ಇಂದು ಸ್ತ್ರೀಯರು ಸ್ವಪ್ರಯತ್ನದಿಂದ ಲಾಭ ಗಳಿಸುವರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಶ್ರಾವಣ ಮಾಸ ಶುಕ್ಲ ಪಕ್ಷದ ನವಮೀ ತಿಥಿ ಶನಿವಾರ ಖರ್ಚನಿಂದ ಭಯವಿಲ್ಲ, ಸಂಕಟ ಹೇಳಲು ಮುಜುಗರ, ಅಶಾಂತಿಗೆ ಪರಿಹಾರ, ನೀರಸ ಪ್ರತಿಕ್ರಿಯೆ ಇವೆಲ್ಲ ಇಂದಿನ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಇಂದು ಸ್ತ್ರೀಯರು ಸ್ವಪ್ರಯತ್ನದಿಂದ ಲಾಭ ಗಳಿಸುವರು
ಜ್ಯೋತಿಷ್ಯ
Updated By: ವಿವೇಕ ಬಿರಾದಾರ

Updated on: Aug 02, 2025 | 1:49 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಪುಷ್ಯಾ, ವಾರ: ಶನಿ, ತಿಥಿ: ನವಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಾಧ್ಯ, ಕರಣ: ಭದ್ರ, ಸೂರ್ಯೋದಯ – 06 : 17 am, ಸೂರ್ಯಾಸ್ತ – 07 : 00 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 11:04 -12:39 ಗುಳಿಕ ಕಾಲ 07:53 – 09:28 ಯಮಗಂಡ ಕಾಲ 15:50 – 17:25

ಮೇಷ ರಾಶಿ: ನೀವು ಕೊಟ್ಟ ಹಣವು ಸೇರಬೇಕಾದ ಸ್ಥಳಕ್ಕೆ ಹೋಗಿಯೇ ಹೋಗುತ್ತದೆ ಎಂಬ ಅತಿಯಾದ ನಂಬಿಕೆ ಬೇಡ. ಯಾವುದಕ್ಕೂ ಆಗಾಗ ವಿಚಾರಿಸಿ ಮಾಹಿತಿ ಪಡೆಯಿರಿ. ಇಷ್ಟವಿಲ್ಲದ ಲೆಕ್ಕಾಚಾರವು ನಿಮ್ಮನ್ನೆ ಬಂಧು ಸುತ್ತಿಕೊಳ್ಳುವುದು. ಸಂಗಾತಿಯು ನಿಮ್ಮ ಇಂಗಿತವನ್ನು ಅರಿತು ಕೆಲಸ ಮಾಡುವರು. ಮಾನಸಿಕ ದ್ವಂದ್ವಗಳು ನಿಮ್ಮನ್ನು ಕಟ್ಟಿಹಾಕಬಹುದು. ಕಛೇರಿಯಲ್ಲಿ ಈ ಮೊದಲೇ ಇದ್ದ ವೈಮನಸ್ಯವು ಅಧಿಕವಾಗಬಹುದು. ಎಲ್ಲರಿಗೂ ತಿಳಿಯಲೂಬಹುದು. ಯಾರನ್ನೂ ಅವಲಂಬಿಸಿರುವುದು ಇಷ್ಟವಾಗದು. ಸಾಲವನ್ನು ಸರ್ಕಾರ ತೀರಿಸುತ್ತದೆ ಎಂಬ ಭಾವದಿಂದ ಎಷ್ಟಾದರೂ ಸಾಲವನ್ನು ಮಾಡಬೇಡಿ. ಬರಬೇಕಾದ ಹಣವು ಬರದೇ ಆರ್ಥಿಕವಾದ ಮುಗ್ಗಟ್ಟು ಬರಬಹುದು. ಉದ್ಯೋಗದ ಸ್ಥಳದಲ್ಲಿ ಆಗುವ ಕಲಹದಲ್ಲಿ ಯಾರ ಪರವಾಗಿ ಇರಬೇಕು ಎನ್ನುವ ಗೊಂದಲ ಕಾಣಿಸಿ ತಟಸ್ಥರಾಗಬಹುದು. ಬೇಕಾದವರನ್ನು ಮಾತ್ರ ಹತ್ತಿರ ಕರೆಯುವಿರಿ. ಬಿಡಸಲಾಗದ ಸಮಸ್ಯೆಗಳು ನಿಮ್ಮೆದುರು ಬರಬಹುದು. ಆಪ್ತರ ಸಲಹೆಯನ್ನು ಪಡೆಯಿರಿ.

ವೃಷಭ ರಾಶಿ: ಇಂದಿನ ಖರ್ಚು ಹೆಚ್ಚಾದರೂ ತೊಂದರೆ ಇಲ್ಲ. ಆದಾಯದ ಮೇಲೆ ನಂಬಿಕೆ ಇದ್ದರೆ ಸಾಕು. ಯಾವ ತೊಂದರೆಯನ್ನೂ ಹಂಚಿಕೊಳ್ಳಲಾರಿರಿ. ಇಂದು ಸ್ತ್ರೀಯರು ಸ್ವಪ್ರಯತ್ನದಿಂದ ಲಾಭ ಗಳಿಸುವರು. ನಿಮ್ಮ ಶ್ರಮಕ್ಕೆ ದೈವವು ಅನುಕೂಲವೂ ಲಭ್ಯವಾಗುವುದು. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ಒತ್ತಡವನ್ನು ಕಳೆದುಕೊಳ್ಳುವ ಬಗ್ಗೆ ನಿಮಗೆ ಬೇಸರವಿರುವುದು. ಕಾನೂನಿಗೆ ವಿರುದ್ಧವಾದ ಕೆಲಸದಿಂದ ಹಣವನ್ನು ಪಡೆಯಲು ಹೋಗಬಹುದು. ಅದು ನಿಮ್ಮ ವೃತ್ತಿಜೀವನದ ಮೇಲೂ ಪರಿಣಾಮವನ್ನು ಉಂಟುಮಾಡಬಹುದು. ಕಳೆದುಕೊಂಡ ವಸ್ತುವನ್ನು ಮರಳಿಪಡೆಯಲು ಶ್ರಮವಹಿಸುವಿರಿ. ಆಯಾಯದ ಮೂಲವನ್ನು ನೀವು ಬದಲಿಸಿಕೊಳ್ಳುವಿರಿ. ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೋಗುವ ಆಲೋಚನೆಯನ್ನು ವಿದ್ಯಾರ್ಥಿಗಳು ಬಿಡಬೇಕಾಗಿಬರಬಹುದು. ಬೇರೆಯವರಲ್ಲಿ ನಿಮ್ಮ ಬಗ್ಗೆ ಇರುವ ಭವನೆಗಳು ಗೊತ್ತಾಗಬಹುದು. ಕೆಲವು ಸಂಗತಿಗಳು ಅನಿರೀಕ್ಷಿತವಾಗಿ ಬಂದು ಮನಸ್ಸಿನ ನೆಮ್ಮದಿಯನ್ನು ಹಾಳುಗೆಡವುವುವು. ಅತಿಯಾದ ಆತ್ಮವಿಶ್ವಾಸದ ಜೊತೆ ಪೂರ್ವಾಪರಜ್ಞಾನವೂ ಇರಲಿ.

ಮಿಥುನ ರಾಶಿ: ನೀರಸ ಸಂಗತ್ಯವನ್ನು ರಸಮಯವಾಗಿಸಲು ವಿಶೇಷ ಪ್ರಯಾಣ ಅಥವಾ ವಿನೂತನ ಸಂದರ್ಭವನ್ನು ಆಯೋಜಿಸಬೇಕಾಗುತ್ತದೆ. ನಿಧಾನವಾದರೂ ಇಂದಿನ ಕೆಲಸವನ್ನು ಮಾಡಿ.‌ ನಿಮ್ಮ ಅಶಕ್ತತೆಯು ಸಿಟ್ಟಾಗಿ ಬದಲಾಗುವುದು. ತಂದೆಯ ಜೊತೆ ವ್ಯವಹಾರದ ವಿಚಾರಕ್ಕೆ ಕಲಹವಾಗಬಹುದು. ಮನಸ್ಸು ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ಪಾಲುದಾರಿಕೆಯನ್ನು ನಿಭಾಯಿಸಲು ಕಷ್ಟವಾದೀತು. ಚರ್ವಿತಚರ್ವಣ ಎಂದು ಎನ್ನಿಸಿದರೂ ಹಿರಿಯರ ಮಾತುಗಳನ್ನು ಅವರ ಮೇಲಿನ‌ಗೌರವದಿಂದ ಕೇಳಬೇಕಾಗಬಹುದು. ಹಳೆಯ ಖಾಯಿಲೆಯು ಮತ್ತೆ ಬರಬಹುದು. ಅವಕಾಶಗಳನ್ನು ಬಿಟ್ಟಕೊಟ್ಟ ಇದ್ದಲ್ಲಿಯೇ ಇರಬೇಡಿ. ಆಶಾಭಂಗದಿಂದ ನಿಮ್ಮ ಮನಸ್ಸು ಮುರಿದು ಹೋಗುವುದು.‌ ಸಮಯವನ್ನು ಅವಕಾಶವನ್ನೂ ಸದುಪಯೋಗ ಮಾಡಿಕೊಳ್ಳಿ. ನಿಮ್ಮನ್ನು ಬೆಂಬಲಿಸುವವರಿಗೆ ನಿಮ್ಮ ಬೆಂಬಲವನ್ನು ನೀಡುವಿರಿ. ತಂದೆಯಿಂದ ಹಣವನ್ನು ಪಡೆದು ನಿಮಗೆ ಬೇಕಾದ ವಸ್ತುಗಳನ್ನು ಪಡೆಯುವಿರಿ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ನಿರ್ಮಾಣ ಮಾಡಿಕೊಳ್ಳುವಿರಿ. ಒಬ್ಬರನ್ನೇ ನಂಬಿ ಕೆಲಸ ಮಾಡುವುದು ಬೇಡ.

ಕರ್ಕಾಟಕ ರಾಶಿ: ನಿಮ್ಮ ಬಗ್ಗೆ ಟೀಕೆಗಳೇ ಅಧಿಕವಾಗಿ ಇರುವ ಕಾರಣ ಸಂಕಟವನ್ನು ಹೇಳಿಕೊಳ್ಳಲು ಮುಜುಗರ. ಇನ್ನೊಬ್ಬರನ್ನು ಬೆಳೆಸುವ ಉತ್ಸಾಹ ಯೋಜನೆ ನಿಮ್ಮಲ್ಲಿ ಇರುವುದು. ನೀವು ದುಶ್ಚಟದಿಂದ ದೂರವಿರಲು ಮನಸ್ಸು ಮಾಡುವಿರಿ. ಉದ್ಯೋಗದಲ್ಲಿ ಭಡ್ತಿಯನ್ನು ನಿರೀಕ್ಷಿಸಬಹುದು. ಮಕ್ಕಳಿಂದ ಸಂತೋಷ ನೀಡುವ ವಾರ್ತೆ ಇರುತ್ತದೆ. ಸ್ನೇಹಿತರಿಗೋಸ್ಕರ ಖರ್ಚುಮಾಡಬೇಕಾಗಿ ಬರಬಹುದು. ಯಾರದೋ ಮೂಲಕ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಅಪೂರ್ಣಗೊಂಡ ಕೆಲಸಗಳನ್ನು ಮಾಡಿ ಮುಗಿಸಬೇಕೆಂದು ಚಿಂತಿಸುವಿರಿ. ಹಿಂದೆ ಪಟ್ಟ ಕಷ್ಟದಿಂದ ನಿಮಗೆ ಇಂದು ಸುಖ, ನೆಮ್ಮದಿಗಳು ಸಿಗಲಿವೆ. ಅಸೂಯೆಯೂ ಸ್ವಭಾವದ ಕಾರಣ ಹೆಚ್ಚಾಗಬಹುದು. ಉನ್ನತ ಅಧಿಕಾರಿಗಳಿಗೆ ಯಶಸ್ಸು ಲಭಿಸುವುದು. ನೀವು ಕೈಗೊಂಡ ಕಾರ್ಯಗಳು ಸಫಲವಾಗಲಿಲ್ಲ ಎಂಬ ಹತಾಶಭಾವವೂ ಸಿಟ್ಟೂ ಏಕಕಾಲಕ್ಕೆ ಬರಲಿದೆ. ಅಪರಿಚಿತರನ್ನು ಆಪ್ತರನ್ನಾಗಿ ಮಾಡಿಕೊಳ್ಳಲು ಹೋಗಿ ಅನಾಹುತವಾದೀತು. ಯಾರನ್ನೂ ಹಂಗಿಸಿ ಖುಷಿಪಡುವುದು ಬೇಡ.

ಸಿಂಹ ರಾಶಿ: ಯಾವುದನ್ನೇ ಖರೀದಿಸಿದರೂ ಇಬ್ಬಂದಿತನದಿಂದ ಸಂತೃಪ್ತಿ ಇರೆದು. ನಿಮ್ಮ ಬಲವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ಕಟ್ಟಡವನ್ನು ನಿರ್ಮಿಸುವ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ಹೊಸ ಕೆಲಸವನ್ನು ಮಾಡಲು ನಿಮಗೆ ಧೈರ್ಯ ಸಾಲದು. ಬುದ್ಧಿವಂತಿಕೆಯ ಕಾರ್ಯವು ನಿಮ್ಮನ್ನು ರಕ್ಷಿಸುವುದು. ಇಂದು ಸಾಲ ಕೊಡುವುದೇ ಹೆಚ್ಚಾದೀತು. ಪುರುಷರಿಂದ ಏನಾದರೂ ತೊಂದರೆಗಳು ಬರಬಹುದು. ಹಣ ಸಂಪಾದನೆಯನ್ನೇ ಮುಖ್ಯವಾಗಿಟ್ಟುಕೊಂಡು ಮನೆಯನ್ನು, ಮಕ್ಕಳನ್ನು ಮರೆಯಬಹುದು. ಅಕಾರಣವಾಗಿ ದುಃಖದ ಸನ್ನಿವೇಷಗಳು ಬರಬಹುದು. ಕೋಪವನ್ನು ಮಾಡಬೇಕಾದಲ್ಲಿ ಮಾತ್ರ ಮಾಡಿ. ಇಲ್ಲವಾದರೆ ನಿಮಗೆ ಪಟ್ಟ ಸಿಗಬಹುದು. ಇಂದು ಏಕಾಂತವನ್ನು ಇಷ್ಟಪಡುವವರಿದ್ದೀರಿ. ನಿಮ್ಮ ಆಲೋಚನೆಗೆ ತಕ್ಕಂತೆ ಎಲ್ಲವೂ ನಡೆಯುತ್ತಿದೆ ಎಂದು ಅನ್ನಿಸಿದರೂ ಅದನ್ನು ಪರಿವರ್ತಿಸಲು ಅಸಾಧ್ಯವಾಗುವುದು. ಉದರ ಬಾಧೆಯಿಂದ ಸಂಕಟಪಡಬೇಕಾಗುವುದು.

ಕನ್ಯಾ ರಾಶಿ: ಅನ್ಯರಿಗೆ ಕೊಟ್ಟ ಮನಸ್ಸನ್ನು ಹಿಂಪಡೆಯಲಾಗದು, ಮನೆಯವರ ಮಾತನ್ನೂ ಕೇಳದೇ ಇರಲಾಗದು. ನಿಮ್ಮದಲ್ಲದ‌ ವಸ್ತುವನ್ನು ಪಡೆದಾಗ ಜೋಪಾನ‌ ಮಾಡುವುದು ಅವಶ್ಯಕ. ಇಂದು ನಿಮ್ಮ ವೇಗಕ್ಕೆ ಕೆಲಸಗಳು ಆಗುತ್ತಿಲ್ಲ ಎಂಬ ತುಡಿತ ಇರಲಿದೆ. ವ್ಯಾಪಾರದಲ್ಲಿ ಇಷ್ಟವಿಲ್ಲದಿದ್ದರೂ ಲಾಭವನ್ನು ನಿರೀಕ್ಷಿಸುವುದು ಬೇಡ. ಹೂಡಿಕೆ ಮಾಡುವ ಮನಸ್ಸಿದ್ದರೆ ಸ್ವಲ್ಪ ಮಾಡಿ. ನಿಮಗೆ ಕೂಡಿಟ್ಟ ಹಣವು ಬರಲಿದ್ದು, ಅದನ್ನು ಸದುಪಯೋಗ ಮಾಡುವಿರಿ. ಕುಟುಂಬದಲ್ಲಿ ಹಿರಿಯರ ಮಾತನ್ನು ಅಲ್ಲಗಳೆಯಬಹುದು. ನೀವು ಸ್ವತಂತ್ರವಾಗಿ ಬದುಕುವ ಇಚ್ಛೆ ಹೊಂದುವಿರಿ. ಅನುಕೂಲತೆಯನ್ನು ನೋಡಿ ಮನೆಗೆ ಸಹಾಯ ಮಾಡುವಿರಿ. ಉಪಕಾರವನ್ನು ನೀವು ಸ್ಮರಿಸುವಿರಿ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಭವಿಷ್ಯದ ಕುರಿತು ನಿಮಗೆ ನಿಮ್ಮದೇ ಕಲ್ಪನೆಗಳಿದ್ದು ಅದು ಸಾಕಾರಗೊಳ್ಳುವುದೋ ಇಲ್ಲವೋ ಎನ್ನುವ ಭಯವು ಕಾಡಲಿದೆ. ಕೃತಜ್ಞತೆಯು ನಿಮ್ಮ ಉನ್ನತ ಸ್ಥಾನಕ್ಕೆ ಕಾರಣವಾಗುವುದು. ಧಾರ್ಮಿಕ‌ ನಂಬಿಕೆಗಳು ಬಲವಾಗುವುದು.