Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 15ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 15ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 15ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Ganapathi Sharma

Updated on: Jul 15, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 15ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ವಿವಾಹ ವಯಸ್ಕರು ಮನಸ್ಸಿನಲ್ಲಿ ಇರುವ ಪ್ರೇಮ ವಿಚಾರವನ್ನು ನಿವೇದನೆ ಮಾಡಬೇಕು ಅಂದುಕೊಳ್ಳುತ್ತಿರುವವರು ಕೊನೆ ಕ್ಷಣದಲ್ಲಿ ಗೊಂದಲಕ್ಕೆ ಬೀಳುತ್ತೀರಿ. ಇನ್ನು ಈಗ ಇರುವ ಕೆಲಸದಲ್ಲೇ ಮುಂದುವರಿಯಬೇಕಾ ಅಥವಾ ಹೊಸ ವ್ಯಾಪಾರ ಶುರು ಮಾಡಬೇಕಾ ಎಂಬ ಸಂಗತಿ ಬಹಳವಾಗಿ ಕಾಡುತ್ತದೆ. ಸುಖಾಸುಮ್ಮನೆ ಮೇಲಧಿಕಾರಿಗಳನ್ನು ಬೇರೆ ಯಾರದೋ ಕಾರಣಕ್ಕೆ ಎದುರುಹಾಕಿಕೊಳ್ಳುತ್ತೀರಿ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದವರಿಗೆ ಖರೀದಿಗಾಗಿ ಹೊಸ ಹೊಸ ಜನರು ವಿಚಾರಣೆಗೆ ಬರುತ್ತಾರೆ. ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಸೌಂದರ್ಯವರ್ಧಕಗಳನ್ನು ಬಳಸುವವರಿಗೆ ಈ ಎಚ್ಚರಿಕೆ ಮಾತು ಹೆಚ್ಚು ಅನ್ವಯಿಸುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮಗೆ ಸರಿ ಎನಿಸಿದ್ದನ್ನು ಖಂಡಿತವಾಗಿಯೂ ಈ ದಿನ ಅನುಸರಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಮನಸ್ಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅದರಿಂದ ದೀರ್ಘಾವಧಿಯಲ್ಲಿ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಸಂಸಾರದ ಅಥವಾ ವೈಯಕ್ತಿಕ ವಿಚಾರವನ್ನು ಯಾರ ಜತೆಗೆ ಹಂಚಿಕೊಳ್ಳುತ್ತಿದ್ದೀರಿ ಎಂಬ ಬಗ್ಗೆ ಜಾಗ್ರತೆಯಿಂದ ಇರಬೇಕಾಗುತ್ತದೆ. ನಿಮ್ಮ ಹೆಸರನ್ನು ಇತರರು ದುರುಪಯೋಗ ಮಾಡಿಕೊಳ್ಳಬಹುದು, ಆದ್ದರಿಂದ ಇದಕ್ಕೆ ಅವಕಾಶ ಆಗುವಂಥ ಸನ್ನಿವೇಶ ಸೃಷ್ಟಿ ಮಾಡಿಕೊಳ್ಳದಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ವಾಹನಗಳ ಖರೀದಿಗಾಗಿ ಹಣಕಾಸು ಮತ್ತಿತರ ವಿವರಗಳನ್ನು ಕಲೆಹಾಕಲಿದ್ದೀರಿ. ಜಂಕ್ ಫುಡ್ ಗಳ ಸೇವನೆಯಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗೆ ಈ ದಿನ ನೀವು ಗುರಿ ಆಗಲಿದ್ದೀರಿ. ಇನ್ನು ತಿಂಡಿ, ಊಟ, ನಿದ್ರೆಯನ್ನು ಸರಿಯಾದ ಸಮಯಕ್ಕೆ ಮಾಡುವುದರ ಕಡೆಗೆ ಲಕ್ಷ್ಯ ನೀಡಿ. ನೀವು ಬರಲಾರದು ಎಂದುಕೊಂಡಿದ್ದ ಹಣವೊಂದು ಕೈ ಸೇರುವ ಸಾಧ್ಯತೆಗಳಿವೆ. ಸಂಪೂರ್ಣವಾಗಿ ಬರುತ್ತದೆ ಅಂತಲ್ಲದಿದ್ದರೂ ಸ್ವಲ್ಪವಾದರೂ ದೊರೆಯಬಹುದು. ಭಾವನಾತ್ಮಕ ಸಂಗತಿಗಳನ್ನು ಸರಿಯಾಗಿ ನಿರ್ವಹಿಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ಅದೃಷ್ಟ ನಿಮ್ಮ ಪಾಲಿಗೆ ಬಹಳ ಮುಖ್ಯವಾಗುತ್ತದೆ. ನಿಮ್ಮ ಬಗೆಗಿನ ಅಭಿಪ್ರಾಯವೋ ಅಥವಾ ಇತರರ ಮೂಲಕ ಈ ಹಿಂದೆ ನೀವು ಕೆಲಸ ಮಾಡಿದ ಸಾಮರ್ಥ್ಯ ಬಗ್ಗೆ ಹೇಳಿಸಬೇಕು ಎಂದಿದ್ದರೆ ಯಾರಿಂದ ಈ ಕೆಲಸ ಆಗಬೇಕು ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ. ವ್ಯಾಲೆಟ್ ಬಳಸುವಂಥ ಪುರುಷರು ಜನಜಂಗುಳಿಯಲ್ಲಿ ಹೋಗುವಂತಹ ಸಂದರ್ಭದಲ್ಲಿ ಜಾಗ್ರತೆಯಿಂದ ಇರಬೇಕಾಗುತ್ತದೆ. ಒಂದಿಷ್ಟು ಮೈ ಮರೆತರೂ ಬೆಲೆಬಾಳುವ ವಸ್ತು, ಹಣವನ್ನು ಕಳೆದುಕೊಳ್ಳುವಂಥ ಸಾಧ್ಯತೆ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಕೆಲಸ ಆಗಬೇಕು ಎಂಬ ಕಾರಣಕ್ಕೆ ಕೆಲವು ರಾಜೀ ಮಾಡಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮದು ಎಂಬಂಥ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ನೀವಾಗಿಯೇ ಮಾತು ಕೊಟ್ಟು ಅಸಾಧ್ಯ ಎನಿಸುವಂಥ ಜವಾಬ್ದಾರಿಗಳನ್ನು ಮೈ ಮೇಲೆ ಎಳೆದುಕೊಳ್ಳದಿರಿ. ಸಿನಿಮಾ ರಂಗದಲ್ಲಿ ಇರುವವರಿಗೆ ಆಯ್ಕೆಯ ವಿಚಾರದಲ್ಲಿ ಗೊಂದಲಗಳು ಎದುರಾಗಬಹುದು. ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಭಾವನಾತ್ಮಕವಾಗಿ ಸಿಲುಕಿಕೊಳ್ಳದಿರಿ. ದೂರ ಪ್ರಯಾಣಗಳು ದಿಢೀರ್ ಒಪ್ಪಿಕೊಳ್ಳಬೇಡಿ. ಇನ್ನು ಮನೆಯ ಹೊರಗಿನ ಊಟ- ತಿಂಡಿಗಳನ್ನು ಸಾಧ್ಯವಾದಷ್ಟೂ ತೆಗೆದುಕೊಳ್ಳಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮಗೆ ಎಷ್ಟೇ ಹತ್ತಿರದವರು ಹೇಳಿದರೂ ಯಾವುದೇ ಕಾರಣಕ್ಕೂ ಹೇಳಿಕೆ ಮಾತುಗಳನ್ನು ಕೇಳಬೇಡಿ. ನಿಮ್ಮ ಮೂಲಕ ಇತರರು ತಮ್ಮ ಗುರಿ ಸಾಧನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ನಿಮ್ಮ ಹೆಸರು, ವರ್ಚಸ್ಸು ದುರುಪಯೋಗ ಆಗದಂತೆ ಮೇಲಧಿಕಾರಿಗಳು ತಮ್ಮ ಮನಸ್ಸಿನಲ್ಲಿರುವ ವಿಚಾರ ನಿಮಗೆ ಹೇಳುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ಮಾತಿನ ಮೇಲೆ ನಿಗಾ ಇರಬೇಕು. ಇಲ್ಲದಿದ್ದರೆ ಅನಗತ್ಯ ವಿವಾದ ಆಗಬಹುದು. ಕಾರಣವೇ ಇಲ್ಲದೆ ನಿಮ್ಮ ಮನಸ್ಸಿಗೆ ಇಂದು ಬೇಸರ ಕಾಡಲಿದೆ. ನಿಮಗೆ ಗೊತ್ತಿಲ್ದ ವಿಚಾರದ ಬಗ್ಗೆ ಮಾತನಾಡದಿರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮನೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಹಣಕಾಸಿನ ಹರಿವಿನಲ್ಲಿ ಹಿನ್ನಡೆ ಆಗಬಹುದು. ನೀವು ನಿರೀಕ್ಷೆ ಮಾಡಿದ್ದ ಅಥವಾ ಪ್ರಯತ್ನ ಮಾಡಿದ್ದ ಮೂಲದಿಂದ ಹಣ ಬಾರದೇ ಹೋಗಬಹುದು. ನೀವು ಇದೆ ಅಂದುಕೊಂಡಿದ್ದ ದಾಖಲೆಗಳು ಸಮಯಕ್ಕೆ ದೊರೆಯದೇ ಆತಂಕಕ್ಕೆ ಕಾರಣ ಆಗಬಹುದು. ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲಾತಿಗಳನ್ನು ಡೆಡ್ ಲೈನ್ ಒಳಗಾಗಿ ಸಲ್ಲಿಸುವ ಕಡೆಗೆ ಗಮನ ನೀಡಿ. ಅಕೌಂಟೆಂಟ್ ಗಳಾಗಿ ಕಾರ್ಯ ನಿರ್ವಹಿಸುವವರು ಬಡ್ತಿ ಪಡೆಯುವ ಅಥವಾ ಹೊಸದಾಗಿ ಕ್ಲೈಂಟ್ ಗಳು ದೊರೆಯುವ ಸಾಧ್ಯತೆ ಇದೆ. ನಕ್ಕು ಸುಮ್ಮನಾಗುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಪ್ರಮುಖವಾದ ಬೆಳವಣಿಗೆ ಕಂಡುಬರಲಿದೆ. ಸಂಬಂಧಿಕರು, ಸ್ನೇಹಿತರು ನಿಮಗೆ ನೆರವು ನೀಡುವ ಸಾಧ್ಯತೆಗಳಿವೆ. ಇತರರು ನಿಮ್ಮ ಬಳಿ ಗುಟ್ಟು ಎಂದು ಹೇಳಿದ್ದರ ರಹಸ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ಚಿನ್ನಾಭರಣಗಳ ಖರೀದಿಗಾಗಿ ಕ್ರೆಡಿಟ್ ಕಾರ್ಡ್ ಬಳಸುವಂಥ ಸನ್ನಿವೇಶ ಎದುರಾಗುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಊರವರ ಮದುವೆಗೆಲ್ಲ ನನ್ನದೇ ಪೌರೋಹಿತ್ಯ ಎನ್ನುವ ಹಾಗೆ ನಿಮ್ಮ ಹೆಚ್ಚುಗಾರಿಕೆಯನ್ನು ಹೇಳಿಕೊಂಡು, ನಯಾಪೈಸೆ ಲಾಭ- ವಯಕ್ತಿಕವಾಗಿ ಉಪಯೋಗವೇ ಆಗದ ಕೆಲಸಗಳನ್ನು ಮೈ ಮೇಲೆ ಹಾಕಿಕೊಳ್ಳಲಿದ್ದೀರಿ. ಇಂದಿನ ಕೆಲಸದ ಒತ್ತಡದ ಮಧ್ಯೆ ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದು ಸಹ ಕಷ್ಟ ಆಗಲಿದೆ. ದೈವಾನುಗ್ರಹದಿಂದ ನೀವು ಈಗಾಗಲೇ ಕೊಟ್ಟಿರುವ ಹಣವೊಂದು ವಾಪಸ್ ಬರುವುದಕ್ಕೆ ಸಾಧ್ಯತೆ ಇದ್ದು, ಅದಕ್ಕಾಗಿ ನೀವು ಬಹಳ ಗಟ್ಟಿಯಾದ ಪ್ರಯತ್ನವನ್ನೇ ಮಾಡಬೇಕು.

ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?