Daily Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ಸ್ನೇಹಿತರು ವಂಚಿಸುವ ಸಾಧ್ಯತೆ ಇದೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 26 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಶುಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:44 ರಿಂದ 09:21ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:33ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:12 ರಿಂದ 03:49ರ ವರೆಗೆ.
ಮೇಷ: ಮಕ್ಕಳ ಜೊತೆ ನೀವು ಹೆಚ್ಚಿನ ಸಮಯವನ್ನು ಕಳೆಯುವಿರಿ. ಯಾರ ಮಾತನ್ನೋ ನಂಬಿ ನಿಮ್ಮವರ ಮೇಲೆ ಅನುಪಡುವಿರಿ. ನೀವು ಇಂದು ಶಾಂತಿದೂತರಾಗಿ ಕಲಹವನ್ನು ನಿಲ್ಲಿಸುವಿರಿ. ಹೊರಗಿನ ಆಹಾರವನ್ನು ತಿನ್ನಲು ನೀವು ಇಚ್ಛಿಸುವಿರಿ. ಸಂಗಾಯಿಂದ ನಿಮಗೆ ಉಡುಗೊರೆಯನ್ನು ಪಡೆಯಿರಿ. ತಪ್ಪಿಗೆ ಪಶ್ಚಾತ್ತಾಪವನ್ನು ಪಡೆಯುವ ದಿನ ಇಂದು. ದೇವರಿಗೆ ಶರಣಾಗಿ ನಿಮಗೆ ಆಗಬೇಕಾದ ಕೆಲಸವನ್ನು ನಿವೇದಿಸಿಕೊಳ್ಳುವಿರಿ. ಮನೋರಂಜನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ನಿಮ್ಮ ಕೇಳಿಕೊಂಡು ಬಂದವರಿಗೆ ಸಹಾಯವನ್ನು ಮಾಡಲು ಒಪ್ಪಿಕೊಳ್ಳುವಿರಿ.
ವೃಷಭ: ಇಂದು ನಿಮ್ಮನ್ನು ಅಪರಿಚಿತರು ವಶ ಮಾಡಿಕೊಳ್ಳಲು ಪ್ರಯತ್ನಿಸುವರು. ಉದ್ಯೋಗದ ಸ್ಥಳವನ್ನು ಸದ್ಯ ಅನ್ವೇಷಿಸುವುದು ಬೇಡ. ಅದು ಸಿಗುವುದು ಕಷ್ಟ. ಯಾರಮೇಲಾದರೂ ಅಪವಾದವನ್ನು ಮಾಡುವ ಮೊದಲು ಆಲೋಚಿಸಿ. ಆಪ್ತರ ಮಾತನ್ನು ಕೇಳದೇ ಬೇಸರಿಸುವ ಸಂದರ್ಭವು ಬರಬಹುದು. ಪರೀಕ್ಷೆಯ ವಿಚಾರದಲ್ಲಿ ನೀವು ಆಲಾಸ್ಯವನ್ನು ತೋರುವುದು ಬೇಡ. ಮಾತುಗಳನ್ನು ಕಡಿಮೆ ಮಾಡಿ. ಕೆಲಸ ಬಗ್ಗೆ ಹೆಚ್ಚಿನ ಗಮನವಿರಲಿದೆ. ಮೇಲಧಿಕಾರಿಗಳ ನಡುವೆ ಚರ್ಚೆ ಮಾಡಲಿದ್ದೀರಿ.
ಮಿಥುನ: ಇಂದು ನೀವು ಎಲ್ಲವನ್ನೂ ಮಾಡಬಲ್ಲವರು ಎಂಬ ಅಭಿಮಾನ ಉಂಟಾಗಲಿದೆ. ಆಪ್ತರೇ ನಿಮಗೆ ನಂಬಿಕೆಗೆ ದ್ರೋಹ ಬಗೆಯಬಹುದು. ಬಹಳ ದಿನಗಳಿಂದ ಉದ್ಯೋಗವು ಸಿಗದೇ ಮಾನಸಿಕವಾಗಿ ಕುಗ್ಗುವಿರಿ. ಮಕ್ಕಳು ಕೇಳಿದ್ದನ್ನು ಕೊಡಿಸಿ ಅವರನ್ನು ಸಂತೋಷಪಡಿಸುವಿರಿ. ವಿದೇಶ ಪ್ರಯಾಣದ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಿ. ಊಹಿಸದ ವಾರ್ತೆಯೊಂದು ಬಂದು ಸಂತೋಷವಾಗಿ ಇಡುವುದು. ಸ್ನೇಹಿತ ಜೊತೆ ಆಹಾರವನ್ನು ಸೇವಿಸುತ್ತ ಇಂದಿನ ದಿನವನ್ನು ಕೊನೆ ಮಾಡುವಿರಿ. ನಿಮ್ಮ ವಸ್ತುವು ನಿಮಗೆ ಸಿಗಲಿದೆ.
ಕಟಕ: ಹೊಸ ಕೆಲಸವನ್ನೇನಾದರೂ ಆರಂಭಿಸಿದರೆ ಅದನ್ನು ನಿಮ್ಮ ಶತ್ರುಗಳು ನಿಲ್ಲಿಸುವರು. ನಿಮ್ಮ ಗೌಪ್ಯ ವಿಚಾರಗಳು ಕೆಲವರಿಗೆ ತಿಳಿದು ಹಾಸ್ಯ ಮಾಡಬಹುದು. ನೆರೆಯವರನ್ನು ಪ್ರೀತಿಯಿಂದ ಮಾತನಾಡಿಸುವುದು ಅನಿವಾರ್ಯವಾಗಲಿದೆ. ಹೊರಗಿನ ಆಹಾರದಿಂದ ನಿಮಗೆ ತೊಂದರೆಯಾಗಬಹುದು. ಸಂಗಾತಿಯ ಜೊತೆ ವಾದಕ್ಕಿಳಿದು ಸೋಲಬೇಕಾಗುವುದು. ಹೊಂದಾಣಿಕೆಯನ್ನು ನೀವು ಬೆಳೆಸಿಕೊಳ್ಳಬೇಕಾಗಬಹುದು. ಎತ್ತರ ಪ್ರದೇಶದಲ್ಲಿ ಓಡಾಡುವಾಗ ಜಾಗರೂಕರಾಗಿರಿ. ಸ್ನೇಹಿತರು ವಂಚಿಸುವ ಸಾಧ್ಯತೆ ಇದೆ.
-ಲೋಹಿತಶರ್ಮಾ ಇಡುವಾಣಿ