ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಾಧ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:51 ರಿಂದ 09:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:39ರ ವರೆಗೆ.
ಧನು: ಇಂದು ನಿಮಗೆ ಬರಬೇಕಾದ ಹಣವು ಅನಿರೀಕ್ಷಿತ ರೀತಿಯಲ್ಲಿ ಬಂದರೂ ಅದು ಇನ್ನೊಂದು ಮಾರ್ಗದಲ್ಲಿ ಖಾಲಿಯಾಗುವುದು. ವಾಹನವನ್ನು ಚಾಲಾಯಿಸುವಾಗ ಅನೇಕ ನಕಾರಾತ್ಮಕ ಯೋಚನೆಗಳು ಬರಲಿದೆ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ರೀತಿಯ ಪರೀಕ್ಷೆಗಳು ಬರಬಹುದು. ಸ್ವತಂತ್ರವಾದ ಆಲೋಚನೆಯನ್ನು ಬೆಳೆಸಿಕೊಳ್ಳಿ. ಇಂದು ಹೆಚ್ಚು ಶ್ರಮವಹಿಸಿ ಕೆಲಸವನ್ನು ಮಾಡಬೇಕಾದೀತು. ಮನೆ ಕೆಲಸಕ್ಕೆ ಆಲಸ್ಯವನ್ನು ತೋರುವಿರಿ. ಸಮಾರಂಭದಲ್ಲಿ ನಿಮಗೆ ಗೌರವವು ಸಿಗಬಹುದು. ನಿಮ್ಮ ಮನವನ್ನು ಸಂಗಾತಿಯು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವರು.
ಮಕರ: ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸಾಗುವುದು. ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ನಿಮ್ಮ ವರ್ತನೆಯು ಸಹೋದ್ಯೋಗಿಗಳಿಗೆ ಸಿಟ್ಟನ್ನು ತಂದೀತು. ಭೋಗವಸ್ತುಗಳನ್ನು ಖರೀದಿಸುವಿರಿ. ಜೀವನಕ್ಕೆ ಬೇಕಾದುದನ್ನು ಸ್ನೇಹಿರಿಂದ ಪಡೆಯುವಿರಿ. ನೀವು ಇಂದು ವಿಶೇಷ ಲಕ್ಷ್ಯವನ್ನು ಇಟ್ಟುಕೊಂಡು ಕೆಲಸ ಮಾಡುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭ್ಯ ಆಗುವುದು. ಮನೋರಂಜನೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಯಂತ್ರದ ಮಾರಾಟದಿಂದ ಲಾಭವಿರಲಿದೆ. ಬರಹಗಾರರಿಗೆ ಗೌರವವು ಸಿಗಬಹುದು.
ಕುಂಭ: ಆರ್ಥಿಕ ಸಹಾಯವು ಸಿಗದೇ ಕಷ್ಟಪಡಬೇಕಾದೀತು. ಮನಸ್ಸು ಚಂಚಲವಾಗಿ ಕೆಲಸವು ಸೂಚಿಸದೇ ಇದ್ದೀತು. ಚರ ಆಸ್ತಿಯನ್ನು ಕಳೆದುಕೊಳ್ಳಬಹುದು. ನಿಮಗೆ ಸಂಬಂಧಿಸದ ವಿಚಾರದಲ್ಲಿ ನೀವು ಮೂಗು ತರಿಸುವಿರಿ. ಇದರಿಂದ ಅಪಮಾನವೂ ಆಗಬಹುದು. ಸ್ಥಾನವನ್ನು ಉಳಿಸಿಕೊಳ್ಳಲು ಜವಾಬ್ದಾರಿಯ ಕೆಲಸವನ್ನು ನಿರ್ವಹಿಸಬೇಕಾಗುವುದು. ಭೀತಿಯಿಂದ ಮನೆಯನ್ನು ಬಿಟ್ಟು ಹೋಗಲಾರಿರಿ. ಶುಭಾವಾರ್ತೆಯು ನಿಮಗೆ ನೆಮ್ಮದಿಯನ್ನು ತಂದೀತು. ಪ್ರಯಾಣದ ವಿಚಾರದಲ್ಲಿ ನಿಮಗೆ ನಿರಾಸಕ್ತಿ ಇರಲಿದೆ. ಬಂಧುಗಳ ಭೇಟಿಯು ಸುಖವನ್ನು ಕೊಡುವುದು.
ಮೀನ: ನಿಮಗೆ ಇಂದು ಪ್ರೇಮದ ವಿಚಾರದಲ್ಲಿ ಆಸಕ್ತಿ ಹೆಚ್ಚಾಗಿದ್ದು ಪ್ರೇಮಿಯನ್ನು ನೋಡಲು ಹಂಬಲಿಸುವಿರಿ. ಮಹಿಳಾ ಉದ್ಯೋಗಿಗಳಿಗೆ ಸೂಕ್ತಸ್ಥಾನವು ಸಿಗಲಿದೆ. ಯಾರ ಮೇಲೂ ದೂರನ್ನು ಹಾಕುವುದು ಬೇಡ. ಮನೆಯಿಂದ ದೂರವಿರುವ ಉದ್ಯೋಗವು ನಿಮಗೆ ಸಿಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳಿಂದ ತಾಯಿಗೆ ಬೇಸರವಾಗಬಹುದು. ನಿಮ್ಮನ್ನು ನೀವು ಬದಲಿಸಿಕೊಳ್ಳಲು ಪ್ರಯತ್ನಿಸುವಿರಿ. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಇಷ್ಟದವರ ಭೇಟಿಯಾಗಲಿದೆ. ಕಾನೂನಿನ ಸಮರದಲ್ಲಿ ಆಸಕ್ತಿ ಹೆಚ್ಚಾಗಬಹುದು. ಸಂಗಾತಿಯಿಂದ ಕಿರಿಕಿರಿ ಆಗಬಹುದು.
-ಲೋಹಿತಶರ್ಮಾ (ವಾಟ್ಸ್ಆ್ಯಪ್ 8762924271)