ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 29 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು,
ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ತ್ರಯೋದಶೀ,
ನಿತ್ಯನಕ್ಷತ್ರ: ಶ್ರವಣಾ, ಯೋಗ: ಸೌಭಾಗ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹುಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:27 ರಿಂದ 11:00ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:33 ರಿಂದ 02:06ರ ವರೆಗೆ.
ಧನು ರಾಶಿ: ಮನಸ್ಸು ಸ್ಥಿರವಿಲ್ಲದೇ ಇರುವ ಕಾರಣ ನಿಮ್ಮ ಗುರಿಯೂ ಬದಲಾಗುವುದು. ಸಮಯ ಸ್ಫೂರ್ತಿಯಿಂದ ಕಾರ್ಯವನ್ನು ಸಾಧಿಸಿ. ಪ್ರೇಮದಲ್ಲಿ ಅಂತಿಮವಾಗಿ ನೀವೇ ಯಶಸ್ಸನ್ನು ಸಾಧಿಸುವಿರಿ. ಖುಷಿಯಿಂದ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಮಾತು ತೂಕದ್ದಾಗಿರಲಿದೆ. ನಿಮ್ಮ ಕೆಲಸಗಳನ್ನು ಮೇಲಧಿಕಾರಿಗಳು ನೋಡಬಹುದು. ತುರ್ತು ಮಾಡಬೇಕಾದುದನ್ನು ಮಾಡಿ. ವ್ಯಾಪಾರದಲ್ಲಿ ನೀವು ತಜ್ಞರಾಗಿರುವಿರಿ. ಸಂತೋಷದ ವಿಚಾರವನ್ನು ಹಂಚಿಕೊಳ್ಳಲು ನೀವು ಮುಜುಗರ ಪಡಬಹುದು. ಇಷ್ಟವಿಲ್ಲದಿದ್ದರೂ ಇನ್ನೊಬ್ಬರ ಮಾತಿಗೆ ನೀವು ಬೆಂಬಲ ಕೊಡಬೇಕಾದೀತು. ಸಂಕಷ್ಟದ ಕಾರಣ ದೈವದಲ್ಲಿ ಭಕ್ತಿ ಇರಲಿದೆ.
ಮಕರ ರಾಶಿ: ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ಕದಡುವುದು. ಅನ್ನಿಸಿದ್ದನ್ನು ಕೂಡಲೇ ಹೇಳುವುದು ಬೇಡ. ಸಮಯಕ್ಕಾಗಿ ಕಾಯಿರಿ. ಸ್ವಂತ ಶ್ರಮದಿಂದ ಗಳಿಸಿದ್ದು ನಿಮಗೆ ಆಪ್ತವೆನಿಸುವುದು. ಮಾಡಬೇಕೆಂದು ಹೊರಟ ಕೆಲಸಕ್ಕೆ ತೊಂದರೆ ಬಂದರೂ ಬಿಡದೇ ಮುಂದುವರಿಸುವಿರಿ. ಆದಾಯದ ವಿಚಾರದಲ್ಲಿ ನೀವು ಬಹಳ ಹಿಂದೆ. ನಿಮ್ಮ ಮೇಲಿನ ಗೌರವವು ನಿಮ್ಮ ನಡವಳಿಕೆಯಿಂದ ಇನ್ನೂ ಹೆಚ್ಚಾಗಬಹುದು. ಸುಖವಾದ ಪ್ರಯಾಣವನ್ನು ಮಾಡುವಿರಿ. ದಾಂಪತ್ಯದಲ್ಲಿ ಮನಸ್ತಾಪವು ಏಳಬಹುದು. ಆದರೆ ಅದನ್ನು ಮುಂದುವರಿಸಲು ಬಿಡದೇ ಜಾಣ್ಮೆಯಿಂದ ಅಲ್ಲೇ ಮೊಟಕುಗೊಳಿಸುವಿರಿ. ಆಟವಾಡುವಾಗ ಜಾಗರೂಕರಾಗಿರಿ. ಪೆಟ್ಟಾಗುವ ಸಾಧ್ಯತೆ ಇದೆ.
ಕುಂಭ ರಾಶಿ: ಅಪರಿಚಿತರ ಜೊತೆ ಜಗಳವಾಡಿ ಏನು ಸಾಧಿಸುವಿರಿ? ಈ ಇರುವವರು ಇನ್ನು ನಿಮಗೆ ಸಿಗದೇ ಹೋಗಬಹುದು. ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ. ವಿದ್ಯಾಭ್ಯಾಸದಲ್ಲಿ ಪ್ರಗತಿಯು ಇರಲಿದ್ದು ಅಡೆತಡೆಗಳೂ ಇರಲಿವೆ. ನಿಮ್ಮ ಒರಟಾದ ಮಾತು ನಿಮ್ಮ ಕೆಳಗೆ ಕೆಲಸ ಮಾಡುವವರಿಗೆ ಹಿಂಸೆ ಆಗಬಹುದು. ನಿಯಮದ ಉಲ್ಲಂಘನೆಯ ಕಾರಣ ದಂಡ ತೆರಬೇಕಾದ ಸ್ಥಿತಿ ಇರಲಿದೆ. ನಿಮಗೆ ಸಿಗುವ ಅವಕಾಶಗಳನ್ನು ಅನ್ಯರು ಬಳಸಿಕೊಳ್ಳುವರು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಸಂಗಾತಿಯ ಮಾತು ಉತ್ಸಾಹ ಭಂಗವನ್ನು ಮಾಡುವುದು. ಹಳೆಯ ಸ್ನೇಹಿತರು ಉಪಕಾರ ಸ್ನರಣೆಯ ಜೊತೆ ಸಹಾಯ ಮಾಡುವರು. ನಿಮಗೆ ನೀವು ಒಂಟಿ ಎನಿಸಬಹುದು.
ಮೀನ ರಾಶಿ: ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಾಗದು. ನಿಮ್ಮ ದಾರಿಯ ಬಗ್ಗೆ ನಿಮಗೆ ವಿಶ್ವಾಸವು ಇರಲಿ. ನಿಮ್ಮಿಂದ ಕೆಲಸವನ್ನು ಮಾಡಿಕೊಳ್ಳಲು ಹೊಗಳಬಹುದು. ಉದ್ಯೋಗದಲ್ಲಿ ಬಡ್ತಿಯನ್ನು ನಿರೀಕ್ಷಿಸಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಯು ಕಡಿಮೆ ಆಗಬಹುದು. ನಿಮ್ಮ ಮೇಲೆ ಕೆಲವು ಹಿತಶತ್ರುಗಳು ಆರೋಪವನ್ನು ಮಾಡಬಹುದು. ನಿಮ್ಮ ಇಂದಿನ ಕಾರ್ಯದಲ್ಲಿ ಶ್ರದ್ಧೆಯ ಕಡಿಮೆ ಆಗಬಹುದು. ತಿಳಿವಳಿಕೆಯ ಕೊರತೆಯಿಂದ ನೀವು ಇನ್ನೊಬ್ಬರ ಮುಂದೆ ತೋರಿಸಿಕೊಳ್ಳುವುದಿಲ್ಲ. ನಿಮಗೆ ಇಂದು ಚಂಚಲವಾದ ಮನಸ್ಸು ಇರಲಿದ್ದು ಸ್ಪರ್ಧೆಯಲ್ಲಿ ಸೋಲಬೇಕಾಗಬಹುದು.