Horoscope Today: ಈ ರಾಶಿಯವರಿಗೆ ಸಾಲದ ಹೊರೆಯು ದುಃಸ್ವಪ್ನದಂತೆ ಕಾಡುವ ಸಾಧ್ಯತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 10, 2023 | 12:25 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಈ ರಾಶಿಯವರಿಗೆ ಸಾಲದ ಹೊರೆಯು ದುಃಸ್ವಪ್ನದಂತೆ ಕಾಡುವ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 10 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ : ಆಶ್ಲೇಷಾ, ಮಾಸ : ಅಧಿಕ ಶ್ರಾವಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ದಶಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ವ್ಯರಿಪಾತ್​, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:12 ರಿಂದ 03:47ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06: 19 ರಿಂದ 07:53 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ.

ಧನು ರಾಶಿ: ನೀರಿನಿಂದ ನಿಮಗೆ ಆಪತ್ತು ಬರಬಹುದು. ಆಧಿಕ ತಿರುಗಾಟವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಉದ್ಯೋಗದ ಸ್ಥಳದಲ್ಲಿ ಇಂದು ನಿಮ್ಮನ್ನೇ ಹೆಚ್ಚು ಗಮನಿಸಬಹುದು. ಹಿತಶತ್ರುಗಳಿಂದ ಹೆಚ್ಚು ವಿಘ್ನಗಳು ಬಂದರೂ ನಿಮಗೆ ಅದು ಗೊತ್ತಾಗದೇ ಇರಬಹುದು. ಉದ್ಯಮವು ಸ್ವಲ್ಪ ಹಿನ್ನಡೆಯನ್ನು ಪಡೆಯಬಹುದು. ಪುಣ್ಯಕ್ಷೇತ್ರಗಳಿಗೆ ನೀವು ಕುಟುಂಬ ಸಹಿತವಾಗಿ ಹೋಗುವಿರಿ. ಯಂತ್ರೋಪಕರಣಕ್ಕೆ ನೀವು ಬೆಲೆ ತೆರಬೇಕಾದೀತು. ನಿಮ್ಮ ದುಃಖವನ್ನು ಇತರರ ಜೊತೆ ಹಂಚಿಕೊಳ್ಳಿ. ದೂರ ಬಂಧುಗಳ‌ ಭೇಟಿಯಾಗುವುದು. ಕಲಹವಾಗುವ ಸಂದರ್ಭದಲ್ಲಿ ನೀವು ಜಾಣ್ಮೆಯನ್ನು ವಹಿಸಿ ಸುಮ್ಮನಿರುವಿರಿ. ಹಣದ ಹರಿವು ಇದ್ದರೂ ಖರ್ಚಿನ ದಾರಿಯೂ ತೆರೆದಿರುತ್ತದೆ.

ಮಕರ ರಾಶಿ: ಸ್ತ್ರೀಯರು ಖರೀದಿಯಲ್ಲಿ ಸಮಯವನ್ನು ಕಳೆಯುವರು. ಭೋಗವಸ್ತುಗಳಿಂದ ಧನನಷ್ಟವು ಆಗುವುದು. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಬಂಧುಗಳಿಂದ ತೊಂದರೆ ಬತಬಹುದು. ಹೊಸತನ್ನು ಮಾಡಲು ನಿಮಗೆ ಇಚ್ಛಾಶಕ್ತಿಯ ಕೊರತೆ ಇರಲಿ. ನಿಮಗೆ ಪ್ರೋತ್ಸಾಹದ ಕೊರತೆಯಿಂದ ಹಿಂದುಳಿಯಬೇಕಾಗುವುದು. ಸಹಾಯವನ್ನು ಕೇಳಿ ಬಂದರೆ ಇಲ್ಲ ಎನದೇ ಇರುವುದನ್ನು ಕೊಡಿ. ಸಾಮಾಜಿಕ ಕೆಲಸವು ನಿಮಗೆ ಸಾಕೆನಿಸಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ತಾಯಿಯ ಜೊತೆ ಕಲಹವಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ.

ಕುಂಭ ರಾಶಿ: ಸಮಾರಂಭಗಳಿಗೆ ಆಹ್ವಾನವು ಬರಬಹುದು. ಸಮಯ ಪಾಲನೆಯಲ್ಲಿ ನೀವು ಬಹಳ ನಿಷ್ಠುರರಾಗುವಿರಿ. ಕೆಲಸದಲ್ಲಿ ನಿಮಗೆ ತೊಡಕುಗಳು ಬಂದರೆ ಸಹೋದ್ಯೋಗಿಗಳ ಸಹಾಯವನ್ನು ಪಡೆಯಿರಿ. ಮನಸ್ಸು ಒತ್ತಡದಿಂದ ಆಚೆ ಬಂದಿದ್ದು ನಿಮಗೆ ನಿರಾಳ ಎನಿಸುವುದು. ನಿಮ್ಮವರಿಂದ ನಿಮಗೆ ಕಿರಿಕಿರಿ‌ ಉಂಟಾಗಬಹುದು. ಹಳೆಯ ನೆನಪುಗಳು ನಿಮ್ಮನ್ನು ಕಾಡಬಹುದು. ಮನೆಗೆ ಬೇಕಾದ ವಸ್ತುಗಳನ್ನು ಇಂದು ನೀವು ಖರೀದಿಸುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇರಲಿದೆ. ನಿಮಗೆ ಸಮ್ಮಾನಗಳನ್ನು ಪಡೆದುಕೊಳ್ಳಲು ಆಸೆಯಾಗುವುದು. ವೃತ್ತಿಯ ಸ್ಥಳದಲ್ಲಿ ನೀವು ಉತ್ತಮ ಪ್ರದರ್ಶನ ನೀಡುವಿರಿ.

ಮೀನ ರಾಶಿ: ವಿರೋಧಿಗಳು ನಿಮ್ಮ ಬೆನ್ನು ಬಿಡದೇ ಪೀಡಿಸಬಹುದು. ಯಾವುದಕ್ಕೂ ಉಪಯೋಗವಾಗದೇ ಹಣವು ವ್ಯರ್ಥವಾಗಬಹುದು. ಸಾಲದ ಹೊರೆಯು ನಿಮಗೆ ದುಃಸ್ವಪ್ನದಂತೆ ಕಾಡಬಹುದು. ವಿದೇಶದಲ್ಲಿ ಕೆಲಸ ಮಾಡುವ ಬಗ್ಗೆ ಮೋಹ ಉಂಟಾಗುವುದು. ನ್ಯಾಯಾಲಯದ ತೀರ್ಪು ನಿಮಗೆ ಪೂರ್ಣ ಸಮಾಧಾನವನ್ನು ನೀಡದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಗೊಂದಲವಿರಬಹುದು. ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುವಿರಿ. ಸಾಹಿತ್ಯಾಸಕ್ತರು ಪ್ರಸಿದ್ಧಿಯನ್ನು ಹೆಚ್ಚು ಬಯಸುವರು. ಅಧ್ಯಾತ್ಮದ ಕಡೆ ಮನಸ್ಸು ಇದ್ದರೂ ಕುಟುಂಬವನ್ನು ನೆನಪಿಸಿಕೊಂಡು ಸುಮನಿರುವಿರಿ. ಜೀವನ ಸಂಗಾತಿಯ ಅನ್ವೇಷಣೆಯಲ್ಲಿ ನೀವು ಸೋಲಬಹುದು.