Horoscope Today 30 November: ಈ ರಾಶಿಯವರಿಗೆ ಇಂದು ಲಾಭದಾಯಕ ದಿನವಾಗಿರಲಿದೆ

ದಿನ ಭವಿಷ್ಯ, 30 ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ದಶಮೀ ತಿಥಿ ಭಾನುವಾರ ಅಸಹಾಯದ ಕೊರಗು, ಒಂದಿಲ್ಲ ಕಲಹ, ಸ್ವವಲಂಬನೆ, ಖಾಸಗಿ ವ್ಯವಹಾರ, ಅಪ್ರತಿಕ್ಷಿತ ಸುಖ, ಅಸಾಧ್ಯತೆಯ ಸಾಧ್ಯ ಇವೆಲ್ಲ ಇಂದಿನ ಭವಿಷ್ಯ.

Horoscope Today 30 November: ಈ ರಾಶಿಯವರಿಗೆ ಇಂದು ಲಾಭದಾಯಕ ದಿನವಾಗಿರಲಿದೆ
Daily Astrology
Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2025 | 12:02 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಭಾನು ಪಕ್ಷ : ಶುಕ್ಲ, ತಿಥಿ : ದಶಮೀ, ನಿತ್ಯನಕ್ಷತ್ರ : ರೇವತೀ, ಯೋಗ : ಹರ್ಷಣ, ಕರಣ : ತೈತಿಲ, ಸೂರ್ಯೋದಯ – 06 – 26 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:25 – 17:50, ಯಮಗಂಡ ಕಾಲ 12:08 – 13:34, ಗುಳಿಕ ಕಾಲ 14:59 – 16:25

ಮೇಷ ರಾಶಿ: ಆಧ್ಯಾತ್ಮಿಕ ಚಿಂತನದಲ್ಲಿ ಹೆಚ್ಚು ಸಮಯ. ಹಣಕಾಸಿನಲ್ಲಿ ಸಣ್ಣ ಲಾಭ. ಒಬ್ಬ ಹಿರಿಯರ ಮೃದು ಮಾತು ನಿಮ್ಮ ದಿನಕ್ಕೆ ನಿಜವಾದ ಆಶೀರ್ವಾದವಾಗುತ್ತದೆ. ಎಲ್ಲವನ್ನೂ ನೀವು ಪ್ರೀತಿಯಿಂದ ವಿಶ್ವಾಸದಿಂದ ಪಡೆಯಲಾಗದು. ಯಾರ ಬೆಂಬಲಕ್ಕೂ ನೀವು ಸುಮ್ಮನೇ ಇರಲಾರಿರಿ. ಯಾರಾದರೂ ನಿಮ್ಮನ್ನು ಎಚ್ಚರಿಸುವರು. ನಿಮ್ಮ ಬಗ್ಗೆ ಸರಿಯಾಗಿ ತಿಳಿಹೇಳುವರು. ಸಿಟ್ಟಾಗುವ ಸ್ಥಿತಿಯಲ್ಲಿಯೂ ನೀವು ಶಾಂತರಾಗುವಿರಿ. ಮನೆಯ ಕೆಲಸವೆಲ್ಲವೂ ಹಾಗೆಯೇ ಇರಿಸಿಕೊಂಡು ಬಂಧುಗಳ ಮನೆಗೆ ಹೋಗಲಿದ್ದೀರಿ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಉದ್ಯಮದಲ್ಲಿ ಆದಾಯವನ್ನು ಹೆಚ್ಚಿಸಲು ನೌಕರರ ಜೊತೆ ಮಾತನಾಡುವಿರಿ. ಕಲಾ, ಸಾಹಿತ್ಯ, ಸಂಗೀತ ಎಲ್ಲವೂ ನಿಮ್ಮ ಮನಸ್ಸನ್ನು ಮಧುರವಾಗಿ ಮುಟ್ಟುವ ದಿನ. ಮನೆಯ ಕಾರ್ಯವನ್ನು ಸರಿದೂಗಿಸುವು ನಿಮಗೆ ಕಷ್ಟ ಎನಿಸಬಹುದು. ಕಟ್ಟಡವನ್ನು ನಿರ್ಮಾಣದವರಿಗೆ ದೊಡ್ಡ ಯೋಜನೆ ಸಿಗಲಿದೆ. ಒಳ್ಳೆಯ ಗುಣವೇ ನಿಮ್ಮನ್ನು ಸಾಕಬಹುದು. ಹಣದ ಲೆಕ್ಕಾಚಾರದಲ್ಲಿ ನಿಮಗೆ ಮೋಸವಾದುದ್ದು ತಿಳಿದುಬರುವುದು.

ವೃಷಭ ರಾಶಿ: ಕಾರ್ಯದಲ್ಲಿ ನಿಮ್ಮ ವಿಭಿನ್ನ ಚಿಂತನೆ ಮೆಚ್ಚುಗೆ ಗಳಿಸುತ್ತದೆ. ಸ್ನೇಹಿತರೊಂದಿಗೆ ಉತ್ತಮ ಸಮಯ. ಚೈತನ್ಯ ಹೆಚ್ಚಿ ದಿನ ತುಂಬಾ ಲಾಭಕರವಾಗಿರುತ್ತದೆ. ಕೆಲವು ಸುದ್ದಿಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಅಪರಿಚಿತ ವ್ಯಕ್ತಿಗಳು ನಿಮಗೆ ಬಹಳ ಆಪ್ತರಾಗುವರು. ಉದ್ಯೋಗದ ಕಾರಣಕ್ಕೆ ಮಾಡಿದ ಪ್ರಯಾಣದಿಂದ ಆಯಾಸವಾಗುವುದು. ಆರ್ಥಿಕ ತೊಂದರೆಯನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವಿರಿ. ಕಾನೂನಿಗೆ ವಿದ್ಧವಾದ ಕಾರ್ಯವನ್ನು ಸಮರ್ಥಿಸಿಕೊಳ್ಳುವಿರಿ. ಸಂಗಾತಿಯ ಮಾತುಗಳು ಘಟನೆಯಿಂದ ನಿಮಗೆ ಬಹಳ ಬೇಸರ ತರಿಸಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹಿತರನ್ನು ಸಂಪಾದಿಸಿಕೊಳ್ಳುವಿರಿ. ಕೇಳದೆಯೇ ಕೊಡುವುದು ನಿಮ್ಮ ಗುಣ. ಮನಸ್ಸಿನಲ್ಲಿ ದೀರ್ಘಕಾಲದ ಯೋಜನೆ ಸ್ಪಷ್ಟವಾಗುತ್ತದೆ. ಅಪ್ರತೀಕ್ಷಿತ ಸುಖ ಲಭ್ಯ. ಹೂಡಕೆಯ ಹಣದಲ್ಲಿ ತೊಡಕಾಗಬಹುದು. ಸರ್ಕಾರದಿಂದ ಬರುವ ಹಣವು ಬಾರದೇ ಇರುವುದು. ನಿಮ್ಮ ಇಂದಿನ ಕಾರ್ಯವು ಪೂರ್ವಯೋಜನೆಯಂತೆ ನಡೆಯದು. ಅಪರೂಪದ ಬಂಧುಗಳು ಸಿಗುವರು. ನಿಮ್ಮ ವೈಯಕ್ತಿಕ ಕಾರ್ಯಗಳು ಹಲವು ಹಾಗಯೇ ಉಳಿದುಕೊಂಡಿರುವುದು.

ಮಿಥುನ ರಾಶಿ: ಕಾರ್ಯಸ್ಥಳದಲ್ಲಿ ನಿಮ್ಮ ನಿಶ್ಚಲ ಮನೋಭಾವ ಯಶಸ್ಸನ್ನು ತರುತ್ತದೆ. ಮನೆಯಲ್ಲಿ ಒಳ್ಳೆಯ ಸಂಗತಿ. ದೈವಾನುಗ್ರಹದಿಂದ ಮನಸ್ಸು ಶಾಂತವಾಗುವುದು. ಕಛೇರಿಯಲ್ಲಿ ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲುವಂತೆ ಇರಿ. ಸಂಗಾತಿಯ ಜೊತೆ ಕಲಹದ ಕಾರಣ ಎಲ್ಲವೂ ಅಸ್ತವ್ಯಸ್ತ ಆಗಬಹುದು.‌ ಕೆಲವು ತೊಂದರೆಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗುವುದು. ಮನೆಯ ನವೀಕರಣದ ಬಗ್ಗೆ ಆಲೋಚಿಸುವಿರಿ. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ಖಾಸಗಿ ಸಂಸ್ಥೆಯು ನಿಮ್ಮ ಕಾರ್ಯಕ್ಕೆ ಉನ್ನತ ಸ್ಥಾನವನ್ನು ಕೊಡುವುದು. ನಿಮ್ಮ ಮತ್ತು ನೌಕರರ ನಡುವಿನ ಸಂಬಂಧವು ಚೆನ್ನಾಗಿ ಇರದು. ಪರಿಶ್ರಮದ ಫಲಗಳು ಸ್ಪಷ್ಟವಾಗಿ ಕಾಣುವ ದಿನ. ಹಿರಿಯರಿಂದ ಗೌರವ, ಮಾತುಗಳಿಗೆ ತೂಕ. ಹಣಕಾಸಿನಲ್ಲಿ ಸ್ಥಿರತೆ ಹಾಗೂ ನಿರೀಕ್ಷಿತ ಆದಾಯ.

ಕರ್ಕಾಟಕ ರಾಶಿ: ಯೋಚನೆಗಳಿಗೆ ದೈವ ಪ್ರೇರಣೆ ಸಿಕ್ಕಂತಾಗುತ್ತದೆ. ಹಳೆಯ ಸಂಕಟ ನಿವಾರಣೆಗೆ ಅವಕಾಶ. ವ್ಯಾಪಾರದಲ್ಲಿ ಹೊಸ ಪ್ರಾರಂಭದ ಯೋಗ. ಮನೆಗೆ ಬಂದವರನ್ನು ಬರಿದಾಗಿ ಕಳುಹಿಸುವುದು ಬೇಡ. ಇಂದು ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ನಿಮ್ಮ ನಿಧಾನಗತಿಯನ್ನು ಬದಲಿಸಿಕೊಳ್ಳಿ. ನಿಮ್ಮ ಇಂದಿನ ಮಾತು ಕೇಳುಗರಿಗೆ ಹೃದ್ಯವಾಗಬಹುದು. ಅಗ್ನಿಯ ಭೀತಿಯು ನಿಮಗೆ ಅಧಿಕವಾಗಿ ಕಾಡುವುದು. ಮೊದಲು ಆರ್ಥಿಕ ಲಾಭವನ್ನು ನಿರೀಕ್ಷಿಸದೇ ಕಾರ್ಯವನ್ನು ಆರಂಭಿಸಿ. ಯಾವುದೇ ನಿರ್ಧಾರಕ್ಕೆ ಬರುವುದು ಸಾಧ್ಯವಾಗದು. ಗೊಂದಲು ಹೆಚ್ಚಿರುವುದು. ನೀವು ಊಹಿಸದ ಸ್ಥಿತಿ ನಿಮ್ಮ ಕಣ್ಣೆದುರು ಬರಬಹುದು. ಗಂಭೀರವಾದ ಚಿಂತನೆಯನ್ನು ಮಾಡಲು ಮನಸ್ಸು ಸ್ತಿಮಿತದಲ್ಲಿ ಇರದು. ದೂರಸಂಪರ್ಕ ಇಂದು ಪ್ರಯೋಜನಕಾರಿ. ನಿಮ್ಮ ಚುರುಕುತನದಿಂದ ಸಮಸ್ಯೆಗಳು ಬಗೆಹರಿಯುತ್ತವೆ. ಚಿಕ್ಕ ಕೆಲಸವೇ ದೊಡ್ಡ ಫಲ ನೀಡುವ ಅದೃಷ್ಟ ಕಾಲ.

ಸಿಂಹ ರಾಶಿ: ಜೀವನದ ಗಂಭೀರ ವಿಚಾರಗಳ ಬಗ್ಗೆ ಚರ್ಚೆ. ಬಹಳ ದಿನದ ಒಂದು ಆಸೆ ಪೂರ್ಣಗೊಳ್ಳುವ ಸಾಧ್ಯತೆ. ಆರ್ಥಿಕ ವಿಚಾರಗಳಲ್ಲಿ ಜಾಣ ನಿರ್ಧಾರದಿಂದ ಲಾಭ. ಎಷ್ಟೇ ಬೇಸರವಾದರೂ ನಿಮ್ಮ ಕಾರ್ಯವನ್ನು ಬಿಡುವಂತಿಲ್ಲ. ಜವಾಬ್ದಾರಿಯ ಸ್ಥಾನದಲ್ಲಿ ಇದ್ದು ನೀವು ವರ್ತಿಸಬೇಕಾಗುವುದು. ಉದ್ಯಮವು ಹಳಿಯನ್ನು ತಪ್ಪಿದಂತೆ ಕಾಣಿಸುವುದು. ಹೊರದೇಶಕ್ಕೆ ನೀವು ಹೋಗಬೇಕಾದ ಸಂದರ್ಭವನ್ನು ಸೃಷ್ಟಿಸಿಕೊಳ್ಳುವಿರಿ. ಅಪರಿಚಿತರ ಜೊತೆ ಸಿಕ್ಕಿ ಮಾನಸಿಕ ಹಿಂಸೆಯನ್ನು ಪಡುವಿರಿ. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು. ಆರ್ಥಿಕ ಬಲವನ್ನು ನೋಡಿ ಖರ್ಚಿನ ನಿರ್ಧಾರವನ್ನು ಮಾಡಿ. ಸ್ನೇಹಿತರು ನಿಮ್ಮ ಬಳಿ ಆರ್ಥಿಕ ಸಹಾಯವನ್ನು ಕೇಳುವರು. ಸ್ತ್ರೀಯರಿಂದ ನಿಮಗೆ ಬೇಕಾದ ಸಹಾಯವು ಸಿಗದೇಹೋಗಬಹುದು. ನಿಮ್ಮ ಭಾವಜೀವನಕ್ಕೆ ಹೊಸ ದಿಕ್ಕು ಸಿಗುವ ಸೂಚನೆ. ಅಧ್ಯಾತ್ಮ ಚಿಂತನೆ ಹೆಚ್ಚಿದ್ದು ಮನಸ್ಸಿಗೂ ಭದ್ರತೆ. ‌ನಾಚಿಕೆಯ ಸ್ವಭಾವವು ನಿಮ್ಮ ಅವಕಾಶಗಳನ್ನು ಹಾಳುಮಾಡಬಹುದು.

ಕನ್ಯಾ ರಾಶಿ: ಸೃಜನಶೀಲತೆ ಬೆಳೆಯುತ್ತ, ಕಲಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು. ಹಣಕಾಸಿನಲ್ಲಿ ಸಣ್ಣದಾದ ಸುಧಾರಣೆ, ಹೊಸ ಅವಕಾಶಗಳ ಸುಳಿವು ಕಾಣಿಸಿಕೊಳ್ಳುತ್ತದೆ. ಪ್ರಭಾವೀ ವ್ಯಕ್ತಿಗಳ ಸಂಪರ್ಕವು ಯಾರದೋ ಮೂಲಕ ಸಿಗುವುದು. ಇಂದು ಎಲ್ಲರಿಗೂ ನೀವು ಇಷ್ಟವಾಗುವಿರಿ. ಕಲಾತ್ಮಕ ವಿಚಾರದಲ್ಲಿ ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ನಿರ್ಧಾರವನ್ನು ಇನ್ನೊಬ್ಬರ ಮೇಲೆ‌ ಹೇರುವುದು ಬೇಡ. ಎಲ್ಲರ ಮೇಲೂ ಹಿಡಿತ ಸಾಧಿಸುವುದು ಅಶಕ್ಯ. ಮೋಹವೇ ನಿಮ್ಮ ಸಾಧನೆಯ ದಾರಿಯನ್ನು ತಪ್ಪಿಸುವುದು. ಮನೆಯ ಮೇಲೆ‌‌ ಚೋರರ ಭಯವು ಕಾಡಬಹುದು. ಕೃಷಿಯಲ್ಲಿ ಸ್ವಲ್ಪಮಟ್ಟಿಗೆ ನಷ್ಟವಾಗುವ ಸಾಧ್ಯತೆ ಇದೆ. ಅನುಭವಿಗಳ ಮಸರ್ಗದರ್ಶನವು ನಿಮಗೆ ಸಿಗಲಿದೆ. ಸಂಬಂಧಗಳಲ್ಲಿ ಸಮತೋಲನ ವೇಗವಾಗಿ ಕಾಣಿಸುವುದು. ದೂರದಲ್ಲಿದ್ದ ಒಬ್ಬರಿಂದ ನಿಮಗೆ ಶುಭಸಂದೇಶ. ಹೃದಯಕ್ಕೆ ನೆಮ್ಮದಿ. ಬಂಧುಗಳ ಜೊತೆಗೆ ನಿಮ್ಮ ಒಡನಾಟವು ಚೆನ್ನಾಗಿರುವುದು. ಸಂಬಂಧವು ನಿಮಗೆ ಹೊಸ ಉತ್ಸಾಹವನ್ನು ಕೊಡಬಹುದು. ಮಾತಿನಲ್ಲಿ ಹಿಡಿತವಿದ್ದರೆ ನಿಮಗೆ ಇಂದು ಕ್ಷೇಮ. ಸಣ್ಣದಕ್ಕೂ ಸಂಗಾತಿಯ ಬೆಂಬಲವನ್ನು ಅಪೇಕ್ಷಿಸುವಿರಿ.

ತುಲಾ ರಾಶಿ: ಇಂದು ಕೆಲಸದಲ್ಲಿ ನಿಮ್ಮ ಶ್ರಮ ಗುರುತಿಸಲಾಗುತ್ತದೆ. ಮನಸ್ಸು ಸ್ಥಿರವಾಗಿ, ಹೊಸ ಯೋಜನೆಗಳಿಗೆ ಅನುಕೂಲ ಸಮಯ. ಆಪ್ತರಿಂದ ದೊರೆಯುವ ಮೃದು ಮಾತು ಮನಸ್ಸಿಗೆ ಶಾಂತಿ ನೀಡುತ್ತದೆ. ನಿಮ್ಮ ಭಾರ ಕಡಿಮೆಯಾಗಲು ಉಪಾಯವನ್ನು ಕಂಡುಕೊಳ್ಳುವಿರಿ. ಪರ ಊರು ನಿಮ್ಮ ಆರೋಗ್ಯವನ್ನು ಹಾಳುಮಾಡುವುದು. ಇಂದು ಆಗುವ ಮೇಲಧಿಕಾರಿಗಳ ಕಿರುಕುಳವನ್ನು ಸಹಿಸುವುದು ಕಷ್ಟ. ಬುದ್ಧಿವಂತಿಕೆ ನಿಮಗೆ ನಿರೀಕ್ಷೆಗೆ ತಕ್ಕ ಗೌರವ ಸಿಗದೇ ಬೇಸರವಾಗುವುದು. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ಕಲೆಗೆ ಸಂಬಂಧಿಸಿದಂತೆ ನೀವು ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ಮಾತಿಗೆ ಯಾರಾದರೂ ಕಲಹವಾಡುತ್ತ ಬರಬಹುದು. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಮಾತು ನಡೆಯಲಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಿ. ನಿಮ್ಮ ನಿಖರತೆ, ಶಿಸ್ತು ಮತ್ತು ಬುದ್ಧಿವಂತಿಕೆಯ ಗೆಲುವಿನ ದಿನ. ಗೊಂದಲ ಉಂಟುಮಾಡುತ್ತಿದ್ದ ವಿಷಯಕ್ಕೆ ಸ್ಪಷ್ಟ ಪರಿಹಾರ ದೊರೆಯುತ್ತದೆ. ಕೃಷಿಯಲ್ಲಿ ನೀವು ಅಂದುಕೊಂಡಷ್ಟು ಆದಾಯ ಸಿಗದೇ ಸ್ವಲ್ಪಮಟ್ಟಿಗೆ ನಷ್ಟವಾಗುವುದು.

ವೃಶ್ಚಿಕ ರಾಶಿ: ಸಾರ್ವಜನಿಕ ವೇದಿಕೆಯಲ್ಲಿ ನಿಮ್ಮ ಮಾತುಗಳಿಗೆ ವಿಶೇಷ ಸ್ಥಾನ. ಮನಸ್ಸಲ್ಲಿ ಸಂತೋಷ ಹೆಚ್ಚಿ, ಹೊಸ ಗುರಿಗಳತ್ತ ನಿಮ್ಮನ್ನು ಒಯ್ಯುತ್ತದೆ. ಹಿರಿಯರಿಂದ ಒಳ್ಳೆಯ ಸಲಹೆ ದೊರೆತು ಸಕಾರಾತ್ಮಕ ಬದಲಾವಣೆ ಉಂಟಾಗುವುದು. ಪ್ರಭುತ್ವವನ್ನು ಇನ್ನೊಬ್ಬರಿಂದ ಪಡೆಯುವಿರಿ. ಯಾರನ್ನೋ ಟೀಕಸುತ್ತ ನಿಮ್ಮ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಇಂದಿನ ಆದಾಯ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ. ತಾತ್ಕಾಲಿಕ ಸಮಸ್ಯೆಯನ್ನು ನೀವು ದೊಡ್ಡ ಮಾಡಿಕೊಳ್ಳುವಿರಿ. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಆನುವಂಶಿಕವಾಗಿ ಬಂದ ರೋಗವು ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳಿಗೆ ಕಾರಣವಾಗುವುದು. ಈ ದಿನ ನಿಮಗೆ ಕೀರ್ತಿ, ಧೈರ್ಯ ಮತ್ತು ಗೌರವ ತರುವುದರಲ್ಲಿ ಸಂಶಯವಿಲ್ಲ. ನಿಮ್ಮ ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ ದೊರೆಯುತ್ತದೆ. ನಿಮ್ಮವರೇ ನಿಮಗೆ ತೊಂದರೆಯನ್ನು ಕೊಡಬಹುದು.

ಧನು ರಾಶಿ: ವೃತ್ತಿಯಲ್ಲಿ ನಿಮ್ಮ ಶಾಂತ ಸ್ವಭಾವವೇ ಯಶಸ್ಸಿಗೆ ಕಾರಣವಾಗಬಹುದು. ಒಂದು ಪುಣ್ಯಕರ್ಮದಿಂದ ದೈವಾನುಗ್ರಹ ದೊರೆಯುವ ಯೋಗ. ಆರ್ಥಿಕವಾಗಿ ಸ್ಥಿರತೆ ಮತ್ತು ಚಿಕ್ಕ ಲಾಭಗಳ ಸಾಧ್ಯತೆ. ಕೈಯಲ್ಲಿರುವ ಬೆಣ್ಣೆ ಬಿಟ್ಟು ತುಪ್ಪಕ್ಕೆ ಅರಸಿದರೆ ಅದು ಕಷ್ಟ. ನಿಮ್ಮ ಆತ್ಮವಿಶ್ವಾಸವೇ ಏಕಾಗ್ರತೆಯನ್ನು ತರುವುದು. ಯಾರ ಮೇಲೂ ದ್ವೇಷ ಬರುವಂತಹ ಕೆಲಸವನ್ನು ಮಾಡುವುದು ಬೇಡ. ಇಂದು ನೀವು ವ್ಯವಹಾರದಲ್ಲಿ ಜಾಗರೂಕರಾಗಿ ಇರಬೇಕಸದೀತು. ವೈಯಕ್ತಿಕ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಕಷ್ಟವಾದೀತು. ಇಂದಿನ ವ್ಯಾಪಾರದಲ್ಲಿ ನೀವು ಔದಾರ್ಯ ತೋರುವುದು ಬೇಡ. ನಿಮ್ಮ ಪ್ರೌಢಿಮೆಯನ್ನು ತೋರಿಸಿ. ನಿಮ್ಮ‌ ಅಭಿಪ್ರಾಯವೂ ಮುಖ್ಯವಾಗಬಹುದು. ಇದ್ದ ನಿಮ್ಮ ಸ್ವಭಾವದಲ್ಲಿ ಪರಿವರ್ತನೆ ಕಾಣಿಸಿಕೊಳ್ಳುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ. ಆತ್ಮೀಯರೊಂದಿಗಿನ ಹಳೆಯ ಕಲಹಕ್ಕೆ ಪರಿಹಾರ ದಕ್ಕುವ ಸೂಚನೆ. ಹೊಸ ಕೆಲಸಕ್ಕೆ ಸೇರಲು ನಿಮ್ಮಲ್ಲಿ ಬಹಳ ಉತ್ಸಾಹವು ಇರುವುದು.

ಮಕರ ರಾಶಿ: ನಿರ್ಧಾರಗಳಲ್ಲಿ ಜಾಣತನ ವೃದ್ಧಿಯಾಗಿ, ಕೆಲಸಗಳ ವೇಗ ಹೆಚ್ಚುತ್ತದೆ. ಸಂವಹನ ಶಕ್ತಿ ಬಲವಾಗಿ, ಜನಮನ ಗೆಲ್ಲುವ ಅವಕಾಶ. ದೂರದಿಂದ ಆಗಮಿಸುವ ಶುಭಸಂದೇಶವೂ ಸಾಧ್ಯ. ಮನೆಯಲ್ಲಿ ಅಸ್ವತಂತ್ರತೆಯ ಅನುಭವ ಬರಬಹುದು. ಒಮ್ಮೆಲೇ‌ ಅಧಿಕ ಲಾಭವನ್ನೂ ಇಂದು ಯಾರಿಂದಲೂ ನಿರೀಕ್ಷಿಸಬಾರದು. ನೀವು ಇಂದು ದೇವರ ಮೇಲೆ‌ ಸಂಪೂರ್ಣ ಭಾರ ಹಾಕಿ ನಿಮ್ಮ ಕಾರ್ಯವನ್ನು ಆರಂಭಿಸುವಿರಿ. ಪ್ರೀತಿಯನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದ ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ಕೊಡುವುದು. ಸಂಗಾತಿಯು ನಿಮಗೆ ಬೇಕಾದ ಹಣವನ್ನು ನೀಡುವರು. ಸಂಶೋಧಕರಿಗೆ ಒಳ್ಳೆಯದೆಂದು ಅವಕಾಶವು ಸಿಗುವುದು. ನಿಮ್ಮ ಬೌದ್ಧಿಕ ಶಕ್ತಿ ಜಾಗೃತವಾಗುತ್ತಿದ್ದು, ಹೊಸ ಕಲ್ಪನೆಗಳು ತಾನಾಗಿಯೇ ಬರುವ ದಿನ. ಸಾಮಾಜಿಕ ಕೆಲಸಗಳು ನಿಮಗೆ ದಿನದ ಕೆಲಸದಂತೆ ಅಭ್ಯಾಸವಾಗುವುದು.‌ ಬಂಧುಗಳ ಆಗಮನವು ಖುಷಿಕೊಡುವುದು. ಉದ್ಯಮದಲ್ಲಿ ನಿಮಗೆ ಪ್ರಗತಿ ಕಾಣಿಸುವುದು. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು.

ಕುಂಭ ರಾಶಿ: ನೀವು ಕಳೆದುಕೊಂಡಿದ್ದ ಮನೋದೈರ್ಯ ಮರುಕಳಿಸುತ್ತದೆ. ಯೋಚನೆಗಳು ಕೇಂದ್ರೀತರಾಗಿ, ಪೂರ್ವ ಯೋಜನೆಗಳು ಸರಿಯಾಗಿ ನಡೆಯುತ್ತವೆ. ಗುಪ್ತ ಸಹಾಯಕನೊಬ್ಬರಿಂದ ದೊರೆಯುವ ಸಣ್ಣ ಸಲಹೆಯೇ ದೊಡ್ಡ ಬದಲಾವಣೆಗೆ ಕಾರಣ. ಇಂದು ನಿಮ್ಮ ಹಳೆಯ ವೈರವು ಮುರಿದುಬೀಳುವುದು. ನೆಮ್ಮದಿಗೆ ನಿಮ್ಮದೇ ಸೂತ್ರಗಳನ್ನು ನೀವು ಅನುಸರಿಸುವಿರಿ.‌ ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ನೀವು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸಾಲದ ಬಾಧೆಯು ನಿಮ್ಮ‌ ಮನಸ್ಸನ್ನು ಚುಚ್ಚುವುದು. ನಂಬಿಕೆಯನ್ನು ನೀವು ಉಳಿಸಿಕೊಳ್ಳುವತ್ತ ಗಮನ ಇರಿಸಿ. ನೆಮ್ಮದಿಗೆ ನಿಮ್ಮದೇ ಮಾರ್ಗವನ್ನು ಅನುಸರಿಸಿ. ಕೆಲವು ದುರಭ್ಯಾಸವನ್ನು ಬಿಡುವಿರಿ. ಸಂಸಾರವನ್ನು ಮುನ್ನಡೆಸುವ ಚಾತುರ್ಯವನ್ನು ನೀವು ತಿಳಿದುಕೊಳ್ಳುವಿರಿ. ಕುಟುಂಬದೊಳಗಿನ ತಪ್ಪು ಅರ್ಥಗಳು ನಿವಾರಣೆಯಾಗುತ್ತವೆ. ಆರ್ಥಿಕವಾಗಿ ಒಂದು ಸುಂದರ ಸೂಚನೆ ಬರಬಹುದಾದ ಸಂದರ್ಭ. ಯಾವುದನ್ನೂ ತಿಳಿವಳಿಕೆ ಇಲ್ಲದೇ ಮುಂದುವರಿಯುವುದು ಬೇಡ. ನಿಮ್ಮ ವರ್ತನೆಯು ಎಂದಿಗಿಂತ ಭಿನ್ನವಾಗಿ ಕಾಣಿಸುವುದು.

ಮೀನ ರಾಶಿ: ಕೆಲಸಗಳಲ್ಲಿ ಮನಸ್ಸಿನ ಕೇಂದ್ರೀಕರಣ, ನಿರ್ಧಾರಗಳಲ್ಲಿ ಸ್ಪಷ್ಟತೆ. ಅಪ್ರತೀಕ್ಷಿತ ಅವಕಾಶ ಮನೆಯವರ ಮೂಲಕ ಬರುತ್ತದೆ. ಹಳೆಯ ದ್ವಂದ್ವ ನಿವಾರಣೆಯಾಗಿ ಮನಸ್ಸಿಗೆ ಶಾಂತಿ. ದಿನದ ಅಂತ್ಯದಲ್ಲಿ ದೈವಾನುಗ್ರಹದ ಅನುಭವವಾಗಲಿದೆ. ಮಾಡಿದ ತಪ್ಪನ್ನೇ ಮತ್ತೆ ಮಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಇಂದು ನೀವು ಏಕಾಂತವಾಗಿ ಇರಲು ಆಗದು. ಕೆಲಸದಲ್ಲಿ ಗೊಂದಲವು ಉಂಟಾಗಬಹುದು. ಯಾವುದನ್ನು ಯಾವಾಗ ಮಾಡಬೇಕು ಎಂಬ ಚಿಂತೆ ಬರಬಹುದು. ಕೋಪದಿಂದ ನಿಮ್ಮ ನಿಯಂತ್ರಣವನ್ನು ನೀವು ಕಳೆದುಕೊಳ್ಳುವಿರಿ. ಯಾರದೋ ಕೋಪಕ್ಕೆ ಇನ್ಯಾರನ್ನೋ ದೂರುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕ ಪಡುವಿರಿ. ಇಂದಿನ ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಂಪತ್ತೂ ಸಿಗಲಿದೆ. ಸಂಗಾತಿಯನ್ನು ಸಂತೋಷಪಡಿಸಲು ಏನಾದರೂ ಮಾಡುವಿರಿ. ನಿಮ್ಮ ಮಾತುಗಳಿಗೆ ತೂಕ ಹೆಚ್ಚಿ, ಸುತ್ತಮುತ್ತಲವರಿಂದ ಗೌರವ ಸಿಗುತ್ತದೆ. ನಿಮ್ಮ ವರ್ತಮಾನದ ಸನ್ನಿವೇಶವನ್ನು ನೀವು ಆಪ್ತರಿಗೆ ತಿಳಿಸುವಿರಿ. ಯಾವುದೇ ಹೂಡಿಕೆ ಸಂಬಂಧಿತ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ಪಡೆದು ಹೂಡಿಕೆ ಮಾಡುವುದು ಉತ್ತಮ.

ಲೋಹಿತ ಹೆಬ್ಬಾರ್-8762924271 (what’s app only)