Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ
ಡಿಸೆಂಬರ್ ಮೊದಲ ವಾರ (ನವೆಂಬರ್ 30 - ಡಿಸೆಂಬರ್ 6)ದ ಈ ರಾಶಿ ಭವಿಷ್ಯವು ಗ್ರಹಗತಿಗಳ ಸಣ್ಣ ಬದಲಾವಣೆಗಳಿಂದ ನಿಮ್ಮ ಜೀವನದಲ್ಲಿ ಸಂತೋಷ ತರಲಿದೆ. ಉದ್ಯಮದಲ್ಲಿ ಪರಿವರ್ತನೆ, ವಿರೋಧ ನಿರ್ವಹಣೆ ಮತ್ತು ತಾಳ್ಮೆಯ ಮಹತ್ವವನ್ನು ಇದು ವಿವರಿಸುತ್ತದೆ. ಮೇಷದಿಂದ ಮೀನದವರೆಗೆ ಎಲ್ಲಾ 12 ರಾಶಿಗಳ ವೃತ್ತಿ, ಹಣಕಾಸು, ಆರೋಗ್ಯ ಮತ್ತು ಸಂಬಂಧಗಳ ಕುರಿತು ನಿಖರವಾದ ಜ್ಯೋತಿಷ್ಯ ಫಲಗಳನ್ನು ಇಲ್ಲಿ ಪಡೆಯಿರಿ.

ನವೆಂಬರ್ 30ರಿಂದ ಡಿಸೆಂಬರ್ 6ರ ವರೆಗೆ ಈ ವಾರವು ಡಿಸೆಂಬರ್ ಮೊದಲ ವಾರವಾಗಿದ್ದು ಗ್ರಹಗತಿಗಳಲ್ಲಿ ಅಧಿಕ ಬದಲಾವಣೆ ಇರದೇ ಇದ್ದರೂ ಸಣ್ಣ ಬದಲಾವಣೆಯೇ ದೊಡ್ಡ ಸಂತೋಷಕ್ಕೆ ಕಾರಣವಾಗಲಿದೆ. ಉದ್ಯಮದಲ್ಲಿ ಪರಿವರ್ತನೆಯನ್ನು ತಂದುಕೊಳ್ಳುವ ಸಂಭವವಿದೆ. ವಿರೋಧದಿಂದ ಭಯವಿದ್ದರೂ ಅದನ್ನು ಪ್ರಕಾಶಪಡಿಸಲಾರಿರಿ. ಯಾವುದಕ್ಕೂ ಉದ್ವೇಗ ಮಾಡದೇ ತಾಳ್ಮೆ ಕಳೆಯದೇ ಇರುವುದು ಶ್ರೇಯಸ್ಕರ
ಮೇಷ ರಾಶಿ:
ಡಿಸೆಂಬರ್ ಮೊದಲ ವಾರ ರವಿಯ ಅನುಗ್ರಹವು ಕಾರ್ಯದಲ್ಲಿ ಉತ್ಸಾಹವೃದ್ಧಿಗೆ ಕಾರಣ. ಮಧ್ಯದಲ್ಲಿ ಮಾತಿನ ಕಠೋರತೆ, ನಿಂದನೆಗಳಿದ್ದರೂ ಧೈರ್ಯ, ದಕ್ಷತೆಯಿಂದ ನೀವೇ ಮೇಲುಗೈ ಸಾಧಿಸಬಹುದು. ಸಣ್ಣ ವಿಘ್ನಗಳು ಅವಕಾಶವಾಗಿ ರೂಪಾಂತರಗೊಳ್ಳುವುದು. ವಾರಾಂತ್ಯದಲ್ಲಿ ಪುರುಷಾರ್ಥದ ಫಲ ಸ್ಪಷ್ಟವಾಗಿ ಗೋಚರಿಸಿ, ಮಾನ್ಯತೆ, ನೂತನ ಕಾರ್ಯಾರಂಭದ ಸಂಕೇತ ಶುಭವಾಗಿ ಬೆಳಗುವುದು.
ವೃಷಭ ರಾಶಿ:
ಎರಡನೇ ರಾಶಿಯವರಿಗೆ ಈ ವಾರ ಶುಕ್ರ ಬಲಿಯಾದ ಕಾರಣ ಪ್ರಾರಂಭದಲ್ಲಿ ಕಾರ್ಯವ್ಯವಸ್ಥೆಯಲ್ಲಿ ಸ್ಥೈರ್ಯ, ಹಣಕಾಸು ಹಾಗೂ ದಾಖಲೆಗಳಲ್ಲಿ ಸ್ಪಷ್ಟತೆ. ಸಹೋದ್ಯೋಗಿಗಳ ಸೌಹಾರ್ದ ನೆರವಿನ ಅಪೇಕ್ಷೆಯನ್ನು ಪ್ರಕಟಿಸುವಿರಿ. ಯೋಚಿಸಿ ನಡೆಯುವುದರಿಂದ ಪ್ರಯೋಜನ. ವಾರಾಂತ್ಯದಲ್ಲಿ ನೂತನ ಹೊಣೆಗಾರಿಕೆಯ ಪ್ರಯತ್ನ ಫಲಭರಿತವಾಗಿ ಪರಿಹಾರವಾಗಿ ಪರಿಣಮಿಸುವುದು.
ಮಿಥುನ ರಾಶಿ:
ಬುಧಾಧಿಪತ್ಯದ ಈ ರಾಶಿಯವರಿಗೆ ಈ ವಾರ ತೀಕ್ಷ್ಣ ಮತಿಯವರಿಗೆ ಇನ್ನಷ್ಟು ತೀಕ್ಷ್ಣತೆ ಬರಲಿದೆ. ಗೊಂದಲಮಯ ಕಾರ್ಯಗಳು ಚರ್ಚೆಗಳ ಮೂಲಕ ಸುಲಭವಾಗಿ ಪರಿಹರಿಸಲ್ಪಡುವುದು. ಸಂದರ್ಶನ ಹಾಗೂ ನಿಯುಕ್ತಿಗೆ ಬೇಕಾಗುವಂತೆ ಸಿದ್ಧತೆ ಇರುವುದು. ನಿಮ್ಮ ಮಾತಿಗೆ ಸರಿಯಾದ ಆಧಾರವಿರಲಿ. ಗೊಂದಲಕ್ಕೆ ಆಸ್ಪಸ ಬೇಡ. ವಾರಾಂತ್ಯದಲ್ಲಿ ಪಾಂಡಿತ್ಯಕ್ಕೆ ಮೆಚ್ಚುಗೆ ಪಡೆಯುವಿರಿ, ಕಾರ್ಯಕ್ಷೇತ್ರದಲ್ಲಿ ಶುಭಸ್ಥಿತಿಯ ಉದಯ.
ಕರ್ಕಾಟಕ ರಾಶಿ:
ಈ ರಾಶಿಯವರಿಗೆ ವಾರದ ಆರಂಭದಲ್ಲಿ ಚಂದ್ರನ ಚಂಚಲತೆಯು ನಿಮಗೂ ಬರಲಿದೆ. ಕೆಲವು ದಿನಗಳಲ್ಲಿ ಸ್ವಲ್ಪ ವ್ಯಗ್ರ ರೂಪವನ್ನು ಪಡೆಯುವಿರಿ. ಹಿರಿಯರ ಮಾರ್ಗದರ್ಶನದಿಂದ ನಿರುದ್ಯೋಗದ ನಿಮಗೆ ಕೆಲಸಕ್ಕೆ ದಿಕ್ಕು ತೋರುತ್ತದೆ. ವಾರಾಂತ್ಯದಲ್ಲಿ ಪ್ರಯಾಣ ಮೊದಲಿನ ಪ್ರಯಾಣಕ್ಕಿಂತ ಮತ್ತೊಂದು ಕಡೆಗೆ ಬದಲಾವಣೆ ಆಗುವುದು. ಮನಃಸ್ಥೈರ್ಯವೇ ಯಶಸ್ಸಿನ ಮೂಲ.
ಸಿಂಹ ರಾಶಿ:
ಐದನೇ ರಾಶಿಯವರಿಗೆ ಡಿಸೆಂಬರ್ ಮೊದಲ ವಾರ ರವಿಯ ಪ್ರಖರದ ಕಿರಣವು ಆರೋಗ್ಯದ ಪ್ರಭಾವವನ್ನು ಬೀರುವುದು. ಹೊಸ ಯೋಜನೆಗಳ ಆರಂಭಕ್ಕೆ ಅವಕಾಶವಿದ್ದರೂ ಜೊತೆಗಾರರ ಒಮ್ಮತ ಸಿಗದು. ಅನ್ಯರಲ್ಲಿ ಸ್ಪರ್ಧಾತ್ಮಕತೆಯನ್ನು ಕಂಡರೂ ಶೌರ್ಯದಿಂದ ಅದನ್ನು ಸುಲಭವಾಗಿ ಮೀರುತ್ತೀರಿ. ವಾರಾಂತ್ಯದಲ್ಲಿ ಸಾಮರ್ಥ್ಯ ಗೌರವಕ್ಕೆ ಪಾತ್ರವಾಗಿ, ಕಾರ್ಯಕ್ಷೇತ್ರದಲ್ಲಿ ಚೈತನ್ಯ ಹೆಚ್ಚುವುದು.
ಕನ್ಯಾ ರಾಶಿ:
ಡಿಸೆಂಬರ್ ಮೊದಲ ವಾರ ಬುಧಾನುಗ್ರಹದಿಂದ ಲೆಕ್ಕಪತ್ರ, ದಾಖಲೆ, ತಂತ್ರಗಾರಿಯಲ್ಲಿ ಮಗ್ನರು. ಹೇಗಾದರೂ ಪ್ರಸಿದ್ಧಿಯನ್ನು ಪಡೆಯುವಿರಿ. ವಾರದ ಮಧ್ಯದಲ್ಲಿ ನಿಮ್ಮವರಿಂದ ನಿಮ್ಮ ಪರಿಶ್ರಮ ಗುರುತಿಸಲ್ಪಡುವುದು. ವಾರಾಂತ್ಯದಲ್ಲಿ ನಿಮ್ಮ ಸೇವೆಗೆ ಹೆಚ್ಚುವ ಜವಾಬ್ದಾರಿಯಿಂದ ಲಾಭ. ಕಾರ್ಯಕ್ಷೇತ್ರದಲ್ಲಿ ಸ್ಥಾನದ ಶಕ್ತಿಯನ್ನು ಪ್ರಯೋಗಿಸುವಿರಿ.
ತುಲಾ ರಾಶಿ:
ರಾಶಿಯ ಅಧಿಪತಿ ಶುಕ್ರನು ಈ ವಾರ ದ್ವಿತೀಯದಲ್ಲಿ ಇರುವುದರಿಂದ ವ್ಯವಹಾರದ ಮಾತುಕತೆಗಳಲ್ಲಿ ಶುಭವಾದ ಫಲ. ಮೃದುಭಾಷೆ ಹಾಗೂ ಚಮತ್ಕಾರದ ಭಾಷೆಯೇ ಕಾರ್ಯಸಿದ್ಧಿಗೆ ಕಾರಣ. ವಾರದ ಮಧ್ಯದಲ್ಲಿ ಹಿರಿಯರ ಅನುಮೋದನೆಯಿಂದ ಸಂತಸ. ವಾರಾಂತ್ಯದಲ್ಲಿ ಗ್ರಾಹಕಸಂಪರ್ಕ, ಕಾರ್ಯದ ಸಮತೋಲನ. ಸೌಹಾರ್ದದಿಂದ ಕೆಲಸ ಕಾರ್ಯ ಮಾತುಗಾರಿಕೆಯಲ್ಲಿ ಉತ್ಸಾಹ.
ವೃಶ್ಚಿಕ ರಾಶಿ:
ಈ ರಾಶಿಯಲ್ಲಿಯೇ ರಾಶಿಯ ಅಧಿಪತಿ ಕುಜನಿದ್ದು ಈ ವಾರ ಬಲದಿಂದ ಯಾವುದನ್ನೂ ಮಾಡಬಹುದು ಎಂಬ ಅತಿಯಾದ ಆಸೆಯುಂಟಾಗಲಿದೆ. ಸಂಶೋಧನೆಗೆ ಬೇಕಾದ ಪೂರಕ ಮಾಹಿತಿಗಳಿಂದ ನೆಮ್ಮದಿ ಹಾಗೂ ಯಶ. ವಾರದ ಮಧ್ಯದಲ್ಲಿ ಬಲವಿಲ್ಲದೇ ಇರುವ ಕಾರ್ಯಗಳು ಸುಮ್ಮನೆ ನಾಶವಾಗುವುವು. ತಂತ್ರಬಲ ಹಿರಿಯರಿಂದ ಮೆಚ್ಚುಗೆ ಪಡೆಯುವಿರಿ ವಾರಾಂತ್ಯದಲ್ಲಿ ನೂತನವಾಗಿ ಬಂದ ಕರ್ತವ್ಯವನ್ನು ಕರಗತ ಮಾಡಿಕೊಳ್ಳುವಿರಿ.
ಧನು ರಾಶಿ:
ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಗುರುವು ಯಥಾಸ್ಥಾನಕ್ಕೆ ಬರಲಿದ್ದು, ದೃಷ್ಟಿಯು ಈ ಮೇಲೆ ಇರುವ ಕಾರಣ ನೂತನ ಅವಕಾಶಗಳ ದ್ವಾರ ತೆರೆದಂತಾಗುವುದು. ಆರಂಭದಲ್ಲಿ ಮನಸ್ಸಿನಲ್ಲಿ ಕಂಪನವಿದ್ದರೂ ವಾರದ ಮಧ್ಯದಲ್ಲಿ ನಿರ್ಧಾರಗಳಿಗೆ ಸ್ಪಷ್ಟತೆ ಸಿಗುವುದು. ವಿದೇಶ ಅಥವಾ ದೂರದ ಕಾರ್ಯಗಳಿಗೆ ತೆರಳುವಿರಿ. ವಾರಾಂತ್ಯದಲ್ಲಿ ತೆಗೆದುಕೊಳ್ಳುವ ನಿರ್ಣಯ ಭವಿಷ್ಯಕ್ಕೆ ಧೃಡವಾದ ದಿಕ್ಕನ್ನು ತೋರಿಸುವುದು.
ಮಕರ ರಾಶಿ:
ಡಿಸೆಂಬರ್ ಮೊದಲ ವಾರ ಶನಿಯ ಆಧಿಪತ್ಯದ ಈ ರಾಶಿಗೆ ಮತಿಯ ಸ್ಥೈರ್ಯದಿಂದ ನಿಧಾನಗತಿಯಾದರೂ ಖಚಿತವಾದ ಪ್ರಗತಿ. ಆರಂಭದಲ್ಲಿ ಹಣಕಾಸು ಸುಧಾರಣೆಯ ಚಿಂತೆಯೇ ಹೆಚ್ಚು. ವಾರದ ಮಧ್ಯದಲ್ಲಿ ಪರಿಶ್ರಮದಿಂದ ಅನಾರೋಗ್ಯ. ವಾರದ ಕೊನೆಯಲ್ಲಿ ಕೌಶಲ್ಯದಿಂದ ತಂಡದ ಮೇಲೆ ಪ್ರಭಾವ ಬೀಳುವುದು. ಸ್ಥಿರಾಸ್ತಿಯ ಆಧಿಕ್ಯಕ್ಕೆ ಪ್ರಾರ ಕೊಡುವಿರಿ.
ಇದನ್ನೂ ಓದಿ: ನವೆಂಬರ್ ತಿಂಗಳ ಕೊನೆಯ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?
ಕುಂಭ ರಾಶಿ:
ಈ ರಾಶಿಯವರಿಗೆ ಉದ್ಯೋಗಾಧಿಪತಿ ಸ್ವಸ್ಥಾನದಲ್ಲಿ ಹಾಗೂ ಕರ್ಮಾಧಿಪತಿ ದ್ವಿತೀಯದಲ್ಲಿದ್ದು ಸೃಜನಾತ್ಮಕ ಶಕ್ತಿಯು ವಾರವಿಡೀ ಪ್ರಬಲವಾಗಿರುವುದು. ಯಂತ್ರ ಹಾಗೂ ಇನ್ನಿತರ ಉದ್ಯೋಗದಲ್ಲಿ ಮುನ್ನಡೆ. ಈ ವಾರ ಮಧ್ಯದಲ್ಲಿ ತಂತ್ರಜ್ಞಾನಾಧಾರಿತ ಕೆಲಸಗಳಲ್ಲಿ ಯಥಾಶಕ್ತಿ ಕಾರ್ಯ. ನಿಮ್ಮ ಕಲ್ಪನೆಗಳು ಸ್ವೀಕಾರಾರ್ಹವಾಗಲಿದೆ. ವಾರಾಂತ್ಯದಲ್ಲಿ ಬಾಕಿ ಕೆಲಸಗಳ ಅಂತ್ಯ.
ಮೀನ ರಾಶಿ:
ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ವಾರ ಮನೋನಿಗ್ರಹ ಅಸಾಧ್ಯ ಎನಿಸಬಹುದು. ಆರಂಭದ ಉತ್ಸಾಹ ಮುಂದಕ್ಕೆ ಇರದು. ವಾರದ ಮಧ್ಯದಲ್ಲಿ ಚರ್ಚೆಗಳಲ್ಲಿ ವಾಕ್ಪಾಟುತ್ವಕ್ಕೆ ಜಯ. ಪ್ರಭಾವಿಗಳಿಂದ ಸ್ಥಾನಮಾನ ಗಟ್ಟಿಯಾಗುವುದು. ವಾರದ ಅಂತ್ಯದಲ್ಲಿ ನಿಯೋಜಿತ ಹುದ್ದೆಯ ಹಾಜರಾಗುವಿರಿ. ಆತ್ಮಸ್ಥೈರ್ಯವಿದ್ದರೂ ಯಶಸ್ಸಿಗೆ ಧಕ್ಕೆ.
– ಲೋಹಿತ ಹೆಬ್ಬಾರ್ – 8762924271 (what’s app only)




