Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 25ರಿಂದ ಜುಲೈ 1ರ ತನಕ ವಾರಭವಿಷ್ಯ

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಜೂನ್ 25 ರಿಂದ ಜುಲೈ 1 ರ ವರೆಗಿನ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 25ರಿಂದ ಜುಲೈ 1ರ ತನಕ ವಾರಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 25ರಿಂದ ಜುಲೈ 1ರ ತನಕ ವಾರಭವಿಷ್ಯ
Follow us
ಸ್ವಾತಿ ಎನ್​ಕೆ
| Updated By: Rakesh Nayak Manchi

Updated on: Jun 25, 2023 | 1:30 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 25ರಿಂದ ಜುಲೈ 1ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಆದಾಯದ ಮೂಲಗಳು ಹೆಚ್ಚು ಮಾಡಿಕೊಳ್ಳುವುದಕ್ಕೆ ದಾರಿ ಗೋಚರ ಆಗಲಿದೆ. ಹೊಸಬರ ಪರಿಚಯ, ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಈಗ ನಿಮ್ಮ ಮುಂದಿರುವ ಸವಾಲು ಏನೆಂದರೆ, ಹಳಬರ ಸ್ನೇಹವನ್ನು ಉಳಿಸಿಕೊಂಡು, ಹೊಸಬರ ಜತೆಗಿನ ಬಾಂಧವ್ಯವನ್ನು ಸಹ ಉಳಿಸಿಕೊಳ್ಳಿ. ಸ್ನೇಹಿತರೇ ತಾನೆ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಧೋರಣೆ ನಿಮಗೆ ತರವಲ್ಲ, ಇದರಿಂದ ಆಪ್ತರನ್ನು ದೂರ ಮಾಡಿಕೊಳ್ಳಬೇಕಾದೀತು, ಜಾಗ್ರತೆ. ಕೃಷಿಕರು- ಕೃಷಿ ಅವಂಬಿತ ಕೆಲಸಗಳನ್ನು ಮಾಡುವವರಿಗೆ ವಿವಾಹಕ್ಕೆ ಪ್ರಯತ್ನ ಪಡುತ್ತಿದ್ದಲ್ಲಿ ಸೂಕ್ತ ಸಂಬಂಧಗಳು ದೊರೆಯುವ ಸಾಧ್ಯತೆ ಹೆಚ್ಚಿದೆ. ಸಂಬಂಧಿಕರು ತಮ್ಮ ಮನೆಯಲ್ಲಿನ ಶುಭ ಕಾರ್ಯಗಳಿಗೆ ನಿಮಗೆ ಆಹ್ವಾನ ನೀಡಬಹುದು. ಹಳೆಯ ಸಿಟ್ಟು, ದ್ವೇಷ ಸಾಧಿಸುತ್ತಾ ಹೋಗದಿರಿ. ಹೊಸ ವಾಹನವನ್ನೂ ಖರೀದಿಸುವ ಯೋಗ ಇದೆ. ವೃತ್ತಿನಿರತರಿಗೆ ಕೆಲವು ತಪ್ಪಾದ ಸಲಹೆಗಳು, ಮಾರ್ಗದರ್ಶನ ನೀಡುತ್ತಾ ದಾರಿ ತಪ್ಪಿಸುವಂಥ ಸಾಧ್ಯತೆ ಇದೆ. ಆದ್ದರಿಂದ ಯಾರನೇ ಆಗಲಿ ಅವರ ಮೇಲ್ನೋಟದ ವರ್ತನೆ ಆಧಾರದ ಮೇಲೆ ನಂಬದಿರಿ. ವಿದ್ಯಾರ್ಥಿಗಳಿಗೆ ಹೊಸಬರ ಜತೆಗೆ ಸ್ನೇಹ ಮಾಡುವಾಗ ಅವರ ಹಿನ್ನೆಲೆಯನ್ನು ಗಮನಿಸುವುದು ಮುಖ್ಯ. ಇಲ್ಲದಿದ್ದಲ್ಲಿ ಕೆಟ್ಟ ಹೆಸರು ಪಡೆದುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಮನೆಯಲ್ಲೂ ನಂಬಿಕೆ ಹೋಗುತ್ತದೆ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಚೂಪಾದ ವಸ್ತುಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಮುಖ್ಯ. ಇಲ್ಲದಿದ್ದರೆ ಗಾಯಗಳಾಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ದೇವತಾ ಕಾರ್ಯಗಳಲ್ಲಿ ಆಸಕ್ತಿ ಜಾಸ್ತಿ ಆಗುತ್ತದೆ. ತೀರ್ಥಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಕಾನೂನು- ಕಟ್ಟಳೆ ವಿಚಾರಗಳಲ್ಲಿ ಖರ್ಚುಗಳಾಗುವಂಥ ಸಾಧ್ಯತೆ ಇದೆ. ಸಂಚಾರ ನಿಯಮಗಳನ್ನು ಪಾಲಿಸುವ ಕಡೆಗೆ ಗಮನ ನೀಡಿ, ಇಲ್ಲದಿದ್ದಲ್ಲಿ ಭಾರೀ ಬೆಲೆಯನ್ನು ತೆರಬೇಕಾದೀತು. ವೈಯಕ್ತಿಕ ವಿಚಾರಗಳನ್ನು ಹೊಸಬರ ಜತೆಗೆ ಹಂಚಿಕೊಳ್ಳದಿರಿ. ಈ ಸಲಹೆ ನಿರ್ಲಕ್ಷ್ಯ ಮಾಡಿದಲ್ಲಿ ನಿಮ್ಮ ಬಗ್ಗೆ ಅಪಪ್ರಚಾರಗಳಾಗುವ ಸಾಧ್ಯತೆ ಇದೆ. ಕೃಷಿ ವೃತ್ತಿಯಲ್ಲಿ ಇರುವವರಿಗೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಇದಕ್ಕಾಗಿ ಆಸ್ತಿಯನ್ನು ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯನ್ನು ಅಡಮಾನ ಮಾಡುವ ಸಾಧ್ಯತೆ ಇದೆ. ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿ ಅಥವಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ತಿ ಮಾಡಲಿಕ್ಕಾಗದೆ ಟೀಕೆಗೆ ಗುರಿ ಆಗಲಿದ್ದೀರಿ. ವೃತ್ತಿನಿರತರಿಗೆ ತಂದೆ- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಮನೆಗೆ ಹೊಸದಾಗಿ ಸಾಕು ಪ್ರಾಣಿಗಳನ್ನು ತರುವ ಸಾಧ್ಯತೆ ಇದೆ. ಇನ್ನು ಮಹಿಳೆಯರು ಕುಟುಂಬ ವೆಚ್ಚದ ಕಡೆಗೆ ಗಮನವನ್ನು ನೀಡಬೇಕು ಹಾಗೂ ಹಾಕಿಕೊಂಡ ಬಜೆಟ್ ವ್ಯಾಪ್ತಿಯೊಳಗೆ ಖರ್ಚಿನ ಪ್ರಮಾಣ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಮೇಲೆ ಸ್ನೇಹಿತರು, ಸಂಬಂಧಿಕರ ಅವಲಂಬನೆ ಹೆಚ್ಚಾಗಲಿದೆ. ಮನೆಯಲ್ಲಿ ಮಕ್ಕಳ ಆರೋಗ್ಯ ವಿಚಾರವು ಚಿಂತೆಗೆ ಕಾರಣ ಆಗಬಹುದು. ಪ್ರೇಮಿಗಳು ಇದ್ದಲ್ಲಿ, ಇನ್ನೂ ಈ ವಿಚಾರ ಮನೆಗೆ ಗೊತ್ತಾಗಿಲ್ಲ ಎಂದಾದಲ್ಲಿ ಮೂರನೇ ವ್ಯಕ್ತಿಗಳ ಮೂಲಕ ವಿಚಾರ ಗೊತ್ತಾಗಿ, ಆತಂಕದ ಸನ್ನಿವೇಶ ಸೃಷ್ಟಿಯಾಗಲಿದೆ. ಆದ್ದರಿಂದ ಹೊರಗೆ ಸುತ್ತಾಡದಿರುವುದು ಉತ್ತಮ. ಇಲ್ಲದಿದ್ದಲ್ಲಿ ನಿಮ್ಮ ಪ್ರೀತಿಯ ವಿಷಯವನ್ನು ಮನೆಯಲ್ಲಿ ಹೇಳಿಕೊಂಡುಬಿಡಿ. ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಉತ್ಪನ್ನಗಳ ಖರೀದಿಗಾಗಿ ವರ್ತಕರು ಅಥವಾ ಕಂಪನಿ ಜತೆಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದು ಒಪ್ಪಂದದ ಮಟ್ಟಕ್ಕೆ ಬಾರದಿದ್ದರೂ ಒಂದಿಷ್ಟು ಉತ್ತಮ ಬೆಳವಣಿಗೆ ಆಗಲಿದೆ. ಸ್ನೇಹಿತರ ನೆರವಿನಿಂದ ಆದಾಯದ ಮೂಲಗಳು ಜಾಸ್ತಿ ಮಾಡಿಕೊಳ್ಳುವುದಕ್ಕೆ ಅವಕಾಶದ ಬಾಗಿಲುಗಳು ತೆರೆದುಕೊಳ್ಳಲಿವೆ. ವೃತ್ತಿನಿರತರು ದ್ವಿಚಕ್ರ ವಾಹನವನ್ನೋ, ಕಾರನ್ನೋ ಖರೀದಿಸುವಂಥ ಯೋಗ ಇದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಬಹುದು ಅಥವಾ ಸಾಲವಂತೂ ಮಾಡಲಿದ್ದೀರಿ. ಆದಾಯ ಹಾಗೂ ವೆಚ್ಚದ ಲೆಕ್ಕಾಚಾರ ಸರಿಯಾಗಿ ಹಾಕಿಟ್ಟುಕೊಳ್ಳಿ. ಶಕ್ತಿ ಮೀರಿ, ಸಾಲ ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಆಟೋಟಗಳಲ್ಲಿ ಉತ್ತಮ ಹೆಸರು ಪಡೆಯುವ ಯೋಗ ಇದೆ. ರಾಜಕಾರಣದಲ್ಲಿ ಇರುವ ಮಹಿಳೆಯರಿಗೆ ಪದೋನ್ನತಿ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಉದ್ಯೋಗ ವಿಚಾರ ಪ್ರಾಶಸ್ತ್ಯ ಪಡೆಯುತ್ತಿದೆ. ಎಷ್ಟು ಖರ್ಚೆಂದರೆ ಬರುವ ಸಂಬಳ ಏನೇನೂ ಸಾಕಾಗುತ್ತಿಲ್ಲ. ಏನಾದರೂ ಹೊಸ ವ್ಯವಹಾರ ಶುರು ಮಾಡುವುದು ಉತ್ತಮವಾ ಎಂಬ ಆಲೋಚನೆ ಬರುತ್ತದೆ. ನೆನಪಿರಲಿ, ಯಾವ ಕಾರಣಕ್ಕೂ ‌(ಒಂದಕ್ಕಿಂತ ಹೆಚ್ಚು ಕಡೆ, ಒಬ್ಬರಿಗೆ ಗೊತ್ತಿಲ್ಲದೆ ಮತ್ತೊಂದು ಕಡೆ ಕೆಲಸ ಮಾಡುವುದು ಬೇಡ. ಏಕೆಂದರೆ ನೀವು ಕೆಲಸ ಮಾಡುವ ಸ್ಥಳದಲ್ಲೇ ಶತ್ರುಗಳ ಕಾಟ ಇದೆ. ಇನ್ನು ಮೂಳೆ ಆರೋಗ್ಯದ ಕಡೆ ಗಮನ ನೀಡಿ, ಸುಖಾಸುಮ್ಮನೆ ತಿರುಗಾಟದಿಂದ ಖರ್ಚಾಗುತ್ತದೆ. ಜತೆಗೆ ದೇಹಾಲಸ್ಯವೂ ಜಾಸ್ತಿ ಆಗುತ್ತದೆ. ಕೃಷಿ ವಲಯದಲ್ಲಿ ಇರುವವರಿಗೆ ರಾಜಕೀಯವಾಗಿ ಪ್ರಾಮುಖ್ಯ ದೊರೆಯುವ ಅವಕಾಶಗಳು ಹೆಚ್ಚಿದೆ. ನಿಮಗೆ ಯಾವುದಾದರೂ ಪ್ರಮುಖ ಜವಾಬ್ದಾರಿ ವಹಿಸಬಹುದು ಹಾಗೂ ಭವಿಷ್ಯದಲ್ಲಿ ಇದೇ ನಿಮ್ಮ ಏಳ್ಗೆ, ಪ್ರಗತಿಗೆ ಕಾರಣವಾಗುವ ಎಲ್ಲ ಅವಕಾಶಗಳು ಇವೆ. ಈ ಸಂದರ್ಭದಲ್ಲಿ ನಿಮ್ಮ ನಿರ್ಧಾರದ ಬಗ್ಗೆ ಕುಟುಂಬದಲ್ಲಿ, ಸ್ನೇಹ ವಲಯದಲ್ಲಿ ಬೇರೆ ಬೇರೆ ಅಭಿಪ್ರಾಯ ಬರಬಹುದು. ಆದರೆ ನಿಮಗೆ ಸ್ಪಷ್ಟತೆ ಇರುವುದು ಮುಖ್ಯ. ಇನ್ನು ವೃತ್ತಿನಿರತರಿಗೆ ಹೊಸ ಸ್ಥಳ, ಜಮೀನು ಖರೀದಿಸಬೇಕು ಎಂದಿದ್ದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಸಮಯ ಇದು. ನೀವು ಈಗಾಗಲೇ ಮಾಡಿರುವ ಹೂಡಿಕೆಯಿಂದ ಹಣ ಹಿಂಪಡೆದು, ಬೇರೆ ಕಡೆ ಅದನ್ನು ಹೂಡಿಕೆ ಮಾಡಲಿದ್ದೀರಿ. ಇನ್ನು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಕಡೆಗೆ ನಿಗಾ ಜಾಸ್ತಿ ಆಗಿ, ವ್ಯಾಸಂಗದಲ್ಲಿ ಹಿನ್ನಡೆ ಇದೆ. ಮಹಿಳೆಯರು ಹೊಸಬರ ಜತೆಗೆ ಸ್ನೇಹ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಹೇಗಾದರೂ ಖರ್ಚು ಈ ವಾರ ಆಗೇಆಗುತ್ತದೆ. ಅದರಲ್ಲೂ ಮೊಬೈಲ್ ಫೋನ್, ಗ್ಯಾಜೆಟ್‌ಗಳು, ಲ್ಯಾಪ್‌ಟಾಪ್ ಇಂಥದ್ದನ್ನು ಖರೀದಿಸುವ ಯೋಗ ಇದೆ. ಇನ್ನು ಅಂಗಡಿಗಳಲ್ಲಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಯುಪಿಐ ಅಥವಾ ಗೂಗಲ್ ಪೇ- ಫೋನ್‌ಪೇ ಮೂಲಕ ಎಲ್ಲೇ ಹಣ ಪಾವತಿಸುವಾಗ ಮೊತ್ತವನ್ನು ಒಂದಕ್ಕೆ ಎರಡು ಸಲ ಪರೀಕ್ಷಿಸಿಕೊಳ್ಳಿ. ಒಮ್ಮೆ ಪೇಮೆಂಟ್ ಆಗಿಲ್ಲ ಎಂದು ಮತ್ತೊಮ್ಮೆ ಮಾಡಿ, ನಷ್ಟ ಆಗುವ ಸಾಧ್ಯತೆಗಳಿವೆ. ವೀಕೆಂಡ್‌ಗಳಲ್ಲಿ ಭರ್ಜರಿ ಪಾರ್ಟಿ ಮಾಡುವ ಸಾಧ್ಯತೆ ಕಾಣಿಸುತ್ತದೆ. ದ್ರವವೋ ಘನವೋ ಅತಿಯಾಗದಂತೆ ಎಚ್ಚರಿಕೆ ವಹಿಸಿ, ಚಿನ್ನ- ವಜ್ರಾಭರಣಗಳನ್ನು ಖರೀದಿ ಮಾಡುವಂಥ ಯೋಗ ಇದೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ನಿರೀಕ್ಷೆಗಳು ವಿಪರೀತ ಜಾಸ್ತಿ ಆಗುತ್ತವೆ. ಯಾವುದೇ ಭರವಸೆ ನೀಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಕೃಷಿ ವಲಯದಲ್ಲಿ ಇರುವವರಿಗೆ ಪ್ರಭಾವಿಗಳ ಪರಿಚಯ ಆಗಲಿವೆ. ಸಂಘ- ಸಂಸ್ಥೆಗಳಲ್ಲಿ ನಿಮ್ಮ ಮಾತಿನ ತೂಕ ಹೆಚ್ಚಾಗಲಿದೆ. ಹೊಸದಾಗಿ ಕೈಗೊಳ್ಳುವ ಕೆಲಸಗಳಲ್ಲಿ ಉತ್ತಮ ಪ್ರಗತಿ, ಬೆಳವಣಿಗೆ ಕಾಣಲಿದ್ದೀರಿ. ಇತರರ ನೆರವಿಗಾಗಿ ನಿರೀಕ್ಷೆ ಮಾಡದೆ ನಿಮ್ಮ ಕೆಲಸ ಮುಂದುವರಿಸಿ. ವೃತ್ತಿ ನಿರತರಿಗೆ ಈ ವಾರ ಆರೋಗ್ಯ ಸಮಸ್ಯೆಗಳು ಕಾಡಲಿವೆ. ಮಕ್ಕಳಿಂದ ಭಾರೀ ವಿರೋಧಗಳು ಬರಲಿವೆ. ವಿದ್ಯಾರ್ಥಿಗಳಿಗೆ ಪೋಷಕರ ನಿರೀಕ್ಷೆ ವಿಪರೀತ ಆಗುತ್ತಿದೆ ಎಂದು ಬೇಸರ ಆಗುತ್ತದೆ. ಸಾಧ್ಯವಾದಲ್ಲಿ ಈ ವಾರ ಸಾಯಿಬಾಬ ದೇವಸ್ಥಾನಕ್ಕೆ ಹೋಗಿ, ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಮಹಿಳೆಯರು ಸಂತಾನಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ಈ ವಾರ ಶುಭ ಸಮಾಚಾರ ಕೇಳುವಂಥ ಯೋಗ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನೀವು ನಂಬಿದ್ದ ವ್ಯಕ್ತಿಗಳು, ಸತ್ಯಗಳು ಬದಲಾಗುವಂಥ ವಾರ ಇದು. ನಮ್ಮ ಕೆಲಸಗಳನ್ನು ನಾವೇ ಮಾಡಬೇಕು, ಇನ್ನೊಬ್ಬರಿಗೆ ನಮ್ಮ ಕನಸುಗಳನ್ನು ಒಪ್ಪಿಸಬಾರದು ಎಂದು ಬಲವಾಗಿ ನಿಮಗೆ ಅನಿಸುವುದಕ್ಕೆ ಆರಂಭವಾಗುತ್ತದೆ. ಈ ಬದಲಾವಣೆ ಬರುವುದಕ್ಕೆ ನೀವು ಒಂದಿಷ್ಟು ಬೆಲೆಯನ್ನು ಸಹ ತೆರಬೇಕಾಗುತ್ತದೆ. ತುಂಬ ಮುಖ್ಯವಾದ ದಾಖಲೆ- ಪತ್ರಗಳನ್ನು ಸರಿಯಾಗಿ ಇಡುವಂತೆ ನಿಮಗೆ ಹೇಳಿದಲ್ಲಿ ಮಾಮೂಲಿಗಿಂತ ಹೆಚ್ಚು ಜಾಗ್ರತೆಯಿಂದ ಇರಿ. ಕೃಷಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಭೂಮಿ ವಿಸ್ತರಣೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ದೊಡ್ಡ ಪ್ರಮಾಣದ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಸಾಧ್ಯತೆ ಇದೆ ಅಥವಾ ಭೂಮಿ ಖರೀದಿಗಾಗಿಯೇ ಹಣಕಾಸು ಸಂಸ್ಥೆಗಳಲ್ಲಿ ಸಾಲ ಕೂಡ ಮಾಡಬಹುದು. ವೃತ್ತಿ ನಿರ್ವಹಿಸುವವರಿಗೆ ಹೊಸ ಪೀರೋಪಕರಣಗಳು, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದರೆ ಖರ್ಚಿನ ಮೇಲೆ ನಿಗಾ ಇಡಿ. ವಿದ್ಯಾರ್ಥಿಗಳು ಪರಿಚಯಸ್ಥರ ಮನೆಗೆ ಹೋದಾಗ ವಿಪರೀತ ಸ್ವಾತಂತ್ರ್ಯ ತೆಗೆದುಕೊಂಡು ಎಲ್ಲೆಂದರಲ್ಲಿ ಓಡಾಡಬೇಡಿ. ಏಕೆಂದರೆ ಅಲ್ಲಿ ಏನಾದರೂ ವಸ್ತುಗಳು ಕಾಣೆಯಾದಲ್ಲಿ ನಿಮ್ಮ ಮೇಲೆ ಆರೋಪಗಳು ಬರುವ ಸಾಧ್ಯತೆ ಇದೆ. ಮಹಿಳೆಯರು ಸಂತಾನಕ್ಕೆ ಪ್ರಯತ್ನ ಪಡುತ್ತಿದ್ದಲ್ಲಿ ಶುಭ ವಾರ್ತೆ ಕೇಳುವ ಯೋಗ ಇದೆ. ಮನೆ ಸದಸ್ಯರಿಂದ ಆರ್ಥಿಕ ಬೆಂಬಲ ದೊರೆಯಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಹೊಸ ಕಾರು ಖರೀದಿ ಮಾಡಬೇಕು ಅಂದುಕೊಂಡಿರುವವರಿಗೆ ಹಣಕಾಸಿನ ಅನುಕೂಲ, ಮನೆಯಲ್ಲಿ ಕುಟುಂಬಸ್ಥರ ಬೆಂಬಲ ದೊರೆಯುವ ಸಾಧ್ಯತೆ ಇದೆ. ಕೆಲಸ ಬದಲಾವಣೆ ಮಾಡಬೇಕು ಅಂದುಕೊಂಡಿರುವವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಒಪ್ಪಿಕೊಂಡ ಕೆಲಸ ಮುಗಿಸುವುದರೊಳಗೆ ಬಹಳ ಶ್ರಮ ಪಡಬೇಕಾಗುತ್ತದೆ. ಕೃಷಿ ವೃತ್ತಿಯಲ್ಲಿ ಇರುವವರಿಗೆ ಆಯಾ ವ್ಯಾಪ್ತಿಯಲ್ಲಿ ಮೆಚ್ಚುಗೆ, ಗೌರವ- ಸಮ್ಮಾನಗಳು ದೊರೆಯುವ ಅವಕಾಶಗಳು ಉಂಟು. ಸಹಕಾರ ಸಂಘಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಪ್ರಭಾವಿಗಳ ಶಿಫಾರಸು ದೊರೆತು, ಶೀಘ್ರ ಸಾಲ ಮಂಜೂರಾಗಲಿದೆ. ವೃತ್ತಿನಿರತರಿಗೆ ನಾನಾ ಸವಾಲುಗಳು ಎದುರಾಗಲಿವೆ. ಈ ಹಿಂದೆ ನೀವೇ ಆಡಿದ್ದ ಮಾತು ಅಥವಾ ಇನ್ನೊಬ್ಬರ ವಿಚಾರವಾಗಿ ಸಾರ್ವಜನಿಕವಾಗಿ ಮಂಡಿಸಿದ್ದ ಅಭಿಪ್ರಾಯಕ್ಕೆ ಈಗ ಆಕ್ಷೇಪಗಳು ವ್ಯಕ್ತ ಆಗುತ್ತವೆ. ದೇವತಾ ಕಾರ್ಯಗಳಿಗೆ ಹಣಕಾಸಿನ ದೇಣಿಗೆ ನೀಡಲಿದ್ದೀರಿ. ವಿದ್ಯಾರ್ಥಿಗಳಿಗೆ ವಿನಾಕಾರಣದ ಪ್ರಯಾಣ ಮತ್ತು ಇದರಿಂದ ಅನಗತ್ಯವಾಗಿ ಖರ್ಚುಗಳು ಆಗಲಿವೆ. ಮಹಿಳೆಯರು ಈ ಹಿಂದೆ ಮಾಡಿದ್ದ ಹೂಡಿಕೆಗೆ ಈಗ ಹೆಚ್ಚು ಲಾಭ ದೊರೆಯಲಿದೆ. ಬಂದ ಲಾಭದಿಂದ ಚಿನ್ನಾಭರಣಗಳನ್ನು ಖರೀದಿ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಸಾಧ್ಯವಾದಲ್ಲಿ ಈ ವಾರದಲ್ಲಿ ಬರುವ ಗುರುವಾರದಂದು ನೀವು ಗುರುಗಳಾಗಿ ಭಾವಿಸುವವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದುಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಯಾವುದು ಮೊದಲು, ಯಾವುದು ನಂತರ ಎಂಬ ಸ್ಪಷ್ಟತೆ ಇರಲಿ. ಬಿಡುವು ಸಿಗದಷ್ಟು ಮೇಲಿಂದ ಮೇಲೆ ಕೆಲಸ ಬರಲಿದೆ. ನಾಲ್ಕಾರು ಜನರಿಗೆ ಸಹಾಯ ಆಗುವಂಥ ಪ್ರಾಜೆಕ್ಟ್‌ಗಳನ್ನು ಮಾಡುತ್ತಿರುವವರಿಗೆ ಹೊಸ ಹೊಸ ಜನರ ಪರಿಚಯ ಆಗುತ್ತದೆ. ಅಡ್ವರ್ಟೈಸಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ದೀರ್ಘ ಕಾಲದ ಪ್ರಾಜೆಕ್ಟ್‌ ದೊರೆಯುವ ಅವಕಾಶಗಳಿವೆ. ಡೇ ಕೇರ್, ಕಿಂಟರ್‌ಗಾರ್ಡನ್‌ನಂಥದ್ದನ್ನು ನಡೆಸುತ್ತಿರುವವರಿಗೆ ಭವಿಷ್ಯದ ಯೋಜನೆಗಳು ಸಾಕಾರಗೊಳ್ಳಲಿವೆ. ಹಣಕಾಸು ಉಳಿತಾಯದ ಬಗ್ಗೆ ಗಂಭೀರ ಚಿಂತನೆ ನಡೆಸಲಿದ್ದೀರಿ. ಪ್ರೀತಿ- ಪ್ರೇಮ ವಿಚಾರಗಳು ಪ್ರಾಶಸ್ತ್ಯ ಪಡೆದುಕೊಳ್ಳಲಿವೆ. ಕೃಷಿ ಕ್ಷೇತ್ರದಲ್ಲಿ ಇರುವವರು ನಿಮ್ಮದಲ್ಲದ ವಿಚಾರಗಳಿಗೆ ಮೂಗು ತೂರಿಸಬೇಡಿ. ರಾಜೀ- ಸಂಧಾನಕ್ಕೆ ಅಂತ ಕರೆದರು, ಸುಮ್ಮನೆ ಜತೆಗೆ ಬಾ, ನೀನೇನು ಮಾತನಾಡದೆ ಇದ್ದರೂ ಪರವಾಗಿಲ್ಲ ಅಂದರು ಎಂಬ ಕಾರಣಕ್ಕೆ ಕೂಡ ಯಾರ ಜತೆಗೂ ಹೋಗಬೇಡಿ. ಏಕೆಂದರೆ ಕೋಲು ಕೊಟ್ಟ ಹೊಡೆಸಿಕೊಂಡಂತೆ ಆಗುತ್ತದೆ ನಿಮ್ಮ ಪರಿಸ್ಥಿತಿ. ಇನ್ನು ವೃತ್ತಿನಿರತರಿಗೆ ಯಾರಿಂದಾದರೂ ಬೆದರಿಕೆಗಳು ಬರಬಹುದು. ಮುಖ್ಯವಾಗಿ ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ ಗಳು, ಪತ್ರಕರ್ತರು ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನು ರಾಜಕಾರಣಿಗಳು ತಮ್ಮ ಮೊಬೈಲ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಇಂಥ ಗ್ಯಾಜೆಟ್ ಗಳಿಂದ ಡೇಟಾ ಯಾರೂ ಕದಿಯದಂತೆ ಜಾಗ್ರತೆ ವಹಿಸಿ. ವಿದ್ಯಾರ್ಥಿಗಳಿಗೆ ಪ್ರಯಾಣ ಯೋಗ ಇದೆ. ಮಹಿಳೆಯರು ಉದ್ಯೋಗಸ್ಥರಾಗಿದ್ದಲ್ಲಿ ಅಲ್ಪಾವಧಿಗಾದರೂ ವಿದೇಶಕ್ಕೆ ತೆರಳುವ ಅವಕಾಶ ಬರಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ಹಿಂದೆ ಯಾವಾಗಲೋ ಕೊಟ್ಟ ಮಾತಿಗೆ ಈಗ ಪಶ್ಚಾತ್ತಾಪ ಪಡುವಂತಾಗುತ್ತದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾಗಿ, ಇನ್ನೇನು ಕೆಲಸ ಕಳೆದುಕೊಂಡು ಬಿಟ್ಟೆ ಎಂಬ ಆತಂಕಕ್ಕೆ ಗುರಿ ಆಗುತ್ತೀರಿ. ಬಿಪಿ- ಶುಗರ್ ಇರುವಂಥವರಿಗೆ ಭುಜ, ಮೀನಖಂಡ, ನರಗಳ ಸಮಸ್ಯೆ ಹೆಚ್ಚಾಗುತ್ತದೆ. ಪಾರ್ಟಿಗಳಿಗೆ ಆಹ್ವಾನ ಬರಲಿದೆ. ವಿದೇಶಗಳಿಗೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ವೇಗ ದೊರೆಯುತ್ತದೆ. ಮನೆಗೆ ಹೊಸ ವಸ್ತುಗಳನ್ನು ತರಲಿದ್ದೀರಿ. ಕೃಷಿಕರಿಗೆ ಹೊಸ ವಿಚಾರಗಳನ್ನು ಕಲಿಯುವ ಯೋಗ ಇದೆ. ಕೃಷಿ ವಲಯದಲ್ಲಿ ಇರುವವರಿಗೆ ದೂರ ಪ್ರಯಾಣ ಮಾಡುವ ಯೋಗ ಇದೆ. ಪಶು ಸಾಕಣೆ ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಮಕ್ಕಳ ಸಲುವಾಗಿ ಹೊಸ ವಾಹನವನ್ನು ಖರೀದಿಸಲಿದ್ದೀರಿ. ಒಟ್ಟಿನಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರಲಿದ್ದು, ಕುಟುಂಬದಲ್ಲಿ ವೃದ್ಧಿ ಕಾರ್ಯಗಳು ನಡೆಯಲಿವೆ. ವೃತ್ತಿನಿರತರು ಕಾರು ಖರೀದಿ ಮಾಡುವಂಥ ಯೋಗ ಇದೆ. ಒಂದು ವೇಳೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಎಂದಿರುವವರು ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿ, ಹೊಸದನ್ನೇ ಕೊಂಡುಕೊಳ್ಳುವ ಸಾಧ್ಯತೆ ಜಾಸ್ತಿ ಇದೆ. ನೀವು ಇದಕ್ಕಾಗಿ ಮಾಡುವ ಸಾಲವೋ ಅಥವಾ ಬೇರೆ ರೀತಿ ಹಣದ ಹೊಂದಾಣಿಕೆಯನ್ನೋ ಬೇಗ ಹಿಂತಿರುಗಿಸುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ನಿಮ್ಮ ನಿರ್ಧಾರದ ಬಗ್ಗೆ ಆತಂಕಗೊಳ್ಳಬೇಡಿ. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ತಮ ಸಾಧ್ನೆ ಮಾಡಲಿದ್ದೀರಿ. ಭಾಗವಹಿಸುವ ಯಾವುದೇ ಅವಕಾಶವನ್ನೂ ಕೈ ಚೆಲ್ಲಬೇಡಿ. ಮಹಿಳೆಯರು ವಾಹನ ಚಲಾಯಿಸುವಂತಿದ್ದರೆ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು. ಅನಿವಾರ್ಯ ಅಂತಲ್ಲದಿದ್ದರೆ ಇದೊಂದು ವಾರ ವಾಹನ ಚಲಾಯಿಸಬೇಡಿ.

ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ