AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

weekly horoscope: ಜುಲೈ 16 ರಿಂದ ಜುಲೈ 22 ರ ವರೆಗಿನ ವಾರಭವಿಷ್ಯ

ವಾರಭವಿಷ್ಯ: 2023ರ ಜುಲೈ 16 ರಿಂದ ಜುಲೈ 22 ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

weekly horoscope: ಜುಲೈ 16 ರಿಂದ ಜುಲೈ 22 ರ ವರೆಗಿನ ವಾರಭವಿಷ್ಯ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Jul 16, 2023 | 12:15 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಜುಲೈ 16 ರಿಂದ ಜುಲೈ 22ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ: ತೃತೀಯದಲ್ಲಿ ಇರುವ ಸೂರ್ಯನು ಚತುರ್ಥಕ್ಕೆ ಹೋಗಲಿದ್ದು ಕುಟುಂಬದಲ್ಲಿ ಸೌಖ್ಯವನ್ನು ಹೆಚ್ಚಿಸುವನು. ಬಂಧುಗಳ ಆಗಮವೂ ಅಧಿಕವಾಗುವುದು. ನೀವು ಈ ವಾರ ಪತ್ನಿಯ ಜೊತೆ ಗಂಭೀರ ವಿಷಯಗಳ ಬಗ್ಗೆ ಚರ್ಚಿಸುವಿರಿ. ದೈಹಿಕವಾಗಿ ನೀವು ಶಕ್ತಿವಂತರಾಗಿದ್ದರೂ ನಿಶ್ಶಕ್ತಿಯು ಕಾಡಬಹುದು. ಈ ವಾರ ನೀವು ಕೆಲಸವನ್ನು ಮಾಡಲು ಹಿಂದೇಟು ಹಾಕುವಿರಿ. ಪುತ್ರಪ್ರಾಪ್ತಿಯ ಸಮಾಚಾರವು ನಿಮಗೆ ಸಂತೋಷದ ವಿಚಾರವಾಗಲಿದೆ. ಏಕಾದಶದ ಶನಿಯು ನಿಮಗೆ ಅನೇಕ‌ ಅನುಕೂಲತೆಗಳನ್ನು ಸೃಷ್ಟಿಸಿಕೊಟ್ಟು ಸುಖವಾಗಿ ಇರುವಂತೆ ನೋಡಿಕೊಳ್ಳುವನು.

ವೃಷಭ: ಈ ವಾರವು ನಿಮ್ಮ ಸಾಮರ್ಥ್ಯವನ್ನು ಪ್ರಕಟವಾಗಲಿದೆ. ಸೂರ್ಯನು ತೃತೀಯಕ್ಕೆ ಹೋಗಲಿದ್ದು, ಬುಧನೂ ಇರುವುದರಿಂದ ತಂದೆ ಮತ್ತು ಸಹೋದರರು ನಿಮಗೆ ಅನುಕೂಲವನ್ನು ಮಾಡುವರು. ಬಹು ನಿರೀಕ್ಷಿತ ಕಾರ್ಯವನ್ನು ಈ ವಾರ ಪೂರ್ಣಮಾಡುಬಿರಿ. ಸಂತೋಷದ ಸುದ್ದಿಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚು ಮಾಡಲಿವೆ. ಸಂಗಾತಿಯನ್ನು ಬಾಲಿಶ ಕಾರಣವನ್ನು ಕೊಟ್ಟು ಬಿಡುವಿರಿ. ಸಮಾರಂಭಗಳಿಗೆ ಆಹ್ವಾನವು ಬರಲಿದೆ. ಸಂತೋಷಕೂಟವನ್ನು ನೀವು ಏರ್ಪಡಿಸುವಿರಿ. ಹೆಚ್ಚು ವಾಗ್ವಾದವನ್ನು ಈ ವಾರ ಮಾಡುವಿರಿ.

ಮಿಥುನ: ನಿಮಗೆ ಈ ವಾರವು ಹೆಚ್ಚು ಅನುಕೂಲವಿರುವ ವಾರವಾಗಿದೆ. ಸೂರ್ಯನು ದ್ವಿತೀಯಕ್ಕೆ ಬರುವನು. ತಂದೆ ಹಾಗೂ ಸಹೋದರರಿಂದ‌ ಹೆಚ್ಚಿನ ಅನುಕೂಲತೆ ಇರಲಿದೆ. ತೃತೀಯದಲ್ಲಿ ಕುಜ ಹಾಗೂ ಶುಕ್ರರ ಸಮಾಗಮದಿಂದ ಸಹೋದರಿಯರ ನಡುವೆ ಅಸೂಯೆ ಬರಬಹುದು. ಸಮಯಕ್ಕೆ ಮುಂಚಿತವಾಗಿ ನಿಮ್ಮ ಕಾರ್ಯಗಳನ್ನು ಪೂರ್ಣ ಮಾಡುವಿರಿ.‌ ನಿಮ್ಮ ಪ್ರತಿಭೆಯಿಂದ ವೃತ್ತಿಯಲ್ಲಿ ಮನ್ನಣೆಯನ್ನು ಪಡೆಯುವಿರಿ. ಕುಟುಂಬವು ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬಹುದು. ಸಂಬಂಧಿಕರು ನಿಮ್ಮ ಮನೆಗೆ ಬರಲಿದ್ದಾರೆ. ಸಂತೋಷದ ವಾತಾವರಣ ಇರಲಿದೆ.

ಕಟಕ: ಈ ವಾರದಲ್ಲಿ ಸೂರ್ಯನ ಬದಲಾವಣೆ ಆಗಿ ಕೆಲವು ಅಮಂಗಲ‌ ಸುದ್ದಿಗಳು ಬರಬಹುದು. ಭೂಮಿಯ ವ್ಯವಹಾರವು ನಿಮಗೆ ಸ್ವಲ್ಪ ಲಾಭವನ್ನು ಕೊಡುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವರು. ವಿವಾಹವು ನಿಶ್ಚಯವಾಗಿದ್ದು ಮುಂದೆ ಹೋಗುವ ಸಾಧ್ಯತೆಯೂ ಇದೆ. ಬೇಸರಗೊಳ್ಳುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಆತ್ಮೀಯರ ಜೊತೆ ನೀವು ಅನೌಪಚಾರಿಕ ಮಾತುಕತೆಗಳಲ್ಲಿ ಮಗ್ನರಾಗುವಿರಿ. ಪ್ರೀತಿಪಾತ್ರರ ಜೊತೆ ನೀವು ಸ್ವಲ್ಪ ಸಮಯವನ್ನು ಕಳೆಯಬೇಕು ಎಂದನ್ನಿಸಬಹುದು. ಉತ್ಪಾದನಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲಿದೆ.

ಸಿಂಹ: ಈ ವಾರವು ಹೆಚ್ಚು ಅಶುಭವಿರಲಿದೆ. ಸೂರ್ಯನು ದ್ವಾದಶಕ್ಕೆ ಬಂದಿದ್ದು ನಿಮ್ಮ ಆರೋಗ್ಯ ಹಾಗೂ ತಂದೆಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಬುದ್ಧನು ದ್ವಾದಶದಲ್ಲಿ ಇದ್ದು ನಿಮ್ಮ ಮಾತಿಗೆ ಯಾರೂ ಬೆಂಬಲವನ್ನು ಸೂಚಿಸದೇ ಇರುವುದು ನಿಮಗೆ ಬೇಸರವಾದೀತು. ಸ್ಥಿರಾಸ್ತಿ ಸಮಸ್ಯೆಯನ್ನು ಈ ವಾರ ಪರಿಹಾರ ಮಾಡಿಕೊಳ್ಳಿ. ಸರ್ಕಾರದ ಕಛೇರಿಯಲ್ಲಿ ನಿಮ್ಮ ಕೆಲಸವು ಸದ್ಯವಂತೂ ಆಗದು. ಹೊಸ ಹೂಡಿಕೆಗಳು ನಿಮಗೆ ಉತ್ತಮ ಲಾಭವನ್ನು ನೀಡುವುದು. ತಾಳ್ಮೆಯನ್ನು ನೀವು ಬೆಳೆಸಿಕೊಳ್ಳುವುದು ಸದ್ಯದ ಅಗತ್ಯವಾಗಲಿದೆ.

ಕನ್ಯಾ: ಈ ವಾರವು ಹೆಚ್ಚು ಅಶುಭ ಹಾಗೂ ಅಲ್ಪ ಶುಭವೂ ಇರಲಿದೆ. ಸೂರ್ಯನು ದಶಮದಿಂದ ಏಕಾದಶಕ್ಕೆ ಬರಲಿದ್ದು ತಂದೆಯಿಂದ‌ ಲಾಭವನ್ನು ಪಡೆಯಲಿದ್ದೀರಿ. ಸಹೋದರರ ಸಹಾಯವು ಸಿಕ್ಕಿ ನೀವು ಅಂದುಕೊಂಡಿದ್ದನ್ನು ಸಾಧಿಸುವಿರಿ. ಹೊಸ ತಂತ್ರದ ಜೊತೆ ನಿಮ್ಮ ಉದ್ಯಮಕ್ಕೆ ಬಲವನ್ನು ತುಂಬುವಿರಿ. ವಾರಾಂತ್ಯದಲ್ಲಿ ನಿಮಗೆ ಉತ್ತಮ ಫಲಿತಾಂಶವು ಸಿಗಲಿದೆ. ನಿಮ್ಮ ಪ್ರಾಮಾಣಿಕ ಹಾಗೂ ಕ್ರಮಬದ್ಧ ಕೆಲಸದಿಂದ ಜವಾಬ್ದಾರಿಗಳು ಹೆಚ್ಚಾಗಬಹುದು. ಗುರುವು ಅಷ್ಟಮದಲ್ಲಿ ಇದ್ದು ನಿಮ್ಮ ಬಗ್ಗೆ ಅಸಮಾಧಾನವನ್ನು ಸೃಷ್ಟಿಸುವಂತೆ ಮಾಡುವನು.

ತುಲಾ: ಜುಲೈ ಮೂರನೇ ವಾರವು ಶುಭವಿದೆ. ಸಪ್ತಮದಲ್ಲಿ ಗುರುವಿನ ನಿವಾಸದ ಜೊತೆ, ಸೂರ್ಯನೂ ನವಮದಿಂದ ದಶಮಕ್ಕೆ ಬಂದಿದ್ದಾನೆ. ಬುಧನೂ ಇರುವುದರಿಂದ ಸಾಹಿತ್ಯಾಸಕ್ತರು ಲೆಕ್ಕಪರಿಶೋಧಕರಿಗೆ ಹೆಚ್ಚು ಅನುಕೂಲವಿರಲಿದೆ. ನಿಮಗೆ ವ್ಯಾಪಾರದಲ್ಲಿ ಪ್ರತಿಸ್ಪರ್ಧಿಗಳು ಹುಟ್ಟಿಕೊಳ್ಳಬಹುದು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವಿರಿ. ಕಲಾವಿದರು ಹೆಚ್ಚು ಪ್ರಸಿದ್ಧರಾಗುವರು. ಕಲೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ವೃತ್ತಿಯಲ್ಲಿ ನಿಮಗೆ ಸಾಮಾನ್ಯ ಗೌರವವು ಸಿಗಬಹುದು. ದುರ್ಗಾದೇವಿಯನ್ನು ಸಂಪ್ರಾರ್ಥಿಸಿ.

ವೃಶ್ಚಿಕ: ಈ ವಾರದಲ್ಲಿ ಅಧಿಕ ಶುಭವನ್ನು ನಿರೀಕ್ಷಿಸಬಹುದು. ಅಷ್ಟಮದಲ್ಲಿದ್ದ ಸೂರ್ಯನು ನವಮಕ್ಕೆ ಬರಲಿದ್ದು ಅದೃಷ್ಟವು ನಿಮಗೆ ಬರಲಿದೆ. ಬುಧನೂ ಇಲ್ಲಿದ್ದು ನಿಮ್ಮ ಪ್ರತಿಭೆಗೆ ಹೆಚ್ಚು ಸ್ಥಾನವು ಸಿಗಲಿದೆ. ಹೊಸ ಯೋಜನೆಯನ್ನು ಆರಂಭಿಸಿ ಸಫಲತೆಯನ್ನು ಕಾಣುವಿರಿ. ವಿವಾಹಕ್ಕೆ ಎದುರಾದ ತೊಂದರೆಗಳು ಬಗೆಹರಿಯಲಿವೆ. ನಿಮ್ಮ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಹಣವನ್ನು ಖರ್ಚಾಗಲಿದೆ. ಉತ್ತಮ ಉದ್ಯೋಗವು ಸಿಕ್ಕಿದ್ದು ಸಂದರ್ಶನದಲ್ಲಿ ಸೋಲಬಹುದು. ಸಿದ್ಧರಾಗಿ ಹೋಗಿ. ನಿಮ್ಮ ವ್ಯಾಪಾರದ ಅಭಿವೃದ್ಧಿಯು ಈ ವಾರ ಆಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಸ್ನೇಹಿತ ಸಹಕಾರವು ನಿಮಗೆ ಪೂರಕವಾಗಲಿದೆ.

ಧನು: ಈ‌‌ ವಾರದಲ್ಲಿ ಗ್ರಹಗಳ‌ ಬದಲಾವಣೆ ಆಗಲಿದ್ದು ಸೂರ್ಯನು ಸಪ್ತಮಸ್ಥಾನವನ್ನು ಬಿಟ್ಟು ಅಷ್ಟಮಕ್ಕೆ ಬರಲಿದ್ದಾನೆ. ಇಲ್ಲಿಯೇ ಬುಧನೂ ಇದ್ದು ಬಂಧುಗಳ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ನೀವು ಹೊಸ ಕೆಲಸವನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ ಆರಂಭಿಸಿ. ಅನಂತರ ಸ್ವಲ್ಪ ಹಿನ್ನಡೆಯಾಗಬಹುದು. ಅದನ್ನು ಧೈರ್ಯದಿಂದ‌ ಎದುರಿಸಬೇಕಾದೀತು. ವೃತ್ತಿಯಲ್ಲಿ ಉತ್ತಮ ಯಶಸ್ಸು ಸಿಗಲಿದೆ. ವಿವಾದಗಳನ್ನು ಚರ್ಚೆಯ ಮೂಲಕ ಪರಿಹರಿಸಿಕೊಳ್ಳುವುದು ಉತ್ತಮ. ಪೂರ್ವಜರ ಆಸ್ತಿಯನ್ನು ಪಡೆಯಲು ವಿಷಯವನ್ನು ಪ್ರಸ್ತಾಪಿಸುವಿರಿ. ನಿಮ್ಮ ಸಾಲವು ಮರುಪಾವತಿ ಆಗಲಿದೆ. ಮಹಾವಿಷ್ಣುವಿನ ಸಾನ್ನಿಧ್ಯದಲ್ಲಿ ತುಳಸಿ ಅರ್ಚನೆಯನ್ನು ಮಾಡಿಸಿ.

ಮಕರ: ಇದು ಮೂರನೇ ವಾರವಾಗಿದ್ದು, ಹೆಚ್ಚು ಅನುಕೂಲವಾಗಲಿದೆ. ಷಷ್ಠದಿಂದ ಸಪ್ತಮಕ್ಕೆ ಸೂರ್ಯನು ಬರಲಿದ್ದು ಬುಧನ ಯೋಗವೂ ಆಗಲಿದೆ. ತಂದೆಯ ಮತ್ತು ಸಹೋದರರ ಸಹಾಯದಿಂದ ನಿಮ್ಮ ವಿವಾಹವು ನಿಶ್ಚಿತವಾಗಲಿದೆ. ನಿಮ್ಮ ಆಸೆಯನ್ನು ಅಲ್ಪ ಈಡೇರಿಸಿಕೊಳ್ಳುವಿರಿ. ನಿಮ್ಮ ನಿರ್ಧಾರಕ್ಕೆ ಪ್ರಶಂಸೆಯು ಸಿಗಲಿದೆ. ಸಾಮಾಜಿಕ ಕಾರ್ಯದಲ್ಲಿ ನೀವು ಪ್ರಚಾರವನ್ನು ಪಡೆಯುವಿರಿ. ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಮುಂದುವರಿಯುವುದು. ಉದ್ಯೋಗದ ಒಪ್ಪಂದಕ್ಕೆ ನೀವು ಒಪ್ಪಿಕೊಳ್ಳುವಿರಿ. ದಾಂಪತ್ಯದಲ್ಲಿ ಪರಸ್ಪರ ಸಾಮರಸ್ಯ ಮತ್ತು ಪ್ರೀತಿ ಹೆಚ್ಚಾಗಲಿದೆ. ನಿಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚು ಗಮನದ ಅವಶ್ಯಕತೆ ಬೇಕಾಗುವುದು. ಸೋಮವಾರದಂದು ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಿ.

ಕುಂಭ: ಜುಲೈ ತಿಂಗಳ ಮೂರನೇ ವಾರವು ಇದಾಗಿದ್ದು ಸೂರ್ಯನು ಪಂಚಮಸ್ಥಾನದಿಂದ ಷಷ್ಠಕ್ಕೆ ಬರಲಿದ್ದಾನೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಲಿದೆ. ನಿಮ್ಮ ಪ್ರತಿಭೆಯು ಜಗಜ್ಜಾಹಿರಾಗಬಹುದು. ತಂದೆಯ ಮಾತು ನಿಮಗೆ ಬಹಳ ಕಿರಿಕಿರಿ ಎನಿಸಬಹುದು. ಸಹೋದರನ ಜೊತೆ ವಾಗ್ವಾದವು ಆಗಲಿದೆ. ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಸಹಾಯವನ್ನು ಮಾಡುವರು. ಸರ್ಕಾರದ ಕೆಲಸವು ಆಗದು. ಪ್ರಮುಖ ಕೆಲಸಗಳು ಆಗಬೇಕಾದರೆ ಹಣವನ್ನು ಖರ್ಚುಮಾಡುವಿರಿ. ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸಲಿದ್ದೀರಿ.‌

ಮೀನ: ಈ ವಾರವು ನಿಮಗೆ ಅನುಕೂಲಕರವಾದುದ್ದಾಗಿದೆ. ಸೂರ್ಯನು ಚತುರ್ಥದಿಂದ ಪಂಚಮಕ್ಕೆ ಬರಲಿದ್ದಾನೆ. ಇಲ್ಲಿಯೂ ಬುಧಾದಿತ್ಯ ಯೋಗವಾಗಲಿದೆ. ಮಕ್ಕಳಿಂದ ಶುಭ ಸಮಾಚಾರವನ್ನು ಕೇಳುವಿರಿ. ಆದಾಯವೂ ಹೆಚ್ಚಾಗಲಿದೆ. ನಿಮ್ಮ ವಿವಾದಗಳು ಕೆಲವು ಸ್ನೇಹಿತರ ಮಧ್ಯಸ್ಥಿಕೆಯಿಂದಾಗಿ ಪರಿಹಾರವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಈ ವಾರ ನೀವು ಸಾಧಾರಣ ಲಾಭವನ್ನು ಗಳಿಸುವಿರಿ. ನಿಮಗೆ ಹಿರಿಯರಿಂದ ಭವಿಷ್ಯದ ಬಗ್ಗೆ ಮಾರ್ಗದರ್ಶನವನ್ನು ಪಡೆಯುವಿರಿ. ಪಾಲುದಾರಿಕೆ ಕೆಲಸದಿಂದ ಹೆಚ್ಚು ಶ್ರಮವೂ ದೊಡ್ಡ ಆರ್ಥಿಕ ಲಾಭವೂ ಆಗಲಿದೆ. ಧ್ಯಾನದಲ್ಲಿ ನಿಮ್ಮ ಮನಸ್ಸು ಇರಲಿದೆ. ಶನಿವಾರದಂದು ಹನುಮಂತನ ದೇಗುಲಕ್ಕೆ ಹೋಗಿ ಪೂಜಿಸಿ ಬನ್ನಿ.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್