Horoscope Today 31 July: ಇಂದು ಈ ರಾಶಿಯವರ ಜೊತೆ ಹೊಂದಾಣಿಕೆಯಿಂದ ಇರಲಾಗದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಶ್ರಾವಣ ಮಸ ಶುಕ್ಲ ಪಕ್ಷದ ಸಪ್ತಮೀ ತಿಥಿ ಗುರುವಾರ ವೈದ್ಯರಲ್ಲಿ ಚುರುಕು ತನ, ಆರ್ಥಿಕ ಅಸಮತೋಲನ, ಸಹಾಸದಿಂದ‌ ಗಾಯ, ಅತಿಯಾದ ಆಡಂಬರ‌ ಇವೆಲ್ಲ ಈ ದಿನದ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today 31 July: ಇಂದು ಈ ರಾಶಿಯವರ ಜೊತೆ ಹೊಂದಾಣಿಕೆಯಿಂದ ಇರಲಾಗದು
ದಿನ ಭವಿಷ್ಯ
Edited By:

Updated on: Jul 31, 2025 | 1:04 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಪುಷ್ಯಾ, ವಾರ: ಗುರು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಶಿವ, ಕರಣ: ಕೌಲವ, ಸೂರ್ಯೋದಯ – 06 : 17 am, ಸೂರ್ಯಾಸ್ತ – 07 : 01 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:15 -15:50 ಗುಳಿಕ ಕಾಲ 09:28 – 11:04 ಯಮಗಂಡ ಕಾಲ 06:17 – 07:53

ಮೇಷ ರಾಶಿ: ಪರಸ್ಪರ ಒಪ್ಪಿಗೆಯೊಂದಿಗೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಇಂದು ಸಣ್ಣ ಸಮಮಸ್ಯೆಗಳು ಹೆಚ್ಚು. ಸಲಹೆಯನ್ನು ಉಚಿತವಾಗಿ ಕೊಡಲು ಹೋಗಿ ಅಪಮಾನವಾಗಬಹುದು. ಸಿಕ್ಕಿದಷ್ಟನ್ನೇ ಸ್ವೀಕರಿಸಿ ತೃಪ್ತಿಪಡಿ. ಆಪತ್ತಿನಲ್ಲಿ ಸಹಾಯ ಮಾಡಲಿಲ್ಲ ಎಲ್ಲರನ್ನೂ ಶಪಿಸುವ ಅವಶ್ಯಕತೆ ಇಲ್ಲ ವಿದ್ಯಾಭ್ಯಾಸದಿಂದ ಲಾಭವಿದೆ ಎಂದು ಅನ್ನಿಸಿ ಶ್ರಮವಹಿಸುವಿರಿ. ವ್ಯವಹಾರಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಬಹಳ ಶ್ರಮಪಡುವಿರಿ. ಪ್ರತಿಭೆಯ ಅನಾವರಣವು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಎಲ್ಲ ವಿಚಾರಗಳಲ್ಲೂ ನಿಮ್ಮದೇ ಅಭಿಪ್ರಾಯ ಹೇಳುವುದಕ್ಕಿಂತ ಇತರರ ಅಭಿಪ್ರಾಯಗಳಿಗೂ ಬೆಲೆ ಕೊಡಿ. ಹೊಸ ನೀರು ಹರಿದು ಬರಬಹುದು. ಸ್ತ್ರೀರೋಗತಜ್ಞರಿಗೆ ಬೇಡಿಕೆ ಹೆಚ್ಚಾಗಿ ಸಂಪಾದನೆ ಅಧಿಕವಾಗಬಹುದು. ಯಾವುದೂ ಮಿತಿ ಮೀರದಂತೆ ನೋಡಿಕೊಳ್ಳಿ. ಕಳೆದ ಸಮಯವನ್ನು ನೀವು ಮೆಲುಕು ಹಾಕಿ ಸಮಯ ವ್ಯರ್ಥವಾಗಬಹುದು. ಕಲಾವಿದರು ಉತ್ತಮ‌ ಅವಕಾಶವನ್ನು ಅನಿರೀಕ್ಷಿತವಾಗಿ ಪಡೆಯುವಿರಿ. ಎಲ್ಲವನ್ನೂ ಆಸ್ವಾದಿಸುವ ಮನೋಭಾವ ಇರಲಿ.

ವೃಷಭ ರಾಶಿ: ಕಾರ್ಯಗಳಲ್ಲಿ ಅದೃಷ್ಟವು ಸಂಪೂರ್ಣವಾಗಿ ಸಹಕರಿಸಬಹುದು. ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ದೈಹಿಕ ಮತ್ತು ಮಾನಸಿಕ ಆಯಾಸದಿಂದ ಪರಿಹಾರ.ವಸಹೋದರರ ಭಿನ್ನಾಭಿಪ್ರಾಯವನ್ನು ಮೂರನೆಯವರು ಸರಿ ಮಾಡುವರು. ಇಂದಿನ ಕೆಲಸಗಳ ಯೋಜನೆ ಬಗ್ಗೆ ಸರಿಯಾದ ದೃಷ್ಟಿ ಇರಲಿ. ದೂರಪ್ರಯಾಣ ಸುಖಕರವಾಗಿ ಇರುವುದು.‌ ಇಂದು ನಿಮಗೆ ಒಡಹುಟ್ಟಿದವರು ಸಾಕಷ್ಟು ವಿರೋಧವನ್ನು ಮಾಡಿಯಾರು. ಖರ್ಚಿಗೆ ತಕ್ಕಂತೆ ಆದಾಯವೂ ಬರುವುದರಿಂದ ಆರ್ಥಿಕ ಸ್ಥಿತಿಯು ಸಮತೋಲನದಲ್ಲಿ ಇರವುದು. ಕೆಲಸದಿಂದ ಏನನ್ನಾದರೂ ಸಾಧಿಸಲು ಪ್ರಯತ್ನಿಸಿ. ಹಿರಿಯರ ಆರೋಗ್ಯ ಸಮಸ್ಯೆಗಳು ಸರಿಯಾಗಬಹುದು. ನಿಮ್ಮವರನ್ನು ಸತ್ಕಾರ್ಯಕ್ಕೆ ಮನವೊಲಿಸಲು ಶ್ರಮಪಡಬೇಕಾದೀತು. ಸ್ಥಿರಾಸ್ತಿಗೆ ಸಂಬಂಧಿಸಿದ ಸರ್ಕಾರಿ ಕಾನೂನು ತೊಡಕುಗಳು ಇಂದು ನಿವಾರಣೆಯಾಗುವುದು. ಸ್ಪರ್ಧಾತ್ಮಕ ವಿಚಾರದಲ್ಲಿ ಹಿಂದುಳಿಯಬೇಕಾಗುವುದು. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ. ಹೊಸ ಉಪಕ್ರಮಗಳು ನಿಮಗೆ ಯಶಸ್ಸು ಕೊಡುವುದು.

ಮಿಥುನ ರಾಶಿ: ವ್ಯವಹಾರಗಳಲ್ಲಿ ವಿನಮ್ರತೆಯನ್ನ ಕಾಪಾಡಿಕೊಳ್ಳಿ.ದಿನವು ಆರ್ಥಿಕವಾಗಿ ಅತ್ಯುತ್ತಮವಾಗಿರಬಹುದು. ನಿಮ್ಮ ಮೇಲೆ ಹೆಚ್ಚಿನ ಕಣ್ಣು ಇರುವ ಕಾರಣ ಬಹಳ ಜಾಗರೂಕತೆ ಅವಶ್ಯಕ. ಎಲ್ಲ ಕೆಲಸವನ್ನೂ ಬೇರೆಯವರೇ ಮಾಡಲಿ ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ನಿಮಗೆ ಸಾಧ್ಯವಾದ ಕೆಲಸಗಳನ್ನು ಮಾಡಿ. ಭೂಮಿಯ ವ್ಯವಹಾರದವರಿಗೆ ನಂಬಿಕೆ ದ್ರೋಹ ಆಗಬಹುದು. ದಾಂಪತ್ಯದಲ್ಲಿ ಅನ್ಯೋನ್ಯತೆ ಮೂಡುವುದು ಕಷ್ಟವಾದೀತು. ಕೋಪವನ್ನು ನಿಯಂತ್ರಿಸುವುದು ಅವಶ್ಯಕ. ಇಲ್ಲವಾದರೆ ಕೆಟ್ಟ ಹೆಸರನ್ನು ಪಡೆಯಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಗೆ ಹುದ್ದೆ ದೊರೆಯುವುದು. ನೀವು ಪ್ರೇಮದಲ್ಲಿ ಬಿದ್ದುದರಿಂದ ಹಿರಿಯರು ನಿಮ್ಮ ಪ್ರೀತಿಗೆ ಒಪ್ಪಿಗೆ ನೀಡುವರು. ವೃತ್ತಿಯಲ್ಲಿ ಬಹಳ ಜಾಣ್ಮೆಯಿಂದ ಕೆಲಸವನ್ನು ಮಾಡುವಿರಿ. ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ. ಚಿಂತನೆಯ ಜೊತೆ ನಿಮ್ಮ ಮುಂದಿನ ಹೆಜ್ಜೆ ಇರಲಿ. ಶಿಸ್ತಿಗೆ ಹೆಚ್ಚು ಗಮನವನ್ನು ಇಂದು ಕೊಡುವಿರಿ. ಸಂಗಾತಿಯ ಮನೋರಥವನ್ನು ಇಂದು ನೀವು ಈಡೇರಿಸುವುದು ಕಷ್ಟವಾಗುವುದು.

ಕರ್ಕಾಟಕ ರಾಶಿ: ಸಮಯದಲ್ಲಿ ಬಹಳ ವಿವೇಚನೆಯಿಂದ ಕ್ರಮವನ್ನು ಕಾಪಾಡಿಕೊಳ್ಳುವ ಅವಶ್ಯಕತೆಯಿದೆ. ಕೆಲಸದ ಪ್ರದೇಶದಲ್ಲಿ ಕೆಲಸವು ಶಾಂತಿಯುತವಾಗಿ ಪೂರ್ಣಗೊಳ್ಳುತ್ತದೆ. ಭಿನ್ನಮತವನ್ನು ನೀವು ಇಂದೇ ಉಪಶಮನ ಮಾಡಿಕೊಳ್ಳುವುದು ಉತ್ತಮ. ಭೂಮಿಯ ಉತ್ಪನ್ನದ ವ್ಯವಹಾರವು ಬಹಳ ಚೆನ್ನಾಗಿ ಆಗಬಹುದು. ಸರ್ಕಾರದಿಂದ ಬರಬೇಕಾದ ಹಣವು ಬಂದು ಸಾಲದಿಂದ ನೀವು ಮುಕ್ತವಾಗುವಿರಿ. ಯಾವುದೇ ದುರಭ್ಯಾಸವು ನಿಮಗೆ ಕೆಟ್ಟ ಹೆಸರನ್ನು ತರಬಹುದು. ಸಾಹಸಪ್ರಿಯರಿಗೆ ಹೊಸ ವಿಚಾರಗಳು ಬರಬಹುದು. ಇಂದು ನಿಮ್ಮ ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ವ್ಯಾಪಾರದಲ್ಲಿ ಚೇತರಿಕೆ ಕಂಡು ಸಂತಸವಾಗುವುದು. ನಿಮ್ಮ ಕಾರ್ಯಕ್ಷಮತೆಯನ್ನು ಸಂಸ್ಥೆಯು ಪ್ರಶಂಸಿಸುವುದು.‌ ಯಾರೋ ಮಾಡಿದ ತಪ್ಪಿಗೆ ನಿಮಗೆ ಶಿಕ್ಷೆಯಾಗಬಹುದು. ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ಯಾರಾದರೂ ತಪ್ಪು ತಿಳಿದಾರು ಎಂಬ ಭಾವವು ನಿಮ್ಮನ್ನು ಕಾಡಬಹುದು. ಪ್ರಾಣಿಗಳ ಮೇಲೆ ಅಪಾರ ದಯೆ ಬರಬಹುದು.

ಸಿಂಹ ರಾಶಿ: ನಿಮ್ಮ ಪ್ರತಿಭೆಯಿಂದ ಕೆಲವು ಹೊಸ ಯಶಸ್ಸು ಮತ್ತು ಹೊಸ ಆದೇಶಗಳನ್ನು ಪಡೆಯಬಹುದು. ಪುಣ್ಯ ಸ್ಥಳಗಳ ದರ್ಶನದಿಂದ ನಿಮಗೆ ಮಾನಸಿಕ ಅಶಾಂತಿ ದೂರಾಗುವುದು. ಸ್ನೇಹಿತರಿಗೆ ಮಾಡಿದ ಸಹಾಯದಿಂದ ನಿಮಗೆ ಅನುಕೂಲವಗಲಿದೆ. ಉನ್ನತ ಅಧಿಕಾರಿಗಳಿಗೆ ಮುಂಬಡ್ತಿ ದೊರೆಯುವ ಸಾಧ್ಯತೆ ಇದೆ. ವಾಹನ ಚಾಲನೆ ವೇಳೆ ಅವಸರ ಬೇಡ. ಖರ್ಚನ್ನು ನಿಭಾಯಿಸುವುದು ನಿಮಗೆ ಬಹಳ ಕಷ್ಟವಾದೀತು. ನಿಮ್ಮ ಉಪಕಾರವೇ ನಿಮಗೆ ಹಿಂದಿರುಗಿ ಬರಲಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚು ಶ್ರದ್ಧೆಯು ಬರಬಹುದು. ನಿಮ್ಮನ್ನು ಕಛೇರಿಯಲ್ಲಿ ಗಮನಿಸಬಹುದು. ಹಾಗಾಗಿ ಸಣ್ಣ ನಡೆಯೂ ದೊಡ್ಡ ಸುದ್ದಿಗೆ ಕಾರಣವಾಗಬಹುದು. ಏಕಾಂತವು ನಿಮಗೆ ಹಿತವೆನಿಸಬಹುದು. ಯಾರಾದರೂ ನಿಮ್ಮನ್ನು ತೆಗಳಿದರೆ ಅದನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಿ. ಬಂಧುಗಳ ಚರಾಸ್ತಿಯು ಸಿಗಬಹುದು. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳು ಹೆಚ್ಚಾಗುವುದು.‌ ನಂಬಿದವರಿಗೆ ಬೇಕಾದ ವ್ಯವಸ್ಥೆ ಮಾಡುವಿರಿ.

ಕನ್ಯಾ ರಾಶಿ: ವೃತ್ತಿಜೀವನದಲ್ಲಿ ಯಾವುದೇ ಶುಭ ಮಾಹಿತಿಯನ್ನು ಪಡೆಯಲಾಗದು. ಮನೆಯ ಹಿರಿಯ ಸದಸ್ಯರೊಂದಿಗೆ ಸಮಯ ಕಳೆಯಿರಿ. ಇಂದು ಮಹಿಳೆಯರಿಗೆ ವೃತ್ತಿಯಲ್ಲಿ ಕಿರಿಕಿರಿ ಉಂಟಾಗಲಿದೆ. ಇಂದಿನ ನಿಮ್ಮ ಕೋಪವನ್ನು ಶಾಂತ ಮಾಡಲು ಸಂಗಾತಿಯು ಶ್ರಮಪಡಬಹುದು. ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದ್ದು, ಕೆಲಸವು ಹಾಳಾಗಬಹುದು. ಮಹಿಳೆಯರು ಸಕಾರಾತ್ಮಕ ಚಿಂತನೆಯತ್ತ ಗಮನಕೊಡುವುದು ಉತ್ತಮ. ಆದಾಯವು ನಿರೀಕ್ಷಿತ ಮಟ್ಟದಲ್ಲಿದ್ದು ಖರ್ಚು ಇನ್ನೂ ಅಧಿಕವಾಗಬಹುದು. ವಾಹನ ಖರೀದಿಯ ಬಗ್ಗೆ ನಿಮಗೆ ಪೂರ್ಣ ತೃಪ್ತಿ ಇರದು. ಕೃಷಿ ಸಂಬಂಧಿಸಿದ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚಿನ ಹುದ್ದೆಯನ್ನು ನೀಡುವ ಪ್ರಸ್ತಾಪವೂ ಬರಬಹುದು. ಅತಿಯಾದ ಆಡಂಬರವು ಇತರ ಕಣ್ಣು ಕುಕ್ಕುವುದು. ಇನ್ನೊಬ್ಬರ ಅಹಂಕಾರಕ್ಕೆ ಸೊಪ್ಪು ಹಾಕುವುದು ಬೇಡ. ನಿರ್ಲಕ್ಷ್ಯದಿಂದ ಎಲ್ಲವೂ ಸಾಧ್ಯ. ಹೂಡಿಕೆಯ ವಿಚಾರವಾಗಿ ದೀರ್ಘ ಚರ್ಚೆ ಮಾಡುವಿರಿ.

ತುಲಾ ರಾಶಿ: ದುಬಾರಿ ಉಪಕರಣಕ್ಕೆ ಹಾನಿಯು ಹೆಚ್ಚಿನ ವೆಚ್ಚಗಳಿಗೆ ಕಾರಣವಾಗಬಹುದು. ವ್ಯಾಪಾರ ಚಟುವಟಿಕೆಗಳನ್ನು ಸುಧಾರಿಸಬಹುದು. ನಿಮ್ಮ ಕ್ಷಣಿಕ ಕೋಪವೇ ಎಲ್ಲರ ಕೆಂಗಣ್ಣಿಗೆ ಗುರಿಯಾಗುವುದು. ಇಂದು ನಿಮ್ಮ ಸಮಾಜಮುಖೀ ಕಾರ್ಯಗಳಿಗೆ ಗೌರವ, ಪ್ರಶಂಸೆಗಳು ಸಿಗಲಿವೆ. ನೆರೆ-ಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ನಿಮ್ಮ ಕಾರ್ಯಕ್ಕೆ ವಿದೇಶದಿಂದ ಕರೆ ಬರಬಹುದು. ಸ್ನೇಹಿತರ ಜೊತೆ ವ್ಯವಹಾರ ಮಾಡುವಾಗ ಅಪನಂಬಿಕೆಗಳು ಬಾರದಂತೆ ಎಚ್ಚರವಹಿಸಿರಿ. ಸ್ವಂತ ವ್ಯವಹಾರದಲ್ಲಿ ನಷ್ಟವಾಗಬಹುದು. ನಿಮ್ಮವರನ್ನು ಕೆಳಗೆ ಬೀಳಲು ಕೊಡಲಾರಿರಿ. ನೌಕರರಿಗೆ ಹೆಚ್ಚು ಒತ್ತಡವಾಗಬಹುದು. ಕೃಷಿಯು ನಿಮಗೆ ಆಸಕ್ತಿಯ ವಿಷಯವಾಗಿದ್ದು ತೊಡಗಿಕೊಳ್ಳಲು ತೊಡಕುಗಳು ಇರಲಿದೆ. ನೀವು ತೆರಿಗೆಯ ವಿಚಾರದಲ್ಲಿ ಸರಿಯಾಗಿ ಇರಬೇಕಾಗಬಹುದು. ಹಿರಿಯರ ಮಾತನ್ನು ತಾತ್ಸಾರ ಮಾಡುವುದು ಬೇಡ. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಮಾಡಿ ಕಾಲಹರಣವಾಗುವುದು.

ವೃಶ್ಚಿಕ ರಾಶಿ: ಸಮೀಪದ ಸಂಬಂಧಿಗೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನಿಮ್ಮ ಸಹಾಯ ಬೇಕಾಗುತ್ತದೆ. ವ್ಯವಹಾರದಲ್ಲಿ ಸ್ವಲ್ಪ ಮಂದಗತಿ ಉಂಟಾಗಬಹುದು. ನಿಮ್ಮ ಹೆಸರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ನೀವು ಅಂದುಕೊಂಡಿದ್ದು ಮಾತ್ರ ಸತ್ಯವಾಗಲಾರದು. ಅದಕ್ಕಿರುವ ಮುಖವನ್ನು ಗಮನಿಸಿ ತೀರ್ಮಾನಿಸಿ. ಸಾಲವಾಧೆ ಎದುರಾಗಲಿದ್ದು ಸಮಸ್ಯೆಯನ್ನು ಧೈರ್ಯದಿಂದ ನಿರ್ವಹಿಸಿ. ಉದ್ಯಮಕ್ಕೆ ಆರ್ಥಿಕ ನೆರವು ಸಿಗಲಿದೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಲಿದ್ದು ಒಪ್ಪಿಕೊಳ್ಳುವಿರಿ. ಪ್ರಭಾವಶಾಲಿ ವ್ಯಕ್ತಿಯ ಭೇಟಿಯಾಗುವುದು. ವಿದ್ಯಾಭ್ಯಾಸದ ಓದಿನಲ್ಲಿ ಆಸಕ್ತಿ ಹೆಚ್ಚಾಗಬಹುದು.‌ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವಿರಿ. ಹಿರಿಯರಿಂದ ನಿಮ್ಮ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವುದು. ನಿಮ್ಮವರ ಮೇಲೆ ಬೇಸರವನ್ನು ವ್ಯಕ್ತಪಡಿಸುವಿರಿ. ಆಪ್ತರ ವಿಯೋಗವು ನಿಮ್ಮನ್ನು ಕುಗ್ಗಿಸಬಹುದು. ಅಧಿಕಾರದ ಬಗ್ಗೆ ವ್ಯಾಮೋಹವು ಕಡಿಮೆಯಾಗುವುದು. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳುವಿರಿ. ಕಳೆದಕೊಂಡ ನಿಮ್ಮ ವಸ್ತುವನ್ನು ಮತ್ತಾರದೋ ಮೂಲಕ ಪಡೆದುಕೊಳ್ಳುವಿರಿ.

ಧನು ರಾಶಿ: ಜನರ ಮೇಲೆ ನಿಮ್ಮ ಇಚ್ಛೆಯನ್ನು ಹೇರಲು ಪ್ರಯತ್ನಿಸದಿರುವುದು ಉತ್ತಮ. ವ್ಯವಹಾರದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಸಮಯ ಇದು. ಅಲ್ಪರ ಸಂಗದಿಂದ ಸ್ವಾಭಿಮಾನ ಧಕ್ಕೆ ಬರುವುದು. ಮುಜುಗರವನ್ನು ಎದುರಿಸಬೇಕಾಗಬಹುದು. ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬಯಸಿದರೆ ನಕಾರಾತ್ಮಕ ಉತ್ತರವನ್ನು ಕೊಡಬೇಡಿ. ಪ್ರಾಮಾಣಿಕತೆಯಿಂದ ಯಶಸ್ಸು ಸಿಗಲಿದೆ. ಕೆಲಸದ ಮಧ್ಯದಲ್ಲಿಯೂ ಕುಟುಂಬದ ಆಗು ಹೋಗುಗಳತ್ತ ಗಮನಹರಿಸುವಿರಿ. ನಿಸ್ವಾರ್ಥಿಗಳಂತೆ ಕಂಡರೂ ವಂಚನೆಯ ಬುದ್ಧಿಯನ್ನು ಬೆಳೆಸಿಕೊಳ್ಳುವಿರಿ. ಹಳೆಯ ಸ್ನೇಹಿತರ ಜೊತೆ ಕಾಲ ಕಳೆಯುವಿರಿ. ಲೆಕ್ಕ ಪತ್ರಗಳನ್ನು ಪರಿಶೀಲನೆ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ಎಲ್ಲ ಕೆಲಸಗಳೂ ಏಕಕಾಲಕ್ಕೆ ಬರಬಹುದು. ನಿಮ್ಮ ಮೇಲಿನ ಭರವಸೆಯು ಸುಳ್ಳಾಗದೇ ಇರಲಿದೆ. ನೀವು ಬೇಕಾದ ಸಹಾಯವು ಸರಿಯಾದ ಸಮಯಕ್ಕೆ ಸಿಗುವುದು. ನಿಮ್ಮ ಮಾತಿಗೆ ಬೆಂಬಲವಿರುವುದು. ಹಳೆಯ ನೆನಪುಗಳು ನಿಮ್ಮ ಕಾಡುವುವು. ಶತ್ರುಗಳ ಹುನ್ನಾರದಲ್ಲಿ ಸಿಕ್ಕಿಬೀಳುವಿರಿ.

ಮಕರ ರಾಶಿ: ನಕಾರಾತ್ಮಕ ವಾತಾವರಣದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಮೇಲಧಿಕಾರಿಗಳ ಮಾತನ್ನು ಲಘುವಾಗಿ ತೆಗೆದುಕೊಂಡು ಕೆಂಗಣ್ಣಿಗೆ ಗುರಿಯಾಗುವಿರಿ. ಕಾರ್ಯದ ಒತ್ತಡ ನಿಮ್ಮನ್ನು ಇಂದು ಬಂಧಿಸಿ ಇಡಲಿದೆ. ಹೊಸ ಕಾರ್ಯಗಳಿಗೆ ನೀವು ತರಬೇತಿ ಪಡೆಯುವಿರಿ. ಹೆಚ್ಚು ಜನರ ಸಂಪರ್ಕ ಮಾಡಬೇಕಾದ ಅನಿವಾರ್ಯತೆ ಬರಬಹುದು. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪಬಹುದು. ಸ್ನೇಹಿತರ ತಪ್ಪು ನಿಮ್ಮ ಮೇಲೆ ಬರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು ಉತ್ತಮ‌ ಫಲಿತಾಂಶವನ್ನು ಪಡೆಯಬಹುದು. ವೃತ್ತಪರರಿಗೆ ಸಮಯಕ್ಕೆ ಸರಿಯಾಗಿ ಆಗಬೇಕಾದ ಕಾರ್ಯವು ಆಗದು. ಸಂಶೋಧನೆಯಲ್ಲಿ ಹೊಸ ಮಾರ್ಗವು ಕಾಣಿಸಿಕೊಳ್ಳುವುದು. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು. ಆತ್ಮಿಯರ ಜೊತೆ ಮಾತುಕತೆಗೆ ಇಳಿಯುವಿರಿ. ದಾಂಪತ್ಯದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳಬಹುದು. ಮನೋಬಲವನ್ನು ಹೆಚ್ಚು ಮಾಡಿಕೊಳ್ಳಿ.

ಕುಂಭ ರಾಶಿ: ನಕಾರಾತ್ಮಕ ವಾತಾವರಣದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಬೇಡದ ವಿಚಾರದ ಬಗ್ಗೆ ಚರ್ಚೆಗಳು ನಡೆಯಲಿವೆ. ಇಂದು ನಿಮ್ಮನ್ನು ಕಾಳಜಿ ಮಾಡುವವರ ಜೊತೆ ಸಮಯವನ್ನು ಕಳೆಯುವುದು ಉತ್ತಮ ಎನಿಸಬಹುದು. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಆರಂಭಿಸಿದ ಕಾರ್ಯಗಳಲ್ಲಿ ಸಫಲತೆ ಸಿಗಲಿದೆ. ಹಳೆಯ ಸಾಲಗಳನ್ನು ತೀರಿಸಿ ನೆಮ್ಮದಿಯಿಂದ ಇರುವಿರಿ.‌ ಆರ್ಥಿಕತೆಯ ಗೊಂದಲಕ್ಕೆ ಪರಿಹಾರ ದೊರೆಯುವುದು. ಸಂಗಾತಿಯ ಆದಾಯವನ್ನು ನೀವು ಪಡೆಯಬಯಸುವಿರಿ. ನೂತನ ವಾಹನವನ್ನು ಖರೀದಿಸುವಿರಿ.‌ ಹೆಚ್ಚಿನ ಆದಾಯಕ್ಕೆ ವೃತ್ತಿಯನ್ನು ಬದಲಿಸುವಿರಿ. ಸಮಯಕ್ಕೆ ಸರಿಯಾಗಿ ನಿದ್ರೆಯ ಅವಶ್ಯಕತೆ ಇರಲಿದೆ. ನಿಮ್ಮ ಜಾಣತನವೇ ನಿಮಗೆ ವರವಾಗಲಿದೆ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಆಡಿದ ಮಾತಿಗೆ ಪಶ್ಚಾತ್ತಾಪಪಡಬೇಕಾದೀತು. ಖರ್ಚಿನ ವಿಚಾರದಲ್ಲಿ ಕೈ ಹಿಂದೆ ಮಾಡುವುದು ಒಳ್ಳೆಯದು. ಕಾರ್ಯದ ಪರಿಣತಿಯಿಂದ ನಿಮಗೆ ಉನ್ನತ ಸ್ಥಾನ ಮಾನ ಪ್ರಾಪ್ತಿ.

ಮೀನ ರಾಶಿ: ವೃತ್ತಿಪರ ಖ್ಯಾತಿಯ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಅನುಭವಿ ವ್ಯಕ್ತಿಯನ್ನು ಸಂಪರ್ಕಿಸುವಿರಿ. ದೇವರಲ್ಲಿ ಭಕ್ತಿಯ ಕೊರತೆ ಕಾಣಿಸುವುದು. ನಿಮ್ಮ ಸಂಕೋಚದ ಸ್ವಭಾವದಿಂದ ಹೇಳಬೇಕಾದ ವಿಚಾರವನ್ನು ಹೇಳದೇ ಸುಮ್ಮನಾಗುವಿರಿ.‌ ಉದ್ಯಮದ ಸೃಷ್ಟಿಗೆ ಬೇಕಾದ ಬಂಡವಾಳವು ಸಿಗಲಿದೆ. ಇಂದು ಸಾಲ ಪಡೆದವರು ಮರಳಿ ನೀಡಲಿದ್ದಾರೆ. ಹೊಸ ಜೀವನ ಶೈಲಿಗೆ ಒಗ್ಗಿಕೊಳ್ಳುವುದು ಕಷ್ಟವಾಗಬಹುದು.‌ ಮನಸ್ಸನ್ನು ನಿಯಂತ್ರಿಸಲು ನಿಮಗೆ ಕಷ್ಟವಾದೀತು. ಭೂ ಲಾಭಕ್ಕಾಗಿ ಅನ್ಯ ಮಾರ್ಗವನ್ನು ಹಿಡಿಯುವಿರಿ. ಲೆಕ್ಕಪತ್ರಗಳನ್ನು ಸರಿಯಾಗಿ ಇಡಿ. ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ಪ್ರೀತಿ ಬರಬಹುದು. ಉದ್ಯೋಗದಲ್ಲಿ ನಿಮಗೆ ಹೆಚ್ಚಿನ ಅನುಕೂಲತೆಗಳು ಉಂಟಾಗಬಹುದು. ಮನಸ್ಸು ಹಾಳಾಗುವ ಸಾಧ್ಯತೆ ಇದೆ. ತಿರುಗಾಟದಲ್ಲಿರುವ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ ವ್ಯಕ್ತಪಡಿಸಬಹುದು. ನಿಮಗೆ ಅಧಿಕ‌ ಖರ್ಚು ಎಂದು ಕಂಡರೆ ಅದನ್ನು ಮಾಡದೇ ಇರುವುದು ಉತ್ತಮ. ಇಷ್ಟವಿಲ್ಲದಿದ್ದರೂ ನೀವು ಹಿರಿಯರ ಮಾತನ್ನು ಕೇಳಬೇಕಾಗುವುದು.

-ಲೋಹಿತ ಹೆಬ್ಬಾರ್-8762924271 (what’s app only)