Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

|

Updated on: Apr 24, 2023 | 5:30 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Image Credit source: herzindagi.com
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ: ಸೋಮ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಶೋಭನ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ರಿಂದ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ 07:49 ರಿಂದ 09:23ರ ವರೆಗೆ, ಯಮಘಂಡ ಕಾಲ  10:57 ರಿಂದ 12:31ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:38ರ ವರೆಗೆ.

ಮೇಷ: ಇಂದು ವಿದ್ಯಾರ್ಥಿಗಳು ದೂರದ ಊರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಲು ಚಿಂತಿಸುವರು. ಕಛೇರಿಯಲ್ಲಿ ಅತಿಯಾದ ಕಾರ್ಯನಿಮಿತ್ತ ನಿಮ್ಮ ಮುಖ್ಯ ಕೆಲಸವನ್ನೇ ಮರಡಯುವಿರಿ. ವ್ಯಾಪಾರಸ್ಥರಿಗೆ ಖ್ಯಾತಿಯೂ ಹಣವೂ ಸಿಗಲಿದೆ. ಧಾರ್ಮಿಕ ಚಟುವಟಿಕೆಗಳಿಗೆ ಹಣವನ್ನು ದಾನ ಮಾಡುವಿರಿ. ಹೊಸ ಯೋಜನೆಯ ಕೆಲಸವನ್ನು ನೀವು ಪ್ರಾರಂಭಿಸುವಿರಿ. ವೃತ್ತಿಜೀವನದಲ್ಲಿ ಮುಂದುವರಿಯಲು ಹೊಸ ಅವಕಾಶಗಳು ನಿಮಗೆ ಲಭ್ಯವಾಗಲಿದೆ. ಜೀವನದ ಹಾದಿಯಲ್ಲಿ ಹೆಚ್ಚು ಏರಿಳಿತಗಳು ಇರದೇ ಆರಾಮಾಗಿ ಹೋಗುವಿರಿ. ಕೆಲಸವು ಶೀಘ್ರವಾಗಿ ಪೂರ್ಣಗೊಳಿಸಿಕೊಂಡು ನೀವು ಖುಷಿಪಡುವಿರಿ.

ವೃಷಭ: ನಿಮ್ಮ ಶತ್ರುಗಳು ನಿಮ್ಮನ್ನು ಸೋಲಿಸಲು ತಯಾರಾಗಿರುವರು. ನಿಮ್ಮ ಬಳಿ ಇರುವ ಕೆಲವು ವಸ್ತುಗಳನ್ನು ಇನ್ನೊಬ್ಬರಿಗೆ ನೀಡುವಿರಿ. ನೀವು ಮಕ್ಕಳ ವೃತ್ತಿಜೀವನದ ಬಗ್ಗೆ ಹೆಚ್ಚು ಆತಂಕಪಡಬೇಕಾದ ಅವಶ್ಯಕತೆ ಇರುವುದಿಲ್ಲ‌. ಸದ್ಯ ಸಣ್ಣ ಕೆಲಸವಾದರೂ ಸಿಗಲಿದೆ. ಆತ್ಮವಿಶ್ವಾಸದಿಂದ ನಿಮಗೆ ಇನ್ನಷ್ಟು ಬಲ ಬರಲಿದೆ. ಪ್ರವಾಸದಿಂದ ನಿಮಗೆ ಆಯಾಸವಾಗಲಿದೆ. ನಿಲ್ಲಿಸಿದ ಕಾರ್ಯವನ್ನು ಪುನಃ‌ ಪ್ರಾರಂಭಿಸುವಿರಿ. ವಸ್ತುಗಳು ಕಾಣೆಯಾಗಬಹುದು. ಜೋಪಾನಮಾಡಿ ಇಟ್ಟುಕೊಳ್ಳಿ. ಸಾಧಿಸುವ ಛಲವಿದ್ದರೂ ಪರಿಸ್ಥಿತಿ ಅನುಕೂಲವಾಗಿ ಇರದು. ಸದಾ ನಿದ್ರೆ ಮಾಡುವ ಯೋಚನೆ ಇರಲಿದೆ.

ಮಿಥುನ: ನಿಮ್ಮ ಶತ್ರುಗಳನ್ನು ನೀವು ಸಂಪೂರ್ಣವಾಗಿ ಸೋಲಿಸಿದ್ದೇನೆ ಎಂಬ ಭಾವನೆ ಇರಬಹುದು. ಆದರೆ ನಿಮ್ಮ ಉನ್ನತಿಯನ್ನು ಸಹಿಸದೇ ಮತ್ಯಾರೋ ಶತ್ರುಗಳಾಗುವರು. ನಿಮ್ಮ ತೀರ್ಮಾನಕ್ಕೆ ಇತರರ ಬೆಂಬಲವೂ ಸಿಕ್ಕಿ ನಿಮಗೆ ಬಲಬಂದಂತಾಗುವುದು. ಮಕ್ಕಳ ಕಾರಣದಿಂದ ನಿಮಗೆ ನೀವು ತಲೆ ತಗ್ಗಿಸುವಿರಿ. ಬುದ್ಧಿವಾದವನ್ನು ಮಕ್ಕಳಿಗೆ ಹೇಳುವಿರಿ. ಸಾಲಕೊಡುವಾಗ ವಿವೇಚನೆ ಇರಲಿ. ಅತಿಯಾದ ವಿನಯವು ನಿಮ್ಮ ಮೇಲೆ ಅನುಮಾನ‌ವು ಬರುವಂತೆ ಮಾಡುವುದು. ಖಾಸಗಿ ಉದ್ಯೋಗಿಗಳಿಗೆ ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಇಂದಿನ ಸಮಯವನ್ನು ನೀವು ಸದುಪಯೋಗ ಮಾಡಿಕೊಳ್ಳಿ.

ಕರ್ಕ: ಹಣಕಾಸಿನ ಅಧಿಕಾರಿಗಳು ನಿಮ್ಮ ಆದಾಯದ ಮೂವನ್ನು ವಿಚಾರಿಸಿಯಾರು. ಆಸ್ತಿಯ ದಾಖಲೆಗಳನ್ನು ನೀವು ನೀಡಬೇಕಾದೀತು. ನಿಮ್ಮ ಗುರಿಯ ಕಡೆಗೆ ಹೆಚ್ಚಿನ ದೃಷ್ಟಿ ಇರಲಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ದೂರದ ಊರಿನಲ್ಲಿ ಅವಕಾಶ ಸಿಕ್ಕರೂ ಹೋಗಲು ಆಗದ ಸ್ಥಿತಿ ಇರುವುದು. ಶಾಪಿಂಗ್ ಗೆ ಹೆಚ್ಚು ಸಮಯವನ್ನು ಮೀಸಲಿಡಬಹುದು. ದಾಂಪತ್ಯ ಜೀವನವು ತುಂಬಾ ಆನಂದದಿಂದ ಇರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ವ್ಯವಸ್ಥಾಪಕರ ಜೊತೆ ಉತ್ತಮ ಹೊಂದಾಣಿಕೆಯನ್ನು ಇಟ್ಟುಕೊಂಡಿರುವಿರಿ. ವಂಚಿಸುವ ಯೋಚನೆ ಮಾಡಿದ್ದರೆ ಅದನ್ನು ಮರೆತುಬಿಡಿ. ಎಲ್ಲದಕ್ಕೂ ಯಾರನ್ನಾದರೂ ಕಾರಣವಾಗಿಸುವಿರಿ.