Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

|

Updated on: Apr 06, 2023 | 5:16 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 06) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 6 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಹಸ್ತಾ, ಯೋಗ : ವ್ಯಾಘಾತ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:07 ರಿಂದ ಮಧ್ಯಾಹ್ನ 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:26 ರಿಂದ 07:58ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:30 ರಿಂದ 11:03ರ ವರೆಗೆ.

ಮೇಷ: ಆಕಸ್ಮಿಕ ಧಲಾಭದಿಂದ ಒಂದುಷ್ಟು ಒತ್ತಡಗಳು ನಿವಾರಣೆಯಾಗಲಿದೆ. ಕಾರ್ಯದ ಒತ್ತಡದಿಂದ ಸಮಾಧಾನ ಸಿಗಲಿದೆ. ಸಣ್ಣ ವಿಚಾರಕ್ಕೆ ಕಲಹವನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ‌ ಅನಿವಾರ್ಯತೆಯನ್ನು ಅರಿತು ನಿಮ್ಮವರು ನಿಮಗೆ ಧನಸಹಾಯವನ್ನು ಮಾಡಲಿದ್ದಾರೆ. ಪ್ರೇಮಿಯ ಜೊತೆ ಸಂತೋಷದಿಂದ ಕಾಲವನ್ನು ಕಳೆಯುವಿರಿ. ನಿಮಗೆ ಉತ್ತರ ಸಿಗದ ಸಮಸ್ಯೆಗಳು ಇರಬಹುದು. ಅತಿಯಾದ ಕುತೂಹಲದಿಂದ ನೀವು ನಿರಂತರ ಅನ್ವೇಷಣೆಯಲ್ಲಿ ಹೊಸತನವನ್ನು ಹುಡುಕುವುದರಲ್ಲಿ ತೊಡಗುವಿರಿ.

ವೃಷಭ: ಹಣಕಾಸಿನ ವಿಚಾರದಲ್ಲಿ ಮೋಸಹೋಗಲಿದ್ದೀರಿ. ದೇಹಾಲಸ್ಯದಿಂದ ಹೊರಬಂದು ಸಾಧಿಸುವ ಛಲವನ್ನು ಬೆಳೆಸಿಕೊಳ್ಳುವಿರಿ. ಸಮಯಕ್ಕೆ ಸರಿಯಾದ ಕೆಲಸಗಳನ್ನು ಮಾಡಿ ಮುಗಿಸಿ. ಮನಸ್ಸು ಇಂದು ಚಂಚಲವಾಗಲಿದೆ. ಉದ್ವೇಗಕ್ಕೆ ಒಳಗಾಗದೇ ತಾಳ್ಮೆಯಿಂದ ಎಲ್ಲವನ್ನೂ ಪಡೆಯಲು ಪ್ರಯತ್ನಿಸಿ. ಧನಾತ್ಮಕವಾದ ಚಿಂತನೆಗಳು ನಿಮಗೆ ಉತ್ತಮವಾದ ಮಾರ್ಗವನ್ನು ತೋರಿಸಬಹುದು. ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಬಗ್ಗೆ ಗೊಂದಲಗಳು ಇರಲಿವೆ. ಅನುಭವಿಗಳ ಸಂಪರ್ಕ ಮಾಡಿ ಪರಿಹರಿಸಿಕೊಳ್ಳಿ.

ಮಿಥುನ: ಮನಸ್ಸಿನ ಯಾತನೆಯನ್ನು ಸಿಟ್ಟಿನ ಮುಖಾಂತರ ಪ್ರಕಟಪಡಿಸುವಿರಿ. ಆರೋಗ್ಯವು ಸರಿಯಾಗುತ್ತಾ ಇರುವ ಸೂಚನೆ ನಿಮಗೆ ಸಿಗಲಿದೆ. ಉತ್ಸಾಹದಿಂದ, ಬಹಳ ಲವಲವಿಕೆಯಿಂದ ತುಂಬಿರುವಿರಿ. ಸಹೋದರಿಯ ನಡುವೆ ಆತ್ಮೀಯತೆ ಬೆಳೆಯಲಿದೆ. ಯಂತ್ರೋಪಕರಣಗಳಿಂದ ಖರ್ಚುಗಳು ಆಗಲಿವೆ. ಬಂಧುಗಳ ನಡೆವೆ ಕಲಹಾದಿಗಳು ಆಗಬಹುದು. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆಯುವಿರಿ. ಅಲ್ಪ ಶ್ರಮದಿಂದ ಹೆಚ್ಚಿನದನ್ನು ಪಡೆಯುವ ಅವಕಾಶವಿದೆ.

ಕರ್ಕಾಟಕ: ನೀವು ಇಂದು ವಿನಾಕಾರಣ ಸಿಟ್ಟಾಗುವಿರಿ.‌ ಸಣ್ಣ ವಿಚಾರಗಳೂ ನಿಮಗೆ ಕಿರಿಕಿರಿಯನ್ನು ತರಬಹುದು. ಒಬ್ಬೊಂಟಿಯಾಗಿ ನಿಮಗೆ ಇರಲಾಗದೇ ಒದ್ದಾಡುವಿರಿ. ಎಲ್ಲವನ್ನೂ ನಿಮ್ಮ ಮೂಗಿನ ನೇರಕ್ಕೇ ಇರಬೇಕು ಎನ್ನುವವುದು ಸರಿಯಲ್ಲ ಹಾಗೂ ಅದು ಅಸಾಧ್ಯ ಕೂಡ. ಇಂದು ನಿಮಗೆ ಜಗತ್ತಿನ ವೈಚಿತ್ರ್ಯಗಳು ಅರ್ಥವಾಗಬಹುದು. ಆರಬ್ಧ ಕಾರ್ಯವನ್ನು ಸ್ಥಗಿತಗೊಳಿಸಬೇಕಾದೀತಿ. ಹಿರಿಯರ ಬಗ್ಗೆ ಅಲಕ್ಷ್ಯ ಬೇಡ. ನಿಮ್ಮ ನಿರ್ದಿಷ್ಟ ಗುರಿಯ ಕಡೆ ನಿಶ್ಲವಾದ ಗಮನವಿರಲಿ. ತಪ್ಪಿನ ಅರಿವಾಗಿ ಇಂದು ಪಶ್ಚಾತ್ತಾಪಪಡಬೇಕಾದೀತು.

-ಲೋಹಿತಶರ್ಮಾ ಇಡುವಾಣಿ