Nithya Bhavishya: ಇಂದಿನ ರಾಶಿಭವಿಷ್ಯ, ಕಳೆದುಕೊಂಡ ಸಂಗಾತಿಯ ನೆನಪು ಈ ರಾಶಿಯವರಿಗೆ ಅತಿಯಾಗಿ ಕಾಡಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಇಂದಿನ ರಾಶಿಭವಿಷ್ಯ, ಕಳೆದುಕೊಂಡ ಸಂಗಾತಿಯ ನೆನಪು ಈ ರಾಶಿಯವರಿಗೆ ಅತಿಯಾಗಿ ಕಾಡಬಹುದು
ಇಂದಿನ ರಾಶಿಭವಿಷ್ಯImage Credit source: istock
Follow us
Rakesh Nayak Manchi
|

Updated on: Jun 26, 2023 | 12:45 AM

ಶುಭೋದಯ ಗೆಳೆಯರೇ, ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ? ಯಾರಿಗೆ ಲಾಭ ಕಾದಿದೆ? ಯಾರಿಗೆ ನಷ್ಟ ಕಾದಿದೆ? ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಶುಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:44 ರಿಂದ 09:21ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:33ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:12 ರಿಂದ 03:49ರ ವರೆಗೆ.

ಧನು: ಸಮಯವನ್ನು ನೋಡಿ ನೀವು ಮಾತನಾಡುವುದು ಒಳ್ಳೆಯದು. ಎಲ್ಲ ಸಂದರ್ಭದಲ್ಲಿ ನಿಮಗೆ ಗೌರವವು ಸಿಗುತ್ತದೆ ಎಂದು ನಂಬ ಬೇಡಿ. ನಿಮ್ಮ‌ ಸ್ಥಾನವನ್ನು ಉಳಿಸಿಕೊಳ್ಳಲು ಬಹಳ ಶ್ರಮಪಡುವಿರಿ. ಹೊಸ ವಿಚಾರಗಳನ್ನು ಕಲಿಯು ಆಸೆ ನಿಮಗಿರಲಿದೆ. ಆದಾಯದ‌ ಮೂಲವು ಬದಲಾಗಬಹುದು. ದಿನನಿತ್ಯದ ಕೆಲಸದಲ್ಲಿ ವ್ಯತ್ಯಾಸವನ್ನು ಕಾಣುವಿರಿ. ಕಛೇರಿಯಲ್ಲಿ ನಿಮ್ಮ ಬಗ್ಗೆ ಸಲ್ಲದ ಮಾತುಗಳು ಬರಬಹುದು. ಸಮಯದಲ್ಲಿ ಮುಗಿಸುವ ಕೆಲಸವನ್ನೂ ಮುಗಸಿ ಮುಂದಿನ ಆಲೋಚನೆಯನ್ನು ಮಾಡಿ. ನೀವು ಅನುಸರಿಸುವ ಕ್ರಮದಲ್ಲಿ ವ್ಯತ್ಯಾಸ ಇರಬಹುದು.

ಮಕರ: ನಿಮ್ಮ ಇಂದಿನ ಕೆಲಸವು ನಿಮ್ಮ ಸಹೋದ್ಯೋಗಿಗಳಿಂದ ಹಾಳಾಗುವುದು. ಮಕ್ಕಳಿಗೆ ಇಂದು ಸ್ವಲ್ಪ ಹಣವನ್ನು ಖರ್ಚುಮಾಡಬೇಕಾದೀತು. ಓಡಾಟಕ್ಕೆ ವಾಹನದ ಅವಶ್ಯಕತೆ ಬೇಕೆನಿಸಬಹುದು. ನೀವು ಅನೇಕ ದಿನಗಳ ಅನಂತರ ಮಕ್ಕಳನ್ನು ಭೇಟಿಯಾಗಿ ಸಂತೋಷಗೊಳ್ಳುವಿರಿ. ಹೆಚ್ಚು ಮಾತನಾಡಲು ನಿಮಗೆ ಸಮಯದ ಅಭಾವ ಇರುವುದು. ಕೃಷಿಯಲ್ಲಿ ಲಾಭ ಗಳಿಸುವ ಉಪಾಯವನ್ನು ಮಾಡುವಿರಿ. ನಿಮ್ಮ ಹಳೆಯ ಸಂಬಂಧವು ಮತ್ತೆ ಚಿಗುರೊಡೆಯಬಹುದು. ಹಿಂದಿನ ಶ್ರಮವು ಸಾರ್ಥಕವಾದೀತು. ಆಸ್ತಿಯ ಖರೀದಿಯನ್ನು ಮುಂದಕ್ಕೆ ಹಾಕಿ. ಶುಭಸಮಾಚಾರವನ್ನು ಇಂದು ನೀವು ಕೇಳುವಿರಿ.

ಕುಂಭ: ಇಂದು ನೀವು ನಿಮಗೆ ವಹಿಸಿದ ಕೆಲಸವನ್ನು ಬಿಟ್ಟು ಬೇರೆ ಕೆಲಸದಲ್ಲಿ ಮಗ್ನರಾಗುವಿರಿ. ಮೇಲಧಿಕರಿಗಳಿಂದ ನಿಮಗೆ ಸೂಚನೆ ಬರಬಹುದು. ಸ್ವೇಚ್ಛಾಚಾರದ ವರ್ತನೆಯು ನಿಮ್ಮವರಿಗೆ ಇಷ್ಟವಾಗದು. ಅದನ್ನು ಬೇರೆ ರೀತಿಯಲ್ಲಿ ಹೇಳುವರು. ಹಣವನ್ನು ಕೊಟ್ಟು ವಸ್ತುವು ಸಿಗದೇ ಮೋಸ ಹೋಗುವಿರಿ. ಕಛೇರಿಯ ಕೆಲಸದ ಕಾರಣ ನೀವು ಓಡಾಟ ಮಾಡಬೇಕಾದೀತು. ಪ್ರಯೋಜನವಾಗದೇ ಬೇಸರವಾದೀತು. ದೈಹಿಕವಾಗಿ ಶ್ರಮಿಸುವವರಿಗೆ ಲಾಭವಿದೆ. ತಾಯಿಯ ಮಾತನ್ನು ನೀವು ಕೇಳುವಿರಿ. ಮೌಲನದಿಂದ ಇರಲು ಪ್ರಯತ್ನಿಸುವಿರಿ. ಸ್ತ್ರೀಯರಿಂದ ತೊಂದರೆಯಾಗಲಿದೆ.

ಮೀನ: ನಿಮಗೆ ಸ್ವಂತ ಉದ್ಯೋಗದ ಮೇಲೆ ಇರಬೇಕಾದ ಕಾಳಜಿಯು ಅನ್ಯ ಕಾರಣದಿಂದ‌ ಕಡಿಮೆಯಾಗಿ ನಷ್ಟವನ್ನು ಅನುಭವಿಸಬೇಕಾದೀತು. ನೀವು ವೃತ್ತಿಪರರಾಗಿದ್ದರೆ ಕಛೇರಿಯಲ್ಲಿ ನಿಮಗೆ ಇಂದು ಅಶುಭವಾರ್ತೆಯು ಬರಬಹುದು. ಧೈರ್ಯವನ್ನು ತಂದುಕೊಳ್ಳುವುದು ಮುಖ್ಯ. ಕಳೆದುಕೊಂಡ ಸಂಗಾತಿಯ ನೆನಪು ನಿಮಗೆ ಅತಿಯಾಗಿ ಕಾಡಬಹುದು. ಮಾನಸಿಕವಾಗಿ ನೀವು ಕುಗ್ಗುವಿರಿ. ಮನೆಯಲ್ಲಿ ಸರಳ ಸಮಾರಂಭದಲ್ಲಿ ಏರ್ಪಡಿಸಿ ಔತಣಕೂಟವನ್ನು ಮಾಡುವಿರಿ. ಅಪರೂಪದ ಸ್ನೇಹಿತರನ್ನು ಮನೆಗೆ ಕರೆದು ಸಂತೋಷಪಡುವಿರಿ.

-ಲೋಹಿತಶರ್ಮಾ ಇಡುವಾಣಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ