ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್: ಋತು, ವೃಶ್ಚಿಕ: ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಭಾನು ತಿಥಿ: ಷಷ್ಠೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ವೃದ್ಧಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಬೆಳಗ್ಗೆ 04:34 ರಿಂದ 05:59ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:18 ರಿಂದ 01:43ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:09 ರಿಂದ 04:34ರ ವರೆಗೆ.
ಧನು ರಾಶಿ: ಸಾಲವು ತೀರುವುದು ಎಂಬ ನಂಬಿಕೆಯು ಬರಲಿದೆ. ಸರಿಯಾದ ನಿದ್ರೆಯನ್ನು ಮಾಡಿ. ಹಳೆಯ ಸ್ನೇಹಿತರ ಭೇಟಿಯಾಗಬಹುದು. ವ್ಯಾಪಾರದಲ್ಲಿ ಲಾಭವನ್ನು ಕಂಡು ಏನಾದರೂ ಯೋಜನೆಯನ್ನು ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಅಪರಿಚಿತರ ಬಗ್ಗೆ ಭಯವಿರುವುದು. ಪ್ರಶಂಸೆಯಿಂದ ಅಹಂಕಾರವು ಬರುವುದು. ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ. ಯಂತ್ರಗಳನ್ನು ಬಳಸಿಕೊಂಡು ಸಣ್ಣ ಉದ್ಯೋಗವನ್ನು ಆರಂಭಿಸುವಿರಿ. ವಿದೇಶದಲ್ಲಿ ಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಪ್ರವಚನಕಾರರಿಗೆ ಉತ್ತಮ ಅವಕಾಶಗಳು ಲಭ್ಯವಿರಲಿದೆ. ದೌರ್ಬಲ್ಯವನ್ನು ನೀವು ಸಕಾರಾತ್ಮಕವಾಗಿ ತೆಗೆದುಕೊಂಡವು ಸಾಧಿಸುವಿರಿ. ವಿದೇಶದ ಬಂಧುಗಳು ನಿಮ್ಮ ಉದ್ಯಮಕ್ಕೆ ಸಹಾಯ ಮಾಡುವರು. ಪೂರ್ವಯೋಜಿತ ಕಾರ್ಯಕ್ಕೆ ಸಮಯವನ್ನು ಹೊಂದಿಸಿಕೊಳ್ಳಲಾಗದು.
ಮಕರ ರಾಶಿ: ಪ್ರೀತಿಪಾತ್ರರ ಭೇಟಿಯಿಂದ ಮನಸ್ಸು ನಿರಾಳವಾಗಬಹುದು. ಸಾಲವಾಗಿ ಹಣವನ್ನು ಬಂಧುಗಳಿಗೆ ಕೊಡಬೇಕಾದೀತು. ನಿಮ್ಮನ್ನು ಯಾರಾದರೂ ಹಾಸ್ಯ ಮಾಡಿಯಾರು. ಅನಿರೀಕ್ಷಿತ ಧನವ್ಯಯದಿಂದ ಆತಂಕವು ಆಗಲಿದೆ. ರಾಜಕೀಯದಿಂದ ನಿಮಗೆ ಪ್ರೇರಣೆ ಸಿಗುವುದು. ಆರ್ಥಿಕ ಲಾಭದಿಂದ ನೀವು ಸಂತೋಷ ಇರುವುದು ನಿಮ್ಮ ಮುಖದಲ್ಲಿ ಕಾಣಿಸುವುದು. ಹಳೆಯ ವಾಹನವನ್ನು ನೀವು ಖರೀದಿಸುವಿರಿ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ತಾಯಿಯ ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ಚಿಂತೆಗೆ ಒಳಗಾಗುವಿರಿ. ಪ್ರಭಾವೀ ಜನರ ಭೇಟಿಯಿಂದ ಭವಿಷ್ಯಕ್ಕೆ ಅನೇಕ ಲಾಭವು ಆಗಲಿದೆ. ಸಾಮಾಜಿಕ ಕಾರ್ಯಕ್ಕೆ ಸಣ್ಣ ಕೊಡುಗೆ ನೀಡುವಿರಿ.
ಕುಂಭ ರಾಶಿ: ಆದಾಯವನ್ನು ಅಗತ್ಯ ವಸ್ತುಗಳ ಖರೀದಿಗೆ ಬಳಸಿ ಖಾಲಿ ಮಾಡಿಕೊಳ್ಳುವಿರಿ. ನಿಮ್ಮ ಭೂಮಿಯನ್ನು ಪಡೆದುಕೊಳ್ಳಲು ಸಾಹಸ ಮಾಡಬೇಕಾಗುವುದು. ನಿಮ್ಮ ನೆಮ್ಮದಿಗೆ ಸಂಗಾತಿಯು ಭಂಗವನ್ನು ಉಂಟುಮಾಡಬಹುದು. ಧಾರ್ಮಿಕ ವಿಚಾರದಲ್ಲಿ ನಿಷ್ಠೆಯನ್ನು ಇಟ್ಟುಕೊಳ್ಳಿ. ನಿಮಗೆ ಗೊತ್ತೇ ಅಗದಂತೆ ವಂಚನೆಯಲ್ಲಿ ಸಿಕ್ಕಿಬೀಳುವಿರಿ. ಅರೋಗ್ಯದ ಸುಧಾರಣೆಗೆ ವೈದ್ಯರ ಸಲಹೆ ಅವಶ್ಯಕ. ಎಲ್ಲರ ಮೇಲೂ ವಿನಾ ಕಾರಣ ಕೋಪ ಮಾಡಿಕೊಳ್ಳುವಿರಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ. ಆಸಕ್ತಿ ಇಲ್ಲದೇ ಇದ್ದರೂ ಕರ್ತವ್ಯದಲ್ಲಿ ಲೋಪವಿರಬಾರದು. ಮನಸ್ಸು ಚಂಚಲದಿಂದ ಯಾರ ಮಾತನ್ನೂ ಕೇಳುವ ಮನಃಸ್ಥಿತಿಯಲ್ಲಿ ಇರಲಾರಿರಿ. ದೂರದ ಬಂಧುಗಳು ಪರಿಚಿತರಾಗಿ ಅವರ ಜೊತೆ ಕಾಲ ಕಳೆಯುವಿರಿ. ನಿಮಗೆ ಕೃತಜ್ಞತೆ ಇರಲಿ.
ಮೀನ ರಾಶಿ: ಪರಸ್ಥಳದ ವಾಸದಿಂದ ನಿಮಗೆ ನಿದ್ರಯಲ್ಲಿ ಅಸಮಾಧಾನ ಇರುವುದು. ಸನ್ನಿವೇಶವನ್ನು ನೋಡಿ ನಿಮ್ಮ ವಾದವನ್ನು ಮುಂದುವಿರಿಸಿ. ದಿನದ ಕಾರ್ಯದಲ್ಲಿ ಅಡೆತಡೆಯಾಗಲಿದೆ. ಆರ್ಥಿಕ ಸಂಕಟವನ್ನು ಸ್ನೇಹಿತರ ಸಹಾಯವನ್ನು ಪಡೆದು ಸರಿಮಾಡಿಕೊಳ್ಳುವಿರಿ. ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ. ನಿಮ್ಮ ವೃತ್ತಿಯು ನಿಮಗೆ ಗೌರವವನ್ನು ಕೊಡಿಸುವುದು. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತಗತದೆವೆಂಬ ಭಯವು ಇರುವುದು. ಇನ್ನೊಬ್ಬರ ಬಳಿ ಇರುವ ನಿಮ್ಮ ವಸ್ತುವನ್ನು ಬಹಳ ಪ್ರಯತ್ನದಿಂದ ಪಡೆಯುವಿರಿ. ಬಂಧುಗಳಿಗಾಗಿ ಸಾಲ ಮಾಡುವ ಹಾಗೆ ಅಸದ ಆಗಬಹುದು. ಕೃಷಿಯಲ್ಲಿ ಆದ ಪ್ರಗತಿಯಿಂದ ಸಂತೋಷವಾಗುವುದು. ಅನಾರೋಗ್ಯವನ್ನು ಸರಿ ಮಾಡಿಕೊಳ್ಳುವಲ್ಲಿ ನಿಮ್ಮ ಪ್ರಯತ್ನವೂ ಬೇಕು. ಇಂದು ನಿಮ್ಮ ವಿವಾಹದ ಮಾತುಕತೆಯು ನಡೆಯುವುದು.