Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ
ಇಂದಿನ (2023 ಏಪ್ರಿಲ್ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಹಸ್ತಾ, ಯೋಗ : ವ್ಯಾಘಾತ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:07 ರಿಂದ ಮಧ್ಯಾಹ್ನ 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:26 ರಿಂದ 07:58ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:30 ರಿಂದ 11:03ರ ವರೆಗೆ.
ಸಿಂಹ: ನಿಮ್ಮ ಬಗ್ಗೆ ನೀವೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಿಮಗೆ ತೊಂದರೆಯಾದರೆ ಅನ್ಯರಿಗೂ ತೊಂದರೆ ಎಂಬ ಭಾವವಿರಲಿ. ಅಕಾರಣವಾಗಿ ಯಾರ ಮೇಲೂ ಸಂದೇಹಗಳು ಬೇಡ. ಕಛೇರಿಯಲ್ಲಿ ಕಾರ್ಯದ ಒತ್ತಡವಿರಲಿದೆ. ಕಳೆದುದುದರ ಬಗ್ಗೆ ನಿಮಗೆ ದುಃಖ ಬೇಡ. ಉದ್ಯೋಗದ ಸ್ಥಳದಿಂದ ನೀವು ಹೊರಗುಳಿಯುವ ಸಾಧ್ಯತೆ ಇದೆ. ಆರೋಗ್ಯದ ಚಿಂತೆಯೊಂದು ನಿಮ್ಮನ್ನು ಕಾಡಬಹುದು. ಖರ್ಚನ್ನು ಕಡಿಮೆ ಮಾಡುವ ಬಗ್ಗೆ ಆಲೋಚನೆ ಅತ್ಯಗತ್ಯ.
ಕನ್ಯಾ: ದುಬಾರಿ ವಸ್ತುಗಳನ್ನು ಖರೀದಿಸುವ ಬಯಕೆ ನಿಮ್ಮಲ್ಲಿ ಉಂಟಾಗಲಿದೆ. ನಿಮ್ಮ ಶಿಸ್ತಿನ ಜೀವನವು ಇತರರಿಗೆ ಮಾದರಿಯಾಗಲಿದೆ. ಮೂರ್ಖರ ಸಹವಾಸದಿಂದ ನಿಮಗೆ ಅವಮಾನವಾದೀತು. ಅಪರಿಚಿತರ ದೂರವಾಣಿ ಕರೆಯಿಂದ ಚಿಂತೆ ಆರಂಭವಾಗಬಹುದು. ಸಂಗಾತಿಯ ನಡುವೆ ಮನಸ್ತಾಪಗಳು ದೂರವಾಗಿ ಸಂತೋಷದಿಂದ ಇರುವಿರಿ. ಮಕ್ಕಳ ವಿಚಾರದಲ್ಲಿ ಸ್ವಲ್ಪ ಅಸಮಾಧಾನವಿರಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನಹರಿಸಿ. ಉಚಿತವಾದುದನ್ನು ಪಡೆಯಬೇಡಿ.
ತುಲಾ: ಹೂಡಿಕೆಯ ಹಣವು ನಿಮಗೆ ಸಿಗದೇ ಅನ್ಯರ ಪಾಲಾಗುವುದು. ಸಂಬಂಧಗಳನ್ನು ಚೆನ್ನಾಗಿಟ್ಟುಕೊಳ್ಳಿ. ಅಜ್ಞಾತವಾದ ಸ್ಥಳದಲ್ಲಿ ವಾಸ, ಅಪರಿಚಿತ ಭೇಟಿಯು ನಿಮ್ಮಲ್ಲಿ ತಳಮಳವನ್ನು ಉಂಟುಮಾಡುವುದು. ಸಂಗಾತಿಯ ಒತ್ತಾಯಕ್ಕೆ ಮಣಿದು ನೀವಿಂದು ವಾಹನವನ್ನು ಖರೀದಿಸುವಿರಿ. ನೂತನವಾದ ಸಂಬಂಧಗಳು ಆಗಲಿವೆ. ಕಛೇರಿಯಲ್ಲಿ ನೆಮ್ಮದಿಯೂ ಇರಲಿದೆ. ಪ್ರಮೋಷನ್ ಬಯಸಿದ್ದರೆ ಸಿಗುವ ಸಾಧ್ಯತೆ ಇದೆ. ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ.
ವೃಶ್ಚಿಕ: ಅನಾರೋಗ್ಯ ಕಾರಣ ಇಂದು ವಿಶ್ರಾಂತಿಯಲ್ಲಿ ಇರುವಿರಿ. ಹಿತಮಿತವಾದ ಆಹಾರವನ್ನು ಸೇವಿಸಿ. ಅಕಾಲಕ್ಕೆ ಭೋಜನ ಮಾಡಿ ಆರೋಗ್ಯವನ್ನು ಕೆಡಿಸಿಕೊಳ್ಳುವಿರಿ. ಅಪರಿಚಿರ ಮಾತನ್ನು ನಂಬಿ ಸ್ನೇಹವನ್ನು ಕಳೆಸುಕೊಳ್ಳಬೇಡಿ. ಆರ್ಥಿಕಸ್ಥಿತಿಯು ಸುಧಾರಿಸುತ್ತಿದೆ. ವ್ಯಕ್ತಿಗಳ ಅನುಕರಣ ಒಳ್ಳೆಯದಲದಲ. ಯುಕ್ತಿಯಿಂದ ಆಗುವ ಕೆಲಸಕ್ಕೆ ಶಕ್ತಿಯ ಬಳಕೆಮಾಡುವಿರಿ. ಆಕಸ್ಮಿಕವಾಗಿ ಭೂಮಿ ಸಿಗುವ ಸಾಧ್ಯತೆ ಇದೆ.
ಲೋಹಿತಶರ್ಮಾ ಇಡುವಾಣಿ – 8762924271