Daily Horoscope: ರಾಶಿಭವಿಷ್ಯ, ಈ ರಾಶಿಯವರ ಸಾಮರ್ಥ್ಯ ಅನಾವರಣಕ್ಕೆ ಇಂದು ಶುಭದಿನ

|

Updated on: Jun 25, 2023 | 12:15 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 25) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ರಾಶಿಭವಿಷ್ಯ, ಈ ರಾಶಿಯವರ ಸಾಮರ್ಥ್ಯ ಅನಾವರಣಕ್ಕೆ ಇಂದು ಶುಭದಿನ
ಪ್ರಾತಿನಿಧಿಕ ಚಿತ್ರ
Image Credit source: freepik
Follow us on

ಶುಭೋದಯ ಗೆಳೆಯರೇ, ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ? ಯಾರಿಗೆ ಲಾಭ ಕಾದಿದೆ? ಯಾರಿಗೆ ನಷ್ಟ ಕಾದಿದೆ? ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಾಧ್ಯಮ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಸಂಜೆ 05:26 ರಿಂದ 07:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:49 ರಿಂದ 05:26ರ ವರೆಗೆ.

ಮೇಷ: ಇಂದು‌ ನೀವು ಶುಭದಿನದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸಾಮರ್ಥ್ಯ ಅನಾವರಣಕ್ಕೆ ಇಂದು ಶುಭದಿನವಾಗಲಿದೆ. ಪ್ರೀತಿಯಲ್ಲಿ ಬಿದ್ದು ನೀವು ಒದ್ದಾಡುವ ಸ್ಥಿತಿ ಎದುರಾಗಬಹುದು. ಸಂಗಾತಿಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡಿ. ಅತಿಯಾದ ಪ್ರೀತಿಯನ್ನು ಮಕ್ಕಳ‌ಮೇಲೆ ತೋರಿಸಬೇಡಿ.‌ ಅವಶ್ಯಕತೆ ಇದ್ದಷ್ಟೇ ಇರಲಿ‌. ಇಂದು‌ ಮನೆಯ ಕೆಲಸದಲ್ಲಿ ಮಗ್ನರಾಗುವಿರಿ. ಮಕ್ಕಳು ನಿಮಗೆ ಸಹಾಯ ಮಾಡಿಯಾರು. ಒಳ್ಳೆಯ ಭೋಜನವನ್ನು ಸ್ವೀಕರಿಸುವಿರಿ. ಮಾತನಾಡುವ ಇಚ್ಛೆ ಇಂದು‌ ಕಡಿಮೆ ಇರಲಿದೆ.

ವೃಷಭ: ಇಂದು ನೀವು ಸಣ್ಣ ವಿಷಯಗಳಿಗೂ ಕೋಪ ಮಾಡಿಕೊಳ್ಳುವಿರಿ. ಆನ್ ಲೈನ್ ವ್ಯವಹಾರದಿಂದ ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮದೇ ತೀರ್ಮನದಿಂದ‌ ಹೊರಬರಲು ಪ್ರಯತ್ನಿಸಿ. ಒಂದು‌ ವಿಷಯಕ್ಕೆ ಅನೇಕ ಮುಖಗಳು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗಿದೆ. ನಿಮಗೆ ದೈವಬಲವು ಕಡಿಮೆ‌ ಇದ್ದು ಏನಾದರೂ ತೊಂದರೆಯಾದೀತು.‌ ಶ್ರದ್ಧೆಯಿಂದ ಕುಲದೇವರನ್ನು ಆರಾಧಿಸಿ.‌ ಇಂದಿನ‌‌ ನಿಮ್ಮ ಕೆಲಸಗಳು ಆತಂಕವಿಲ್ಲದೇ ನಡೆಯುವುದು. ಗ್ರಾಹಕರನ್ನು ಚನ್ನಾಗಿ ಇಟ್ಟುಕೊಂಡು ವ್ಯಾಪಾರದಲ್ಲಿ ಲಾಭವನ್ನು ಪಡೆಯಿರಿ.

ಮಿಥುನ: ಕಛೇರಿಯಲ್ಲಿ ಕೆಲಸ ಮಾಡುವವರು ಒತ್ತಡದಿಂದ ಬೇಯಲಿದ್ದೀರಿ. ಭೂಮಿಯ ವ್ಯವಹಾರವನ್ನು ತೆಗೆದುಕೊಳ್ಳಲು ಹಿಂಜರಿಯಬಹುದು. ನಿಮ್ಮ ಮಾತನ್ನು ಕೇಳುತ್ತಾರೆಂದು ಏನನ್ನಾದರೂ ಹೇಳಿ ಇನ್ನೊಬ್ಬರ ಕೆಂಗಣ್ಣಿಗೆ ಗುರಿಯಾಗಬೇಡಿ. ನಿಮಗೆ ಇಂದು ಸಹೋದ್ಯೋಗಿಗಳ‌ ಸಹಕಾರ ಸಿಗಬಹುದು. ಆಕಸ್ಮಿಕ ವಾರ್ತೆಯಿಂದ ದುಃಖವು ಉಂಟಾಗಬಹುದು. ನಿರ್ಲಕ್ಷ್ಯದ‌ ಮನೋಭಾವವು ನಿಮಗೆ ಹಿಡಿಸಿದ್ದಲ್ಲ. ಎಲ್ಲ ಸುದ್ದಿಗಳನ್ನೂ ಕೇಳುವ ಮನಃಸ್ಥಿತಿಯನ್ನು ಬಿಡಿಬೇಕಾದೀತು. ಒಂಟಿಯಾಗಿ ಈ ದಿನವನ್ನು ಕಳೆಯುವಿರಿ.

ಕರ್ಕಾಟಕ: ಇಂದು ನೀವು ನಿಮ್ಮ ದಿನಚರಿಯಲ್ಲಿ ಬದಲಾವಣೆ ತರಲು ಇಚ್ಛಿಸುವಿರಿ. ಇಂದು ನಿಮ್ಮ ಕೌಶಲದ ಬಗ್ಗೆ ಹಂಚಿಕೊಳ್ಳಿ. ನಿಮಗೆ ಮುಂದಿನ ಜೀವನೋಪಾಯಕ್ಕೆ ದಾರಿಯಾದೀತು. ಆರ್ಥಿಕವಾಗಿ ಸಬಲರಾಗುವ ಹಂಬಲವಿದ್ದರೂ ಆಲಸ್ಯದಿಂದ ಹೊರಬರದೇ ಇದು ಸಾಧ್ಯವಿಲ್ಲ. ಸಾಲವನ್ನು ಸ್ವಲ್ಪ ತೀರಿಸುವಿರಿ.‌ ‌ನಿಮ್ಮದಲ್ಲದ ವಸ್ತುವನ್ನು ನೀವು ಸ್ವೀಕರಿಸಿ ಅಪಮಾನವನ್ನು ಅನುಭವಿಸುವಿರಿ. ಸ್ತ್ರೀಯರ ಕುರಿತ ನಿಮ್ಮ ಕಾಳಜಿ ಅತಿಯಾದೀತು. ಅಲಂಕಾರಕ್ಕೆ ಹೆಚ್ಚಿನ‌ ಮಹತ್ತ್ವವನ್ನು ಕೊಡುವಿರಿ. ಯಾರನ್ನೂ ನಂಬಲು ನೀವು ತಯಾರಿಲ್ಲ.

-ಲೋಹಿತಶರ್ಮಾ ಇಡುವಾಣಿ