಮವರು ಇದನ್ನು ಅಪಹಾಸ್ಯ ಮಾಡುವರು. ಸಣ್ಣ ಪ್ರಯಾಣದಿಂದಲೂ ಆಯಾಸ.
ಕನ್ಯಾ ರಾಶಿ: :ಅಸೂಯಯಿಂದ ನಿಮ್ಮ ಮನಸ್ಸಿಗೆ ತೊಂದರೆ ವಿನಃ ಅನ್ಯರಿಗೆ ಯಾವ ಪರಿಣಾಮವೂ ಆಗದು. ಕೆಲವು ಒಪ್ಪಂದಗಳು ನಿಮ್ಮ ವ್ಯಾಪರಕ್ಕೆ ಒಳ್ಳೆಯದು. ಸಮಯ ಮಿತಿಯಲ್ಲಿ ಮಾಡಿಕೊಳ್ಳಬಹುದು. ಇಂದು ನಿಮ್ಮ ಕಾರ್ಯಕ್ಷೇತ್ರವನ್ನು ಉತ್ತಮ ಮಾಡಿಕೊಳ್ಳುವುದು ಹೊಣೆಗಾರಿಕೆ ಆಗುವುದು. ಆರ್ಥಿಕವಾದ ನಷ್ಟವನ್ನು ಸರಿಮಾಡಿಕೊಳ್ಳಲು ನೀವು ಉದ್ಯೋಗವನ್ನು ಬದಲಿಸುವಿರಿ. ವಾದದಲ್ಲಿ ನೀವು ಸೋಲುವ ಸಾಧ್ಯತೆ ಇದ್ದು, ಗೆಲ್ಲಲು ನಿಮ್ಮ ಪರಿಶ್ರಮವು ಅಧಿಕವಾಗಲಿದೆ. ಯಾರ ಮೇಲೂ ಸುಮ್ಮನೆ ಸವಾರಿ ಮಾಡುವುದು ಬೇಡ. ನಿಮ್ಮನ್ನು ಪೂರ್ವಪುಣ್ಯವು ಕಾಪಾಡುವುದು. ಸದ್ಯಕ್ಕೆ ಸಿಕ್ಕ ಉದ್ಯೋಗವನ್ನು ಅಚ್ಚುಕಟ್ಟಾಗಿ ಮಾಡಿರಿ. ಸರ್ಕಾರಿ ಉದ್ಯೋಗಿಗಳಿಗೆ ಶುಭ ಸುದ್ದಿ ಸಿಗಲಿದೆ. ವಿದೇಶವನ್ನು ತೊರೆಯುವ ಸಂದರ್ಭ ಕಾರಣಾಂತರಗಳಿಂದ ನಿರ್ಮಾಣವಾಗಲಿದೆ. ಉಳಿತಾಯದ ಬಗ್ಗೆ ಸಂಗಾತಿಯು ಗಮನಸುವರು. ವ್ಯಾಪಾರದ ನಷ್ಟವನ್ನು ಹೇಗಾದರೂ ತೂಗಿಸಿಕೊಳ್ಳುವಿರಿ. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿಂದಿಸಬಹುದು.
ತುಲಾ ರಾಶಿ: :ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ಮಾಡುವ ಬದಲು ಚಿಂತೆಮಾಡುವಂತಾಗಿದೆ. ನಿಮ್ಮ ಮಾತನಂತೆ ನಡೆಯುತ್ತಿಲ್ಲ ಎಂಬ ಬೇಸರ ಇರುವುದು. ಇಂದು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅತಿಯಾದ ಭಯವು ಕಾಡಬಹುದು. ನಿಮ್ಮಿಂದ ಆಗದ ಕೆಲಸವನ್ನು ಮತ್ತೆ ಮತ್ತೆ ಮಾಇನ್ನೊಬ್ಬರಅಪಮಾನಕ್ಕೆ ಒಳಗಾಗಬೇಡಿ. ಆರ್ಥಿಕ ವಿಭಾಗದಲ್ಲಿ ಕಾರ್ಯ ಮಾಡುವವರಿಗೆ ತೊಂದರೆಗಳು ಬರಬಹುದು. ಏಕಾಗ್ರತೆಯಿಂದ ಇರಲು ನಿಮಗೆ ಕಷ್ಟವಾದೀತು. ಕೆಲಸಕ್ಕಾಗಿ ಬಹಳ ಸಮಯ ಕಾಯಬೇಕಾಗಬಹುದು. ಅದರೂ ಇಂದೇ ಆಗುತ್ತದೆ ಎಂಬ ನಿರೀಕ್ಷೆ ಬೇಡ. ಅಪರಿತ ವೃತ್ತಿಯಲ್ಲಿ ಉದ್ಯೋಗ ಪಡೆಯುವ ಉಮೇದು ಬರಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹಿಂದಿಸುವಿರಿ. ನಿಮ್ಮ ಯೋಜನೆಗಳು ಮುಂದಕ್ಕೆ ಹೋಗಬಹುದು. ಮಿತ್ರರಿಂದ ಸಹಾಯವನ್ನು ಪಡೆದು ನಿಮಗೆ ಆಗುವ ವ್ಯವಹಾರವನ್ನು ಮಾಡಿಲೊಳ್ಳುವಿರಿ. ಬಹಳ ದಿನಗಳ ಅನಂತರ ಸಹೋದರನ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳು ಬಹಳ ಸೋಮಸರಿಗಳಾಗುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳುವಿರಿ.
ವೃಶ್ಚಿಕ ರಾಶಿ: :ಕಾಲಿನ ನೋವಿಗೆ ಆಧುನಿಕ ವೈದ್ಯ ಪದ್ಧತಿಗಿಂತ ಆಯುರ್ವೇದವೇ ವಿಳಂಬವಾದರೂ ನಿಮಗೆ ಮುಖ್ಯ. ಇಂದು ಅಶಕ್ತರ ಬಗ್ಗೆ ಕರುಣೆ ಹೆಚ್ಚುವುದು. ಇಂದು ನಿಮ್ಮ ಮನಸ್ಸನ್ನು ಕದಡಲೆಂದು ಕೆಲವರು ತಯಾರಿ ಮಾಡಬಹುದು. ನಿಮ್ಮ ಸಂಕಟವನ್ನು ಪರಿಹರಿಸಿಕೊಳ್ಳಲು ದೈವದ ಮೊರೆ ಹೊಗುವಿರಿ. ದೂರದ ಬಂಧುಗಳ ನಿಮ್ಮನ್ನು ಭೇಟಿಯಾಗಬಹುದು. ನಿಮ್ಮ ಕೆಲಸಕ್ಕೆ ಸಮಜಾಯಿಷಿ ಕೊಡಲು ಹೋಗುವಿರಿ. ನಿಮ್ಮ ವಿದೇಶಕ್ಕೆ ಹೋಗುವ ಕನಸು ನನಸಾಗುವ ಸಾಧ್ಯತೆ ಇದೆ. ನಿಮ್ಮ ಯಶಸ್ಸು ಕುಂಟಿತವಾಗಲಿದೆ. ಸುಳ್ಳನ್ನು ಹೇಳಿ ಸತ್ಯವನ್ನು ಮುಚ್ಚಿಡುವಿರಿ. ನಿಮ್ಮ ಕಾಮಗಾರಿಗಳ ಪರಿಚಯವನ್ನು ಮಾಡಬೇಕಾಗುವುದು. ನೋವಾಗುವಂತೆ ನೀವು ಮಾತನಾಡುವಿರಿ. ಯಾರ ಸಲಹೆಯನ್ನೂ ಕೇಳದೇ ಹೂಡಿಕೆ ಮಾಡುವಿರಿ. ಉಳಿಸಿಕೊಂಡ ಕೆಲಸವನ್ನು ವಿರಾಮಪಡೆದು ಪೂರೈಸುವಿರಿ. ಕೆಲಸವಿಲ್ಲದೇ ಮನೆಯಲ್ಲಿ ಕುಳಿತುಕೊಂಡು ಬೇಸರವಾಗಲಿದೆ. ದಾಂಪತ್ಯದಲ್ಲಿ ಕೆಲವು ಜೀರ್ಣವಾಗದ ಮಾತುಗಳನ್ನು ಕೇಳುವಿರಿ. ಸ್ವಲ್ಪ ವಿಳಂಬ ಮಾಡಿ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು.
ಧನು ರಾಶಿ: :ಸಂಸ್ಥೆಯ ಮುಂದಾಳುತ್ವ ವಹಿಸಲು ಹೊಸಬರನ್ನು ಹುಡುಕುವಿರಿ. ಹೆಚ್ಚು ಶ್ರಮ ಹಾಗು ಕಡಿಮೆ ಆದಾಯದಿಂದ ನೀವು ತೃಪ್ತರಾಗಬೇಕಾಗುವುದು. ಇಂದು ಯಾವ ಕಾರ್ಯವನ್ನು ಮಾಡುವಾಗಲೂ ಉದ್ವೇಗಪಡುವ ಅಗತ್ಯ ಇರದು. ನಿಮ್ಮ ಸ್ನೇಹಿತರ ಬಳಗ ದೊಡ್ಡದಿದ್ದು ಎಲ್ಲರಿಗೂ ಸಂತೋಷವನ್ನು ಕೊಡುವಿರಿ. ಅಪರಿಚಿತ ಊರಿಗೆ ಹೋಗಿ ಸ್ವಲ್ಪ ಕಷ್ಟವಾದೀತು. ವೃತ್ತಿಯಲ್ಲಿ ಸಹಯೋಗದಿಂದ ಕಾರ್ಯವನ್ನು ಮಾಡುವಿರಿ. ಆದರೆ ಅದರ ಹೆಸರನ್ನು ನೀವು ಮಾತ್ರ ಪಡೆಯುವಿರಿ. ಮನೆಯಿಂದ ಅಶುಭವಾರ್ತೆಯು ಬರಬಹುದು. ರಾಜಕೀಯದಿಂದ ಪ್ರೇರಣೆಪಡಯುವ ಸಾಧ್ಯತೆ. ಸಣ್ಣ ವಿಚಾರಕ್ಕೆ ಕೋಪ ಮಾಡಿಕೊಂಡು ಎಲ್ಲರ ಜೊತೆ ಕಲಹ. ಮಕ್ಕಳು ನಿಮ್ಮ ಬಳಿ ಏನನ್ನಾದರೂ ಹೇಳಿಕೊಳ್ಳಲು ಬಯಸಬಹುದು. ಅದನ್ನು ಆಲಿಸಿ. ವಿದೇಶದಿಂದ ಸ್ವದೇಶಕ್ಕೆ ಬರಲು ಇಚ್ಛಿಸುವಿರಿ. ಅಪರಿಚಿತರು ಆಪ್ತರಾಗುವ ಸಾಧ್ಯತೆ ಇದೆ. ಪ್ರತಿಭಾ ಪ್ರದರ್ಶನಕ್ಕೆ ಪೂರ್ವಸಿದ್ಧತೆ ಕಷ್ಟವಾದೀತು. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು.
ಮಕರ ರಾಶಿ: :ನಿಮಗೆ ಹೊಗಳಿಸಿಕೊಳ್ಳುವುದು ಪ್ರಿಯವಾಗಲಿದೆ. ನಿಮ್ಮ ಅಧಿಕಾರವನ್ನು ಹಿಡಿತಕ್ಕೆ ತಂದುಕೊಳ್ಳುವದೇ ಸಾಹಸವಾಗಬಹುದು. ಇಂದು ನಿಮ್ಮ ಸಂಗಾತಿಯು ನಿಮಗೆ ಪ್ರಿಯವಾದುದನ್ನೇ ಮಾಡುವರು. ಸರ್ಕಾರಿ ಕೆಲಸಗಳು ನಿಧಾನವಾಗಿ ಮುಂದುವರಿಯುವುದು. ಕೆಲವು ನಿಮಗೆ ಬಂಧನ ಎನಿಸಬಹುದು. ಕಛೇರಿಯಲ್ಲಿ ನಿಮ್ಮ ಸಾಮರ್ಥ್ಯವು ಅರ್ಥವಾಗುವುದು. ಹಳೆಯ ಘಟನೆಗಳು ಮರೆತುಹೋಗುವ ಸಾಧ್ಯತೆ ಇದೆ. ನೀವು ಹೆಚ್ಚಿನ ಮಾರ್ಗದರ್ಶನವನ್ನು ಹಿರಿಯರಿಂದ ಬಯಸುವಿರಿ. ಬಹುಮಾನ್ಯವಾಗುವುದು ಮನೆಯವರಿಗೆ ಇಷ್ಟವಾಗದು. ಕಳೆದುಹೋದುದರ ಬಗ್ಗೆ ಬಹಳ ಚಿಂತನೆಯನ್ನು ಮಾಡುವಿರಿ. ನಿಮ್ಮವರನ್ನು ದೂರವಿಟ್ಟು ಕಾರ್ಯವನ್ನು ಮಾಡಬೇಕಾಗುವುದು. ಸಂಗಾತಿಯ ಕಡೆಯಿಂದ ಪ್ರೀತಿಯು ಸಿಗಲಿದೆ. ನಿಮ್ಮ ನಿಲುವನ್ನು ಬದಲಿಸಿಕೊಳ್ಳಲು ಇಚ್ಛಿಸುವುದಿಲ್ಲ. ನಿಮ್ಮ ಸಂದರ್ಭೋಚಿತ ಸಲಹೆಯನ್ನು ಸ್ವೀಕರಿಸುವರು. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ.
ಕುಂಭ ರಾಶಿ: :ಬಲವಂತಕ್ಕೆ ಸಿಲುಕಿ ತಪ್ಪು ಮಾಡುವಿರಿ. ನಿಮ್ಮ ನೋವುಗಳನ್ನು ಹೇಳಿಕೊಂಡು ಕಡಿಮೆ ಮಾಡಿಕೊಳ್ಳಬಹುದು. ಇಂದಿನ ನಿಮ್ಮ ಹೂಡಿಕೆ ನಿಮಗೆ ಬಹು ಉಪಕಾರಿ. ಒಂದುಷ್ಟು ಶಿಸ್ತಿನಿಂದ ನೀವು ಇರಬೇಕಾದೀತು. ನಿಮ್ಮ ಗಂಭೀರವಾದ ನಡೆಯು ಕೆಲವರಿಗೆ ಕಷ್ಟವಾಗಬಹುದು. ಮಕ್ಕಳ ಮೇಲೆ ನಿಮ್ಮ ಗಮನವಿರಲಿ. ದೂರ ಬಂಧುಗಳು ನಿಮ್ಮನ್ನು ಭೇಟಿಯಾಗಲು ಬರುವರು. ನಿಮ್ಮ ಮಾತಿನಿಂದ ಸಂತೋಷಪಡುವರು. ನಿಮ್ಮ ಮೇಲೆ ಆರೋಪ ಬಂದಾಗ ಜಾರಿಕೊಳ್ಳುವುದು ಬೇಡ. ಪುಣ್ಯಸ್ಥಳಗಳಿಗೆ ಹೋಗುವಿರಿ. ಉತ್ತಮ ಉದ್ಯೋಗವನ್ನು ಬಿಟ್ಟುಕೊಳ್ಳುವಿರಿ. ಯಾರ ಮಾತಿಗೂ ಗೌರವವನ್ನು ಕೊಡದೇ ನಿಮ್ಮದೇ ಚಿಂತನೆಯಲ್ಲಿ ಇರುವಿರಿ. ಸ್ವಭಾವವನ್ನು ಬದಲಿಸಿಕೊಳ್ಳಬೇಕಾದೀತು. ಆರ್ಥಿಕ ಅಭಾವವನ್ನು ನೀವು ಯಾರ ಬಳಿಯೂ ಹೇಳುವುದು ಬೇಡ. ವಾಹನದ ವಿಚಾರಕ್ಕೆ ದಂಪತಿಗಳ ನಡುವೆ ಕಲಹವಾಗಬಹುದು. ಕಳೆದುಕೊಂಡ ವಸ್ತುವನ್ನು ಅಲ್ಲಿಯೇ ಪಡೆಯಲಿದ್ದೀರಿ.
ಮೀನ ರಾಶಿ: :ಸಂಪೂರ್ಣ ಕಾಮಗಾರಿಯ ಗುತ್ತಿಗೆ ಪಡೆಯುವ ಅವಕಾಶ ಪ್ರಾಪ್ತಿ. ನಿಮ್ಮ ಆತುರದ ಕಾರಣ ನಿಮ್ಮ ಜೊತೆ ಇತರರು ವ್ಯವಹರಿಸುವುದು ಕಷ್ಟವಾಗಲಿದೆ. ಇಂದಿನ ನಿಮ್ಮ ಪ್ರಯಾಣದಿಂದ ನಷ್ಟವಾಗುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಆರ್ಥಿಕ ನಷ್ಟವಾಗಬಹುದು. ಕಲಾವಿದರಿಗೆ ಹೆಚ್ಚು ಅನುಕೂಲವಾಗಲಿದೆ. ಪಾಲುದಾರಿಕೆಯಲ್ಲಿ ಸರಿಯಾದ ನಿಯಮಗಳನ್ನು ರೂಪಿಸಿಕೊಳ್ಳಿ. ಪರರ ಮೋಹಕ್ಕೆ ಸಿಲುಕಿ ಅತಂತ್ರವಾಗಬಹುದು. ಹೊಸ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ. ಸಣ್ಣ ಮೊತ್ತವನ್ನಾದರೂ ಕೂಡಿಡುವುದು ಉತ್ತಮ. ನಿಮ್ಮೆದುರು ಆಗುವ ಎಲ್ಲ ಘಟನೆಗಳನ್ನು ಸಮಾಧಾನ ಚಿತ್ತದಿಂದ ಗಮನಿಸಿ. ದೈವದಲ್ಲಿ ಹೆಚ್ಚು ವಿಶ್ವಾಸವಿಟ್ಟು ಮುಂದೆ ಹೆಜ್ಜೆ ಇಡಿ. ಗಳಿಸಿದ್ದನ್ನು ಕಳೆದುಕೊಳ್ಳುವಾಗ ಯೋಚಿಸಿ. ಕೆಲವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಅವಶ್ಯಕತೆ ಇದ್ದರೆ ಮಾತ್ರ ಮುಂದುವರಿಯುವುದು ಉತ್ತಮ. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ.
-ಲೋಹಿತ ಹೆಬ್ಬಾರ್ – 8762924271 (what’s app only)
Published On - 2:45 am, Tue, 2 September 25