Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 27, 2023 | 12:15 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 27) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 27 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಶುಭ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:15 ರಿಂದ 03:50ರ ವರೆಗೆ, ಯಮಘಂಡ ಕಾಲ ಸಂಜೆ 06:16 ರಿಂದ 07:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:27 ರಿಂದ ಮಧ್ಯಾಹ್ನ 11:03ರ ವರೆಗೆ.

ಮೇಷ: ನಿಮ್ಮ ಚರ ಸಂಪತ್ತನ್ನು ಜೋಪಾನ ಮಾಡಿಕೊಳ್ಳಿ. ಸ್ನೇಹಿತರಿಂದ ಲಾಭವು ನಿಮಗೆ ಸಿಗಲಿದೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಆರಾಮಾಗಿ ಇರಲು ಹೆಚ್ಚು ಇಷ್ಟಪಡುವಿರಿ. ಕಾನೂನಿಗೆ ಸಂಬಂಧಿಸಿದ ಅಂಶಗಳನ್ನು ಸರಿ ಮಾಡಿಕೊಂಡು ದಾಖಲೆಗಳನ್ನು ನಿರ್ಮಿಸಿಕೊಳ್ಳಿ. ಅತಿಯಾದ ಆಯಾಸವನ್ನು ಮಾಡಿಕೊಳ್ಳಲು ಹೋಗುವುದು ಬೇಡ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾನುಭೂತಿಯು ಸಿಗಲಿದೆ. ಸಂಬಂಧಗಳನ್ನು ಬಳಸಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ಆರ್ಥಿಕತೆಯ ವಿಚಾರವು ನಿಮಗೆ ಪೂರ್ಣವಾಗಿ ತಿಳಿಯದು. ನಿಮ್ಮ ಅಜ್ಞಾನವನ್ನು ಪ್ರದರ್ಶಿಸುವುದು ಬೇಡ.

ವೃಷಭ: ನೋವನ್ನು ನುಂಗಿ ಬದುಕುವ ಕಲೆಯನ್ನು ನೀವು ಅರ್ಥಮಾಡಿಕೊಂಡಿರುವಿರಿ. ಯಾರನ್ನೂ ನೋಯಿಸುವುದು ನಿಮಗೆ ಇಷ್ಟವಾಗದು. ನೂತನ ವಸ್ತುಗಳನ್ನು ಪಡೆಯಲಿದ್ದೀರಿ. ಮನೋರಂಜನೆಯಲ್ಲಿ ನಿಮ್ಮ ಹೆಚ್ಚಿನ ಸಮಯವು ಇಂದು ಕಳೆಯಲಿದೆ. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಕಛೇರಿಯ ಕೆಲಸವನ್ನು ಕಾರಣಾಂತರಗಳಿಂದ ಮುಂದು ಹಾಕಲಿದ್ದೀರಿ. ನಿಮ್ಮ ಸ್ವಭಾವವನ್ನು ಸರಿ ಮಾಡಿಕೊಳ್ಳಬೇಕು ಎಂದನಿಸಬಹುದು. ಅಧಿಕಾರಿಗಳ ಬೆಂಬಲವು ನಿಮಗೆ ಬಲವನ್ನು ಕೊಟ್ಟೀತು. ಕೆಲವು ಅವಕಾಶಗಳನ್ನು ನೀವೇ ಬಿಟ್ಟು ಹಾಳು ಮಾಡಿಕೊಳ್ಳುವಿರಿ.

ಮಿಥುನ: ಹೊಸ ಉದ್ಯಮವನ್ನು ಆರಂಭಿಸಲು ಧೈರ್ಯವು ಸಾಲದು. ಇನ್ನೊಬ್ಬರ ಜೊತೆ ಸೇರಿ ಮುಂದುವರಿಸುವುದು ನಿಮ್ಮ ಉತ್ತಮ ಆಯ್ಕೆ ಆಗಬಹುದು. ಮಕ್ಕಳಿಂದ ನಿಮ್ಮ ಉದ್ಯಮಕ್ಕೆ ಸಹಾಯವು ಸಿಗಬಹುದು. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾಗಿ ಇರಲಿದೆ. ಹೊಂದಾಣಿಕೆಯ ಮನೋಭಾವವು ಮುಖ್ಯವಾಗುವುದು. ಹಣವನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುವಿರಿ. ಇಂದಿನ ನಿಮ್ಮ ವರ್ತನೆಯು ಗಾಂಭೀರ್ಯದಿಂದ ಇರಲಿದೆ. ಅನಾರೋಗ್ಯದ ಸಮಸ್ಯೆಯನ್ನು ನೀವು ನಿರ್ಲಕ್ಷ್ಯ ಮಾಡುವುದು ಬೇಡ.

ಕಟಕ: ಗಂಡಾಂತರದಿಂದ ಪಾರಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ಮನೆಗೆ ಬೇಕಾದ ಉಪಕರಣಗಳನ್ನು ಖರೀದಿಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಹೆಚ್ಚಿನ ಆತಂಕ ಇರಲಿದೆ. ಕಳೆದುಕೊಂಡದ್ದರೆ ಬಗ್ಗೆ ಹೆಚ್ಚು ಮೋಹ ಉಂಟಾಗುವುದು. ಗೊಂದಲವನ್ನು ಮಾಡಿಕೊಳ್ಳದೇ ಸರಳವಾಗಿ ಕೆಲಸಗಳನ್ನು ಮಾಡುವುದು ಒಳ್ಳೆಯದು. ಅಲ್ಪ ಹೂಡಿಯತ್ತ ಗಮನವಿರಲಿದೆ. ಬಿಡುವಿನ ಸಮಯವನ್ನು ಸಂಪಾದನೆಗಾಗಿ ಬಳಸಿಕೊಳ್ಳುವಿರಿ. ಹಿರಿಯರ ಆಶೀರ್ವಾದವು ಸಿಗಲಿದೆ. ಒಂದಕ್ಕಿಂತ ಹೆಚ್ಚು ಕೆಲಸವನ್ನು ಒಟ್ಟಿಗೇ ಮಾಡಲು ಹೋಗುವಿರಿ. ದಾನ ಮಾಡಲು ಮನಸ್ಸು ಹಿಂಜರಿಯಲಿದೆ.