Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

|

Updated on: Apr 30, 2023 | 5:30 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Image Credit source: istock
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ದಶಮೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ: ಸುಕರ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ 05:13 ರಿಂದ 06:48ರ ವರೆಗೆ,
ಯಮಘಂಡ ಕಾಲ 12:30 ರಿಂದ 02:04 ವರೆಗೆ, ಗುಳಿಕ ಕಾಲ 03:39 ರಿಂದ 05:13 ರ ವರೆಗೆ.

ಮೇಷ: ನಿಮ್ಮವರಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸಲಹೆಗಳು ಬರಬಹುದು. ಇತರರು ನಿಮ್ಮ ಕುರಿತು ಸಲ್ಲದ ಮಾತುಗಳನ್ನು ಆಡಬಹುದು. ಪ್ರತ್ಯುತ್ತರವನ್ನು ಕೊಡುವ ಅವಶ್ಯಕತೆಯಿಲ್ಲ. ನಿಮ್ಮ ನಿತ್ಯದ ಕೆಲಸದ ವಿಧಾನವನ್ನು ಮತ್ತಷ್ಟು ಸರಳಮಾಡಿಕೊಳ್ಳಲು ಬಯಸುವಿರಿ. ನಿಮ್ಮ ಕಾರ್ಯಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. ಆಪ್ತರ ಭೇಟಿಯಾಗಬಹುದು. ಹಲವು ದಿನಗಳಿಂದ ಹೇಳದೇ ಉಳಿದುಕೊಂಡ ವಿಷಯಗಳನ್ನು ಚರ್ಚಿಸುವಿರಿ. ಉದ್ಯಮದಲ್ಲಿ ನಿಮಗೆ ಪ್ರತಿಸ್ಪರ್ಧಿ ಹುಟ್ಟಿಕೊಂಡಿದ್ದರಿಂದ ಸಣ್ಣ ಕಿರಿಕಿರಿ ಆರಂಭವಾಗಬಹುದು. ದಾಕ್ಷಿಣ್ಯದಿಂದ ಪಡೆದುಕೊಳ್ಳಬೇಕಾದುದನ್ನು ಪಡೆದುಕೊಳ್ಳಲಾರಿರಿ.

ವೃಷಭ: ಚಿಲ್ಲರೆ ವ್ಯವಹಾರಕ್ಕೆ ಹೆಚ್ಚಿನ ಒತ್ತು ಕೊಟ್ಟು ಜಗಳವಾಡುವಿರಿ. ಯಾವುದು ಎಷ್ಟು ಪ್ರಾಮುಖ್ಯ ಎಂಬ ಆಲೋಚನೆ ಇರಲಿ. ಕೊಟ್ಟ ಜವಾಬ್ದಾರಿಯನ್ನು ಶಕ್ತಿಮೀರಿ ಪ್ರಯತ್ನಿಸುವಿರಿ. ಆಲಸ್ಯವವನ್ನು ಕಡಿಮೆ ಮಾಡಿಕೊಳ್ಳುತ್ತ ಬನ್ನಿ. ಇಲ್ಲವಾದರೆ ನಿಮ್ಮ ಗುರಿಯ ಸಾಧನೆಗೆ ಅದೇ ಅಡ್ಡಿಯಾಗಬಹುದು. ನಿಮ್ಮನ್ನು ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ಕಚೇರಿಯಲ್ಲಿಆಗುವ ಸಣ್ಣ ತಪ್ಪೂ ದೊಡ್ಡದಾಗಬಹುದು. ಹಳೆಯ ಖಾಯಿಲೆಯು ಮತ್ತೆ ಮರುಕಳಿಸಬಹುದು. ಯಾವುದನ್ನೂ ಅಲಕ್ಷಿಸಬೇಡಿ. ಹಣಕಾಸಿನಲ್ಲಿ ಸುಧಾರಣೆಯನ್ನು ಮಾಡಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ.

ಮಿಥುನ: ನೀವು ಇಂದು ಸಾಲವನ್ನು ಪಡೆಯಲು ಮಾಡಿದ ಪ್ರಯತ್ನವು ಯಶಸ್ವಿಯಾಗುವುದು. ಆಹಾರದ ಅಭಾವವಾಗಬಹುದು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಿ. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಭೂಮಿಯ ವ್ಯವಹಾರದಲ್ಲಿ ನಷ್ಟವಾಗಬಹುದು. ವಿದ್ಯೆಗೆ ಸಮಾನವಾದ ಉದ್ಯೋಗವನ್ನು ಮಾಡುವುದು ಒಳ್ಳೆಯದು. ಮಾಡಿದ ಕೆಲಸಕ್ಕೆ ಕೂಡಲೆ ಫಲ ಸಿಗಬೇಕು ಎನ್ನುವ ವೇಗದಿಂದ ಹೊರಬರುವುದು ಉತ್ತಮ. ಯಾರಾದರೂ ಚುಚ್ಚಿ ಮಾತನಾಡಬಹುದು. ಅದನ್ನು ಮನಸ್ಸಿ ತೆಗದುಕೊಳ್ಳುವಿರಿ. ಎಲ್ಲರ ಸಲಹೆಯನ್ನು ಪಡೆದುಕೊಂಡು ಸ್ವಂತ ನಿರ್ಧಾರಕ್ಕೆ ಬನ್ನಿ. ಕೊನೆಗೆ ಅನುಭವಿಸುವವರು ತಾವೇ ಆಗಿರುತ್ತೀರಿ.

ಕಟಕ: ಉದ್ಯೋಗದ ಸ್ಥಾನದಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳನ್ನು ನಿಮಗಾಗದವರು ಹರಡುವರು. ಮಕ್ಕಳಿಂದ ನಿಮಗೆ ವಿದ್ಯಾಭಾಸದ ಕಾರಣಕ್ಕೆ ಸಂತೋಷಕರವಾದ ವಾರ್ತೆಯು ಸಿಗಲಿದೆ. ಯಾವುದಾದರೂ ಸುಂದರ ಪ್ರದೇಶಕ್ಕೆ ಹೋಗಬೇಕಾಗಿಬರಬಹುದು. ನಿಮ್ಮ ಕಾರ್ಯದ ಒತ್ತಡವನ್ನು ಕಡಿಮೆ ಮಾಡಲು ನಿಮ್ಮ ಸಹೋದ್ಯೋಗಿಗಳ ಸಹಾಯವನ್ನು ಕೇಳಭುದು. ನಿರಂತರ ಶ್ರಮದ ಫಲವನ್ನು ನೀವಿಂದು ಪಡೆಯುವಿರಿ. ಆಲಸ್ಯವನ್ನು ಬಿಟ್ಟು ಮುನ್ನಡೆಯುವ ತೀರ್ಮಾನವನ್ನು ಮಾಡಲಿದ್ದೀರಿ. ಕೋಪವನ್ನು ನಿಯಂತ್ರಿಸಿಕೊಂಡು, ನಿಮ್ಮ ಮಾತಿನಲ್ಲಿ ಎಂದಿನ ಮಾರ್ದವವನ್ನು ಇಟ್ಟುಕೊಳ್ಳಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಬಹುದು.