Horoscope: ರಾಶಿಭವಿಷ್ಯ, ಮರೆತ ಕಾರ್ಯವನ್ನು ಪುನಃ ಕೈಗೆತ್ತಿಕೊಳ್ಳುವಿರಿ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್​ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಮರೆತ ಕಾರ್ಯವನ್ನು ಪುನಃ ಕೈಗೆತ್ತಿಕೊಳ್ಳುವಿರಿ
ಪ್ರಾತಿನಿಧಿಕ ಚಿತ್ರ
Follow us
|

Updated on: Nov 19, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 19 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್: ಋತು, ವೃಶ್ಚಿಕ: ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಭಾನು ತಿಥಿ: ಷಷ್ಠೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ವೃದ್ಧಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಬೆಳಗ್ಗೆ 04:34 ರಿಂದ 05:59ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:18 ರಿಂದ 01:43ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:09 ರಿಂದ 04:34ರ ವರೆಗೆ.

ಮೇಷ ರಾಶಿ: ಅಗ್ನಿಯ ಸ್ಥಾನದಲ್ಲಿ ನಿಮಗೆ ಎಚ್ಚರಿಕೆ ಇರಲಿ. ನೂತನ ವಸ್ತ್ರಗಳನ್ನು ಧರಿಸಿ‌ ಖುಷಿಪಡುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯವು ಇದಾಗಿದೆ. ಬಂಧುಗಳ ಆರೋಗ್ಯದ ಆರೈಕೆಯನ್ನು ನೀವು ಮಾಡಬೇಕಾದೀತು. ಅವಾಚ್ಯ ಮಾತುಗಳಿಂದ ನಿಮ್ಮನ್ನು ಯಾರಾದರೂ ನಿಂದಿಸಬಹುದು.‌ ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ. ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯಲ್ಲಿ ಮಗ್ನರಾಗುವುದು ಬೇಡ. ಮರೆವು ನಿಮಗೆ ವರದಂತೆ‌ ಕಾಣಿಸೀತು. ನಾಯಕತ್ವವನ್ನು ನೀವು ಸ್ವತಂತ್ರದ ಕಾರಣ ನಿರಾಕರಿಸುವಿರಿ. ಹುಡುಗಾಟಿಕೆಯಿಂದ ಏನಾದರೂ ಅವಗಡವಾದೀತು. ನಿಮ್ಮ ನೋವಿಗೆ ಸ್ಪಂದಿಸಿದವರ ಜೊತೆ ಸಮಯ ಕಳೆಯುವಿರಿ. ಅನನುಕೂಲದಂತೆ ಎಲ್ಲವು ಅನ್ನಿಸೀತು.

ವೃಷಭ ರಾಶಿ: ಮರೆತ ಕಾರ್ಯವನ್ನು ಪುನಃ ಕೈಗೆತ್ತಿಕೊಳ್ಳುವಿರಿ. ನಿರಾಧಾರದ ವಿಚಾರಗಳನ್ನು ನೀವು ಗಂಭೀರವಾಗಿ ಪರಿಗಣಿಸುವುದು ಬೇಡ. ಆರ್ಥಿಕ‌ ಸಂಕಷ್ಟವನ್ನು ಎದುರಿಸುತ್ತಿದ್ದು ಸ್ಥಿರಾಸ್ತಿಯನ್ನು ಮಾರಾಟ ಮಾಡಲೂ ನಿಮಗೆ ಕಷ್ಟವಾದೀತು. ನಿಮ್ಮ ಜೊತೆಗಿರುವವರೇ ನಿಮ್ಮ ವಸ್ತುವನ್ನು ಅಪಹರಿಸುವರು. ಇಂದು ಏನಾದರೂ ಆಗುತ್ತದೆ ಎಂಬ ಅಪಾಯವು ಇರಲಿದೆ. ವೃತ್ತಿಯ ಏಕತಾನತೆಯಿಂದ ಹೊರಬರಲು ಬಯಸುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿಕೊಳ್ಳುವಿರಿ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಶ್ಲಾಘ್ಯವೇ. ಬಂಧುಗಳ ಮನೆಯಲ್ಲಿ ನೀವು ಇಂದು ಅನಿರೀಕ್ಷಿತವಾಗಿ ಭೋಜನ ಮಾಡುವಿರಿ. ಪ್ರಾರಂಭಿಸಿದ ಕೆಲಸದಲ್ಲಿ ಉತ್ಸಾಹ ಹೆಚ್ಚಿದ್ದರೂ ಮಾರ್ಗದಲ್ಲಿ ಗೊಂದಲ ಎನಿಸಬಹುದು.‌

ಮಿಥುನ ರಾಶಿ: ಉದ್ಯಮದಲ್ಲಿ ಉತ್ಸಾಹವು ಕಡಿಮೆ ಆಗಲಿದ್ದು, ಹೊಸ ತಂತ್ರವನ್ನು ರೂಪಿಸುವ ಸಾಧ್ಯತೆ ಇದೆ. ಸಮಯದ ಬಗ್ಗೆ ಗಾಂಭೀರ್ಯವು ಕಡಿಮೆ‌ ಆಗುವುದು. ‌ಮಕ್ಕಳ ಕುರಿತು ನಿಮಗೆ ಅಭಿಮಾನ ಹೆಚ್ಚಾಗುವುದು. ಪ್ರಯಾಣವು ಹಿತವಾಗದೇ ಇರುವುದು. ನಿಮಗೆ ಬೇಕಾದುದನ್ನು ಕೇಳಿ ಪಡೆಯುವಿರಿ. ವೃತ್ತಿಯ ಸ್ಥಳದಲ್ಲಿ ನಿಮ್ಮನ್ನು ಗುರುತಿಸುವರು. ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮುಗಿಸುವಿರಿ. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯವಾಗುವುದು. ನಿಮ್ಮ ಸಾಮಾಜಿಕ ಕಾರ್ಯಕ್ಕೆ ಬೆಂಬಲವನ್ನು ಅಪೇಕ್ಷಿಸುವಿರಿ. ಮಕ್ಕಳ ಕಾಳಜಿಯು ಅತಿಯಾಗುವುದು. ಖುಷಿಯಿಂದ ಮಾರ್ಗಗಳನ್ನು ಹುಡುಕುವಿರಿ. ಪ್ರಾಮಾಣಿಕತೆಯು ನಿಮಗೆ ಇಷ್ಟವಾದರೂ ಇದರಿಂದ ಪ್ರಯೋಜನವಿಲ್ಲ ಎಂದು ಅನ್ನಿಸುವುದು.

ಕಟಕ ರಾಶಿ: ಸಂತಾನವನ್ನು ಅಪೇಕ್ಷಿಸಿ‌ ಇದ್ದರೆ ನಿಮಗೆ ಶುಭಾವರ್ತೆ ಇರುವುದು. ವಾಸಸ್ಥಳದ ಬದಲಾವಣೆಯನ್ನು ಮಾಡುವಿರಿ. ಗೌಪ್ಯವಾಗಿ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ಕೆಲವು ವಿಚಾರಕ್ಕೆ ಬುದ್ಧಿಯು ಸೂಚಿಸದೇ ಇರಬಹುದು. ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದು ಬೇಡ. ನಿಮ್ಮ ಶ್ರಮಕ್ಕೆ ಯೋಗ್ಯ ವರಮಾನ ಇಲ್ಲ ಎನಿಸಬಹುದು. ಸಾಲ ಕೊಟ್ಟವರಿಂದ ನಿಮಗೆ ಕಿರಿಕಿರಿ ಎನಿಸಬಹುದು. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ನಿಮಗೆ ಇಂದು ವಾದದಲ್ಲಿ ಸೋಲಾಗಬಹುದು. ಮುಗ್ಗರಿಸಿ ಬೀಳುವುದು ಬೇಡ. ನಡಿಗೆ ಸಾವಧಾನದಿಂದ ಇರಲಿ. ಇಂದು ಮೋಸದ ಕರೆಗಳಿಂದ ವಂಚನೆಯ ಜಾಲಕ್ಕೆ ಸಿಕ್ಕಿಕೊಳ್ಳಬಹುದು. ಎಚ್ಚರಿಕೆ ಇರಲಿ.