AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ವಾರಭವಿಷ್ಯ, ಆಗಸ್ಟ್ ತಿಂಗಳ ಮೊದಲ ವಾರ ಈ ರಾಶಿಯವರಿಗೆ ಶುಭವಾಗಿದೆ

ದ್ವಾದಶ ರಾಶಿಗಳ ವಾರ ಭವಿಷ್ಯ: 2023ರ ಜುಲೈ 30 ರಿಂದ ಆಗಸ್ಟ್ 5 ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ವಾರಭವಿಷ್ಯ, ಆಗಸ್ಟ್ ತಿಂಗಳ ಮೊದಲ ವಾರ ಈ ರಾಶಿಯವರಿಗೆ ಶುಭವಾಗಿದೆ
ವಾರಭವಿಷ್ಯImage Credit source: iStock Photo
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi|

Updated on: Jul 30, 2023 | 1:15 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಜುಲೈ 30 ರಿಂದ ಆಗಸ್ಟ್ 5 ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ: ಈ ವಾರವು ಸುಖ ಹಾಗೂ ದುಃಖಗಳ ಸಮ್ಮಿಶ್ರಣವಿರಲಿದೆ. ಆಪ್ತರನ್ನು ದೂರಮಾಡಿಕೊಳ್ಳುವಿರಿ. ಅನಾರೋಗ್ಯವು ನಿಮ್ಮನ್ನು ಬಾಧಿಸಬಹುದು. ತಂದೆಯ ಪ್ರೀತಿಯನ್ನು ಈ ವಾರ ಹೆಚ್ಚು ಪಡೆಯುವಿರಿ. ಕೆಲಸವನ್ನು ನಿಷ್ಠೆಯಿಂದ ಮಾಡುವಿರಿ. ಹಣಕಾಸಿನ ಏರಿಳಿತಗಳು ನಿಮಗೆ ಗೊಂದಲವನ್ನು ಸೃಷ್ಟಿಸಬಹುದು. ಮಕ್ಕಳಿಂದ ಅಪಮಾನವಾಗಬಹುದು. ಉದ್ಯೋಗದಲ್ಲಿ ಪ್ರಗತಿಯನ್ನು ನೀವು ಕಾಣಲಿದ್ದೀರಿ. ಸಂಗಾತಿಯ ಕೋಪವನ್ನು ತಣಿಸಲು ನೀವು ಸಮರ್ಥರಾಗುವಿರಿ. ನಿಮ್ಮ ಉದ್ಯೋಗಕ್ಕೆ ಸ್ನೇಹಿತರ ಬೆಂಬಲವು ಸಿಗಲಿದೆ. ಈ ವಾರ ನೀವು ಏಕಾಂಗಿಯಂತೆ ಇರುವಿರಿ. ಮನಸ್ಸನ್ನು ದೃಢವಾಗಿಸಿಕೊಳ್ಳಲು ಕಾರ್ತಿಕೇಯ ಸ್ತೋತ್ರವನ್ನು ಪಠಿಸಿರಿ.

ವೃಷಭ: ಆಗಸ್ಟ್ ತಿಂಗಳ ಮೊದಲ ವಾರ ಎಲ್ಲ ಗ್ರಹಗಳೂ ನಿಮಗೆ ಅನುಕೂಲವನ್ನು ಮಾಡಿಕೊಡರು. ಚತುರ್ಥದಲ್ಲಿ ಬುಧ, ಕುಜ, ಶುಕ್ರರಿದ್ದು ಬಂಧುಗಳ ಸಹಾಯವು ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ನೆಮ್ಮದಿಯ ಕೊರತೆ ಎದ್ದು ಕಾಣಬಹುದು. ಕುಟುಂಬದ ವಿಚಾರವನ್ನು ನಿಮ್ಮ ಜೊತೆಯೇ ಮಾತನಾಡಬಹುದು. ಈ ವಾರ ನಿಮ್ಮ ವೈವಾಹಿಕ ಜೀವನದಲ್ಲಿ ಬಹಳಷ್ಟು ಸಕಾರಾತ್ಮಕ ಸಂಗತಿಗಳು ನಡೆಯುವುದು. ನಿಮ್ಮ ಸಂಗಾತಿಯ ಜೊತೆಗಿನ ಪ್ರೀತಿಯು ಗಾಢವಾಗುವುದು.‌ ಈ ವಾರ ಮಕ್ಕಳಿಂದ ಶುಭವಾರ್ತೆಯು ಬರಲಿದೆ. ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸಲು ನೀವು ಕಲಿತಿದ್ದೀರಿ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರಲು ನಿಮ್ಮ ಶ್ರಮ ಹಾಗೂ ದೈವಾನುಕೂಲದ ಅಗತ್ಯವಿದೆ. ಗುರುಚರಿತ್ರೆಯನ್ನು ಪಠಣ ಮಾಡಿ.

ಮಿಥುನ: ಈ ವಾರದ ಆರಂಭವು ಅಷ್ಟಾಗಿ ಸಂತೋಷವನ್ನು ಕೊಡದು. ಆದಾಯದ ಮೂಲದಿಂದ ನಿಮಗೆ ತೊಂದರೆಯಾಗಬಹುದು. ಈ ವಾರದಿಂದ ನಿಮ್ಮ ಕೆಲಸದ ಅವಧಿಯು ವ್ಯತ್ಯಾಸವಾಗಿ ಮಾನಸಿಕ ಕಿರಿಕಿರಿಯನ್ನು ಅನುಭವಿಸುವಿರಿ. ಈ ವಾರ ನೀವು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಒಳ್ಳೆಯದೇ. ಆದರೂ ಸ್ವಲ್ಪ ದಿನಕ್ಕಾಗಿ ನೀವು ಕಾಯಬೇಕಾಗಬಹುದು. ವೃತ್ತಿಯಲ್ಲಿ ನೀವು ಹೊಸ ವಿಚಾರಗಳನ್ನು ಈ ವಾರ ಕಲಿಯುವಿರಿ. ವಾಹನಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಬಹುದು. ಶತ್ರುಗಳ ತಂತ್ರಕ್ಕೆ ನೀವು ಪ್ರತಿತಂತ್ರವನ್ನು ಈ ವಾರ ಕಾನೂನಾತ್ನಕವಾಗಿ ಮಾಡಲಿದ್ದೀರಿ. ಧಾರ್ಮಿಕ ಆಚರಣೆಯಲ್ಲಿ ನಿಮಗೆ ಆನಂದ ಸಿಗಲಿದೆ. ಮಹಾವಿಷ್ಣುವಿನ ಸ್ಮರಣೆಯನ್ನು ಮಾಡುವಿರಿ.

ಕರ್ಕಾಟಕ: ಈ ವಾರ ಕುಟುಂಬದ ನಿರ್ವಹಣೆಯಲ್ಲಿ ಮಗ್ನರಾಗುವಿರಿ. ನಿಮ್ಮ‌ ಸಾಮರ್ಥ್ಯದ ಬಗ್ಗೆ ಇತರರಿಗೆ ಹೆಚ್ಚೇನೂ ತಿಳಿಯದಾಗುವುದು. ಶತ್ರುಗಳ ಕಾಟವು ಅಧಿಕವಾಗಿ ಇರಬಹುದು. ಹಣಕಾಸಿನ ವಿಚಾರದಲ್ಲಿ ನೀವೂ ದೃಢವಾದ ನಿರ್ಧಾರವನ್ನು ಮಾಡಲಿದ್ದೀರಿ. ಸಹೋದರರಿಂದ ನಿಮಗೆ ಹಣಕಾಸಿನ ಲಾಭವಾಗುವುದು. ತಾಯಿಯ ಕಡೆಯಿಂದ ನಿಮಗೆ ಬಯಸಿದ ಲಾಭವಾಗುವುದು. ತಂದೆಯ ಮಾತಿನ ಮೇಲೆ ಅನಾದರವನ್ನು ತೋರಿಸುವಿರಿ. ನಿಮ್ಮ ಸ್ನೇಹಸಂಬಂಧಗಳು ಸಡಿಲಾಗಬಹುದು. ಎಷ್ಟೋ ವರ್ಷಗಳ ಅನಂತರ ನಿಮ್ಮ ಸ್ನೇಹವು ಒಂದಾಗಿ ಬಲಗೊಳ್ಳಬಹುದು. ಉದ್ಯೋಗದ ಸ್ಥಳದಲ್ಲಿ ನೆಮ್ಮದಿಯು ಇರಲಿದೆ.

ಸಿಂಹ: ಈ ವಾರ ಸ್ನೇಹಿತರಿಂದ ನಿರೀಕ್ಷಿಸಿದ ಸಹಾಯವು ಸಿಗಲಿದೆ. ಪ್ರೇಮಕ್ಕೆ ಸಂಬಂಧಿಸಿದ ವಿಷಯವು ಕುಟುಂಬದಲ್ಲಿ ಮನ್ನಣೆಯನ್ನು ಪಡೆದೀತು. ಸಂಗಾತಿಯ ಪ್ರೀತಿಯನ್ನು ನೀವು ಈ ವಾರ ಹೆಚ್ಚು ಅನುಭವಿಸುವಿರಿ. ಮಕ್ಕಳಿಂದ ನಿಮಗೆ ಸಂತೋಷವು ಸಿಗುವುದು. ತಂದೆಯ ಕಾರಣಕ್ಕೆ ಧನವು ವ್ಯಯವಾಗಬಹುದು. ತಂದೆಯಿಂದ ಬರಬೇಕಾದ ಸಂಪತ್ತೂ ಸಿಗದೇ ಹೋದೀತು. ಬಂಧುಗಳ ಮೇಲೆ‌ ಪ್ರೀತಿಯು ಹೆಚ್ಚಾಗಬಹುದು. ಮನೆಯಲ್ಲಿ ಎಂದಿಗಿಂತ ಪ್ರಶಾಂತ ವಾತಾವರಣವು ಇರಲಿದ್ದು ನಿಮಗೆ ಖುಷಿಯಾಗಲಿದೆ. ಆರ್ಥಿಕ ಮೂಲವನ್ನು ನೀವು ಬಲಮಾಡಿಕೊಳ್ಳಲಿದ್ದೀರಿ. ದಶಮಾಧಿಪತಿಯು ನಿಮ್ಮ ರಾಶಿಯಲ್ಲಿ ಇರುವುದರಿಂದ ಉದ್ಯೋಗದಲ್ಲಿ ಹೆಚ್ಚಿನ ಸಂತೋಷವು ಸಿಗಬಹುದು. ದುರ್ಗಾದೇವಿಯನ್ನು ಸ್ತುತಿ ಮಾಡಿ.

ಕನ್ಯಾ: ಈ ವಾರವು ವೃತ್ತಿಯ ಸ್ಥಳದಲ್ಲಿ ನೀವು ಹೆಚ್ಚು ಶ್ರಮಿಸಬೇಕಾಗಬಹುದು. ಆದರೂ ನಿಮಗೆ ಯಶಸ್ಸು ಸಿಗುತ್ತದೆ ಎಂಬ ಖಾತ್ರಿ ಇಲ್ಲ.‌ ಆಯಾಸವಂತೂ ಅಧಿಕವಾಗುವುದು. ಆದರೆ ಹಿರಿಯರ ಪ್ರಶಂಸೆಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಈ ವಾರ ಉನ್ನತಸ್ಥಾನವನ್ನು ಎಷ್ಟೋ ದಿನಗಳ ಹೋರಾಟದ ಫಲವಾಗಿ ಪಡೆದುಕೊಳ್ಳುವಿರಿ. ರಪ್ತು ಉದ್ಯಮವು ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ನೀಡುತ್ತದೆ. ಈ ವಾರ ಹೊಸ ವ್ಯವಹಾರವನ್ನು ವೃತ್ತಿಗೆ ಸಂಬಂಧಿಸಿದಂತೆ ಪ್ರಾರಂಭಿಸಬಹುದು. ದ್ವಾದಶದಲ್ಲಿ ಮೂರು ಗ್ರಹಗಳು ಇದ್ದು ಧನ ನಷ್ಟವನ್ನೂ ಬಂಧುನಷ್ಟವನ್ನೂ ಮಾಡಿಕೊಳ್ಳುವಿರಿ. ತಂದೆಯ ಮಾರ್ಗದರ್ಶನ ನಿಮಗೆ ಹೆಚ್ಚು ಅನುಕೂಲವನ್ನು ಮಾಡಬಹುದು. ಲಕ್ಷ್ಮೀನಾರಾಯಣರ ಆರಾಧನೆಯಿಂದ ಶುಭವಿದೆ.

ತುಲಾ: ಆಗಸ್ಟ್ ಮೊದಲ ವಾರ ನಿಮಗೆ ಶುಭವಾರವೇ ಆಗಲಿದೆ. ಏಕಾದಶದಲ್ಲಿ ಕುಜ, ಶುಕ್ರ ಹಾಗೂ ಬುಧರು ನಿಮಗೆ ಎಲ್ಲ ರೀತಿಯ ಸುಖವನ್ನು ಸಂಪತ್ತನ್ನು ಕೊಡುವರು. ಎಷ್ಟೇ ಅನುಕೂಲವಿದ್ದರೂ ನಿಮ್ಮ ಹಿಡಿತದಲ್ಲಿ ನೀವು ಇರುವುದು ಒಳ್ಳೆಯದು. ವ್ಯಾಪಾರಿಗಳಿಗೆ ಪಾಲುದಾರಿಕೆಯಿಂದ ಪ್ರಯೋಜನ ಆಗದು. ಆರೋಗ್ಯ ಸಮಸ್ಯೆಯ ಕಾರಣ ವೃತ್ತಿಗೆ ವಿರಾಮವನ್ನು ಹಾಕಬೇಕಾದೀತು. ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗುವುದು ಬೇಡ. ವೈವಾಹಿಕ ಜೀವನದಲ್ಲಿ ಸ್ವಲ್ಪ ವೈಮನಸ್ಸು ಕಂಡುಬಂದರೂ ಅದನ್ನು ನಿಭಾಯಿಸಲು ನಿಮಗೆ ಗೊತ್ತಿರುತ್ತದೆ. ಈ ವಾರ ನಿಮ್ಮ ಒತ್ತಡವು ಗಮನಾರ್ಹ ರೀತಿಯಲ್ಲಿ ಹೆಚ್ಚಾಗಬಹುದು. ಆಸ್ತಿಯ ಕಾರಣದಿಂದಾಗಿ ಮನೆಯಲ್ಲಿ ವಾತಾವರಣ ಕೆಡಲಿದೆ. ಆರ್ಥಿಕ ಫಲಿತಾಂಶವು ಮಿಶ್ರವಾಗಿ ಇರಲಿದೆ. ಕುಲದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ.

ವೃಶ್ಚಿಕ: ಮೊದಲ ವಾರ ನಿಮಗೆ ಆನಂದವಾರವಾಗುದು. ನವಮದ ಸೂರ್ಯನು ನಿಮಗೆ ಅನೇಕ ವಿಧವಾದ ಸೌಲಭ್ಯಗಳನ್ನು ಹಿರಿಯರಿಂದ ಸಿಗುವಂತೆ ಮಾಡುವನು. ನಿಮ್ಮ ಪ್ರಣಯ ಜೀವನವು ಬಂಧುಗಳ ಮಧ್ಯಸ್ತಿಕೆಯಲ್ಲಿ‌ ಸರಿಯಾಗುವುದು. ವಾರದ ಆರಂಭದಲ್ಲಿ ಸಾಕಷ್ಟು ಸಂತೋಷವನ್ನು ಅನುಭವಿಸುವಿರಿ. ವಿವಾಹಿತರು ಸಾಮರಸ್ಯಕ್ಕಾಗಿ ಒದ್ದಾಡುವಿರಿ. ಹಿರಿಯರ ಮಾತಿನಂತೆ ನಡೆದುಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಭಿನ್ನಾಭಿಪ್ರಾಯವು ಬರಬಹುದು. ಉದ್ಯೋಗದ ಸ್ಥಳದಲ್ಲಿ ನಿಮಗೆ ಪ್ರೇಮವು ಅಂಕುರಿಸಬಹುದು. ವ್ಯವಹಾರಾದ ಹಾದಿಯಲ್ಲಿ ಈ ವಾರವು ಅಡೆತಡೆಗಳು ಇರಬಹುದು. ಇವನ್ನು ನೀವು ಧೈರ್ಯದಿಂದ ಎದುರಿಸುವಿರಿ. ಸೋಲಿಗೆ ಹತಾಶರಾಗದೇ ನಿಮ್ಮ ಪ್ರಯತ್ನವನ್ನು ಮುಂದುವಿರಿಸಿ. ಸುಬ್ರಹ್ಮಣ್ಯನ ಆರಾಧನೆಯಿಂದ ಶ್ರೇಯಸ್ಸು ಆಗಲಿದೆ.

ಧನು: ಈ ವಾರದ ನಿಮ್ಮ ಪ್ರಯತ್ನವು ಯಶಸ್ಸನ್ನು ಕಾಣಬಹುದು. ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಶ್ರಮಿಸುವಿರಿ. ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಿರಿ. ನಿರುತ್ಸಾಹವನ್ನು ನೀವು ದೂರ ಮಾಡಿಕೊಳ್ಳುವುದು ಉತ್ತಮ. ಈ ವಾರವು ವಿದ್ಯಾರ್ಥಿಗಳ ಶ್ರಮದಿಂದ ಮಿಶ್ರ ಫಲಿತಾಂಶವು ಸಿಗಬಹುದು. ಈ ವಾರ ನೀವು ಸದಾ ಚಟುವಟಿಕೆಯಲ್ಲಿ ನಿರತರಾಗುವಿರಿ. ಸುದೃಢರಾಗಿರಲು ನೀವು ಯೋಗ, ಧ್ಯಾನವನ್ನು ಮಾಡುವಿರಿ. ಆರೋಗ್ಯವು ಚೆನ್ನಾಗಿ ಇರಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿ ಇರುವುದು. ಅಷ್ಟಮದಲ್ಲಿ ಇರುವ ಸೂರ್ಯನು ಸ್ತ್ರೀಯರಿಗೆ ಮಾಂಗಲ್ಯ ಹಣವನ್ನು ಮಾಡಬಹುದು. ಮೃತ್ಯುಂಜಯನ ಆರಾಧನೆ ಮಾಡಿರಿ.

ಮಕರ: ತಿಂಗಳ ಮೊದಲ ವಾರವಾಗಿದ್ದು ಮಧ್ಯ ಭಾಗವು ಬಹಳ ಸುಖ, ಇಷ್ಟದ ದಿನವಾಗಲಿದೆ. ಮನೆಯನ್ನು ಖರೀದಿಸುವ ಯೋಚನೆ ಇರಲಿದೆ. ಈ ವಾರ ನೀವು ಕೆಲಸವನ್ನು ಬದಲಾಯಿಸಲು ನೀವು ಯೋಚಿಸುವಿರಿ.‌ ಕೋಪದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಕಚೇರಿಯಲ್ಲಿ ಆದ ತಪ್ಪು ಕೆಲಸವನ್ನು ಮುಚ್ಚಿ ಹಾಕಲು ಪ್ರಯತ್ನಿಸುವಿರಿ. ನೀವು ಅಹಂಕಾರವನ್ನು ಬದಿಗಿಟ್ಟು ಇನ್ನೊಬ್ಬರ ಜೊತೆ ವರ್ತಿಸಿ. ಉದ್ಯಮಿಗಳು ಈ ವಾರ ಉತ್ತಮ ಅವಕಾಶವನ್ನು ನಿರೀಕ್ಷಿಸಬಹುದು. ತಂದೆಯ ಸಹಾಯದಿಂದ ವ್ಯಾಪಾರವನ್ನು ವಿಸ್ತರಿಸುವ ನಿಮ್ಮ ಕನಸನ್ನು ಈಡೇರಿಲುವುದು. ಈ ವಾರದ ಹೂಡಿಕೆಯಿಂದ ನಿಮಗೆ ಲಾಭವಾಗಲಿದೆ.‌ ಈ ವಾರ ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಿದ್ದು ಕುಟುಂಬದ ಸದಸ್ಯರ ಜೊತೆ ಸಂಘರ್ಷವಾಗಿ ಪರಿಸ್ಥಿತಿಯು ಉದ್ವಿಗ್ನವಾಗಬಹುದು. ಶಿವನಿಗೆ ಶನಿವಾರದಂದು ರುದ್ರಾಭಿಷೇಕವನ್ನು ಮಾಡುವಿರಿ.

ಕುಂಭ: ಆಗಷ್ಟ್ ತಿಂಗಳ ಮೊದಲ ವಾರವು ನಿಮಗೆ ಶುಭವಾಗಿದೆ. ಈ ವಾರ ಕೆಲಸದ ಸ್ಥಳದಲ್ಲಿ ಉತ್ತಮ ಬೆಳವಣಿಗೆ ಇರಲಿದೆ. ವ್ಯಾಪಾರಿಗಳು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಇರುವರು. ನೌಕರರ ಸಾಧನೆಗೆ ಗೌರವವನ್ನು ಪಡೆಯಲಿದ್ದೀರಿ. ಸರ್ಕಾರಿ ಉದ್ಯೋಗವನ್ನು ಪಡೆಯಲು ಇಚ್ಛಿಸುವವರು ಇನ್ನೂ ಸ್ವಲ್ಪ ದಿನ ಕಾಯಬೇಕಾಗಬಹುದು. ಹಣಕಾಸಿನ ದೃಷ್ಟಿಯಿಂದ ಈ ವಾರ ಸಾಧಾರಣವಾಗಿರಲಿದೆ. ದಾಂಪತ್ಯದಲ್ಲಿ ಹೆಚ್ಚು ಸುಖವನ್ನು ನೀವು ಈ ವಾರ ಪಡೆಯಲಿದ್ದೀರಿ. ನಿಮ್ಮ ಸಂಗಾತಿಯ ಜೊತೆ ಹೊರಗೆ ಸುತ್ತಾಡಲು ನೀವು ಸಮಯವನ್ನು ಮಾಡಿಕೊಳ್ಳುವಿರಿ. ಬಾಂಧವ್ಯವು ಈ ವಾರ ಚೆನ್ನಾಗಿ ಇರಲಿದೆ. ಕುಲದೇವರ ಆರಾಧನೆಯನ್ನು ಹೆಚ್ಚು‌ ಮಾಡುವುದು ಉತ್ತಮ.

ಮೀನ: ಈ ವಾರ ನಿಮಗೆ ಪ್ರಮುಖ ವಿಷಯಗಳನ್ನು ನಿರ್ಧರಿಸಲು ಕಷ್ಟವಾಗಬಹುದು. ನಿಮ್ಮ ಕಠಿಣ ಪರಿಶ್ರಮವು ಅಪೇಕ್ಷಿತ ಫಲಿತಾಂಶವನ್ನು ಪಡೆಯುವಂತೆ ಮಾಡುವುದು. ನಿಮ್ಮ ಆಲೋಚನೆಯು ನಿಮ್ಮ ಪ್ರಗತಿಗೆ ಹೆಚ್ಚು ಪೂರಕವಾಗುವುದು. ಕುಟುಂಬ ಸದಸ್ಯರ ನಡುವಿನ ಅಂತರವು ಕಡಿಮೆಯಾಗುವು. ಈ ವಾರವಾದರೂ ಕುಟುಂಬದ ಜೊತೆ ಇರಲು ಪ್ರಯತ್ನಿಸಿ. ಪ್ರೇಮಕ್ಕೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ತಾಳ್ಮೆಯಿಂದಿದ್ದರೆ ಮತ್ತು ಭರವಸೆ ಕಳೆದುಕೊಳ್ಳದಿದ್ದರೆ ಉತ್ತಮ. ಈ ವಾರ ಸಣ್ಣ ಸಣ್ಣ ವಿಷಯಗಳ ಬಗ್ಗೆ ವಾದಿಸುವುದರಿಂದ ದಾಂಪತ್ಯದಲ್ಲಿ ಕಲಹವು ಅತಿಯಾಗಬಹುದು.‌ ಈ ವಾರ ಆರ್ಥಿಕ ಸ್ಥಿತಿಯು ಹದವನ್ನು ತಪ್ಪಬಹುದು. ಮಹಾಲಕ್ಷ್ಮಿಅನುಗ್ರಹವನ್ನು ಪಡೆಯುವಿರಿ.

-ಲೋಹಿತಶರ್ಮಾ (ವಾಟ್ಸ್​ಆ್ಯಪ್- 8762924271)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ