
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಧೃತಿ, ಕರಣ: ಗರಜ, ಸೂರ್ಯೋದಯ – 06 : 19 am, ಸೂರ್ಯಾಸ್ತ – 06 : 54 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 11:03 – 12:37 ಗುಳಿಕ ಕಾಲ 07:54 – 09:29 ಯಮಗಂಡ ಕಾಲ 15:46 – 17:20
ಮೇಷ ರಾಶಿ: ಎಂತಹ ಛಲವಿದ್ದರೂ ನೀವು ನಿಮ್ಮ ವೇಗದಲ್ಲಿಯೇ ಸಾಧಿಸಲು ಪ್ರಯತ್ನಿಸುವಿರಿ. ಇಂದು ನಿಮಗೆ ಒಳ್ಳೆಯವರಾಗುವುದೂ ಕಷ್ಟವೆನಿಸಬಹುದು. ಮನೆಯವರು ನಿಮ್ಮ ಮಾತಿನಿಂದ ಕಟ್ಟಿಹಾಕಬಹುದು. ಉಳಿದೆಲ್ಲ ಸಮಸ್ಯೆಗಿಂತ ಗುರಿಯೇ ನಿಮಗೆ ಮುಖ್ಯವಾಗಿರಲಿ. ಕಲ್ಪಿಸಿಕೊಂಡ ವಿಚಾರವು ಹಾಗೆಯೇ ಆಗಲಿದ್ದು ನಿಮಗೆ ಆಶ್ಚರ್ಯ ಆಗಬಹುದು. ಕೈಲಾದ ಸಹಾಯವನ್ನು ಮಾತ್ರ ಒಪ್ಪಿಕೊಳ್ಳಿ. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವವನ್ನು ನೀವು ಕೊಡಲಿದ್ದೀರಿ. ಉದ್ಯೋಗದಿಂದ ನಿಮ್ಮನ್ನು ಕೈಬಿಡುವ ಭಯವು ಕಾಡಬಹುದು. ಮುಂಗೋಪದಿಂದ ಸಮಸ್ಯೆಯನ್ನು ತಂದುಕೊಳ್ಳುವಿರಿ. ಆಪ್ತರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ಚಿಂತೆಯಿಂದ ನಿದ್ರೆ ಕೆಡುವ ಸಾಧ್ಯತೆ ಇದೆ. ಸ್ನೇಹಿತರ ಜೊತೆ ಹರಟೆ ಹೊಡೆಯುವಿರಿ. ಪರಿಶ್ರಮವು ಇಂದು ಹೆಚ್ಚಾಗಬಹುದು. ಈ ದಿನ ಚೆನ್ನಾಗಿ ಇರಲಿ ಎಂದು ಪ್ರಾರ್ಥನೆ ಮಾಡುವುದೊಂದೇ ನಿಮ್ಮ ಕಡೆಯಿಂದ ಇಂದು ಆಗಬಹುದಾದ ದೊಡ್ಡ ಕೆಲಸ. ಶತ್ರುಗಳ ನಡುವೆ ಮೌನವಾಗಿಯೇ ಇರಬೇಕಾಗುವುದು.
ವೃಷಭ ರಾಶಿ: ಎಷ್ಟೇ ಆಪ್ತರಾದರೂ ನಿಮ್ಮ ವಿಚಾರ ಬಂದಾಗ ಏಕಾಕಿಯಾಗಿ ವ್ಯವಹರಿಸಲಾಗದು. ಯಾರ ಮೇಲೇ ಇಡುವ ವಿಶ್ವಾಸವೂ ನಿಮಗೆ ಸಮಾಧಾನವಾಗದು. ಸಾಲಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ಬಂಧುಗಳ ಭೇಟಿಗಾಗಿ ನೀವು ದೂರಪ್ರಯಾಣ ಮಾಡುವಿರಿ. ನಿಮ್ಮ ಭವಿಷ್ಯದ ಕಲ್ಪನೆಗಳು ವಾಸ್ತವದಿಂದ ದೂರವಾಗುವುದು. ನಿಮ್ಮಲ್ಲಿ ಏನನ್ನೋ ಸಾಧಿಸಿದ ತೃಪ್ತಿ ಇರಲಿದೆ. ಬರಬೇಕಾದ ಹಣವು ಬಾರದೇ ಮೋಸವಾಗಲಿದೆ. ನಿಮ್ಮದೇ ಕೆಲಸಗಳ ನಡುವೆ ನೀವು ಕಳೆದು ಹೋಗುವಿರಿ. ಅಲ್ಪಾವಧಿಯ ತರಬೇತಿಯಿಂದ ಉದ್ಯೋಗ ಪಡೆಯುವಿರಿ. ಕುಟುಂಬಕ್ಕೆ ಸಮಯ ಕೊಡಲು ಕಷ್ಟವಾದೀತು. ನಿಮ್ಮ ಅನಾರೋಗ್ಯವು ಇಂದು ಹೆಚ್ಚಾಗಬಹುದು. ನೀವು ಮುಂಗಡವಾಗಿ ಕೊಟ್ಟ ಹಣವು ಬಾರದೇ ಪಶ್ಚಾತ್ತಾಪ ಆಗುವುದು. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ತಂದೀತು. ಸಹೋದರರ ನಡುವೆ ರಹಸ್ಯ ಸಮಾಲೋಚನೆ ನಡೆಯಬಹುದು. ಯಾರ ಮೇಲೂ ಹಗುರಾದ ಮನೋಭಾವ ಬೇಡ. ಕೆಲವು ಸಂಗತಿಗಳು ನಿಮ್ಮ ಸಮಯವನ್ನು ವ್ಯರ್ಥ ಮಾಡಬಹುದು.
ಮಿಥುನ ರಾಶಿ: ಪ್ರಯಾಣಕ್ಕೆ ಹೊರಡುವಾಗ ಕಾಲವನ್ನು ನೋಡಿಕೊಂಡು ಹೊರಡಿ. ಬೇಕೆಂದು ಮಾಡದಿದ್ದರೂ ನಿಮ್ಮ ಮೇಲೆ ಕೆಲವು ಆರೋಪಗಳು ಬರುವುದು. ಬೇಸರ ಪಡದೇ ಅದನ್ನು ಸರಿಮಾಡಿಕೊಳ್ಳುವ ವಿಧಾನವನ್ನು ಹುಡುಕಿ. ಹೊಸದಾಗಿ ವೃತ್ತಿಯನ್ನು ಆರಂಭಿಸಿದವರಿಗೆ ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲದಲ್ಲಿ ಇರುವರು. ಸಂಸ್ಥೆಯ ಮುಖ್ಯಸ್ಥರ ಜೊತೆ ಆತ್ಮಸ್ಥೈರ್ಯದಿಂದ ಮಾತನಾಡುವಿರಿ. ನಿಮ್ಮ ವಸ್ತುವನ್ನು ನೀವೇ ಪಡೆದುಕೊಳ್ಳಲು ಓಡಾಟ ಮಾಡಬೇಕಾದೀತು. ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಕೇಳಬೇಕಾದ ಸ್ಥಿತಿ ಬರಬಹುದು. ಸಂಗಾತಿಯ ವ್ಯಥೆಯನ್ನು ಸರಿಮಾಡುವುದು ನಿಮ್ಮದಾಗಿದೆ. ಮಾನಸಿಕವಾಗಿ ಸಾಮ್ಯತೆ ಇಲ್ಲದೇ ಪ್ರೇಮವು ಸಾಧ್ಯವಾಹದು. ಸಮಾಧಾನ ಚಿತ್ತದಿಂದ ನೀವು ನಿಮ್ಮ ಅವಲೋಕನವನ್ನು ಮಾಡುವಿರಿ. ಅಸಭ್ಯ ಮಾತುಗಳಿಂದ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು. ನಿಮ್ಮ ಹಣವು ಕರಗುವ ಬಗ್ಗೆ ಚಿಂತೆ ಆಗಲಿದೆ. ನಿಮ್ಮ ಬಗ್ಗೆ ಆಡಿಕೊಳ್ಳುತ್ತಿರುವವರು ಸುಮ್ಮನಾಗುವರು. ಹೃದಯ ವೈಶಾಲ್ಯದಿಂದ ಪ್ರಶಂಸೆ ಸಿಗುವುದು.
ಕರ್ಕಾಟಕ ರಾಶಿ: ಭೂಮಿಯನ್ನು ದಾನವಾಗಿ ಪಡೆಯುವ ಅವಕಾಶ ಬರಲಿದ್ದು, ಕಾನೂನು ಬದ್ಧವಾಗಿಯೇ ಮಾಡಿಕೊಳ್ಳಿ. ಯಾರಾದರೂ ನಿಮ್ಮನ್ನೇ ಗುರಿ ಮಾಡಿಕೊಂಡು ಇರಬಹುದು. ಇಂದು ನಿಮ್ಮ ಕಾರ್ಯಗಳು ಸುಲಭದಲ್ಲಿ ಪೂರ್ಣಗೊಳ್ಳುವುದು. ನಿಮ್ಮ ಸ್ಥಾನವನ್ನು ಬಿಟ್ಟುಕೊಡಲು ನೀವು ಒಪ್ಪುವುದಿಲ್ಲ. ದ್ವೇಷವು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ನಿಮ್ಮನ್ನು ಅಪ್ರಾಮಾಣಿಕರೆಂದು ಹೀಗಳೆಯಬಹುದು. ಇಂದು ನಿಮ್ಮ ಅಭಿಪ್ರಾಯವನ್ನು ಆಪ್ತರ ಜೊತೆ ಹಂಚಿಕೊಳ್ಳಲಿದ್ದೀರಿ. ವಿಶ್ವಾಸವನ್ನು ಕಳೆದುಕೊಂಡ ವ್ಯವಹಾರ ಊರ್ಜಿತವಾಗದು ಎನ್ನುವುದು ಗೊತ್ತಿರಲಿ. ಅತ್ಯಾಪ್ತತೆಯಿಂದ ನಿಮಗೆ ಸಂಕಟವಾಗಬಹುದು. ಹಿರಿಯರ ಮಾತುಗಳನ್ನು ತಿರಸ್ಕರಿಸುವ ಮಾನಸಿಕತೆ ಇರಲಿದೆ. ಪ್ರೇಮವು ಕಾಮವಾಗಿ ಪರಿವರ್ತನೆ ಆಗಬಹುದು. ಇಂದಿನ ನಿಮ್ಮ ಕಾರ್ಯದಿಂದ ಪ್ರೀತಿಯನ್ನು ಗಳಿಸುವಿರಿ. ಸಂಬಂಧದಲ್ಲಿನ ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು.
ಸಿಂಹ ರಾಶಿ: ಕಾನೂನು ಬಾಹಿರ ಚಟುವಟಿಕೆಯಲ್ಲಿ ಇಟ್ಟ ಹಣಕ್ಕೆ ಕುತ್ತು ಬರಲಿದೆ. ಇಂದಿನ ತಪ್ಪು ಕಾರ್ಯಗಳಿಗೆ ಆತ್ಮ ಸಾಕ್ಷಿ ಅಡ್ಡ ಬರಬಹುದು. ಇಂದು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಲು ಕಷ್ಟವಾಗುವುದು. ನೀವು ಆತ್ಮವಿಶ್ವಾಸವು ಶಕ್ತಿಯಿಂದ ತುಂಬಿರುವಿರಿ. ಶೀಘ್ರವಾಗಿ ಬಂದ ಲಾಭದಿಂದ ಅಪಾಯವಿರಲಿದೆ. ಕಛೇರಿಯಲ್ಲಿ ಒತ್ತಡದ ವಾತಾವರಣವಿರಲಿದೆ. ಒಳ್ಳೆಯ ಸುದ್ದಿಗಳು ನಿಮಗೆ ಸಂತೋಷವನ್ನು ನೀಡಬಹುದು. ಹಿರಿಯರಿಗೆ ಪ್ರಿಯವಾದುದನ್ನು ಮಾಡುವಿರಿ. ರಾಜಕಾರಣಿಗಳು ಕರ್ತವ್ಯವನ್ನು ಮಾಡುವರು. ಬೇಸರವಾಗುವ ಮಾತುಗಳನ್ನು ನೀವು ಕಡಿಮೆಮಾಡಿಕೊಳ್ಳಿ. ನಿಮ್ಮ ಸ್ನೇಹಶೀಲತೆ ಎಲ್ಲರಿಗೂ ಇಷ್ಟವಾಗುವುದು. ಜನರ ಬೆಂಬಲವನ್ನು ಪಡೆಯಲು ಪ್ರಯತ್ನಿಸುವಿರಿ. ದುರಭ್ಯಾಸಗಳಿಗೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು. ನಕಾರಾತ್ಮಕ ಸುದ್ದಿಗಳು ಗಮನ ಸೆಳೆಯುವುದು. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸಿನಲ್ಲಿ ಇರುವಿರಿ. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ. ಮಕ್ಕಳಿಂದ ಅನಾದರವಾಗಬಹುದು.
ಕನ್ಯಾ ರಾಶಿ: ಕಾರ್ಯದಲ್ಲಿ ತೋರಿಸಿದ ನಿಷ್ಠೆಯೇ ನಿಮ್ಮನ್ನು ಕಾಪಾಡುವುದು. ಹೊಸ ಯೋಜನೆಗಳು ನಿಮ್ಮನ್ನು ಹಿಡುಕಿ ಬರಬಹುದು. ಅವಶ್ಯಕ ವಸ್ತುವನ್ನು ಕಣ್ಮರೆ ಮಾಡಿಕೊಳ್ಳುವಿರಿ. ಹೊಸ ಕಛೇರಿಯಲ್ಲಿ ಬಹಳ ಉತ್ಸಾಹದಿಂದ ಕೆಲಸ ಮಾಡುವಿರಿ. ನಿಮಗೆ ಬೇಕಾದ ಹಣವನ್ನು ಹೊಂದಿಸಲು ಓಡಾಡಬೇಕಾಗಬಹುದು. ಮಕ್ಕಳಿಗೆ ಉತ್ತೇಜನ ನೀಡುವ ಅವಶ್ಯಕತೆ ಇದೆ. ಪರಿಚಿತ ವ್ಯಕ್ತಿಗಳಿಂದಲೇ ನಿಮಗೆ ಮೋಸವಾಗಬಹುದು. ಆದಾಯದ ಮೂಲವನ್ನು ನೀವು ಹೆಚ್ಚಿಸಿಕೊಳ್ಳುವಿರಿ. ಅನಿರೀಕ್ಷಿತ ಓಡಾಟದಿಂದ ನಿಮ್ಮ ಪೂರ್ವನಿಶ್ಚಿತ ಕಾರ್ಯಗಳು ಅಸ್ತವ್ಯಸ್ತವಾಗಲಿದೆ. ಸಂತಾನಕ್ಕೆ ಮನೆಯ ಹಿರಿಯರಿಂದ ಒತ್ತಾಯ ಬರಬಹುದು. ನಿಮ್ಮ ಬಯಕೆಯನ್ನು ಪೂರೈಸಿಕೊಳ್ಳಲು ನೀವು ಕಷ್ಟಪಡುವಿರಿ. ಅಸಂಬದ್ಧ ಮಾತುಗಳಿಂದ ನಿಮಗೆ ಬೇಸರವಾಗಬಹುದು. ಯಾರನ್ನೋ ಮೆಚ್ಚಿಸಲು ಕೆಲಸಮಾಡಬೇಕಾಗುವುದು. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಮಕ್ಕಳಿಗೆ ನಿಮ್ಮಿಂದ ಏನಾದರೂ ಕೊಡುಗೆ ಸಿಗುವುದು. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ.
ತುಲಾ ರಾಶಿ: ಪ್ರಾಣಿಗಳ ಜೊತೆ ಅತಿಯಾದ ಸಲುಗೆ ಬೇಡ. ಮನೆಯ ಖರೀದಿ ವ್ಯವಹಾರದಲ್ಲಿ ಗೊಂದಲವಾಗುವುದು. ನಿಮ್ಮ ಇಂದಿನ ಕೆಲವು ನಡೆಗಳು ವ್ಯವಹಾರದ ಪ್ರಗತಿಗೆ ಮಾರಕವಾಗುವುದು. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆವಿರಲಿದೆ. ನೀವು ಕೊಟ್ಟ ಹಣವು ವಾಪಾಸು ಬರುವುದು ಕಷ್ಟ. ಹಿರಿಯರ ಮಧ್ಯಸ್ತಿಕೆಯಿಂದ ಸಮಸ್ಯೆಗಳು ಪರಿಹಾರವಾಗಬಹುದು. ಮಕ್ಕಳಿಂದ ದೊಡ್ಡ ನಿರೀಕ್ಷೆಯನ್ನು ಇಟ್ಟಕೊಂಡು ಹತಾಶರಾಗುವಿರಿ. ನಿಮ್ಮ ನಡೆತೆಗಳು ಅನುಮಾನವನ್ನು ಹುಟ್ಟಿಸಬಹುದು. ಹೂಡಿಕೆಯ ವಿಚಾರದಲ್ಲಿ ನೀವು ಅನುಭವಗಳನ್ನು ಕೇಳುವುದು ಉತ್ತಮ. ಮನೆಯ ಪರಿಸ್ಥಿತಿಯನ್ನು ಸುಧಾರಿಸಲು ನೀವು ಕಷ್ಟಪಡುವಿರಿ. ಅಧಿಕಾರದ ಜಂಬವನ್ನು ಬಿಡಿ. ಎಲ್ಲರೂ ನಿಮ್ಮ ಆಪ್ತರಾಗುವರು. ಸಣ್ಣ ನೋವು ಇಂದು ದೊಡ್ಡದಾಗಿ ಅದನ್ನು ತಡೆಯಲು ಕಷ್ಟವಾದೀತು. ದೀರ್ಘಕಾಲದ ವೈರವು ಮುಕ್ತಾಯವಾಗುವುದು. ಮಾತನ್ನು ಚೆನ್ನಾಗಿ ಬಲ್ಲವರಾಗಿದ್ದರು ಕಟುವಾದ ಮಾತುಗಳನ್ನು ಆಡಬೇಡಿ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸುವಿರಿ.
ವೃಶ್ಚಿಕ ರಾಶಿ: ಯಾರದೋ ಶಿಫಾರಸ್ಸಿನ ಮೂಲಕ ಭೂಮಿಯನ್ನು ಕಡಿಮೆ ಮೌಲ್ಯಕ್ಕೆ ಪಡೆಯುವಿರಿ. ನಿಮ್ಮ ವಿವಾಹಕ್ಕೆ ಮನೆಯವರಿಂದ ಒತ್ತಡ ಹೆಚ್ಚಾಗುವುದು. ಸಮಯಕ್ಕೆ ಗೌರವ ಕೊಡುವುದನ್ನು ನೀವು ಕಲಿಯಬೇಕಾದೀತು. ಏನಾದರೂ ಹೊಸತನವನ್ನು ಹುಟ್ಟಿಸಿಕೊಳ್ಳಬಹುದು. ನಿಮ್ಮವರೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಾನೂನನಲ್ಲಿ ನಿಮಗೆ ಮುನ್ನಡೆಯಿಂದ ಸಂತೃಪ್ತಿ ಇರುವುದು. ಅಧಿಕಾರಿ ವರ್ಗದಿಂದ ನಿಮಗೆ ಕಿರಿಕಿರಿ ಉಂಟಾಗಬಹುದು. ಹೊಸತನ್ನು ತಿಳಿದುಕೊಳ್ಳಲು ನೀವು ಸೋಲಬಹುದು. ಕೃಷಿಯ ಅನುಭವಿಗಳನ್ನು ಇಟ್ಟಕೊಂಡು ಕಾರ್ಯದಲ್ಲಿ ಮುನ್ನಡೆಯುವುದು ಸೂಕ್ತ. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ದುಃಖವಾಗಬಹುದು. ಬಹಳ ಚಂಚಲವಾದ ಮನಸ್ಸನ್ನು ಶುಭವಾದ ಕಾರ್ಯದಲ್ಲಿ ಜೋಡಿಸಿ. ತಾಳ್ಮೆಯಿಂದ ಇದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಕೆಲಸದ ಸಮಯವನ್ನು ಅದಕ್ಕಾಗಿ ಮಾತ್ರ ಮೀಸಲಿಡಿ. ನಿಮ್ಮ ಸಂಕಟವನ್ನು ಹೇಳಿಕೊಂಡರೂ ತೊಂದರೆ, ಸುಮ್ಮನೆ ಇದ್ದರೂ ತೊಂದರೆ ಆಗುವುದು. ಮಕ್ಕಳ ಕೆಟ್ಟ ಸ್ವಭಾವವನ್ನು ಈಗಲೇ ತೆಗೆದುಹಾಕಿ. ಅಪರಿಚಿತ ಕರೆಗಳು ಹೆಚ್ಚಾಗುವುದು.
ಧನು ರಾಶಿ: ಹಿರಿಯರು ನಿಮಗೆ ಎಚ್ವರಿಕೆಯ ಮಾತನ್ನು ಹೇಳುವರು. ಅದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಅಪಾಯ ತಂದುಕೊಳ್ಳುವಿರಿ. ಬಂಧುಗಳ ಒರಟುತನ ನಿಮಗೆ ಇಷ್ಟವಾಗದು. ನಿಮ್ಮನ್ನು ನೀವೇ ಏಕಾಂಗಿ ಎಂದು ಲೆಕ್ಕಿಸುವುದು ಬೇಡ. ಸಾಮಾಜಿಕ ಕಾರ್ಯವು ನಿಮ್ಮ ಯಶಸ್ಸನ್ನು ತಂದುಕೊಡಬಹುದು. ಹೊರಗಿನ ಆಹಾರ ವಸ್ತುವಿನಿಂದ ಆರೋಗ್ಯ ಕೆಡುವುದು. ಆ ವಿಷಯದ ಸರಿಯಾದ ಆಯ್ಕೆ ಮಾಡಲು ನಿಮಗೆ ಕಷ್ಟವಾದೀತು. ಶಿಕ್ಷಕವೃತ್ತಿಯಲ್ಲಿ ನೀವು ಇದ್ದರೆ ವಿದ್ಯಾರ್ಥಿಗಳಿಂದ ಸಮ್ಮಾನವು ಸಿಗಲಿದೆ. ಅಸಹಜ ಬೆಳವಣಿಗೆಗೆ ನೀವು ಕಾರಣರಾಗುವಿರಿ. ವಾಹನಕ್ಕಾಗಿ ನೀವು ಹಣವನ್ನು ವ್ಯಯಿಸುವಿರಿ. ನೂತನ ಉದ್ಯೋಗಕ್ಕೆ ನೀವು ಪ್ರಯತ್ನಶೀಲರಾಗುವಿರಿ. ಹಿಂಬಾಲಕರು ಸ್ವತಂತ್ರರಾದರೆ ಅಪಾಯ ಕಟ್ಟಿಟ್ಟಿದ್ದೇ. ಯಾರ ವಿರೋಧವನ್ನೂ ಕಟ್ಟಿಕೊಳ್ಳುವುದು ಬೇಡ. ಅಲ್ಪಾವಧಿಯಲ್ಲಿ ಲಾಭವನ್ನು ಗಳಿಸಲು ಹೋಗಿ ಮುಗ್ಗರಿಸುವಿರಿ. ಸಣ್ಣ ಅಪಮಾನವೂ ನಿಮಗೆ ದೊಡ್ಡದಾಗಿ ತೋರುವುದು. ನಿಮ್ಮ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳುವುದು ಕಷ್ಟವಾದೀತು. ಜವಾಬ್ದಾರಿಯುತ ಸ್ಥಾನವು ನಿಮಗೆ ಸಿಗಲಿದೆ. ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ.
ಮಕರ ರಾಶಿ: ನೀವೊಬ್ಬರೇ ಚಿಂತಿಸಿದರೆ ಪರಿಹಾರದ ಮಾರ್ಗಗಳು ಮುಚರಚಿದಂತೆ ತೋರುವುದು. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ಕಷ್ಟವಾಗುವುದು. ನಿಮ್ಮ ನಕಾರಾತ್ಮಕ ಆಲೋಚನೆಗಳು ಅನ್ಯರ ಇಷ್ಟವಾಗದು. ಇಂದು ಮನೆಯ ಅನೇಕ ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗಬಹುದು. ಉದ್ಯೋಗದಲ್ಲಿ ಹೆಚ್ಚು ಒತ್ತಡ ಇರಲಿದೆ. ಸಹೋದ್ಯೋಗಿಗಳ ಸಹಾಯವನ್ನೂ ನೀವು ಪಡೆಯಬಹುದಾಗಿದೆ. ಸಮಾರಂಭಗಳಿಗೆ ನೀವು ಭಾಗವಹಿಸಲಿದ್ದೀರಿ. ಸೂಕ್ತ ವಿಧಾನದೊಂದಿಗೆ ವ್ಯವಹಾರವನ್ನು ಮುಗಿಸಿಕೊಳ್ಳಿ. ತುರ್ತು ಪ್ರಯಾಣ ಮಾಡುವ ಅನಿವಾರ್ಯತೆ ಎದುರಾಗಬಹುದು. ನಿಮಗೆ ಇಂದು ಅಶುಭವಾರ್ತೆಯು ಕೇಳಿಬರಬಹುದು. ಕೆಲಸವನ್ನು ಮುಕ್ತಾಯಗೊಳಿಸದೇ ಇರಲು ನಾನಾ ಕಾರಣಗಳು ದೊರೆಯಬಹುದು. ವೈವಾಹಿಕ ಜೀವನವು ನಿಮ್ಮ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ತೊಡಕು ಕೊಡುವುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಅಜ್ಞಾತ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಲು ಹೋಗುವಿರಿ.
ಕುಂಭ ರಾಶಿ: ಇನ್ನೊಬ್ಬರಿಗೆ ಹೇಳುವ ನೀವು, ಅನುಸರಣೆ ಮಾಡುವುದು ಉತ್ತಮ. ಒಳ್ಳೆಯದನ್ನು ಬಿಟ್ಟು ಇರುವುದು ನಿಮಗೆ ಸರಿ ಕಾಣಿಸದು. ನೀವು ಅಗತ್ಯದ ಖರ್ಚುಗಳನ್ನೂ ನಿಯಂತ್ರಿಸಲು ಹೋಗಿ ಎಡವಟ್ಟು ಮಾಡಿಕೊಳ್ಳಬಹುದು. ಸ್ಚಂತ ಕಾರ್ಯಗಳಿಗೆ ಸಮಯವನ್ನು ಹೊಂದಿಸಲು ನಿಮಗೆ ಕಷ್ಟವಾದೀತು. ಎಲ್ಲ ಸಮಯದಲ್ಲಿಯೂ ನಿಮಗೆ ನಿಮ್ಮವರು ಬೇಕು ಎನಿಸಬಹುದು. ಮನಸ್ಸಿನ ಕಹಿಯನ್ನು ಹೊರಹಾಕಿ ಮನೆಯ ವಾತಾವರಣವನ್ನು ಹಾಳು ಮಾಡಿಕೊಳ್ಳುವಿರಿ. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳಲು ಹೋಗಬಹುದು. ಒಂದರಮೇಲೊಂದರಂತೆ ನಿಮಗೆ ಕರೆಗಳು ಬರಬಹುದು. ಅದನ್ನು ನಿವಾರಿಸಿಕೊಳ್ಳಲು ನಿಮಗೆ ಕಷ್ಟವಾದೀತು. ಹೂಡಿಕೆಯನ್ನು ಕೇವಲ ಅಂದಾಜಿಗೆ ಮಾಡಿ, ಹಣವನ್ನು ಕಳೆದುಕೊಳ್ಳುವಿರಿ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ವಿದ್ಯಾರ್ಥಿಗಳು ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದೇ ವೈಫಲ್ಯಕ್ಕೆ ಕಾರಣವಾಗುವುದು. ದುರ್ಬಲವಾದ ಮನಸ್ಸನ್ನು ನೀವು ಬಲಮಾಡಿಕೊಳ್ಳುವ ಅವಶ್ಯಕತೆ ಇರಲಿದೆ.
ಮೀನ ರಾಶಿ: ಕುಟುಂಬಕ್ಕೆ ಮೂರನೇ ವ್ಯಕ್ತಿಯ ಪ್ರವೇಶ. ಸಂಬಂಧದಲ್ಲಿ ವ್ಯತ್ಯಾಸವಾಗಲಿದೆ. ಇಂದು ನಿಮಗೆ ಭೂಮಿಯ ಉತ್ಪನ್ನದಿಂದ ಆದಾಯ ಕಡಿಮೆ ಆಗುವುದು. ಯಾರಾದರೂ ಸಾಲವನ್ನು ಕೇಳಿ ಬರಬಹುದು. ನಿಮ್ಮದಾದ ಕೆಲವು ನಿಲುವುಗಳಿಗೆ ನೀವು ಬದ್ಧರಾಗಿರಿ. ಲೆಕ್ಕಾಚಾರದ ವಿಚಾರದಲ್ಲಿ ನಿಮಗೆ ಅಪಮಾನದ ರೀತಿ ಎನಿಸಬಹುದು. ನಿಮಗೆ ಸಿಗುವ ಬಿಡುವಿನ ಸಮಯದಲ್ಲಿಯೇ ಧಾರ್ಮಿಕ ಶ್ರದ್ಧೆಯನ್ನು ತೋರುವಿರಿ. ಅನಿವಾರ್ಯತೆಯನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ನೀವು ನಿಮ್ಮ ನಡತೆಯನ್ನು ಬದಲಿಸಿಕೊಳ್ಳಲು ಹೋಗುವುದು ಬೇಡ. ಆಪ್ತರು ದೂರವಾಗುವ ಸಂಕಟವನ್ನು ನೀವು ಜೀರ್ಣಿಸಿಕೊಳ್ಳುವ ಅಗತ್ಯವಿದೆ. ಆಪ್ತರಿಂದ ಉಡುಗೊರೆ ಸಿಗಬಹುದು. ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗುವಿರಿ. ನೆಮ್ಮದಿಯನ್ನು ನೀವು ಪಡೆಯಲು ಪ್ರಯತ್ನಿಸುವಿರಿ. ಇಂದು ಒಂದೇ ಕಡೆ ಸುಮ್ಮನೆ ಕುಳಿತಿರುವುದು ಕಷ್ಟದ ಸಂಗತಿಯಾಗಲಿದೆ. ಕುಟುಂಬದ ಜೊತೆ ಸಮಯವನ್ನು ಕಳೆಯಬೇಕು ಎಂದುಕೊಂಡರೂ ಅದು ಆಗದು.
-ಲೋಹಿತ ಹೆಬ್ಬಾರ್ -8762924271 (what’s app only)