Horoscope Today: ರಾಶಿಭವಿಷ್ಯ, ಈ ರಾಶಿಯವರಿಗೆ ಜೀವನವು ಬಹಳ ನಿಧಾನವಾಗಿ ಚಲಿಸುತ್ತಿದೆ ಎಂದು ಅನ್ನಿಸಬಹುದು
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 06) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಪಂಚಮೀ, ನಿತ್ಯನಕ್ಷತ್ರ: ರೇವತಿ, ಯೋಗ: ಅತಿಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 05: 23 ರಿಂದ 06:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:13ರ ವರೆಗೆ, ಗುಳಿಕ ಕಾಲ ಬೆಳಗ್ಗೆ 03:48 ರಿಂದ 05:23ರ ವರೆಗೆ.
ಧನು ರಾಶಿ: ಜೀವನವು ಬಹಳ ನಿಧಾನವಾಗಿ ಚಲಿಸುತ್ತಿದೆ ಎಂದು ಅನ್ನಿಸಬಹುದು. ಇಂದು ಆಲಸ್ಯವು ಅಧಿಕವಾಗಿ ಇರಲಿದೆ. ಉತ್ತಮವಾದ ವೈವಾಹಿಕ ಸಂಬಂಧವನ್ನು ಪೂರ್ವಾಪರ ಯೋಚಿಸದೇ ಬಿಡುವಿರಿ. ಸ್ವತಂತ್ರವಾಗಿ ಬದುಕಲು ನಿಮಗೆ ಇಷ್ಟವಾದೀತು. ವಿಶ್ರಾಂತಿಯನ್ನು ಪಡೆಯಲು ಸುಳ್ಳನ್ನು ಹೇಳುವಿರಿ. ಬಂಧುಗಳ ಭೇಟಿಯನ್ನು ಮಾಡಲು ದೂರದಿಂದ ಬರುವಿರಿ. ನೇರ ನುಡಿಗಳು ಇನ್ನೊಬ್ಬರಿಗೆ ನೋವನ್ನು ಕೊಡಬಹುದು. ಆಪ್ತರ ಜೊತೆ ಅನೇಕ ದಿನಗಳ ಅನಂತರ ನೀವು ಕಾಲಕಳೆಯುವಿರಿ. ಇದು ನಿಮಗೆ ಸಂತೋಷವನ್ನು ಕೊಡುವುದು. ಬೆನ್ನಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.
ಮಕರ ರಾಶಿ: ಬಂಧುಗಳಿಗಾಗಿ ನೀವು ಹಣವನ್ನು ನೀಡಬೇಕಾಗಬಹುದು. ವಿದ್ಯಾಭ್ಯಾಸಕ್ಕಾಗಿ ಮನೆಯವರಿಂದ ಪ್ರೋತ್ಸಾಹವನ್ನು ಪಡೆಯುವಿರಿ. ನಿಮ್ಮನ್ನು ಅತಿಯಾಗಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ನಿಮಗೆ ಕೆಲವು ಜವಾಬ್ದಾರಿಗಳು ಬಂದು ಗಂಭೀರವಾಗುವಿರಿ. ನಿಮ್ಮ ವೃತ್ತಿಯು ನಿಮಗೆ ಹಿಡಿಸುವುದು. ಸಹೋದರಿಂದ ನಿಮಗೆ ಬೇಕಾದ ಸಹಾಯ ಇಂದು ಪಡೆಯುವಿರಿ. ನಿಮ್ಮ ಬಗ್ಗೆ ಯಾರಿಂದಲೋ ಮಾಹಿತಿಯನ್ನು ಪಡೆಯುವರು. ಸಂಬಂದಿಸದ ವಿಚಾರದಲ್ಲಿ ಆಸಕ್ತಿಯು ಹೆಚ್ಚಾಗಬಹುದು. ನಿಮ್ಮನ್ನು ಯಾರಾದರೂ ಅಸ್ತ್ರವಾಗಿ ಬಳಸಿಕೊಳ್ಳಬಹುದು.
ಕುಂಭ ರಾಶಿ: ನೀವು ಬಂಧುಗಳಿಂದ ಸಹಾಯವನ್ನು ನಿರೀಕ್ಷಿಸುವಿರಿ. ನಿಮ್ಮ ಸಂಪತ್ತಿನ ಅಳೆಯುವರು. ಗುಟ್ಟನ್ನು ನೀವು ಬಿಟ್ಟಕೊಡುವಿರಿ. ನಿಮ್ಮ ತಪ್ಪು ತಿಳಿದಿಕೊಂಡವರಿಗೆ ಸರಿಯಾದ ಮಾಹಿತಿಯನ್ನು ಕೊಡುವಿರಿ. ನಿಮ್ಮ ಸಮಾಜ ಸೇವೆಯನ್ನು ಗುರುತಿಸಿ ನಿಮಗೆ ಉನ್ನತ ಪ್ರಶಸ್ತಿಯು ಸಿಗಬಹುದು. ಆಕಸ್ಮಿಕ ಧನಲಾಭವು ನಿಮಗೆ ಸಂತೋಷವನ್ನು ತರಿಸಬಹುದು. ಸುಳ್ಳು ಹೇಳಿಕೊಂಡು ನಿಮ್ಮ ದಾಖಲೆಗಳನ್ನು ಪರಿಶೀಲಿಸಬಹುದು. ಧಾರ್ಮಿಕ ವಿಚಾರಕ್ಕೆ ನೀವು ಹೆಚ್ಚು ಒತ್ತಡುವಿರಿ. ಕುಟುಂಬದ ಮನೆಯಲ್ಲಿಯೇ ಇದ್ದು ಸಮಯವನ್ನು ಕಳೆಯುವಿರಿ. ಹೊಸತನ್ನು ಮಾಡಬೇಕು ಎಂಬ ಮನಸ್ಸು ಬರಬಹುದು.
ಮೀನ ರಾಶಿ: ಮೋಜಿನಲ್ಲಿ ಈ ದಿನವನ್ನು ಕಳೆಯುವಿರಿ. ಇಂದು ವಿದ್ಯಾಭ್ಯಾಸದಲ್ಲಿ ಆಸಕ್ತಿಯು ಕಡಿಮೆ ಆಗಲಿದೆ. ಆಸ್ತಿ ಖರೀದಿಯ ಬಗ್ಗೆ ಮನೆಯಲ್ಲಿ ಚಿಂತನೆಯನ್ನು ನಡೆಸಬಹುದು. ಬರಬೇಕಾದ ಹಣವನ್ನು ಪಡೆಯಲು ಮನೆಗೇ ಹೋಗಲಿದ್ದೀರಿ. ಬಂಧುಗಳ ಭೇಟಿಯು ನಿಮಗೆ ಖುಷಿಯನ್ನು ಕೊಡಬಹುದು. ಉದ್ಯೋಗದಲ್ಲಿ ಮನಸ್ಸು ಸ್ಥಿರವಾಗಿ ಇರಲಿದೆ. ಮಾತು ಅವಮಾನವಂತೆ ಕಂಡರೆ ಅಲ್ಲಿರುವುದು ಬೇಡ. ಬಂಧುಗಳ ಜೊತೆ ನಿಮ್ಮ ಮಾತುಕತೆ ಅಸಹಜವಾಗಿ ಇರಲಾರದು. ಸ್ನೇಹಕ್ಕೆ ನಿಮ್ಮ ಪ್ರತ್ಯುಪಕಾರವು ಇರಲಿದೆ. ಪತ್ನಿಯ ಮಾತು ನಿಮಗೆ ಅಸಮಾಧಾನವನ್ನು ತರಿಸಬಹುದು.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 am, Sun, 6 August 23