ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ(2023 ಮಾರ್ಚ್ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ:ಗುರು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಹಸ್ತಾ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02: 13 ರಿಂದ ಮಧ್ಯಾಹ್ನ 03:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:46 ರಿಂದ ಬೆಳಗ್ಗೆ 08:15ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:45 ರಿಂದ 11:14ರ ವರೆಗೆ.
ಸಿಂಹ: ಆರೋಗ್ಯದ ಬಗ್ಗೆ ಗಮನವು ಹೆಚ್ಚಿರಲಿ. ವೈದ್ಯರ ಸಲಹೆಗಳನ್ನು ತಿರಸ್ಕರಿಸಬೇಡಿ. ಇಂದು ನಿಮ್ಮ ಪ್ರತಿಭೆಯ ಪ್ರದರ್ಶನವಾಗಲಿದೆ. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆಯಿರಿ. ಅವರು ನಿಮ್ಮ ನೋವನ್ನು ಹಂಚಿಕೊಳ್ಳುವರು. ಬಹಳ ದಿನಗಳಿಂದ ಹೋಗಬೇಕೆಂದುಕೊಂಡ ಸ್ಥಳಕ್ಕೆ ಹೋಗುವಿರಿ. ನಿಮ್ಮ ಬಗ್ಗೆ ಪೂರ್ವಾಗ್ರಹದಿಂದ ಇಟ್ಟುಕೊಂಡವರಿಗೆ ನಿಮ್ಮ ನಿಜಸ್ಥಿತಿಯನ್ನು ತಿಳಿಸುವಿರಿ. ಆರ್ಥಿಕಸ್ಥಿತಿಯು ಸುಧಾರಿಸುವುದು. ನಿಮ್ಮ ನೆಚ್ಚಿನ ವ್ಯಕ್ತಿಯನ್ನು ಭೇಟಿ ಮಾಡುವಿರಿ. ಶಿವಸ್ತುತಿಯನ್ನು ಮಾಡಿ.
ಕನ್ಯಾ: ಆಲಸ್ಯವು ನಿಮ್ಮ ಕೆಲಸವನ್ನು ಮತ್ತಷ್ಟು ವಿಳಂಬವಾಗಿಸುವುದು. ಸರ್ಕಾರದಿಂದ ಆಗಬೇಕಾಗಿದ್ದ ಕಾರ್ಯಗಳು ನಿಧಾನವಾಗಲಿದೆ. ಮನಸ್ಸು ಅತಿಯಾದ ಗೊಂದಲದಿಂದ ಇರುವುದಿ. ಕಾರ್ಯದ ನಿಮಿತ್ತ ವ್ಯರ್ಥ ಓಡಾಟವನ್ನು ಮಾಡುವಿರಿ. ಕೆಲಸವನ್ನು ಮುಗಿಸುವ ವೇಗದಲ್ಲಿ ಖರ್ಚನ್ನು ಹೆಚ್ಚು ಮಾಡಬೇಕಾಗಿಬರಬಹುದು. ಸಂಗಾತಿಯೊಡನೆ ಸಂತೋಷದಿಂದ ಸಲ್ಲಾಪಮಾಡುತ್ತ ಸಮಯವು ಕಳೆದುಹೋಗುವುದು. ಇಂದು ಭೂಮಿಯನ್ನು ಮಾರುವುದಿದ್ದರೆ ಉತ್ಯಮ ಬೆಲೆಗೆ ಖರೀದಿಯಾಗುವುದು. ಮಕ್ಕಳಿಗೆ ಪ್ರೀತಿ ತೋರಿಸಿ, ಅವರು ನಿಮ್ಮ ಮಾತನ್ನು ಕೇಳುತ್ತಾರೆ. ಜೊತೆಗೆ ಭೀತಿಯೂ ಇರಲಿ. ಅತಿಯಾದ ಸಿಹಿಯನ್ನು ತಿಂದು ದೇಹವನ್ನು ಕೆಡಿಸಿಕೊಳ್ಳಬೇಡಿ. ಹರಿನಾಮಸ್ಮರಣೆಯನ್ನು ಮಾಡಿ ಕೆಲಸ ಕಾರ್ಯಗಳಿಗೆ ತೆರಳಿ.
ತುಲಾ: ತುಂಬಾ ದಿನಗಳಿಂದ ಮನೆಗೆ ಅಗತ್ಯವಿರುವ ಹೊಸ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ.ಇದರಿಂದ ಮನೆಯ ಹಿರಿಯರು ಇಂದ ಬೈ ಮನೆಯಲ್ಲಿ ಕಿರಿಕಿರಿಯ ವಾತಾವರಣವೂ ನಿರ್ಮಾಣವಾಗಬಹುದು. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಔಷಧೀಯ ವಸ್ತುಗಳ ಮಾರಾಟದಿಂದ ಹೆಚ್ಚು ಲಾಭವಾಗಲಿದೆ. ಯಾವ ಮಾತನ್ನೂ ಯೋಚಿಸದೇ ಆಡಬೇಡಿ. ಮುಂದೆ ಇದೇ ತಪ್ಪಾದೀತು. ಸಂಗಾತಿಯ ಸೌಂದರ್ಯಕ್ಕೆ ಮರುಳಾಗಿ ಹೋಗುವಿರಿ. ಕಛೇರಿಯಲ್ಲಿ ಸಂವಹನವನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ವಕೀಲವೃತ್ತಿಯಲ್ಲಿ ಇರುವವರಿಗೆ ಜಯವು ಸಿಗಲಿದೆ. ದುರ್ಗಾದೇವಿಯ ಆರಾಧನೆಯಿಂದ ಸಕಲವೂ ಸಾಕಾರಗೊಳ್ಳಲಿವೆ.
ವೃಶ್ಚಿಕ: ಹಿತಶತ್ರುಗಳಿಂದ ತೊಂದರೆಯನ್ನು ಅನುಭವಿಸುವಿರಿ. ಹೊಸ ಉದ್ಯೋಗವನ್ನು ಆರಂಭಿಸುವುದಿದ್ದರೆ ಒಳ್ಳೆಯದು. ಹೆಚ್ಚು ಮಾತನಾಡಿ ನಿಮ್ಮನ್ನು ನೀವೇ ಸಣ್ಣವರನ್ನಾಗಿ ಮಾಡಿಕೊಳ್ಳಬೇಡಿ. ವ್ಯಾಪಾರದ ಕಾರಣದಿಂದ ದೂರ ಸಂಚಾರವನ್ನು ಮಾಡಲಿದ್ದೀರಿ. ನೀಮ್ಮ ವಾಹನವನ್ನು ನೀವೇ ಮಾಡುವುದು ಬೇಡ. ಪರರ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಅಸೂಯೆಪಡಲಿದ್ದಾರೆ. ನಿಮ್ಮ ಸೋಲನ್ನು ಪಾಠವಾಗಿ ಸ್ವೀಕರಿಸಿ. ಸಾಧಿಸುವ ಛಲವಿರುವವಗೆ ಯಾವುದು ಸಾಧ್ಯವಿಲ್ಲವಾಗುತ್ತದೆ? ಪುತ್ರೋತ್ಸವವು ಇಂದು ಆಗಲಿದೆ. ನೆರೆ-ಹೊರೆಯವರ ಜೊತೆ ಜಗಳಕ್ಕೆ ಹೋಗಬೇಡಿ. ಏನೆಂದರೂ ಕೆಳಿಸಿಕೊಂಡು ಬನ್ನಿ. ಸುಬ್ರಹ್ಮಣ್ಯನ ಜಪ ಮಾಡಿ.
-ಲೋಹಿತಶರ್ಮಾ, ಇಡುವಾಣಿ