ನಿಮ್ಮ ಹತ್ತಾರು ಕನಸುಗಳಲ್ಲಿ ಒಂದನ್ನು ಸಾಕಾರ ಮಾಡಿಕೊಳ್ಳುವಿರಿ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಶ್ರಾವಣ ಮಾಸ ಶುಕ್ಲ ಪಕ್ಷದ ನವಮೀ ತಿಥಿ ಶನಿವಾರ ಖರ್ಚನಿಂದ ಭಯವಿಲ್ಲ, ಸಂಕಟ ಹೇಳಲು ಮುಜುಗರ, ಅಶಾಂತಿಗೆ ಪರಿಹಾರ, ನೀರಸ ಪ್ರತಿಕ್ರಿಯೆ ಇವೆಲ್ಲ ಇಂದಿನ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ನಿಮ್ಮ ಹತ್ತಾರು ಕನಸುಗಳಲ್ಲಿ ಒಂದನ್ನು ಸಾಕಾರ ಮಾಡಿಕೊಳ್ಳುವಿರಿ
ಜ್ಯೋತಿಷ್ಯ
Updated By: ವಿವೇಕ ಬಿರಾದಾರ

Updated on: Aug 02, 2025 | 1:47 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಪುಷ್ಯಾ, ವಾರ: ಶನಿ, ತಿಥಿ: ನವಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಾಧ್ಯ, ಕರಣ: ಭದ್ರ, ಸೂರ್ಯೋದಯ – 06 : 17 am, ಸೂರ್ಯಾಸ್ತ – 07 : 00 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 11:04 -12:39 ಗುಳಿಕ ಕಾಲ 07:53 – 09:28 ಯಮಗಂಡ ಕಾಲ 15:50 – 17:25

ತುಲಾ ರಾಶಿ: ನಿಮ್ಮ ದಾಂಪತ್ಯದ ಮೇಲೆ ಇತರರ ದೃಷ್ಟಿ ಬೀಳುವ ಸಾಧ್ಯತೆ ಇದೆ. ಇಂದು ಮನಸ್ಸನ್ನು ಕಾರ್ಯದಲ್ಲಿ ನಿಲ್ಲಿಸಲಾಗದು. ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ನೀವಾಡಿದ ಮಾತುಗಳು ಸತ್ಯಕ್ಕೆ ದೂರಾದುದಾಗಿದೆ. ಶ್ರಮದ ಅವಶ್ಯಕತೆ ಬಹಳ ಇರಲಿದೆ. ನಿಮ್ಮ ಮಾತನ್ನು ಇಂದು ಪೂರ್ಣ ನಂಬಲಾರರು. ಪಾಪಕೃತ್ಯದ ಬಗ್ಗೆ ನಿಮಗೆ ಭಯವು ಬರಬಹುದು. ನಿಮ್ಮ ವಿರುದ್ಧ ಯಾರೋ ಏನ್ನೋ ನಡೆಸುತ್ತಿದ್ದಾರೆ ಎಂಬ ಅನುಮಾನ ಕಾಡಲಿದೆ. ಕೆಲಸವು ಎಷ್ಟೇ ಚೆನ್ನಾಗಿದ್ದರೂ ಪ್ರಶಂಸೆ ಸಿಗುತ್ತಿಲ್ಲ ಎಂಬ ನೋವು ಹೆಚ್ಚಾಗಬಹುದು. ಕೆಲಸದಲ್ಲಿ ವೈರಾಗ್ಯವೂ ಬರುವ ಸಾಧ್ಯತೆ ಇದೆ. ಭೂಮಿಯ ಮೇಲೆ ಬಂಡವಾಳ ಹೂಡಿಕೆ ಮಾಡುವಿರಿ. ಅನಿವಾರ್ಯವಾಗಿ ಕೊಟ್ಟ ಕೆಲಸವನ್ನು ಮಾಡಬೇಕಾಗಬಹುದು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಮಾನಸಿಕತೆ ನಿಮ್ಮನ್ನು ಖುಷಿಯಿಂದ ಇಡಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಇನ್ನೊಬ್ಬರ ನೋವಿಗೆ ಸ್ಪಂದನೆ ಇರಲಿ. ನಿಮ್ಮನ್ನು ನೀವು ವಿಶೇಷವೆಂದು ಭಾವಿಸುವಿರಿ.

ವೃಶ್ಚಿಕ ರಾಶಿ: ಹಣಕಾಸಿನ ವ್ಯವಹಾರವನ್ನು ಸರಳ ಮಾಡಿಕೊಂಡರೆ ನಿಮ್ಮಲ್ಲಿರುವ ಹಣ ಬೇಗ ಖಾಲಿಯಾಗುವುದು. ನಿಮ್ಮ ಬಳಿ ಇರುವ ಸಂಪತ್ತನ್ನು ಸಹಾಯಕ್ಕಾಗಿ ಕೊಟ್ಟು ಕಳೆದುಕೊಳ್ಳುವಿರಿ. ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ಮಕ್ಕಳು ನಿಮಗೆ ಅಪಮಾನ ಮಾಡುವ ಸಾಧ್ಯತೆ ಇದೆ. ಅಧಿಕಾರವು ಸಿಕ್ಕ ಮಾತ್ರಕ್ಕೆ ಹೇಗಾದರೂ ಚಲಾಯಿಸಬೇಕೆಂದಿಲ್ಲ. ಯಾರನ್ನೂ ನೀವು ನೇರವಾಗಿ ಹೊಣೆಗಾರಿಕೆ ಮಾಡಲಾರಿರಿ. ಯಾರ ಬಗ್ಗೆಯೂ ತೀರ್ಮಾನ ಕೊಡುವ ಬದಲು ಪೂರ್ವಾಪರ ವಿಚಾರಗಳನ್ನು ಗಮನಸಿಕೊಳ್ಳಿ. ನಿಮ್ಮ ನೇರದ್ದು ಮಾತ್ರ ಸತ್ಯವಾಗಿ ಇರದು. ಸಂಬಂಧಗಳು ಮಿತಿಯನ್ನು ಮೀರದಂತೆ ನೋಡಿಕೊಳ್ಳಿ. ಬಂಗಾರದ ಕತ್ತಿಯೇ ಆದರೂ ಅದರಿಂದ ಮೂಗು ಕತ್ತರಿಸಿಕೊಳ್ಳುವುದು ಎಷ್ಟು ಸರಿ. ಜನರನ್ನು ಅವರ ಯೋಗ್ಯತೆಯ ಆಧಾರದ ಮೇಲೆ ಕೆಲಸಕ್ಕೆ ಜೋಡಿಸಿ. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ನಿಮ್ಮ ಯಾರಾದರೂ ಕೆಲಸ ವಹಿಸಿ ನಿಶ್ಚಿಂತರಾಗಬಹುದು. ಉದ್ಯೋಗಸ್ಥಾನದಲ್ಲಿ ಕೆಲವು ಮಾತುಗಳು ನಿಮಗೆ ಹಿಡಿಸದೇಹೋಗಬಹುದು.

ಧನು ರಾಶಿ: ಕಾರ್ಯದಲ್ಲಿ ವಿಘ್ನ ಬರುತ್ತದೆಂದು ಯಾರೋ ಹೇಳಿದ ಮಾತು ಕೇಳಿ ಸುಮ್ಮನಾದರೆ ಸಿಗುವ ಅವಕಾಶ ತಪ್ಪಿಹೋಗುವುದು. ಸ್ವಂತ ಬಲವಿಲ್ಲದೇ ನೀವು ಯಾರನ್ನೂ ಎದುರಿಸಲಾಗದು. ನೀವು ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸಕ್ಕೆ ಹಣವನ್ನು ಕೊಡಬೇಕಾಗಿ ಬರಬಹುದು. ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ಮನೆಯ ರಿಪೇರಿ ಮಾಡಿಸಲಿದ್ದೀರಿ. ಕುಟುಂಬದಲ್ಲಿ ತಾನೇ ಶ್ರೇಷ್ಠ ಎಂಬ ಅಹಂಕಾರ ಬೇಡ. ವೇಗದ ಕಾರ್ಯವನ್ನು ಮಾಡಿ ಎಲ್ಲವನ್ನೂ ಹಾಳುಮಾಡಿಕೊಳ್ಳುವಿರಿ. ಸ್ವೇಚ್ಛೆಯಿಂದ ವರ್ತಿಸಬೇಡಿ. ಇರುವ ಸಮಸ್ಯೆಯನ್ನು ಎದುರಿಸಲು ಹೋಗಿ ಮತ್ತೊಂದು ಸಮಸ್ಯೆಯನ್ನು ಹುಟ್ಟುಹಾಕಿಕೊಳ್ಳಬೇಡಿ. ಕುಟುಂಬದ ಸದಸದ್ಯರು ನಿಮ್ಮ ಏಳ್ಗೆಯನ್ನು ಇಷ್ಟಪಡುವವರು. ಯಾರದೋ ಸಿಟ್ಟನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳುವಿರಿ. ಯಾರನ್ನೂ ನಂಬದವರು ಇಂದು ನಂಬಿ ಮೋಸ ಹೋಗಬಹುದು. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು. ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವ ಸಾಧ್ಯತೆ ಇದೆ.

ಮಕರ ರಾಶಿ: ಅಶಾಂತವಾದ ಮನಸ್ಸನ್ನು ಸುಮ್ಮನೆ ಕುಳಿತು ಇನ್ನಷ್ಟು ಹಾಳುಮಾಡಿಕೊಳ್ಳುವುದು ಬೇಡ. ಯಾವುದಾದರೂ ಕಾರ್ಯದಲ್ಲಿ ಮಗ್ನರಾಗಿ, ಎಲ್ಲವೂ ದೂರಾಗಲಿದೆ‌. ಇಂದು ನಿಮ್ಮ ಮನಸ್ಸು ಭಯದಿಂದ ಹಿಂದೇಟು ಹಾಕಬಹುದು. ಸರಿಯಾದ ಬದಲಾವಣೆಯನ್ನು ಹೊಂದಿರಿ. ಯಾರನ್ನೂ ಸಾಧರಣ‌ ಮನುಷ್ಯ ತಿಳಿದುಕೊಳ್ಳಬೇಡಿ. ವಿವಾಹದ ಮಾತುಕತೆಯಲ್ಲಿ ನಿಮ್ಮ ಅನರ್ಥದ ಮಾತು ವಿಘ್ನವನ್ನು ತಂದೀತು. ಒಂದೊಂದೇ ಖರ್ಚನ್ನು ನೀವು ನಿಭಾಯಿಸುವಾಗ ಅದೊಂದು ದೊಡ್ಡ ಮೊತ್ತವಾಗಿ ಕಾಣಬಹುದು. ನಿಮ್ಮಷ್ಟಕ್ಕೇ ನೀವು ಹೊಸತನವನ್ನು ಸೃಷ್ಟಿಸಿಕೊಂಡು ಅಪಮಾನಕ್ಕೆ ಒಳಗಾಗುವಿರಿ. ಏನನ್ನಾದರೂ ಕೊಟ್ಟು ಸಂತೋಷಪಡುವಿರಿ. ವಾಹನವನ್ನು ನಿಧಾನವಾಗಿ ಚಲಾಯಿಸಿ. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು. ಸಾಲ ಹೊರೆಯ ಸ್ವಲ್ಪ ಕಡಿಮೆ ಆಗುವುದು. ಉನ್ನತ ಅಭ್ಯಾಸವನ್ನು ಸಮಸ್ಯೆಯ ಕಾರಣದಿಂದ ಮುಂದೂಡುವಿರಿ.

ಕುಂಭ ರಾಶಿ: ಸುತ್ತಾಟವೇ ಸಾಧನೆಯಗದೇ ಸಾಧಿಸಲೋಸ್ಕರ ಓಡಾಟ ಮಾಡಿ. ನಿಮಗೂ ಖುಷಿ. ಮನೆಯವರಿಗೂ ಹೆಮ್ಮೆ. ಸರ್ಕಾರದ ಉದ್ಯೋಗಕ್ಕೆ ನಿಮ್ಮ ಸಣ್ಣ ಪ್ರಯತ್ನ ಇರಲಿದೆ. ನಿಮ್ಮ ಏಳ್ಗೆಯನ್ನು ಕಂಡು ನಿಮ್ಮವರೇ ಸಂಕಟ ಪಡುತ್ತಾರೆ. ಅವರನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ಹತ್ತಿರದೂರಿಗೆ ಪ್ರಯಾಣವನ್ನು ಮಾಡಲಿದ್ದೀರಿ. ಚರಾಸ್ತಿಯನ್ನು ಸ್ಥಿರಾಸ್ತಿ ಮಾಡುವ ಯೋಚನೆ ಮಾಡುವಿರಿ. ನಿಮ್ಮನ್ನು ಛೇಡಿಸುತ್ತ ಹಾಸ್ಯ ಮಾಡುವರು. ಸಾಲವನ್ನು ಮಾಡಬೇಕಾಗಿ ಬಂದರೆ ಬಹಳ ಎಚ್ಚರಿಕೆಯಿಂದ ಜನರನ್ನು ನೋಡಿ ಮಾಡಿ. ವಾಹನದಲ್ಲಿ ಓಡಾಟ ಮಾಡುವುದರಿಂದ ಸಂತೋಷವಾದೀತು. ಯಾರದೋ ದಾಕ್ಷಿಣ್ಯಕ್ಕೆ ಒಳಗಾಗಿ ನಿಮ್ಮ ಕೆಲಸವನ್ನು ಅರ್ಧಕ್ಕೆ ಬಿಡಬೇಡಿ. ಯಾವುದಾದರೂ ಘಟನೆಯು ನಿಮ್ಮನ್ನು ಇಂದು ಹೆಚ್ಚು ಕಾಡಬಹುದು. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು. ವಾತಕ್ಕೆ ಸಂಬಂಧಿಸಿದ ಖಾಯಿಲೆ ಕಾಣಿಸಿಕೊಳ್ಳುವುದು. ವ್ಯಾಪರದಲ್ಲಿ ಸ್ವಲ್ಪ ನಷ್ಟವನ್ನು ಕಾಣುವಿರಿ. ಕೃಷಿಯ‌ ಚಟುವಟಿಕೆಯಿಂದ ಸಂತೋಷ ಸಿಗಲಿದೆ.

ಮೀನ ರಾಶಿ: ಪ್ರೇಮದಲ್ಲಿ ಬರುವ ಮನಸ್ತಾಪಗಳು ಸಹಜವೇ ಆದರೂ ಮತ್ತೆ ಮತ್ತೆ ಕಾಣಿಸಿಕೊಂಡರೆ ಅದು ಶಸ್ತ್ರಚಿಕಿತ್ಸೆ ಮಾಡದೇ ಹೋಗದ ರೋಗದಂತೆ. ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವವನ್ನು ತೋರಿಸಿದಂತೆ ಕಾಣಿಸುಬಹುದು.‌ ಸಜ್ಜನರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಹತ್ತಾರು ಕನಸುಗಳಲ್ಲಿ ಒಂದನ್ನು ಸಾಕಾರ ಮಾಡಿಕೊಳ್ಳುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲೇ ಬೇಕು ಎಂಬ ದೃಢನಿರ್ಧಾರದಿಂದ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸುವಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು. ಸಾಲ ತೀರಿಸಲು ದೂರದ ಬಂಧುಗಳ ಸಹಾಯ ಹಸ್ತ ಸಿಗಲಿದೆ. ಇಂದು ನೀವೂ ಕೈಲಾದ ಸಹಾಯವನ್ನು ಮಾಡುವಿರಿ. ಇಂದು ಅನ್ನದಾನದಿಂದ ನೆಮ್ಮದಿ ಸಿಗಲಿದೆ. ಸುಳ್ಳಾಡುವವರ ಬಗ್ಗೆ ಅತಿಯಾದ ಕೋಪವಿರಲಿದೆ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ. ಅಪರಿಚಿತಸ್ಥಳವು ಆಪ್ತವೂ ಆಗಲಿದೆ. ಮಕ್ಕಳಿಗೆ ಮನೆಯ ನೆನಪಾಗುವುದು.