Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಶತ್ರುಗಳಿಂದ ಏನಾದರೂ ತೊಂದರೆ ಆಗಬಹುದು

| Updated By: ಆಯೇಷಾ ಬಾನು

Updated on: Oct 03, 2023 | 6:10 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಅಕ್ಟೋಬರ್ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಶತ್ರುಗಳಿಂದ ಏನಾದರೂ ತೊಂದರೆ ಆಗಬಹುದು
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 03 ಮಂಗಳವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳವಾರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ವಜ್ರ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06-22ಕ್ಕೆ, ಸೂರ್ಯಾಸ್ತ ಸಂಜೆ 06 – 19ಕ್ಕೆ, ರಾಹು ಕಾಲ ಮಧ್ಯಾಹ್ನ 03:21 – 4:50ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:23 – 10:52ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:22 – 13:51ರ ವರೆಗೆ.

ಮೇಷ ರಾಶಿ: ವಾಹನ ಖರೀದಿಗೆ ಹೆಚ್ಚು ಒತ್ತು ಕೊಡಲಿದ್ದೀರಿ. ಇಂದು ನಿಮ್ಮ ಮಾತು ಮಿತಿಯನ್ನು ಮೀರಬಹುದು. ಅಧಿಕ ವೇತನದ ಉದ್ಯೋಗಕ್ಕೆ ಅವಕಾಶವು ಬರಬಹುದು. ಯೋಚಿಸಿ ತೀರ್ಮಾನ ಮಾಡಿ. ಸ್ನೇಹಕ್ಕೆ ಒತ್ತಾಯ ಮಾಡುವುದು ಬೇಡ. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡದೇ ಅಹಂಕಾರ ತೋರಿಸುವಿರಿ. ಮೃಷ್ಟಾನ್ನ ಭೋಜನವು ಸಿಗಲಿದೆ. ಅಭ್ಯಾಸ ಇಲ್ಲದ ಆಹಾರವನ್ನು ಸೇವಿಸುವುದು ಬೇಡ. ಕೆಲವು ವಿಚಾರದಲ್ಲಿ ನಿಮಗೆ ತಾಳ್ಮೆ ಕಡಿಮೆ‌ ಎನಿಸಬಹುದು. ಉತ್ಸಾಹದಿಂದ ನಿಮಗೆ ಕೆಲವು ಕಾರ್ಯಗಳು ಸಾಧ್ಯವಾಗುವುದು. ಕಾರ್ತಿಕೇಯನ ಸ್ಮರಣೆಯನ್ನು ಮಾಡಿ.

ವೃಷಭ ರಾಶಿ: ಶತ್ರುಗಳಿಂದ ಏನಾದರೂ ತೊಂದರೆ ಆಗಬಹುದು. ಹಣವನ್ನು ಕೊಡಲು ಯಾರಾದರೂ ಪೀಡಿಸಬಹುದು. ಮಕ್ಕಳಿಗೆ ಧೈರ್ಯವನ್ನು ಹೇಳುವಿರಿ. ಜ್ವರವು ಕಾಣಿಸಿಕೊಂಡೀತು. ಸ್ನೇಹಿತರನ್ನು ಕಳೆದುಕೊಳ್ಳುವಿರಿ. ಇಷ್ಟಪಡುವವರಿಗೆ ಸಮಯವನ್ನು ಕೊಡಲಾಗದು. ನಿಮ್ಮನ್ನು ಸಂತೋಷಪಡಿಸಲು ನಿಮ್ಮನ್ನು ಹೊಗಳುವರು. ಪುಣ್ಯಸ್ಥಳಕ್ಕೆ ಹೋಗಲು ಇಚ್ಛಿಸುವಿರಿ. ನಿಮ್ಮ ದಾರಿಯನ್ನು ಸುಗಮ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ನೀವು ಯಾರ ಸಹಕಾರವನ್ನೂ ಅನಪೇಕ್ಷಿತವಾದೀತು. ವೈದ್ಯ ವೃತ್ತಿಯಲ್ಲಿ ಇರುವವರು ಯಶಸ್ಸನ್ನು ಗಳಿಸುವರು. ನಿಮಗೆ ಅನೇಕ ವಿಚಾರಗಳನ್ನು ತಿಳಿಯಬೇಕು ಎಂಬ ಆಸೆಯು ಅತಿಯಾಗುವುದು. ಹೊಸ ಉದ್ಯೋಗಕ್ಕೆ ಪ್ರವೇಶ ಪಡೆಯುವಿರಿ. ನಿಮ್ಮ ಅನುಕೂಲವನ್ನು ನೋಡಿ ಖರ್ಚು ಮಾಡಿ. ನಿಮ್ಮ ವರ್ತನೆಯು ಸಂಗಾತಿಗೆ ಇಷ್ಟವಾಗದು.

ಮಿಥುನ ರಾಶಿ: ನಿಮ್ಮ ಕೆಲಸದ ಸ್ಥಾನವೂ ಹುದ್ದೆಯೂ ಎರಡೂ ಬದಲಾದೀತು. ನಿಮ್ಮ ಮನಸ್ಸು ಕೆಲವು ಮಾತಿನಿಂದ ದುರ್ಬಲವಾಗಬಹುದು. ಕಾಲಹರಣಕ್ಕೆ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ. ನೀವು ವಿರಾಮವನ್ನು ಆನಂದದಿಂದ ಕಳೆಯುವಿರಿ. ಸ್ನೇಹಿತರ ಮೇಲೆ ಸಂದೇಹ ಉಂಟಾಗಬಹುದು. ಹಣಕಾಸಿನ ವಿಚಾರವನ್ನು ನೀವು ಯಾರ ಬಳಿಯೂ ಹೇಳುವುದಿಲ್ಲ. ಕಚೇರಿಯಲ್ಲಿ ನಿಮ್ಮನ್ನು ನೋಡುವ ದೃಷ್ಟಿಯು ಬದಲಾಗುವುದು. ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಸಹಾಯ ಪಡೆಯಿರಿ. ಒಂದಿಷ್ಟು ಕಾರ್ಯದಲ್ಲಿ ಒತ್ತಡವಿರಲಿದೆ. ನಿಮ್ಮದೇ ಬಳಗವನ್ನು ಮಾಡಿಕೊಂಡು ಸಮಯವನ್ನು ಕಳೆಯುವಿರಿ. ಯಾರ ಒತ್ತಾಯಕ್ಕೂ ಮಣಿಯದೇ ನಿರ್ಧಾರವನ್ನು ಬದಲಿಸಿಕೊಳ್ಳಲು ಹೋಗುವುದಿಲ್ಲ‌. ಆರೋಗ್ಯವು ಸರಿಯಾಗಲು ಸಮಯ ಬೇಕು.

ಕಟಕ ರಾಶಿ: ವ್ಯಾಪಾರವು ಸ್ವಲ್ಪ ಲಾಭವನ್ನು ಕೊಡಬಹುದು. ಇಷ್ಟವಾದುದನ್ನು ಪಡೆದುಕೊಳ್ಳಲು ನಿಮಗೆ ಆಸಕ್ತಿ ಇರುವುದು. ಸಂಗಾತಿಯ ಮಾನಸಿಕ ಸ್ಥಿತಿಯು ಬದಲಾಗಬಹುದು. ಹತ್ತಾರು ವಿಚಾರಗಳನ್ನು ನೀವು ಏಕಕಾಲದಲ್ಲಿ ಚಿಂತಿಸಿ ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ನಿಮ್ಮರನ್ನು ನೀವು ದೂರ ಮಾಡಿಕೊಳ್ಳುವಿರಿ. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನಿರಾಕರಿಸುವಿರಿ.‌ ಪ್ರೇಮ ವ್ಯವಹಾರವನ್ನು ಮನೆಯಲ್ಲಿ ತಿಳಿಸಲು ನೀವು ಭಯಪಡುವಿರಿ. ವಾಹನ ಚಾಲನೆಯಲ್ಲಿ ನುರಿತವರಾದರೂ ಎಚ್ಚರಿಕೆಯಿಂದ ಓಡಿಸಿ. ನಿಮ್ಮ ನೇರ ನುಡಿಯಿಂದ ಇನ್ನೊಬ್ಬರಿಗೆ ನೋವಾದೀತು ಎಂಬ ಆಲೋಚನೆ ಇರಲಿ. ಒಂದೇ ಕಾರ್ಯವನ್ನು ಬಹಳ ದಿನಗಳ ವರೆಗೆ ಮಾಡುವಿರಿ.

-ಲೋಹಿತಶರ್ಮಾ – 8762924271 (what’s app only)