ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಪಂಚಮೀ, ನಿತ್ಯನಕ್ಷತ್ರ: ರೇವತಿ, ಯೋಗ: ಅತಿಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 05: 23 ರಿಂದ 06:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:13ರ ವರೆಗೆ, ಗುಳಿಕ ಕಾಲ ಬೆಳಗ್ಗೆ 03:48 ರಿಂದ 05:23ರ ವರೆಗೆ.
ಮೇಷ: ಭವಿಷ್ಯದ ಬಗ್ಗೆ ನಿಮಗಿರುವ ಕಲ್ಪನೆಯು ಬದಲಾಗಬಹುದು. ಹಣಕಾಸಿನ ವಿಚಾರದಲ್ಲಿ ನೀವು ಬಹಳ ಕಾಳಜಿಯನ್ನು ವಹಿಸಬೇಕಾಗುವುದು. ವಾಹನಕ್ಕಾಗಿ ಖರ್ಚು ಮಾಡುವ ಸ್ಥಿತಿಯು ಬರಬಹುದು. ಸಹಾಯವನ್ನು ಯಾರಾದರೂ ಕೇಳುವರು. ಒಂಟಿಯಾಗಿ ಇರಲು ನೀವು ಇಂದು ಹೆಚ್ಚು ಇಷ್ಟಪಡಬಹುದು. ಏನನ್ನಾದರೂ ಯೋಚಿಸುವ ಬದಲು ಆಗಬೇಕಾದ ಕೆಲಸದ ಕಡೆ ಗಮನಕೊಡುವುದು ಮುಖ್ಯವಾಗುವುದು.
ವೃಷಭ: ಬಂಧುಗಳ ವಿಚಾರದಲ್ಲಿ ನಿಮಗೆ ಸಂಪೂರ್ಣ ಮನಸ್ಥಿತಿಯು ಏಕರೂಪವಾಗಿ ಇರಲಾರದು. ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ನಿಮ್ಮ ವರ್ತನೆಯಿಂದ ನಿಮ್ಮನ್ನು ನೋಡುವ ಕ್ರಮವು ಬದಲಾದೀತು. ಮುಖದಲ್ಲಿ ನಗುವುದು ನಿಮ್ಮ ಎಲ್ಲ ಕೆಲಸಗಳನ್ನು ಮಾಡಿಸಿಕೊಡುವುದು. ಇನ್ನೊಬ್ಬರ ಸುಖಕ್ಕಾಗಿ ನೀವು ಸುಖವನ್ನು ತ್ಯಾಗಮಾಡಬೇಕಾಗುವುದು. ಜ್ಞಾನದ ಬಗ್ಗೆ ನಿಮಗೆ ಅರಿವು ಕಡಿಮೆ ಇರುವುದು ಗೊತ್ತಾಗುವುದು.
ಮಿಥುನ ರಾಶಿ: ಆರ್ಥಿಕ ಮೂಲವು ಕೈತಪ್ಪಿ ಹೋಗಬಹುದು. ಕನಸನ್ನು ನನಸಾಗಿಸಲು ನಿಮ್ಮ ಪ್ರಯತ್ನ ಅತಿಮುಖ್ಯವಾಗುವುದು. ಎಲ್ಲವೂ ಸರಿಯಿದ್ದರೂ ಮತ್ತೆಲ್ಲೋ ತಪ್ಪನ್ನು ಕಂಡುಕೊಳ್ಳುವಿರಿ. ನಿಮ್ಮ ನಿಯಮವನ್ನು ಪಾಲಿಸಿದ್ದು ನಿಮಗೆ ಖುಷಿ ಕೊಡಬಹುದು. ನಿಮಗೆ ಒತ್ತಡದಲ್ಲಿ ಕೆಲಸ ಮಾಡುವುದು ಅಭ್ಯಾಸವಾಗಿ ಹೋಗಿದೆ. ತಾಯಿಯಿಂದ ಅತಿಯಾದ ಸಹಕಾರವನ್ನು ಬಯಸುವಿರಿ. ಜನರ ಜೊತೆ ಬೆರೆಯಲು ನಿಮಗೆ ಇಂದು ಸಮಯ ಸಾಕಾಗದು. ಸಂಗಾತಿಯನ್ನು ನೀವು ಖುಷಿಪಡಿಸಲು ಎಲ್ಲಿಗಾದರೂ ಕರೆದುಕೊಂಡು ಹೋಗುವಿರಿ.
ಕಟಕ ರಾಶಿ: ಸುಖವಾಗಿರಲು ಬೇಕಾದ ಎಲ್ಲ ಮಾರ್ಗಗಳನ್ನು ಹುಡುಕುವಿರಿ. ಗೊತ್ತಿಲ್ಲದೇ ಮಾತನಾಡುವುದು ನಿಮಗೆ ಶೋಭೆ ತರದು. ವಂಚನೆಯ ಬಲೆಯಲ್ಲಿ ನೀವು ಸಿಕ್ಕಿಕೊಳ್ಳಬಹುದು. ಹಿರಿಯರಿಗೆ ಗೌರವವನ್ನು ಸಲ್ಲಿಸಿ. ನಿಮ್ಮವರನ್ನು ರಕ್ಷಿಸಿಕೊಳ್ಳಲು ಬಹಳ ಪ್ರಯತ್ನ ಪಡುವಿರಿ. ನೀವು ಬಯಸಿದ್ದನ್ನು ಪಡೆದುಕೊಂಡು ನೆಮ್ಮದಿಯಾಗಿ ಇರಲಾರಿರಿ. ಮನೆಯವರ ವೈರವನ್ನು ಕಟ್ಟಿಕೊಂಡು ಏನು ಸಾಧಿಸುವಿರಿ. ಸಂಗಾತಿಯ ಪ್ರೀತಿಯನ್ನು ನೀವು ಉಳಿಸಿಕೊಳ್ಳಲು ಪ್ರಯತ್ನಿಸುವಿರೊ. ನಿಮ್ಮ ಮನಸ್ಸೂ ಇಂದು ಹಗುರಾದೀತು. ವಿದ್ಯಾರ್ಥಿಗಳು ಓದಿನ ಬಗ್ಗೆ ಆಸಕ್ತಿಯು ಕಡಿಮೆ ಆಗಬಹುದಿ.