Horoscope Today: ರಾಶಿಭವಿಷ್ಯ, ಈ ರಾಶಿಯವರು ವ್ಯವಹಾರದಲ್ಲಿ ಜಾಗರೂಕರಾಗಿ ಇರಬೇಕಾದೀತು

| Updated By: Rakesh Nayak Manchi

Updated on: Jul 30, 2023 | 12:15 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ರಾಶಿಭವಿಷ್ಯ, ಈ ರಾಶಿಯವರು ವ್ಯವಹಾರದಲ್ಲಿ ಜಾಗರೂಕರಾಗಿ ಇರಬೇಕಾದೀತು
ರಾಶಿಭವಿಷ್ಯ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 30 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಐಂದ್ರ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:27 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 03:50ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:16 ರಿಂದ 07:52ರ ವರೆಗೆ.

ಮೇಷ: ಸಾಮಾಜಿಕ ಕಳಕಳಿಯನ್ನು ನೀವು ಹೆಚ್ಚಿಸಿಕೊಳ್ಳುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕವಾಗಬಹುದು. ಕುಟುಂಬದ ಸದಸ್ಯರ ಪ್ರೀತಿಯು ಸಿಗಲಿದೆ. ಆಕಸ್ಮಿಕ ವಾರ್ತೆಯನ್ನು ನೀವು ಸಮಾಧಾನದಿಂದ ತೆಗೆದುಕೊಳ್ಳಬೇಕಾದೀತು.‌ ನಿಮ್ಮ ಕೆಲಸಕ್ಕೆ ಪ್ರಶಂಸೆಯು ಸಿಗಲಿದೆ. ಸಂಗಾತಿಯನ್ನು ಸಂತೋಷಪಡಿಸಲು ಇಷ್ಟಪಡುವಿರಿ‌. ಕಾಲು ನೋವಿನಿಂದ ಕಷ್ಟಪಡಬೇಕಾದೀತು. ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಅಲ್ಪ ಶ್ರಮದಿಂದ ಹೆಚ್ಚು ಗಳಿಸುವ ತಂತ್ರವನ್ನು ಹೂಡುವಿರಿ.

ವೃಷಭ: ನೆಮ್ಮದಿಗೆ ನಿಮ್ಮದೇ ಸೂತ್ರಗಳನ್ನು ನೀವು ಅನುಸರಿಸುವಿರಿ.‌ ಕೆಲವು ಅಭ್ಯಾಸವನ್ನು ಬಿಟ್ಟುಬಿಡುವಿರಿ. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಂಸಾರವನ್ನು ನಿಭಾಯಿಸುವ ಕಲೆಯನ್ನು ನೀವು ತಿಳಿದುಕೊಳ್ಳಬಹುದು. ತಾಯಿಯಿಂದ ನಿಮಗೆ ಹಿತವಚನವು ಸಿಗಲಿದೆ. ಯಾವುದನ್ನೂ ಗೊತ್ತಿಲ್ಲದೇ ನಂಬುವುದು ಬೇಡ. ನಿಮ್ಮ ವರ್ತನೆಯು ಎಂದಿಗಿಂತ ಭಿನ್ನವಾಗಿರುವುದು. ಕ್ಲಿಷ್ಟಕರ ಸನ್ನಿವೇಶಗಳನ್ನು ನೀವು ಸುಲಭವಾಗಿ ನಿಭಾಯಿಸುವ ಕಲೆಯನ್ನು ಅರಿತಿರುವಿರಿ.

ಮಿಥುನ: ಪ್ರೇಮವನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದವನ್ನು ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ತಂದೀತು. ಸುಲಭದ ಕೆಲಸಗಳನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಸಂಗಾತಿಯಿಂದ ಹಣದ ಸಹಾಯವನ್ನು ಪಡೆಯುವಿರಿ. ಶೋಧಕರಿಗೆ ಹೆಚ್ಚಿನ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಅನಾರೋಗ್ಯದಲ್ಲಿಯೂ ನೀವು ಉತ್ಸಾಹದಿಂದ ಮಾಡುವ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಸಾಮಾಜಿಕ ಕೆಲಸಗಳು ನಿಮಗೆ ಅಭ್ಯಾಸದಂತೆ‌ ಅಗುವುದು. ಬಂಧುಗಳ ಆಗಮನವು ಖುಶಷಿಕೊಡುವುದು.

ಕಟಕ: ಇಂದು ನೀವು ವ್ಯವಹಾರದಲ್ಲಿ ಜಾಗರೂಕರಾಗಿ ಇರಬೇಕಾದೀತು. ಹಣವನ್ನು ತಪ್ಪಾದ ಕಡೆಯಲ್ಲಿ ಹೂಡುವಿರಿ. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಕೊಡುವುದು ಬೇಡ. ನಿಮ್ಮ‌ ಅಭಿಪ್ರಾಯವನ್ನು ಹಂಚಿಕೊಳ್ಳಿ. ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುವಿರಿ. ನಿಮ್ಮ ವಸ್ತುಗಳ ಬಳಕೆಯನ್ನು ನೀವು ನಿರ್ಲಕ್ಷ್ಯದಿಂದ‌ ಮಾಡುವಿರಿ. ಸರಳ ಮಾತುಗಳನ್ನು ಆಡುವುದು ನಿಮಗೆ ಬಾರದು. ಹೊಸ ಕೆಲಸಕ್ಕೆ ಸೇರುವ ಉತ್ಸಾಹದಲ್ಲಿ ನೀವಿರುವಿರಿ. ಮಕ್ಕಳನ್ನು ನೀವು ಶಿಸ್ತಿಗೆ ತರುವ ಪ್ರಯತ್ನವನ್ನು ಮಾಡುವಿರಿ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ