ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 16 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ವೃದ್ಧಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:28 ರಿಂದ 07:04ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ.
ಮೇಷ: ಕೆಟ್ಟ ಆಹಾರ ಸೇವನೆಯಿಂದ ನಿಮಗೆ ತೊಂದರೆಯಾಗಲಿದೆ. ನಿಮ್ಮ ಮೇಲೆ ಯಾರಾದರೂ ಅಪವಾದವನ್ನು ಮಾಡಬಹುದು. ಸಣ್ಣಮಟ್ಟಿನ ಗೌರವವು ನಿಮಗೆ ಸಿಗಲಿದೆ. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಆಸಕ್ತಿಯು ಇರಲಿದ್ದು, ನೀವು ತೊಡಗಿಕೊಳ್ಳುವಿರಿ. ನೀವು ಸ್ಪರ್ಧೆಯಲ್ಲಿ ಜಯಗಳಿಸಲು ಬಹಳ ಪ್ರಯತ್ನವನ್ನು ಮಾಡುವಿರಿ. ಕಾನೂನುಸಮರಕ್ಕೆ ನಿಮಗೆ ಹೊಸ ಆಯಾಮ ಸಿಗಲಿದೆ. ಲಾಭವನ್ನು ಪಡೆಯಲು ಹೋಗಿ ಇರುವ ಸಂಪತ್ತನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಭವಿಷ್ಯದ ಕುರಿತಂತೆ ನಿಮ್ಮ ಉದ್ದೇಶವನ್ನು ಸಂಗಾತಿಯ ಜೊತೆ ಚರ್ಚಿಸುವಿರಿ.
ವೃಷಭ: ವಿದೇಶಪ್ರಯಾಣದ ಮನಃಸ್ಥಿತಿಯಲ್ಲಿ ನೀವು ಇರುವಿರಿ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗಲಿದೆ. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ಶೈಕ್ಷಣಿಕವಾಗಿ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸುವರು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ಇದನ್ನು ವಿಸ್ತರಿಸುವಿರಿ. ನಿಮ್ಮನ್ನು ಇಷ್ಟಪಟ್ಟವರು ನಿಮ್ಮನ್ನು ಕಡೆಗಣಿಸಬಹುದು. ಇದು ನಿಮಗೆ ಸಂತೋಷವೂ ಆಗಲಿದೆ.
ಮಿಥುನ: ಕೃಷಿ ಚಟುವಟಿಕೆಗಳ ಬಗ್ಗೆ ನಿಮಗೆ ಅಸಕ್ತಿಯು ಅಧಿಕವಾಗಿ ಇರಲಿದೆ. ಮಿತ್ರರು ನಿಮ್ಮ ಸಹಾಯಕ್ಕೆ ಬರುವರು. ಅನನುಕೂಲತೆಯನ್ನು ನೀವು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ. ಇಂದಿನ ದಿನವನ್ನು ಆನಂದಿಸಲು, ನಿಮ್ಮ ಜವಾಬ್ದಾರಿಗಳನ್ನು ಪೂರೈಸುವತ್ತ ಗಮನವಿರಲಿ. ವ್ಯಕ್ತಿಗತ ಸಂಬಂಧಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ನೀವು ಎಲ್ಲವನ್ನೂ ಪ್ರಾಯೋಗಿಕ ಹಿನ್ನೆಲೆಯಲ್ಲಿ ನೋಡುವಿರಿ. ನಿಮ್ಮ ಚಿಂತೆನೆಗಳು ಉತ್ತಮವಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟವಾದೀತು.
ಕಟಕ: ಬಂಧುಗಳು ಪ್ರಶಂಸಿಸಿ ತಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವರು. ವಾಸದ ಸ್ಥಳವನ್ನು ನೀವು ಬದಲಾಯಿಸುವಿರಿ. ನೀವು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದೀತು. ಹಿಂದಿನ ಹಣಕಾಸಿನ ಸಮಸ್ಯೆಯು ಇಂದೂ ಕಾಣಿಸಿಕೊಳ್ಳಬಹುದು. ನಿಮ್ಮ ಸಾಧನೆಯನ್ನು ನೀವು ಎಲ್ಲರ ಬಳಿ ಹೇಳಿಕೊಳ್ಳುವಿರಿ. ಮಹತ್ತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ಷ್ಮ ವಿವೇಕದ ಅಗತ್ಯತೆ ಇದೆ. ತಂತ್ರವನ್ನು ಹೂಡಿ ನಿಮ್ಮ ಹಿತಶತ್ರುವನ್ನು ಕಂಡುಕೊಳ್ಳುವಿರಿ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಎನಿಸಬಹುದು.
ಸಿಂಹ: ಸ್ವಂತ ಉದ್ಯೋಗವನ್ನು ನಡೆಸಲು ಚಿಂತನೆ ಆರಂಭವಾಗಲಿದೆ. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ವಸ್ತುಗಳು ಕಣ್ಮರೆಯಾದರೂ ನಿಮ್ಮ ತಿಳಿವಳಿಕೆಗೆ ಬರದು. ನಿಮ್ಮ ಸುತ್ತಮುತ್ತಲಿನವರು ನಿಮಗೆ ತೊಂದರೆ ಕೊಡಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆಯುವಿರಿ. ವಿದೇಶದ ನಿಮ್ಮ ಉದ್ಯಮವು ಕಷ್ಟ ಎನಿಸಬಹುದು. ಹೊಸದಾಗಿ ಕೆಲಸಕ್ಕೆ ಸೇರಿದವರು ಕಾರ್ಯದಲ್ಲಿ ಉತ್ಸಾಹವನ್ನು ತೋರಿಸುವರು. ನಿಮ್ಮ ಬಂಡವಾಳವು ಎಲ್ಲರಿಗೂ ಗೊತ್ತಾದೀತು. ಮಕ್ಕಳ ಜೊತೆ ಸಮಯವನ್ನು ಸಂತೋಷದಿಂದ ಕಳೆಯುವಿರಿ.
ಕನ್ಯಾ: ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವ ಮನಃಸ್ಥಿತಿಯನ್ನು ಹೊಂದುವಿರಿ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ಮನೆಯನ್ನು ಬಿಟ್ಟು ದೂರ ಹೋಗಲು ನಿಮಗೆ ಇಂದು ಮನಸ್ಸಾಗದು. ನಿಮ್ಮ ಇಂದಿನ ಆರ್ಥಿಕ ಸ್ಥಿತಿಯು ನಿಮಗೆ ಹೆಚ್ಚು ಸುಖ ಕೊಡುವುದು. ಸಂಗಾತಿಯಿಂದ ನೀವು ಬೇಸರವನ್ನು ಅನುಭವಿಸಬೇಕಸದೀತು. ನಿಮ್ಮ ಇಂದಿನ ಕೆಲಸಗಳು ಹೆಚ್ಚು ಸಮಾಧಾನವನ್ನು ತರುವುದು. ಇಂದು ನೀವು ಗಂಭೀರವಾದ ಆಲೋಚನೆಯಲ್ಲಿ ಮುಳುಗುವಿರಿ. ನಿಮ್ಮ ಗೊಂದಲಗಳಿಗೆ ಉತ್ತರವನ್ನು ನೀವೇ ಕಂಡುಕೊಳ್ಳುವಿರಿ.