ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 12 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ : ಆಶ್ಲೇಷಾ, ಮಾಸ : ಅಧಿಕ ಶ್ರಾವಣ, ಪಕ್ಷ : ಕೃಷ್ಣ, ವಾರ: ಶನಿ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ವರೀಯಾನ್, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:12 ರಿಂದ 03: 46 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:19 ರಿಂದ 07:54ರ ವರೆಗೆ.
ಮೇಷ ರಾಶಿ: ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸಗಳನ್ನು ಒಪ್ಪಿಕೊಳ್ಳಿ. ಕಾರ್ಯದ ಸ್ಥಳವನ್ನು ಬದಲಾಯಿಸುವ ಸಾಧ್ಯತೆ ಇದೆ. ಮೂರನೇ ವ್ಯಕ್ತಿಗಳ ಮೂಲ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ದೂರವಾಣಿ ಕರೆಗಳನ್ನು ಆದಷ್ಟು ಕಡಿಮೆಮಾಡಿ. ನಿಮ್ಮದಲ್ಲದ ಸಂಪತ್ತನ್ನು ನಿಮ್ಮದಾಗಿಸಿಕೊಳ್ಳಲು ಹೋಗುವುದು ಬೇಡ. ಸಂಕಷ್ಟದ ಸನ್ನಿವೇಶಗಳನ್ನು ಬುದ್ಧಿವಂತಿಕೆಯಿಂದ ದಾಟಬೇಕಾಗುವುದು. ಅನಪೇಕ್ಷಿತ ವಿಚಾರಗಳನ್ನು ಚರ್ಚಿಸುವುದು ನಿಮಗೆ ಇಷ್ಟವಾಗದು. ಪ್ರಯಾಣ ಮಾಡುವುದು ನಿಮಗೆ ಇಷ್ಟವಾಗದು. ಒತ್ತಡದಲ್ಲಿ ಇಂದಿನ ಕಾರ್ಯವನ್ನು ಮಾಡುವಿರಿ.
ವೃಷಭ ರಾಶಿ: ಧಾರ್ಮಿಕ ಆಚರಣೆಗಳನ್ನು ಮಾಡುತ್ತಿದ್ದರೂ ಅದು ಕೃತಕದಂತೆ ಅನ್ನಿಸಬಹುದು. ಒಂದೇ ವಿಷಯವು ಅನೇಕ ಬಾರಿ ಕೇಳಿ ಹಿಂಸೆಯಾಗುವುದು. ಶೀತಲ ಸಂಘರ್ಷವು ಸ್ಫೋಟವಾಗಬಹುದು. ಹಳೆಯದನ್ನು ಮರೆತು ಹೊಸತನದಲ್ಲಿ ಮುನ್ನಡೆಯುವುದು ಉತ್ತಮ. ಯಾರ ಮಾತನ್ನೂ ಕೇಳದೇ ಉದ್ಧಟತನ ತೋರುವುದು ಸರಿಯಾಗದು. ಆರ್ಥಿಕ ಅಭಿವೃದ್ದಿಗೆ ನಾನಾ ಯೋಚನೆಯನ್ನು ಮಾಡುವಿರಿ. ನಿಮ್ಮ ಸತ್ಯವನ್ನು ನಿಮ್ಮವರು ನಂಬುವುದು ಕಷ್ಟವಾದೀತು. ಆರೋಗ್ಯದಲ್ಲಿ ಆಗುವ ಸಣ್ಣ ಸಣ್ಣ ವ್ಯತ್ಯಾಸವು ನಿಮಗೆ ಕಿರಿಕಿರಿ ಆಗಬಹುದು. ಆದಿತ್ಯ ಹೃದಯ ಸ್ತೋತ್ರವನ್ನು ಪ್ರಾತಃಕಾಲದಲ್ಲಿ ಶುದ್ಧ ಮನಸ್ಸಿನಿಂದ ಪಠಿಸಿ.
ಮಿಥುನ ರಾಶಿ: ಮಕ್ಕಳ ವಿಚಾರದಲ್ಲಿ ನಿಮ್ಮ ಧೋರಣೆಯು ಬದಲಾಗುವುದು. ಮನೆಯಲ್ಲಿ ಯಾರ ಮೇಲೂ ಪಕ್ಷಪಾತ ಮಾಡುವುದು ಬೇಡ. ಪ್ರಯಾಣವು ನಿಮಗೆ ಸಂಕಟವನ್ನು ತರಬಹುದು. ಅನಿರೀಕ್ಷಿತ ಸಂಪತ್ತು ತಂದೆಯ ಕಡೆಯಿಂದ ಬರಬಹುದು. ಕಛೇರಿಯ ಕೆಲಸದಲ್ಲಿ ನೀವು ಹೆಚ್ಚು ಆಸ್ಥೆಯನ್ನು ತೋರಿಸುವಿರಿ.
ನಿಮ್ಮ ಅನನುಕೂಲದ ಸ್ಥಿತಿಗೆ ದೈವವು ಯಾರದೋ ಮೂಲಕ ಸಹಾಯವನ್ನು ಮಾಡಿಸುವುದು. ನೀವು ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮುಂದುವರಿದು ಉತ್ತಮ. ವ್ಯಾಪಾರದಲ್ಲಿ ನೀವು ಹೆಚ್ಚು ಲಾಭವನ್ನು ಗಳಿಸಲು ತಂತ್ರಗಳನ್ನು ರೂಪಿಸುವರಿ. ಬೇರೆಯವರು ನಿಮ್ಮ ಮೇಲೆ ಇಟ್ಟ ನಂಬಿಕೆಯು ನಿಮಗೇ ಅಚ್ಚರಿ ಆಗುವಂತೆ ಇರುವುದು.
ಕಟಕ ರಾಶಿ: ಇಂದು ನೀವು ಸಮಯವನ್ನು ಕಳೆಯಲು ಬೇರೆ ಬೇರೆ ದಾರಿಗಳನ್ನು ಹುಡುಕುವಿರಿ. ಒಂಟಿಯಾಗಿ ಇರುವುದು ನಿಮಗೆ ಕಷ್ಟವೆನಿಸುವುದು. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದು ಹೆಚ್ಚು ಒಳ್ಳೆಯದು. ಹೊಸತನ್ನು ಕಲಿಯಬೇಕು ಎನ್ನುವ ಆಸೆಯು ಬೇಡವೆನಿಸಬಹುದು. ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನೀವು ಹಿಂದೇಟು ಹಾಕುವಿರಿ. ಸ್ನೇಹಿತರ ನಡುವೆ ಹಣಕಾಸಿನ ವ್ಯವಹಾರಕ್ಕೆ ಜಗಳವಾಗಬಹುದು. ಸ್ಥಿರಾಸ್ತಿಯನ್ನು ಪಡೆಯುವ ಮನಸ್ಸು ಇನ್ನೊಬ್ಬರಿಂದ ಪ್ರೇರಿತವಾಗಿ ಬರಬಹುದು. ಅನಿರೀಕ್ಷಿತವಾಗಿ ಆರೋಗ್ಯದಲ್ಲಿ ವ್ಯತ್ಯಾಸವು ಆಗಿದ್ದು ನೀವು ಇದರಿಂದ ವಿಚಲಿತಗೊಳ್ಳುವಿರಿ. ನಿಮಗೆ ಸಿಕ್ಕ ಸಂಪತ್ತನ್ನು ಸದುಪಯೋಗ ಮಾಡುವತ್ತ ಗಮನವಿರಲಿ.