Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ ಭವಿಷ್ಯ ಹೀಗಿದೆ

|

Updated on: Mar 09, 2023 | 6:00 AM

2023 ಮಾರ್ಚ್ 9 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. 

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Image Credit source: belakunews.com
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 9 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ:ಗುರು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಹಸ್ತಾ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02: 13 ರಿಂದ ಮಧ್ಯಾಹ್ನ 03:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:46 ರಿಂದ ಬೆಳಗ್ಗೆ 08:15ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:45 ರಿಂದ 11:14ರ ವರೆಗೆ.

ಮೇಷ: ನಿಮ್ಮ ಭವಿಷ್ಯವನ್ನು ನಿದ್ರೆಯಲ್ಲಿ ಕಂಡರೆ ಆಗದು. ಬಂದಿರುವುದು ಧೈರ್ಯದಿಂದ ಎದುರಿಸಿ, ಆತಂಕಪಡುವ ಅವಶ್ಯಕತೆಯಿಲ್ಲ. ನಿಮ್ಮನ್ನು ನೋಡಿಕೊಳ್ಳುವರಾರಿಲ್ಲ ಎಂದೆನಿಸಬಹುದು. ಇದ್ದಲ್ಲೇ ಇರುವ ಬದಲು ಏನನ್ನಾದರೂ ಮಾಡು. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಿರಿ. ಯಾವುದೇ ವಿವಾದವನ್ನು ಎಳೆದುಕೊಳ್ಳಬೇಡಿ. ಇಂದು ನಿಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಯೋಗ್ಯರೀತಿಯಲ್ಲಿ ಮಾಡಿ ಮುಗಿಸುವಿರಿ. ಹಣವನ್ನು ಉಳಿಸಲು ಪ್ರಯತ್ನಿಸಿದಷ್ಟೂ ಅನಿರೀಕ್ಷಿತವಾದ ದಾರಿಯಲ್ಲಿ ಖರ್ಚಾಗುವುದು. ಕುಲದೇವರ ಆರಾಧನೆಯನ್ನು ಮಾಡಿ.

ವೃಷಭ: ನಿಮ್ಮ ಯೋಜನೆಗೆ ಇಂದು ಎಲ್ಲವೂ ವಿರುದ್ಧವಾಗಬಹುದು. ಯಾರ ಮೇಲೂ ದ್ವೇಷವನ್ನು ಸಾಧಿಸುತ್ತ ಕೂರಬೇಡಿ. ಮನಸ್ಸು ಕೆಡುತ್ತದೆಯಷ್ಟೇ. ಇನ್ನೊಬ್ಬರು ಆಡುವ ಮಾತುಗಳು ಅಸತ್ಯವೆನಿಸುವುದು. ನಿಮ್ಮವರನ್ನು ಪ್ರೀತಿಸಿ. ಆಗದಿದ್ದರೆ ಸುಮ್ಮನಿರಿ. ನಿಮಗೆ ಬರುವ ಹಣವಿಂದು ಬರಬಹುದು. ಸಂಗಾತಿಯೊಂದಿಗೆ ಸಣ್ಣ ವಿಚಾರಕ್ಕೆ ಮನಸ್ತಾಪ ಏಳಬಹುದು. ನಿಮ್ಮ ಮಾತನ್ನು ಕುಟುಂಬವು ತಿರಸ್ಕರಿಸಬಹುದು. ಇಷ್ಟವಾದ ವಸ್ತುಗಳನ್ನು ಖರೀದಿಸುವಿರಿ. ಉದ್ಯೋಗದ ಕಾರಣಕ್ಕೆ ದೂರಪ್ರಯಾಣವನ್ನು ಮಾಡುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಸ್ನೇಹಿತರು ಸಹಕರಿಸುವರು. ನಿಮ್ಮನ್ನು ಸಮರ್ಥಿಕೊಳ್ಳಲು ಹೆಣಗಾಡುವಿರಿ. ಮಹಾಕಾಳಿಯನ್ನು ಸ್ತುತಿಸಿ.

ಮಿಥುನ: ಕಲಾವಿದರಿಗೆ ಸಮ್ಮಾನಗಳು ಸಿಗಲಿವೆ. ದೂರ ಪ್ರಯಾಣವು ನಿಮಗೆ ಸುಖವಲ್ಲ‌. ನಿರಾಶಾಭಾವದಿಂದ ಹೊರಬಂದು ಒಳ್ಳೆಯ ಕಾರ್ಯದವನ್ನು ಮಾಡುವತ್ತ ಗಮನಹರಿಸಿ. ನಕಾರಾತ್ಮಕ ಭಾವನೆಗಳಿಗೆ ದಾರಿ ಮಾಡಿ ಕೊಡಬೇಡಿ. ಎಲ್ಲವನ್ನೂ ಸಮಾಧಾನಚಿತ್ತದಿಂದ ಸ್ವೀಕರಿಸುವುದನ್ನು ಇಂದಿನಿಂದ ಬೆಳೆಸಿಕೊಳ್ಳಿ. ಮಾನಸಿಕ ನೆಮ್ಮದಿಯೂ ಸಿಗುವುದು. ಜೀವನೂ ಸರಳವಾಗುವುದು. ಕುಟುಂಬದವರೊಂದಿಗೆ ನಗುತ್ತಾ ಇರಿ. ಕಾರ್ಯದ ಒತ್ತಡವು ಇಂದು ಅಧಿಕವಾಗಿರಲಿದೆ. ಆರೋಗ್ಯವನ್ನೂ ಗಮನಿಸಿಕೊಳ್ಳಿ. ರಾಯರವೃಂದಾವನಕ್ಕೆ ಹೋಗಿ ಧ್ಯಾನಮಾಡಿ ಬನ್ನಿ.

ಕಟಕ: ನಿಮಗಾದ ವಂಚನೆಯನ್ನು ಸರಿ ಮಾಡಿಕೊಳ್ಳಲು ಕಾನೂನಿಗೆ ವಿರುದ್ಧವಾಗಿ ಹೊಗಬೇಡಿ. ಹುಲಿಯ ಸವಾರಿಯಾದೀತು. ವ್ಯಾಪಾರದಲ್ಲಿ ಅಧಿಕಲಾಭವನ್ನು ಗಳಿಸಲಿದ್ದೀರಿ. ಸರ್ಕಾರಿ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವರು. ತಂದೆ ಹಾಗೂ ತಾಯಿಯರ ಜೊತೆ ಸ್ವಲ್ಪ ಸಮಯವನ್ನು ಕಳೆಯಿರಿ. ಪ್ರೇಮನಿವೇದನೆ ಮಾಡಿದರೆ ನಕಾರಾತ್ಮಕ ಪ್ರತಿಕ್ರಿಯೆಗಳು ಬರಬಹುದು. ಯಾವುದೂ ನಿಮ್ಮ ಆಲೋಚನೆಗೆ ಅನುಸಾರವಾಗಿ ನಡೆಯುತ್ತಿಲ್ಲವೆಂಬ ಬೇಸರವೂ ಆಗಬಹುದು. ತಾಳ್ಮೆಯಿಂದ ಇರಿ. ಔದುಂಬರ ವೃಕ್ಷಕ್ಕೆ ನೀರೆರೆದು ಬನ್ನಿ.

-ಲೋಹಿತಶರ್ಮಾ, ಇಡುವಾಣಿ