ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಮೂಲಾ, ಯೋಗ : ಸಿದ್ಧಿ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಬೆಳಗ್ಗೆ 49 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 03:49 ರಿಂದ 05:15ರ ವರೆಗೆ, ಯಮಘಂಡ ಕಾಲ 09:18 ರಿಂದ 10:54ರ ವರೆಗೆ, ಗುಳಿಕ ಕಾಲ 12:29 ರಿಂದ 02:04ರ ವರೆಗೆ.
ಮೇಷ: ನೀವು ಸಾಗುವ ಮಾರ್ಗವನ್ನು ನೋಡಿಕೊಳ್ಳಿ. ನಿಮಗೆ ತೃಪ್ತಿ ಎನಿಸದರೆ ಅಲ್ಲಿಯೇ ಮುಂದುವರಿಯಿರಿ. ಇಲ್ಲವಾದರೆ ಈಗಲೇ ಬದಲಿಸುವುದು ಒಳ್ಳೆಯದು. ಅನಂತರ ಪಶ್ಚಾತ್ತಾಪ ಪಡಬೇಕಾದೀತು. ಕೆಲವು ಸಂದರ್ಭಗಳು ನಿಮ್ಮನ್ನು ಪರೀಕ್ಷಿಸಲು ಬರಬಹುದು. ಅದನ್ನು ಸುಂದರವಾಗಿ ನಿಭಾಯಿಸಲು ಕಲಿಯಿರಿ. ನಿಮ್ಮ ಹಿತವಾದ ಮಾನಸಿಕಸ್ಥಿತಿಯನ್ನು ಹಲವರು ಇಷ್ಟಪಡಬಹುದು. ಮನೆ ಕೆಲಸದಲ್ಲಿ ನೀವಿಂದು ಬಹುಪಾಲು ಮಗ್ನರಾಗುವಿರಿ. ಕಫಕ್ಕೆ ಸಂಬಂಧಿಸಿದ ಖಾಯಿಲೆಯು ಅಧಿಕವಾದೀತು. ಮನೆಯಲ್ಲಿ ಔಷಧೋಪಚಾರವನ್ನು ಮಾಡಿಕೊಳ್ಳಿ.
ವೃಷಭ: ಉತ್ತಮವಾದ ಆಯ್ಕೆ ಮಾಡಿಕೊಳ್ಳಬೇಕೆಂದು ಹೋಗಿ ಕೆಟ್ಟದ್ದನ್ನು ಆಯ್ಕೆ ಮಾಡಿಕೊಂಡು ಬರುವಿರಿ. ಅದು ನಿಮ್ಮ ಮನಸ್ಸಿನ ಸಹಜತೆಯಲ್ಲ, ಗ್ರಹಗತಿಗಳು ಆ ಸಮಯದಲ್ಲಿ ಅಂತಹ ಯೋಚನೆಯನ್ನು ಮಾಡಲು ಪ್ರೇರಿಸಬಹುದು. ಸರಳತೆಯು ನಿಮ್ಮ ಸುತ್ತಲಿನ ಜನಕ್ಕೆ
ಇಷ್ಟವಾದೀತು. ಹಣವಿಲ್ಲದಿದ್ದರೂ ಗುಣದಿಂದ ಖ್ಯಾತಿಯನ್ನು ಪಡೆಯಬಲ್ಲಿರಿ. ಮಕ್ಕಳನ್ನು ಅತಿಯಾಗಿ ಇಷ್ಟಪಡುವಿರಿ. ಆರೋಗದಲ್ಲಿ ವ್ಯತ್ಯಾಸವಾದೀತು. ನಿಮ್ಮ ಪಾಲಿಗೆ ಬಂದಿದ್ದನ್ನು ಖುಷಿಯಿಂದ ಸ್ವೀಕರಿಸಬೇಕಾಗಬಹುದು. ಸೂರ್ಯನ ಸ್ತೋತ್ರವನ್ನು ಮಾಡಿ.
ಮಿಥುನ: ಖುಷಿಯಲ್ಲಿನಿದ್ದೇನೆಂದು ಏನನ್ನಾದರು ಮಾಡಲು ಹೋಗಿ ದುಃಖವನ್ನು ತಂದುಕೊಳ್ಳಬಹುದು. ನಿಷ್ಠುರ ನಿಮ್ಮ ಮಾತನ್ನು ಕೇಳಿ ನಿಮ್ಮ ಬಗ್ಗೆ ಇರುವ ಮೃದುತ್ವವು ಹೋಗಬಹುದು. ಧನನಷ್ಟವು ನಿಮಗೆ ಅತಿಯಾದ ದುಃಖದ ಸಂಗರಿಯಾಗಲಿದೆ. ವಿದ್ಯಾಭ್ಯಾಸದಿಂದ ಏನು ಪ್ರಯೋಜನ ಎನಿಸಿ ಓದನ್ನು ನಿಲ್ಲಿಸಬಹುದು. ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಕುಂದು ಕೊರತೆಯನ್ನು ನೋಡುತ್ತ ಹೆಚ್ಚಿನ ಕಾಲ ಕಳೆಯುವಿರಿ. ಉದ್ವೇಗವನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸುವಿರಿ. ವ್ಯಾಧಿಯ ಕಾರಣದಿಂದ ಸಂಪತ್ತು ನಷ್ಟವಾದೀತು. ಮೃತ್ಯುಂಜಯನನ್ನು ಮನಾಸಾ ಧ್ಯಾನಿಸಿ.
ಕಟಕ: ಇಷ್ಟು ದಿನ ದ್ವೇಷಿಸುತ್ತಿದ್ದ ವ್ಯಕ್ತಿಯು ಇಂದು ನಿಮ್ಮ ಮಿತ್ರನಾಗಲು ಬಂದಾನು. ನಿಮಗೆ ಅದು ಆಪತ್ತಿಗೆ ಸೂಚನೆಯಂತೆ ಕಂಡೀತು. ಕಾರ್ಯದ ಸ್ಥಳದಲ್ಲಿ ನಿಮ್ಮ ಸಹಾಯವನ್ನು ಅನೇಕರು ಬಯಸಿಯಾರು. ಪ್ರೀತಿಯಿಂದ ಮಾಡಿಕೊಡಿ. ವಿವಾದಗಳು ಆಗುವ ಸಂದರ್ಭವಿದ್ದರೆ ಅಲ್ಲಿಂದ ಪಲಾಯನ ಮಾಡಿ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳಿ. ಸಹೋದರನ ಅಪರೂಪದ ಭೇಟಿ ನಿಮಗೆ ಖುಷಿ ಕೊಡಲಿದೆ. ದೇಹದ ನೋವನ್ನು ನುಂಗಲು ಮಾತ್ರೆಯನ್ನು ಆಶ್ರಯಿಸುವಿರಿ. ಲಕ್ಷ್ಮೀನಾರಾಯಣರ ಪ್ರಾರ್ಥನೆಯನ್ನು ಮಾಡಿ.