AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ನವೆಂಬರ್ ತಿಂಗಳ ಕೊನೆಯ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

ನವೆಂಬರ್ 2025 ಕೊನೆಯ ವಾರ (ನವೆಂಬರ್ 23-29) ರವಿ, ಕುಜ, ಶುಕ್ರರ ಪ್ರಭಾವದಿಂದ ಮಿಶ್ರ ಫಲ. ಗುರುವು ಉತ್ತಮ ಸ್ಥಾನಮಾನ, ಗೌರವ ತರುವನು. ಕುಲದೇವರ ಆರಾಧನೆಯು ಸನ್ಮಾರ್ಗಕ್ಕೆ ಮುಖ್ಯ. ಪ್ರತಿ ರಾಶಿಯವರಿಗೂ ವಾರ ಭವಿಷ್ಯದಲ್ಲಿ ಉದ್ಯೋಗ, ಹಣಕಾಸು, ಸಂಬಂಧಗಳ ಕುರಿತು ವಿವರವಾದ ಸಲಹೆಗಳಿವೆ. ಎಚ್ಚರಿಕೆ ಹಾಗೂ ಪರಿಹಾರಗಳೊಂದಿಗೆ ಶುಭಕರವಾಗಿರಲು ಜ್ಯೋತಿಷ್ಯ ಮಾರ್ಗದರ್ಶನ ಇಲ್ಲಿ ಲಭ್ಯ.

Weekly Horoscope: ನವೆಂಬರ್ ತಿಂಗಳ ಕೊನೆಯ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?
ವಾರ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷತಾ ವರ್ಕಾಡಿ|

Updated on:Nov 23, 2025 | 12:04 PM

Share

ನವೆಂಬರ್ ತಿಂಗಳ ಕೊನೆಯ ವಾರ 23-11-2025 ರಿಂದ 29-11-2025 ರವರೆಗೆ ಇರಲಿದೆ. ರವಿ, ಕುಜ, ಶುಕ್ರರು ಒಂದೇ ರಾಶಿಯಲ್ಲಿ ಇದ್ದು ಪರಸ್ಪರ ಮಿತ್ರರೂ ಶತ್ರುಗಳೂ ಆಗಿರುವ ಕಾರಣ ಕೆಲವೊಮ್ಮೆ ಪ್ರತಿಕೂಲ ಅನುಕೂಲತೆಗಳೂ ಬರಲಿವೆ. ಗುರುವು ಸದ್ಯ ಉತ್ತಮ‌ಸ್ಥಾನದಲ್ಲಿದ್ದು ಸ್ಥಾನಮಾನ, ಒಳ್ಳೆಯ ಕಾರ್ಯಕ್ಕೆ ಪ್ರೇರಣೆ, ಗೌರವ, ನೆಮ್ಮದಿಯನ್ನು ಕೊಡುವನು. ಕುಲದೇವರ ಆರಾಧನೆಯನ್ನು ಬಿಡದೇ ಮಾಡಿ, ಅಲ್ಲಿಂದಲೇ ನಿಮಗೆ ಸನ್ಮಾರ್ಗಪ್ರಾಪ್ತಿಯಾಗಲಿದೆ.

ಮೇಷ ರಾಶಿ:

ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಸ್ವಸ್ಥಾನದಲ್ಲಿ ಇದ್ದಾನೆ. ರಹಸ್ಯವನ್ನು ಬಿಟ್ಟಕೊಡಲಾರಿರಿ. ಬರುವ ಅಪಾಯವನ್ನು ಜಾಣ್ಮೆಯಿಂದ ದಾಟುವಿರಿ. ಉದ್ಯೋಗದ ಹೊಸ ಆಯಾಮವು ತೆರೆದುಕೊಳ್ಳುವುದು. ನಿಮ್ಮ‌ ಖರ್ಚಿನಿಂದ ದೂರ ಪ್ರಯಾಣವನ್ನು ಮಾಡಲಾರಿರಿ. ಪೂರ್ವಾಗ್ರಹವಿಲ್ಲದೇ ಎಲ್ಲರ ಜೊತೆ ಮಾತನಾಡುವುದು ಒಳ್ಳೆಯದು. ಮಿತ್ರರ ಸಲಹೆಗಳು ನಿಮಗೆ ಪೂರಕ ಮಾನಸಿಕತೆಯನ್ನು ತಂದುಕೊಡಬಹುದು.‌ ಸರ್ಕಾರದ ಕಡೆಯಿಂದ ಬರಬೇಕಾದುದನ್ನು ಶ್ರಮದಿಂದ ಪಡೆಯುವಿರಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಬೇಕು. ನಿಮ್ಮ ಪ್ರಯತ್ನವು ಸಂಪೂರ್ಣವಾಗಿ ಇರಲಿ. ಯಶಸ್ಸನ್ನು ಹಂಬಲವು ಅತಿಯಾಗಿ ಕಾಣಿಸುವುದು. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ಹೂಡಿಕೆಯತ್ತ ಗಮನಹರಿಸುವುದು ಸದ್ತಕ್ಕೆ ಬೇಡ. ದುರ್ಬಲರಿಗೆ ಅಲ್ಪ ಸಹಾಯವನ್ನು ಮಾಡುವಿರಿ. ನಕಾರಾತ್ಮಕತೆಗೆ ಅವಕಾಶ ಬೇಡ. ಕುಜ ದಶೆ ನಿಮಗೆ ಶುಭ.

ವೃಷಭ ರಾಶಿ:

ಈ ರಾಶಿಯವರಿಗೆ ಕೊನೆಯ ವಾರ ಶುಭ. ರಾಶಿಯ ಅಧಿಪತಿ ಸಪ್ತಮದಲ್ಲಿ ಇದ್ದಾನೆ. ಸಂಗಾತಿಯಿಂದ ಕಟುವಾದ ಮಾತು ಬಂದರೂ ಕೊನೆಗೆ ಅದು ಸಿಹಿಯಾಗಿ ಪರಿವರ್ತಿತವಾಗಲಿದೆ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ.‌ ಬಂಧುಗಳಿಂದ ಅನಗತ್ಯ ಕಿರಿಕಿರಿಯನ್ನು ಸಹಿಸಬೇಕಾದೀತು. ಖಾಸಗಿಯಾಗಿ ಇರಬೇಕು ಎನಿಸಬಹುದು. ಭೋಗದ ವಸ್ತುಗಳ ಅಪೇಕ್ಷೆ ಅಧಿಕವಾಗಲಿದೆ. ನಿಮ್ಮ ಸಂತೋಷಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಲಾರಿರಿ. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವುದಿಲ್ಲ. ಅತ್ಯುತ್ಸಾಹವು ನಿಮಗೆ ಹಾನಿಯನ್ನು ಉಂಟುಮಾಡೀತು. ತಂದೆ ಹಾಗೂ ಸಹೋದರ ಪ್ರೀತಿ ಸಿಗುವುದು. ದ್ವೇಷವನ್ನು ಮರೆತು ಪ್ರೀತಿಯಿಂದ ಇರುವಿರಿ. ಆಪದ್ಧನವನ್ನು ವಿನಿಯೋಗ ಮಾಡುವ ಸ್ಥಿತಿಯು ಬರುವುದು. ಯಾವುದೇ ಪ್ರಚಾರವಿಲ್ಲದೇ ನಿಮ್ಮನ್ನು ಪ್ರಕಟಪಡಿಸಿಕೊಳ್ಳುವಿರಿ. ಶುಕ್ರ ದಶೆ ನಿಮಗೆ ಉತ್ತಮ.

ಮಿಥುನ ರಾಶಿ:

ಬುಧನ ಆಧಿಪತ್ಯದ ಈ ರಾಶಿಯವರಿಗೆ ಈ ವಾರ ಶುಭ. ಮಕ್ಕಳಿಂದ ಕೆಲವು ಸಂಗತಿಗಳನ್ನು ಅರ್ಥಮಾಡಿಕೊಳ್ಳುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ಕೆಲವರನ್ನು ನೀವು ದೂರವಿಡುವುದು ಮುಖ್ಯವಾಗಿರುವುದು. ಉದ್ಯಮವು ಒಂದೊಂದೇ ಹಂತವನ್ನು ಏರಲಿದ್ದು, ನಿಮಗೆ ಉತ್ಸಾಹವು ಅಧಿಕವಾಗಬಹುದು. ಸಹೋದರರ ಬಾಂಧವ್ಯವು ಸಡಿಲಾಗುವುದು. ಪ್ರೇಕ್ಷಣನೀಯ ಸ್ಥಳಗಳಿಗೆ ಸಂಚಾರ ಮಾಡುವಿರಿ. ಅಪರಿತರು ನಿಮ್ಮನ್ನು ಪರಿಚಯ ಮಾಡಿಕೊಳ್ಳಬಹುದು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಸುಂದರ ವಸ್ತುಗಳ ಖರೀದಿಯಿಂದ ಧನನಷ್ಟ. ಸಂಗಾತಿಯ ನಡುವಿನ ಸಂಬಂಧವು ದುರ್ಬಲವಾಗಬಹುದು. ನಿಮ್ಮ ನಿರ್ಧಾರವನ್ನು ಬದಲು ಮಾಡಿದ್ದಕ್ಕೆ ಬೇಸರವಾದೀತು. ಹೇಳಬಾರಸ ವಿಚಾರವನ್ನು ಹೇಳುವ ಬಯಕೆಯು ಇರುವುದು. ಬುಧ ದಶೆ ನಿಮಗೆ ಉತ್ತಮ.

ಕರ್ಕಾಟಕ ರಾಶಿ:

ಚತುರ್ಥ ರಾಶಿಯವರಿಗೆ ಈ ವಾರ ಶುಭ. ರಾಶಿಯ ಅಧಿಪತಿ ಚಂದ್ರನು ಈ ವಾರ ನಿಮ್ಮನ್ನು ಹಳ್ಳಿಯ ವಾತಾರವರಣಕ್ಕೆ ಕರೆದುಕೊಂಡು ಹೋಗುವನು. ರಾಜಕೀಯ ಒತ್ತಡವು ನಿಮಗೆ ಬೇಡದ ಕಾರ್ಯವನ್ನು ಮಾಡಲು ಪ್ರೇರಿಸುವುದು. ನಿಮಗೆ ಆಗದವರು ನಿಮ್ಮ ಬಗ್ಗೆ ಹೇಳಿಯಾರು. ಪರೋಪಕಾರದ ಸ್ಮರಣೆಯು ಇಲ್ಲದೇಹೋಗುವುದು. ಎಂದೂ ಆಗದ ಅನುಭವಗಳು ಆಗಲಿವೆ. ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯು ಇರುವುದು. ನೀವು ಸ್ವಾರ್ಥಿಗಳಂತೆ ಕಾಣುವಿರಿ ಅಷ್ಟೇ. ಎಲ್ಲವೂ ನಿಮ್ಮದಾಗಬೇಕು ಎನ್ನುವ ಬಯಕೆ ಇರಿವುದು. ನಿಮ್ಮ ವಿವಾಹಕ್ಕೆ ಸಂಬಂಧಿಸಿದಂತೆ ಶುಭ ವಾರ್ತೆಯು ಇರಲಿದೆ. ಆರ್ಥಿಕತೆಯ ವೃದ್ಧಿಗಾಗಿ ತಂತ್ರವನ್ನು ಮಾಡುವಿರಿ. ಪ್ರಭಾವೀ ವ್ಯಕ್ತಿಯನ್ನು ಮೆಚ್ಚಿಸಿ ಅಧಿಕಾರವನ್ನು ಪಡೆಯುವಿರಿ. ಸಿಗದ ವಸ್ತುವಿನ ಬಗ್ಗೆ ಅತಿಯಾದ ಮೋಹವನ್ನು ಬೆಳೆಸಿಕೊಳ್ಳುವುದು ಬೇಡ. ಚಂದ್ರದಶೆ ಮಿಶ್ರವಾಗಲಿದೆ.

ಸಿಂಹ ರಾಶಿ:

ರಾಶಿಯ ಅಧಿಪತಿ ಚತುರ್ಥದಲ್ಲಿ ಇದ್ದು ಸರ್ಕಾರದ ಕೆಲಸಗಳಲ್ಲಿ ಪ್ರಗತಿ ಇರಲಿದೆ. ಪ್ರಭಾವೀ ವ್ಯಕ್ತಿಗಳ ಸಂಪರ್ಕವು ಸಾಧ್ಯವಾಗುವುದು. ನಿಮ್ಮವರಿಗೆ ಹೊಸ ವಸ್ತುಗಳನ್ನು ಕೊಡಿಸುವಿರಿ. ದಾಂಪತ್ಯದ ಒಳ ಜಗಳವು ಕುಟುಂಬಕ್ಕೆ ಗೊತ್ತಾಗಲಿದೆ. ದುರಭ್ಯಾಸವನ್ನು ರೂಢಿಸಿಕೊಳ್ಳುವಿರಿ. ಇನ್ನೊಬ್ಬರ ಸ್ವತ್ತನ್ನು ಅಪೇಕ್ಷಿಸುವುದು ಬೇಡ. ಮೋಹದಿಂದ ಹೊರಬರುವುದು ಕಷ್ಟವಾದೀತು. ತಂದೆಯ ಜೊತೆ ಈ ವಾರ ಇರಬೇಕಾಗುವುದು. ಚಿಕಿತ್ಸೆ ಮಾಡಿಸುವ ಅನಿರ್ಯತೆ ಸೃಷ್ಟಿಯಾಗಲಿದೆ. ನಿಮ್ಮ ಶತ್ರುಗಳು ಬಲಗೊಳ್ಳುವ ಸಾಧ್ಯತೆ ಇದೆ. ಚರಾಸ್ತಿಯ ಸಲುವಾಗಿ ಕಾನೂನು ಹೋರಾಟ ಮಾಡಬೇಕಾದೀತು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನೇರವಾದ ಮಾತಿನಿಂದ ತೊಂದರೆಯಾಗಬಹುದು. ಹೂಡಿಕೆಯ ವ್ಯವಹಾರವು ಕೆಲವರಲ್ಲಿ ಮಾತ್ರ ಇರಲಿ. ಸಂಗಾತಿಯನ್ನು ಈ ವಾರ ಅವಲಂಬಿಸುವಿರಿ. ರವಿ ದಶೆ ಶುಭ.

ಕನ್ಯಾ ರಾಶಿ:

ಬುಧನ ಆಧಿಪತ್ಯದ ಈ ರಾಶಿಯವರಿಗೆ ಕೊನೆಯ ವಾರ ಮಿಶ್ರಫಲ. ವ್ಯವಹಾರವನ್ನು ಬಹಳ ಎಚ್ಚರಿಕೆಯಿಂದ ಮಾಡುವಿರಿ. ಕುಟುಂಬದಲ್ಲಿ ಆಸ್ತಿಯ ವಿಚಾರದಲ್ಲಿ ಕಲಹವು ಕಾಣಿಸಿಕೊಳ್ಳುವುದು. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳುವಿರಿ.‌ ನಿಮ್ಮ ಸಂಸ್ಥೆಗೆ ಹೆಚ್ಚಿನ ಮನ್ನಣೆಯು ಸಿಗುವುದು. ನಿಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳುವಿರಿ. ವ್ಯಾವಹಾರಿಕ ಅಂಶಗಳು ಈ ವಾರ ಅಧಿಕಾವಗಿದ್ದು ಓಡಾಟ ಮಾಡುವಿರಿ. ನ್ಯಾಯಾಲಯ‌ದ ಕೆಲಸಗಳು ಒಂದು ಹಂತಕ್ಕೆ ಬರಲಿವೆ. ಸಂತೋಷದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಿರಿ. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ಸಾಮಾಜಿಕ ಕೆಲಸದಲ್ಲಿ ನೀವು ಕಳೆದುಹೋಗಬಹುದು. ಮಿತ್ರರಿಗೆ ಸಹಾಯ ಮಾಡಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವು ನಿಮಗೆ ಸ್ವಲ್ಪ ಸಮಾಧಾನಿರುವುದು. ಉದ್ಯೋಗದಲ್ಲಿ ಅವಗಡವು ಸಂಭವಿಸುವ ಸಾಧ್ಯತೆ ಇದೆ. ಬುಧದಶೆ ಈ ವಾರ ಶುಭ.

ತುಲಾ ರಾಶಿ:

ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಶುಭ. ಶುಕ್ರನು ದ್ವಿತೀಯದಲ್ಲಿ ಇದ್ದು ಮಾತಿನಿಂದ ಎಲ್ಲರನ್ನೂ ಆಕರ್ಷಿಸುವನು. ನಿಮ್ಮ ತೋರಿಕೆಯ ಮಾತಿಗೆ ಯಾರೂ ಮನಸೋಲುವರು. ಮಕ್ಕಳ‌ ವಿಚಾರದಲ್ಲಿ ನಿಮ್ಮ ನಿಲುವು ಸರಿ ಇರದು. ನಿಮ್ಮ ಗೌರವಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಆರೋಗ್ಯದ ಸಮತೋಲನವನ್ನು ಇಟ್ಟುಕೊಳ್ಳುವುದು ಮುಖ್ಯವಾಗುವುದು. ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಸಂಗಾತಿಯಿಂದ ಧನಸಹಾಯ ಆಗಲಿದೆ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು. ಕೆಲವರನ್ನು ನೀವು ನಂಬಬೇಕಾಗುತ್ತದೆ. ಸರಳವಾಗಿರಲು ಇರುವುದು ನಿಮಗೆ ಕಷ್ಟವಾದೀತು. ಇನ್ನೊಬ್ಬರ ಜೊತೆ ಮಾತನಾಡುವಾಗ ಭಯ. ಶುಕ್ರದಶೆ ಇದ್ದವರಿಗೆ ಶುಭ.

ವೃಶ್ಚಿಕ ರಾಶಿ:

ರಾಶಿ ಅಧಿಪತಿಯಾದ ಕುಜನು ಈ ವಾರ ಸ್ವಸ್ಥಾನದಲ್ಲಿಯೇ ಇದ್ದು ಉತ್ಸಾಹವನ್ನು ಅಧಿಕ ನೀಡುವನು. ನಿಮ್ಮ‌ ಕೆಲಸವು ತೃಪ್ತಿಯನ್ನು ಕೊಡುವುದು. ಖರ್ಚುಗಳು ಅಧಿಕವಿದ್ದರೂ ಚಿಂತೆ ಇಲ್ಲದೇ ಮಾಡುವಿರಿ. ಕೆಲವರ ಜೊತೆ ಮಾತನಾಡಲು ಸಂಕೋಚವಾದೀತು. ಮನೆಯ ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ. ರಹಸ್ಯವನ್ನು ಭೇದಿಸುವ ಕುತೂಹಲ ಇರಲಿದೆ. ಕೋಪ ತಾಪವೂ ಮನೆಯಲ್ಲಿ ಹೆಚ್ಚಿರುವುದು. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ಸಂಗಾತಿಯ ಬಗ್ಗೆ ಆರೋಗ್ಯದ ಕಾಳಜಿ ತೋರಿಸುವಿರಿ. ನಿಗದಿತ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಪೂರ್ಣ ಮಾಡಿಕೊಳ್ಳುವಿರಿ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಪತ್ನಿಯ ಕಡೆಯವರಿಂದ ಅಹಿತಕರವಾದ ಮಾತುಗಳು ಕೇಳಿಬರಬಹುದು. ಗುರುವಿನ ದೃಷ್ಟಿಯಿರುವುದರಿಂದ ಅನಂತರ ಶಾಂತವಾಗಿ ನಡೆಸುಕೊಳ್ಳುವಿರಿ. ಸಹೋದರನ ವಿರುದ್ಧದ ಗೆಲವು ನಿಮ್ಮದಾಗುವುದು.

ಧನು ರಾಶಿ:

ರಾಶಿಯ ಅಧಿಪತಿ ಈ ವಾರ ಅಷ್ಟಮದಲ್ಲಿ ಇದ್ದು ಅಪಮಾನವನ್ನು ಹಿರಿಯರಿಂದ ಸ್ವೀಕರಿಸಬೇಕಾಗುವುದು. ನಿಷ್ಠುರತೆಯಿಂದ ಎಲ್ಲರ ಮೇಲು ಸಿಟ್ಟಾಗುವಿರಿ. ಹಳೆಯ ಸಾಲವನ್ನು ತೀರಿಸಿ ಮತ್ತೆ ಮಾಡಬೇಕಾದೀತು. ಕೃಷಿಯಲ್ಲಿ ನಿಮ್ಮದೇ ಹೆಸರನ್ನು ಗಳಿಸುವಿರಿ. ನಿಮ್ಮಿಂದಾಗಿ ಕುಟುಂಬದ ಕಲಹವು ನಿಲ್ಲುವುದು. ಇಂದಿನ ಕಾರ್ಯದಲ್ಲಿ ಜಯವನ್ನು ಗಳಿಸುವಿರಿ. ಒಂದ ಕಡೆ ನಿಂತಲ್ಲಿ ನಿಲ್ಲಲಾಗದು. ಗುರುವಿನ ಸಹವಾಸದಿಂದ ದೂರಾಗುವಿರಿ. ವಿದ್ಯಾರ್ಥಿಗಳು ಓದಿಗೆ ಸಮಯವು ಸಿಗದೇ ಕಷ್ಟವಾಗುವುದು. ಮಿತ್ರನಿಗೆ ಗೊತ್ತಿಲ್ಲದೇ ಹಣವನ್ನು ಪಡೆಯುವಿರಿ. ಬಹಳ ದಿನಗಳ ಅನಂತರ ಉತ್ತಮ ಭೋಜನವು ಸಿಗವುದು. ಹಣಕಾಸಿಗೆ ಸಂಬಂಧಿಸಿದ ಆರೋಪದ ಬಗ್ಗೆ ಏನನ್ನೂ ನೀವು ಹೇಳಲಾರಿರಿ. ಬಂಧುಗಳ ಪ್ರೀತಿಯು ನಿಮಗೆ ಸಿಗುವುದು. ಗುರುದಶೆಯವರು ಹಿರಿಯರ ನಿಂದನೆ ಹೆಚ್ಚು ಮಾಡುವರು. ಸುಮ್ಮನೆ ಪಾಪವನ್ನು ಕಟ್ಟಿಕೊಳ್ಳುವಿರಿ.

ಮಕರ ರಾಶಿ:

ಹತ್ತನೇ ರಾಶಿಯವರಿಗೆ ಈ ವಾರ ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದು ಸಹೋದರನಿಂದ‌ ಕಿರಿಕಿರಿ. ಅವನಿಂದ ಬರಬೇಕಾದ ಸಂಪತ್ತು ಸಿಗದು. ಮಂಗಲ‌ ಕಾರ್ಯಗಳಿಗೆ ನಿಮ್ಮಿಂದ ಹಣವು ಖರ್ಚಾಗುವುದು. ಪಾಲುದಾರಿಕೆಯಲ್ಲಿ ನಿಮ್ಮದೇ ಮೇಲುಗೈ ಸಾಧಿಸಲಿದೆ. ನಿಮ್ಮ ಬಾಲಿಶ ಮಾತುಗಳು ನಿಮ್ಮ ನಡವಳಿಕೆಯನ್ನು ತೋರಿಸುವುದು. ಬರಬೇಕಾದ ಹಣವು ನಿಮಗೆ ಪೂರ್ತಿಯಾಗಿ ಬಾರದೇ ಬೆರಸರವಾದೀತು. ನೀರಿನ ವಿಚಾರಕ್ಕೆ ಕಲಹವಾಗಲಿದೆ. ಹಿರಿಯರಿಂದ ನಿಮಗೆ ಪರಿಹಾರ ಮಾರ್ಗವೂ ಸಿಗಲಿದೆ. ಕೊಡುಕೊಳ್ಳುವ ವ್ಯವಹಾರವು ಪ್ರಮಾಣಿಕವಾಗಿ ಇರಲಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ನಿರಾಕರಿಸುವಿರಿ. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ಕೆಲವರಿಗೆ ನಿಮ್ಮ ಉಪಕಾರವು ಸಿಗುವುದು.‌ ಸಂಗಾತಿಯ ಅಸಹಜ ಮಾತುಗಳಿಂದ ನಿಮಗೆ ಕಷ್ಟವಾಗುವುದು. ನಿಮ್ಮನ್ನು ಕುಟುಂಬವು ನಿರ್ಲಕ್ಷ್ಯಿಸಿದಂತೆ ಕಾಣುವುದು.

ಕುಂಭ ರಾಶಿ:

ರಾಶಿ ಅಧಿಪತಿ ದ್ವಿತೀಯದಲ್ಲಿ ಈ ವಾರ ಇದ್ದು ವ್ಯಾಪಾರ ವಹಿವಾಟನ್ನು ಸಮರ್ಥವಾಗಿ ನಿಭಾಯಿಸಲಾಗದಂತೆ ಮಾಡುವನು. ಸಾಲದ ವಿಚಾರದಲ್ಲಿ ಜಾಗರೂಕತೆ ಅವಶ್ಯಕ. ನಿಮಗೆ ಮನೆಯು ಬಂಧನದಂತೆ ಅನ್ನಿಸಬಹುದು. ದುರ್ಘಟನೆಯಿಂದ ಮನಸ್ಸು ಕಲಕಬಹುದು. ಆಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ಲಾಭವನ್ನು ನಿರೀಕ್ಷಿಸುವಿರಿ. ಸ್ಥಿರಾಸ್ತಿಯ ಖರೀದಿಯ ಯೋಗವಿದ್ದರೂ ಯೋಗವಿದೆ. ಸಮುದ್ರ ಪ್ರದೇಶಕ್ಕೆ ತೆರಳುವವರು ಎಚ್ಚರಿಕೆಯಿಂದ ಇರಬೇಕು. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಆದಾಯಕ್ಕಿಂತ ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ದೃಷ್ಟಿದೋಷವು ನಿಮಗೆ ಅಧಿಕವಾಗಬಹುದು. ಚಿರಪರಿಚಯವು ನಿಮಗೆ ಹೊಸತಾಗಿ ಕಾಣಿಸಬಹುದು. ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಕಳೆದುಹೋಗಬಹದು. ಅನ್ಯ ಆಲೋಚನೆಯಲ್ಲಿ ದಿನವನ್ನು ಕಳೆಯುವಿರಿ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸಹೋದರನಿಂದ ವಂಚನೆ. ಹಣಕಾಸಿನಿಂದ ಮೋಸವು ನಿಮಗಾಗಲಿದೆ.

ಮೀನ ರಾಶಿ:

ರಾಶಿಯ ಅಧಿಪತಿ ಈ ವಾರ ಪಂಚಮದಲ್ಲಿದ್ದು ಶುಭ. ಕೃಷಿ ಕಾರ್ಯಗಳು ಉತ್ತಮ. ನಿಮ್ಮ ಸಂಶೋಧನೆಯಿಂದ ವ್ಯಾಪಕ ಮೆಚ್ಚುಗೆಯೂ ಸಿಗಲಿದೆ. ಮೇಲಧಿಕಾರಿಗಳು ನಿಮ್ಮ ಮನವಿಯನ್ನು ಒಪ್ಪಬಹುದು.‌ ಮನೆಗೆಲಸವೇ ನಿಮ್ಮ‌ ಇಡೀ ದಿನಕ್ಕೆ ಆಗುವಷ್ಟು ಇರುವುದು. ಮನೆಯ ಹಿರಿಯರು ನಿಮಗೆ ಉಪದೇಶ ಕೊಡಬಹುದು. ನಿಮಗೆ ಗೌರವವು ಪ್ರಾಪ್ತವಾಗುವ ಸಾಧ್ಯತೆ ಇದೆ. ಆರ್ಥಿಕತೆಯ ಸಮಸ್ಯೆ ಕಾಡುವುದು. ರಾಶಿಯಲ್ಲಿ ಶನಿ ಇದ್ದು ಸಾಡೇ ಸಾಥ್ ಪ್ರಭಾವದಿಂದ ಪೀಡೆಗಳು, ಹೆಚ್ಚಾಗುವುದು. ಶತ್ರು ನಿಗ್ರಹ ಹಾಗೂ ಕೃಷಿಯಲ್ಲಿ ಲಾಭ. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ಶನಿ ದಶೆ ನಿಮಗೆ ಉತ್ತಮವಾಗಿಲ್ಲ. ಯಾರನ್ನೂ ನೀವು ತಪ್ಪಾಗಿ ಗ್ರಹಿಸುವುದು ಬೇಡ. ನಿಮ್ಮ ನಡೆಯಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು. ಹೊಸ ವಾಹನ ಖರೀದಿ ಮಾಡುವುದನ್ನು ಕೈ ಬಿಡುವಿರಿ. ಸಹೋದರರ ಜೊತೆಗಿನ ಸಂಬಂಧವು ಒಂದು ಮಾತಿನಿಂದ ಹಾಳಾಗಲಿದೆ. ಶನಿಪೀಡಾ ಪರಿಹಾರಕ್ಕೆ ಶನಿಸ್ತೋತ್ರವನ್ನು ಪಠಿಸಿ.

-ಲೋಹಿತ ಹೆಬ್ಬಾರ್ – 8762924271 (what’s app only)

Published On - 12:04 pm, Sun, 23 November 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ