ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗ! ಯಾವ ರಾಶಿಗೆ ಶುಭಫಲ

ಸಿಂಹದಲ್ಲಿ ಕುಜ ಹಾಗೂ ಶುಕ್ರರಿದ್ದು ಈಗ ಬುಧನೂ ಪ್ರವೇಶ ಮಾಡುವನು. ಮೂರೂ ಗ್ರಹಗಳು ಸಿಂಹ ರಾಶಿಯಲ್ಲಿ ಇರಲಿವೆ. ಇವರಲ್ಲಿ ಪರಸ್ಪರ ಶತ್ರುತ್ವ, ಮಿತ್ರತ್ವ ಹಾಗೂ ಸಮತ್ವಗಳು ಇರಲಿವೆ.

ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗ! ಯಾವ ರಾಶಿಗೆ ಶುಭಫಲ
ಸಿಂಹ ರಾಶಿImage Credit source: istock
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi

Updated on: Jul 26, 2023 | 6:04 AM

ಸಿಂಹದಲ್ಲಿ ಕುಜ ಹಾಗೂ ಶುಕ್ರರಿದ್ದು ಈಗ ಬುಧನೂ ಪ್ರವೇಶ ಮಾಡುವನು. ಮೂರೂ ಗ್ರಹಗಳು ಸಿಂಹ ರಾಶಿ (Leo)ಯಲ್ಲಿ ಇರಲಿವೆ. ಇವರಲ್ಲಿ ಪರಸ್ಪರ ಶತ್ರುತ್ವ, ಮಿತ್ರತ್ವ ಹಾಗೂ ಸಮತ್ವಗಳು ಇರಲಿವೆ. ಕುಜನಿಗೆ ಶುಕ್ರನು ಮಿತ್ರ, ಆದರೆ ಬುಧ ಶತ್ರು. ಬುಧನಿಗೆ ಶುಕ್ರ ಮಿತ್ರ ಆದರೆ ಕುಜ ಸಮ. ಶುಕ್ರನಿಗೆ ಬುಧ ಮಿತ್ರ ಹಾಗೂ ಕುಜನು ಸಮ. ಆದರೆ ಇವರು ಇರುವಂತಹ ಸ್ಥಳ‌ ಸೂರ್ಯನದ್ದು. ಹಾಗಾಗಿ ಇವರು ಸೂರ್ಯನಿಗೆ ಕುಜ ಮಿತ್ರನಾದರೆ ಶುಕ್ರನು ಶತ್ರು, ಬುಧನು ಸಮನಾಗಿರುವನು. ಕುಜ ಹಾಗೂ ಬುಧರಿಗೆ ರವಿ ಮಿತ್ರನಾದರೆ ಶುಕ್ರನಿಗೆ ಶತ್ರು.

ಹೀಗೆ ಸಿಂಹರಾಶಿಯಲ್ಲಿ ಇರುವ ಗ್ರಹಗಳ ಸ್ಥಿತಿ. ಮಿತ್ರ ಅಥವಾ ಸಮರಾಗಿದ್ದರೆ ಆಧಿಕ‌ಫಲವನ್ನು ಗ್ರಹರು ಕೊಡುವರು. ಶತ್ರುವಿನ ಸಹವಾಸ ಅಥವಾ ಶತ್ರುವಿನ ಮನೆಯಲ್ಲಿ ಇದ್ದರೆ ಫಲ ಕಡಿಮೆ ಅಥವಾ ವಿರುದ್ಧಫಲವನ್ನೂ ಕೊಡಬಹುದು. ಈ ಸ್ಥಳದಲ್ಲಿ ಅತ್ಯಂತ ಹೆಚ್ಚು ಬಲಿಷ್ಠರು ಕುಜ ಹಾಗೂ ಬುಧರು.

ತುಲಾರಾಶಿಯವರಿಗೆ ಹೆಚ್ಚು ಶುಭಫಲವಿದೆ.‌ ಸಹೋದರ ಅಥವಾ ಸಹೋದರಿಯಿಂದ ಬೇಕಾದ ಸಹಾಯವನ್ನು ಪಡೆಯಬಹುದು. ನಿಮ್ಮ ಎಲ್ಲ ಮಾತುಗಳಿಗೂ ಇವರ ಒಪ್ಪಿಗೆ ಸಿಗಲಿದೆ.

ಧನುರಾಶಿಯವರಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಉತ್ತಮ ವಿದ್ಯಾಸಂಸ್ಥೆಗೆ ಸೇರಿಕೊಳ್ಳುವ ಆಸಕ್ತಿ‌ ಇದ್ದರೆ ಇದು ಶುಭ ಸಮಯ.‌ ಸೀಟ್ ಇಲ್ಲವೆಂದರೂ ನಿಮ್ಮ ಪ್ರಯತ್ನವನ್ನು ಬಿಡದೇ ಮುಂದುವಿರಿ.

ಮೇಷರಾಶಿವರಿಗೇ ಶುಭವು ಸಿಗಲಿದೆ. ಒಂಭತ್ತನೆಯ ಮನೆಯಾಗಿರುವುದರಿಂದ ಗುರು ಹಿರಿಯರ ಸೇವೆಯಿಂದ ಒಳ್ಳೆಯದಾಗುವುದು. ಉದ್ಯೋಗದ ಸ್ಥಳದಲ್ಲಿ ನಿಮಗೆ ಒಳ್ಳೆಯ ಬೆಂಬಲವೂ ಸಿಗುವುದು.

ಮಿಥುನರಾಶಿಯವರು ಭಾಷಣಕಾರರಾಗಿದ್ದರೆ ಅಥವಾ ಬರಹಗಾರರಾಗಿದ್ದರೆ ಒಳ್ಳೆಯ ಅವಕಾಶಗಳು ಸಿಗುವುದು. ಶಿಕ್ಷಕರಾಗಿದ್ದರೆ ಹೆಚ್ಚಿನ ಸಂಪತ್ತು ಹಾಗೂ ಕೀರ್ತಿಯನ್ನು ನೀವು ಗಳಿಸುವಿರಿ.

ಕುಜನಿಂದ ಏನಾಗುತ್ತದೆ?

ಚತುರ್ಥಸ್ಥಾನದ ಮೇಲೆ‌ ಅವನ ದೃಷ್ಟಿಯು ಬೀಳುವುದರಿಂದ ವೃಶ್ಚಿಕ ರಾಶಿಯವರಿಗೆ ಹೆಚ್ಚು ಬಲ ಬರಲಿದೆ. ನಿಮ್ಮ ಸಾಮರ್ಥ್ಯವನ್ನು ತೋರಿಸಿಕೊಡುವಿರಿ.

ಮಕರವು‌ ಕುಜನ ಉಚ್ಚಕ್ಷೇತ್ರವಾಗಿದ್ದ ಅವರ ರಕ್ಷಣೆಯು ಕುಜನ ಕರ್ತವ್ಯವಾಗಿದೆ. ತನ್ನ ಭುಜಬಲದಿಂದ ಶತ್ರುಗಳನ್ನು ಸಂಹರಿಸುವನು. ಆರೋಗ್ಯವನ್ನೂ ಹೆಚ್ಚಿಸುವನು.

ಮೇಷವು ಕುಜನ ಕ್ಷೇತ್ರವಾಗಿದ್ದು ಪೂರ್ವಪುಣ್ಯದ ಫಲವನ್ನು ಅನುಭವಿಸುವನು. ಹಿರಿಯರಿಗೆ ಗೌರವವನ್ನು ಕೊಡಲಿದ್ದಾರೆ. ಭೂಮಿಯನ್ನು ಖರೀದಿಸಬಹುದು.

ಶುಕ್ರನು ನೀಚಗಾಮಿಯಾಗಿರುವುದರಿಂದ ಭೋಗಕ್ಕೆ ಸಂಬಂಧಿಸಿದ ಯಾವುದನ್ನೂ ಮಾಡಿದರೂ ಅದು ಹಾನಿಯಾಗುವುದು. ಧನನಷ್ಟವೇ. ವಾಹನ‌ ಖರೀದಿಯನ್ನೂ ನೀವು ಮುಂದೂಡುವುದು ಉತ್ತಮ. ಹೊಸ ಕೆಲಸಗಳನ್ನು ಆರಂಭ ಮಾಡುವುದು ಬೇಡ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ