AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಇಂದಿನ ರಾಶಿಭವಿಷ್ಯ, ಸದಾ ಉದ್ವೇಗದಲ್ಲಿಯೇ ಇರುವ ಈ ರಾಶಿಯವರಿಗೆ ಇನ್ನೊಂದಿಷ್ಟು ಕೆಲಸಗಳು ಬಂದಾವು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 25) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಇಂದಿನ ರಾಶಿಭವಿಷ್ಯ, ಸದಾ ಉದ್ವೇಗದಲ್ಲಿಯೇ ಇರುವ ಈ ರಾಶಿಯವರಿಗೆ ಇನ್ನೊಂದಿಷ್ಟು ಕೆಲಸಗಳು ಬಂದಾವು
ಇಂದಿನ ರಾಶಿಭವಿಷ್ಯImage Credit source: freepik
Rakesh Nayak Manchi
|

Updated on: Jun 25, 2023 | 12:45 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 25 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಾಧ್ಯಮ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಸಂಜೆ 05:26 ರಿಂದ 07:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:49 ರಿಂದ 05:26ರ ವರೆಗೆ.

ಧನುಸ್ಸು: ಇಂದಿನ‌ ನಿಮ್ಮ ಅಭಿಪ್ರಾಯವನ್ನು ಕುಟುಂಬ ಗೌರವಿಸುವುದು. ಕಳೆದುಹೋದ ವಸ್ತುವಿನ ಬಗ್ಗೆ ನಿಮಗೆ ಅತಿಯಾದ ಮೋಹ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಕಾರಣದಿಂದ ನಿಮಗೆ ಗೌರವ ಸಿಗಬಹುದು. ಮಾತಾನ್ನು ಮಿತವಾಗಿ ಆಡಿ. ನಿಮ್ಮ ತಿಳಿವಳಿಕೆಯ ಮಟ್ಟವನ್ನು ಅದು ತೋರಿಸಬಹುದು. ನಿಮ್ಮ ಸಿಟ್ಟನ್ನು ಮಕ್ಕಳ‌ ಮೇಲೆ ತೋರಿಸುವಿರಿ. ಅಧಿಕ ಸುಟ್ಟಾದಿಂದ ಆಯಾಸವಾಗಬಹುದು. ಸ್ತ್ರೀಯರಿಂದ‌ ಅಪಮಾನ ಆಗಬಹುದು. ಸಾಲಬಾಧೆಯು ನಿಮಗೆ ಎಲ್ಲರಿಂದ ದೂರವಿರುವಂತೆ ಮಾಡೀತು. ಕುಟುಂಬ ಮೇಲೆ ಬೇಸರ ಬರಬಹುದು.

ಮಕರ: ಇಂದು ನೀವು ನಿಮಗಾಗಿ ಸಮಯ ತೆಗೆದುಕೊಳ್ಳುವಿರಿ. ಬಹಳ ದಿನಗಳ ಅನಂತರ ಕುಟುಂಬದ ಸಂಬಂಧಗಳು ಬಲಗೊಳ್ಳುವುದು. ನೀವು ಯಶಸ್ಸನ್ನು ಸಾಧಿಸಲು ಹಂಬಲಿಸುವಿರಿ. ಒಂದೇ ವಿಚಾರವನ್ನು ಮತ್ತೆ ಮತ್ತೆ ಹೇಳಿ ಇತರರಿಂದ ದೂರಾಗಬಹುದು. ಹೂಡಿಕೆ ಲಯ ಹಣವು ನಿಮ್ಮ ಇಂದಿನ ಆಪತ್ಕಾಲಕ್ಕೆ ನೆರವಾಗುವುದು.‌ ನಿಮಗೆ ನಿರ್ಣಯವನ್ನು ಅಂತಿಮ‌ಗೊಳಿಸಲು ಸಮಯವನ್ನು ತೆಗೆದುಕೊಳ್ಳುವಿರಿ. ಅತ್ಯಾಪ್ತತೆಯು ನಿಮಗೆ ಶಂಕೆಯನ್ನು ಉಂಟುಮಾಡಬಹುದು. ನಿಮ್ಮ‌ ವ್ಯವಹಾರದಲ್ಲಿ ಶುದ್ಧತೆ‌ ಇರುವುದು. ಹೊರಗಡೆ ಪ್ರಯಾಣವನ್ನು ಮಾಡುವಿರಿ. ಮನೆಯ ಸ್ಥಿತಿಯನ್ನು ಸುಧಾರಿಸಲು ನೀವು ಪ್ರಯತ್ನಿಸಿ ಸೋಲಬಹುದು.

ಕುಂಭ: ಇಂದು ನಿಮಗೆ ಒಳ್ಳೆಯ ವಾರ್ತೆ ಸಿಗಬಹುದು. ಪ್ರಭಾವಿ ವ್ಯಕ್ತಿಯ ಸಲಹೆಯನ್ನು ನೀವು ಪಡೆಯುವಿರಿ. ಲಾಭ‌ವನ್ನು ಪಡೆಯಲು ಹೊಸ ಮಾರ್ಗಗಳು ಗೊತ್ತಾಗಬಹುದು. ಆಮಿಷಕ್ಕೆ ಒಳಗಾಗಿ ಕೆಟ್ಟದ್ದನ್ನು ಮಾಡಬಹುದು. ನೀವು ಆಸ್ತಿಯ ವಿಷಯದ ಬಗ್ಗೆ ನಿಮ್ಮವರಿಗೆ ಹೆಮ್ಮೆಯಾಗಲಿದೆ. ಬಹಳ ದಿನಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಕೆಲಸಕ್ಕೆ ವೇಗ ಸಿಗಲಿದೆ. ನಿಮ್ಮ ಅಮೂಲ್ಯವಾದ ವಸ್ತುವನ್ನು ರಕ್ಷಣೆ ಮಾಡಿಕೊಳ್ಳಿ. ಕುಟುಂಬದಲ್ಲಿ ಒಡಕು ಬರುವಂತೆ ಕಾಣಬಹುದು. ಮನೆಯ ಹಿರಿಯರಾದ ತಾವು ಅದನ್ನು ಸರಿ‌ಮಾಡಿಕೊಳ್ಳಿ. ಕೋಪದಲ್ಲಿ ಹೇಳಿ‌ದ‌ ಮಾತಿನಿಂದ ನಿಮಗೆ ಮುಜುಗರವಾಗಬಹುದು. ಆರಂಭಿಸುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಲಿ.

ಮೀನ: ಕುಟುಂಬದಲ್ಲಿ ನಿಮ್ಮ ಮೇಲಿನ ಕಾಳಜಿಯನ್ನು ಕಾಣಬಹುದು. ವ್ಯಾಪಾರಸ್ಥರು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಸೋಲುವಿರಿ. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ಸಮಯಕ್ಕೆ ಪೂರೈಸುವಿರಿ. ತಾಯಿಯ ಕಡೆಯ ಬಂಧುಗಳು ನಿಮಗೆ ಆಪ್ತರಾಗುವರು. ಇಂದು ನೀವು ಸುಳ್ಳು ಹೇಳಿ ಸಿಕ್ಕಿಬೀಳುವ ಸಾಧ್ಯತೆ ಇದೆ.‌ ಸದಾ ಉದ್ವೇಗದಲ್ಲಿಯೇ ಇರುವ ನಿಮಗೆ ಇನ್ನೊಂದಿಷ್ಟು ಕೆಲಸಗಳು ಬಂದಾವು. ಆಸಕ್ತಿ ಇಲ್ಲದಿದ್ದರೂ ನೀವು ಅದನ್ನು ಮಾಡಬೇಕಾದೀತು. ದಾಂಪತ್ಯದಲ್ಲಿ ಎದುರು ಸುಖವಿದ್ದರೂ ಅಂತರಂಗದಲ್ಲಿ ಸಂಶಯಗಳು ಇಬ್ಬರನ್ನೂ ಸಂತೋಷವಾಗಿ ಇಡಲು ಬಿಡದು.

-ಲೋಹಿತಶರ್ಮಾ ಇಡುವಾಣಿ